An unconventional News Portal.

Latest News
  ...

  ರಾಜತಾಂತ್ರಿಕ ಮಟ್ಟದಲ್ಲಿ ಎದ್ದ ಹೊಸ ವಿವಾದ ಮತ್ತು ಖಲಿಸ್ತಾನ ಚಳವಳಿಯ ರಕ್ತಸಿಕ್ತ ಅಧ್ಯಾಯ

  ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟೀನ್‌ ಟ್ರುಡೊ ಅವರಿಗಾಗಿ ನವದೆಹಲಿಯಲ್ಲಿ ಗುರುವಾರ ಸಂಜೆ (ಫೆಬ್ರುವರಿ 22, 2017) ಆಯೋಜಿಸಿರುವ ಔತಣಕೂಟ ವಿವಾದಕ್ಕೆ ಈಡಾಗಿದೆ. ಕೂಟಕ್ಕೆ ಖಲಿಸ್ತಾನ್ ಪ್ರತ್ಯೇಕತಾವಾದಿ ಸಂಘಟನೆಯ ಮಾಜಿ ಸದಸ್ಯ ಜಸ್ಪಾಲ್‌ ಸಿಂಗ್‌ ಅತ್ವಾಲ್‌ಗೂ ರಾಜತಾಂತ್ರಿಕ ಆಮಂತ್ರಣ ನೀಡಿರುವುದು ಇದಕ್ಕೆ ಕಾರಣ. 1987ರಲ್ಲಿ ಅಕಾಲಿದಳದ ಮುಖಂಡ ಮಲ್ಕಿಯತ್‌ ಸಿಂಗ್‌ ಸಿಧು ಕೊಲೆ ಯತ್ನ ಪ್ರಕರಣದ ಶಿಕ್ಷೆಗೆ ಗುರಿಯಾಗಿದ್ದ ಹಿನ್ನೆಲೆ ಅತ್ವಾಲ್‌ಗೆ ಇದೆ.  ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ ಜಸ್ಪಾಲ್‌ ಅತ್ವಾಲ್‌ ಹೆಸರು ಇರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ, ಕೆನಡಿಯನ್‌ ಹೈಕಮಿಷನ್‌ […]

  February 22, 2018
  ...

  ‘ಮಕ್ಕಳ್ ನೀದಿ ಮಯ್ಯಂ’ ಸ್ಥಾಪಿಸಿದ ಕಮಲ್ ಹಾಸನ್, ಪ್ರಶಸ್ತಿಗಳಿಂದ ಮುಕ್ತಿ ಕೊಡಿ ಅಂದಿದ್ದರು!

  60ರ ದಶಕದಲ್ಲಿ ಹುಟ್ಟಿಕೊಂಡ ಹಿಂದಿ ಭಾಷೆ ವಿರೋಧಿ ಹೋರಾಟದ ಕಾರಣಕ್ಕೆ, ತಮಿಳುನಾಡು ಎಂದರೆ ಕಣ್ಮುಂದೆ ಬರುವುದೇ ಅವರ ಭಾಷೆ ಮತ್ತು ಪ್ರಾದೇಶಿಕ ಸ್ವಾಭಿಮಾನ. ಕರ್ನಾಟಕದಲ್ಲಿ ಕಾಣಸಿಗದ, ಚಿತ್ರರಂಗದ ಜನಪ್ರಿಯತೆ ರಾಜಕೀಯ ಅಧಿಕಾರವಾಗಿ ಬದಲಾಗುವ ಅನನ್ಯ ಪರಂಪರೆಯೂ ಗೊತ್ತಿರುವಂತಹದ್ದೇ. ನಟನೊಬ್ಬ ಮುಖ್ಯಮಂತ್ರಿ ಪದವಿಗೆ ಏರಿದ ಉದಾಹರಣೆಗಳೂ ಇಲ್ಲಿ ಸಿಗುತ್ತವೆ.  ಎಂಜಿಆರ್, ಕರುಣಾನಿಧಿ, ಜಯಲಲಿತಾ ತರಹದ ಜನಪ್ರಿಯ ನಟ ನಟಿಯರುವ ಇಲ್ಲಿ ಜನಾಧಿಕಾರದ ಉನ್ನತ ಹುದ್ದೆಗೇರಿದ್ದಾರೆ. ಇದೀಗ ಹೀಗೊಂದು ಪಟ್ಟಿಯಲ್ಲಿ ಸ್ಥಾನಪಡೆದುಕೊಳ್ಳಲು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ ನಟ ಕಮಲ್ ಹಾಸನ್.   […]

  February 22, 2018
  ...

  ಭವಿಷ್ಯ ನಿಧಿ ಬಡ್ಡಿದರ ಇಳಿಕೆ: ಕಾರ್ಮಿಕರ ಜೇಬಿಗೆ ಕತ್ತರಿ ಹಾಕಲು ಹೊರಟಿತಾ ಮೋದಿ ಸರಕಾರ?

  ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಈ ವರ್ಷದ ತನ್ನ ಬಡ್ಡಿದರವನ್ನು ಶೇ.8. 55ಕ್ಕೆ ಕಡಿತಗೊಳಿಸಲು ತೀರ್ಮಾನಿಸಿದೆ. ಕಳೆದ ವರ್ಷ ಈ ದರ ಶೇ.8.65ರಷ್ಟಿತ್ತು. ಸುಮಾರು 5 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಸಂಘಟನೆಯ ಎಲ್ಲರಿಗೂ ಈ ದರ ಅನ್ವಯವಾಗಲಿದೆ. ಕಳೆದ 5 ವರ್ಷಗಳಿಗೆ ಹೋಲಿಸಿದರೆ, ಈ ಬಡ್ಡಿದರವು ಅತಿ ಕಡಿಮೆ. ಫೆ.21ರಂದು ನಡೆದ ಸಂಘಟನೆಯ ಕೇಂದ್ರ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಸಹಜವಾಗಿಯೇ ಇದು ಮಧ್ಯಮ ವರ್ಗದ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಈಗ […]

  February 22, 2018
  ...

  ‘ದಿ ರೈಸ್‌ ಆಫ್‌ ನಲಪಾಡ್‌ ಡೈನಸ್ಟಿ’: ಮಜ್ಜಿಗೆ ವ್ಯಾಪಾರದಿಂದ ಕೃಷ್ಣಾ ಮೇಲ್ದಂಡೆವರೆಗೆ, ಹೋಟೆಲ್‌ನಿಂದ ರಾಜಕೀಯದೆಡೆಗೆ!

  ಇವತ್ತಿಗೆ ಕರ್ನಾಟಕದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ನಲಪಾಡ್‌ ಹ್ಯಾರಿಸ್‌ ಕುಟುಂಬ 1960ರ ಆರಂಭದಲ್ಲಿ ಹೀಗಿರಲಿಲ್ಲ. ಕಡುಬಡತನದಲ್ಲಿದ್ದ ಹ್ಯಾರಿಸ್‌ ಪೂರ್ವಜರು ಆರ್ಥಿಕವಾಗಿ ಸದೃಢರಾಗಿದ್ದು ಹೇಗೆ ?ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟ ‘ಸಮಾಚಾರ’ಕ್ಕೆ ಸಿಹಿ ಮಜ್ಜಿಗೆ ವ್ಯಾಪಾರ, ಸ್ಕ್ರ್ಯಾಪ್‌ ವ್ಯವಹಾರ, ಕೃಷ್ಣಾ ಮೇಲ್ದಂಡೆ ಯೋಜನೆಯ ಟೆಂಡರ್‌, ಬೆಂಗಳೂರು ಇಂಟರ್‌ನ್ಯಾಷನಲ್‌ ಹೋಟೆಲ್‌, ಕೊನೆಗೆ ಎನ್‌.ಎ. ಹ್ಯಾರಿಸ್‌ಗೆ ದೊರೆತ ರಾಜಕೀಯ ಅಧಿಕಾರ ಹೀಗೆ ನಾನಾ ಮಜಲುಗಳ ಪರಿಚಯವಾಯಿತು. ಹೈಟೆಕ್ ವೇಶ್ಯಾವಾಟಿಕೆಯೂ ಆರ್ಥಿಕತೆಯ ಉನ್ನತೀಕರಣಕ್ಕೆ ಕಾರಣ ಎಂಬ ಮಾತುಗಳು ಹ್ಯಾರಿಸ್‌ ಕುಟುಂಬದ ಏಳುಬೀಳುಗಳನ್ನು […]

  February 21, 2018
  ...

  ಒನ್‌ ಇಂಡಿಯಾ ಕನ್ನಡದಿಂದ ‘ಆನ್‌ಲೈನ್‌ ಸೆಲೆಬ್ರಿಟಿ ಎಡಿಟರ್’ ಶಾಮ್ ನಿರ್ಗಮನ

  ‘ಮಾತೃಭಾಷಾ ದಿನ’ ಆಚರಣೆಯ ಸಂಭ್ರಮದ ನಡುವೆಯೇ, ಕನ್ನಡದ ಆನ್‌ಲೈನ್ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬೆಳವಣಿಗೆಯೊಂದು ಘಟಿಸಿದೆ. ಕನ್ನಡದ ಮೊದಲ ಅನ್‌ಲೈನ್ ಸುದ್ದಿತಾಣ ‘ಒನ್‌ಇಂಡಿಯಾ’ದಿಂದ ಸಂಪಾದಕ ಶಾಮ್‌ ಸುಂದರ್ ಹೊರಬಿದ್ದಿದ್ದಾರೆ. 18 ವರ್ಷಗಳಿಂದ ಅವರು ಸಂಸ್ಥೆಯ ಕನ್ನಡ ವಿಭಾಗದ ಸುದ್ದಿತಾಣವನ್ನು ಸಂಪಾದಿಸಿಕೊಂಡು ಬಂದಿದ್ದವರು. ಇನ್ನೊಂದು ಅರ್ಥದಲ್ಲಿ, ಕನ್ನಡ ಆನ್‌ಲೈನ್ ಪತ್ರಿಕೋದ್ಯಮದ ಮೊದಲ ಸಂಪಾದಕ. ಅವರೀಗ ಸಂಸ್ಥೆಯಿಂದ ಹೊರಬಿದ್ದಿದ್ದಾರೆ. ಇದಕ್ಕೆ ‘ಒನ್‌ಇಂಡಿಯಾ’ದೊಳಗೆ ಕಳೆದ ಎರಡು ವರ್ಷಗಳ ಅಂತರದಲ್ಲಿ ನಡೆದ ಬದಲಾವಣೆಗಳು ಕಾರಣ ಎಂದು ಮೂಲಗಳು ಹೇಳುತ್ತಿವೆ. ‘ಡೈಲಿ ಹಂಟ್‌’ ಎಂಬ ನ್ಯೂಸ್‌ […]

  February 21, 2018
  ...

  ಗೌರಿ ಟ್ರಸ್ಟ್‌ ಬಗೆಗಿನ ಟೀಕೆಯೂ, ಆಶಯಗಳ ಬಗೆಗಿನ ಟಿಪ್ಪಣಿಗಳೂ…

  ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿ ಐದು ತಿಂಗಳು ಕಳೆದಿವೆ. ಗೌರಿ ಆಶಯಗಳ ಸಾಕಾರದ ಉದ್ದೇಶವನ್ನಿಟ್ಟುಕೊಂಡು ಗೌರಿ ಟ್ರಸ್ಟ್‌ ಕೂಡಾ ಅಸ್ತಿತ್ವಕ್ಕೆ ಬಂದಿದೆ. ಗೌರಿ ಟ್ರಸ್ಟ್‌ನ ಹಣಕಾಸಿನ ಮೂಲ, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಕೆಲ ಪ್ರಶ್ನೆಗಳು ಎದ್ದಿವೆ. ಇವು ಗೌರಿ ಟ್ರಸ್ಟ್‌ ಒಳಗಿರುವ ಕೆಲವರ ಬಗ್ಗೆ ಹಾಗೂ ಟ್ರಸ್ಟ್‌ ಸಾಗುತ್ತಿರುವ ದಾರಿಯ ಬಗ್ಗೆಯೂ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿವೆ. ಗೌರಿ ಲಂಕೇಶ್‌ ಸಹೋದ್ಯೋಗಿಯಾಗಿದ್ದ ಪತ್ರಕರ್ತ ಪಾರ್ವತೀಶ್‌ ಬಿಳಿದಾಳೆ ಫೇಸ್‌ಬುಕ್‌ನಲ್ಲಿ ಎತ್ತಿರುವ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ […]

  February 21, 2018
  ...

  ಸಿರಿಯಾದಲ್ಲಿ ಮುಂದುವರಿದ ಮಾರಣಹೋಮ: ಹರಿಯುತ್ತಿರುವ ನೆತ್ತರಿಗೆ ಕೊನೆಯೆಂದು?

  ಸಿರಿಯಾದ ಡೆಮಾಸ್ಕಸ್‌ ಪ್ರದೇಶದ ಪೂರ್ವಭಾಗವಾದ ಘುಟಾದಲ್ಲಿ ವೈಮಾನಿಕ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 250 ದಾಟಿದ್ದು, 1,200ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ಮೃತಪಟ್ಟವರಲ್ಲಿ 50ಕ್ಕೂ ಹೆಚ್ಚು ಜನ ಮಕ್ಕಳು ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ತಿಳಿಸಿವೆ. 2013ರಿಂದಲೇ ಸೈನಿಕ ಕಾರ್ಯಾಚರಣೆಗಳು ನಡೆಯುತ್ತಿರುವ ಈ ಪ್ರದೇಶದಲ್ಲಿ ಕೇವಲ 48 ಗಂಟೆ ಅವಧಿಯೊಳಗೆ ಇಷ್ಟು ಪ್ರಮಾಣದ ಸಾವು ನೋವು ಈ ಹಿಂದೆ ಎಂದೂ ಸಂಭವಿಸಿರಲಿಲ್ಲ. ಸುಮಾರು 3,00,000 ಜನರನ್ನು ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ಗಡಿ ಕುರಿತಾಗಿ ಸಿರಿಯಾ […]

  February 21, 2018
  ...

  ಅಧಿಕಾರ, ಹಣ ಮತ್ತು ತೋಳ್ಬಲ; ಮನುಷ್ಯತ್ವ ಮರೆಯಲು ಕಾರಣಗಳು ಇಲ್ಲಿವೆ!

  ಕಾಂಗ್ರೆಸ್ ಶಾಸಕ ಎನ್‌. ಎ. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್‌ನ ಗುಂಡಾವರ್ತನೆಯಿಂದ ಕಾಂಗ್ರೆಸ್ ಪಕ್ಷ ಮುಜುಗರಕ್ಕೀಡಾಗಿದೆ. ಅದಿನ್ನೂ ಜನಮಾನಸದಿಂದ ಮರೆಯಾಗದ ಹೊತ್ತಿನಲ್ಲಿಯೇ ಈಗ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಮುಖಂಡ ಹಾಗೂ ಜಲಮಂಡಳಿ ಸದಸ್ಯರೂ ಆಗಿರುವ ನಾರಾಯಣಸ್ವಾಮಿಯ ಎಂಬ ವ್ಯಕ್ತಿಯ ಗುಂಡಾವರ್ತನೆ ಕಂಡು ರಾಜ್ಯದ ಜನತೆ ಹಾಗೂ ಅಧಿಕಾರಿಗಳು ಆತಂಕಕ್ಕೆ ಈಡಾಗಿದ್ದಾರೆ. ಜತೆಗೆ ಚುನಾವಣಾ ಪೂರ್ವದಲ್ಲಿ ನಡೆದ ಸಾಲು ಪ್ರಕರಣಗಳು ಸಹಜವಾಗಿಯೇ ಹೆಚ್ಚಿನ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ಅಧಿಕಾರದ ಮದ ತಲೆಗೆ ಏರಿದರೆ, ಯಾವೆಲ್ಲಾ ದುರಂತಗಳು ನಡೆಯಬಹುದು ಎಂಬುದಕ್ಕೆ […]

  February 20, 2018
  ...

  ವೈಟ್ ಕಾಲರ್‌ ಬ್ಯಾಂಕ್‌ ದರೋಡೆ; ನೀರವ್‌ ಮೋದಿ ಒಬ್ಬನೇ ಅಲ್ಲ.

  ಹಳೆಯದೊಂದು ಮಾತಿತ್ತು, ‘ಒಂದು ಸರಿ ಮೂರ್ಖನನ್ನಾಗಿ ಮಾಡಿದರೆ ನಿನಗೆ ನಾಚಿಕೆಯಾಗಬೇಕು, ಎರಡನೇ ಸಾರಿ ಮೂರ್ಖನಾದರೆ ನನಗೆ ನಾಚಿಕೆಯಾಗಬೇಕು.’ ಈ ಮಾತು ಸಧ್ಯ ಭಾರತದ ಬ್ಯಾಂಕ್‌ಗಳಿಗೆ ಅನ್ವಯವಾಗುವಂತಿದೆ. ಇವತ್ತಿನ ಬ್ಯಾಂಕಿಂಗ್ ಕ್ಷೇತ್ರಕ್ಕೆ ಈ ಮಾತನ್ನು ಬದಲಾಯಿಸಿಕೊಳ್ಳಿ… ‘ಒಂದು ಬಾರಿ ಬ್ಯಾಂಕ್‌ಗೆ ಮೋಸ ಮಾಡಿದರೆ, ಮೋಸ ಮಾಡಿದವರಿಗೆ ನಾಚಿಕೆಯಾಗಬೇಕು. ಎರಡನೇ ಬಾರಿ ಬ್ಯಾಂಕ್‌ಗೆ ಮೋಸವಾದರೆ – ಬ್ಯಾಂಕಿಂಗ್ ವ್ಯವಸ್ಥೆಗೆ ನಾಚಿಕೆಯಾಗಬೇಕು.’ ಇಲ್ಲಿ ಒಂದೆರಡು ಬಾರಿಯಲ್ಲ, ಬದಲಿಗೆ ಕಳೆದ 25 ವರ್ಷಗಳಲ್ಲಿ ಹಲವು ಬ್ಯಾಂಕ್‌ಗಳು ಹಲವು ಬಾರಿ ಮೋಸ ಹೋಗಿವೆ. ಹೀಗಿರುವಾಗ, ಇಡೀ […]

  February 20, 2018
  ...

  ವಿದ್ವತ್ ಮೇಲೆ ಹಲ್ಲೆ ಪ್ರಕರಣ; ನಲಪಾಡ್ ಸೇರಿ 7 ಆರೋಪಿಗಳು 2 ದಿನ ಪೊಲೀಸ್ ಕಸ್ಟಡಿಗೆ

  ಬೆಂಗಳೂರಿನ ಯುಬಿ ಸಿಟಿಯ ಫರ್ಜಿ ಕೆಫೆ ರೆಸ್ಟೊರಂಟ್‌ನಲ್ಲಿ ಶನಿವಾರ ರಾತ್ರಿ ವಿದ್ವತ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಸೇರಿದಂತೆ 7 ಮಂದಿ ಆರೋಪಿಗಳನ್ನು ಫೆಬ್ರುವರಿ 21ರವರೆಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಪುತ್ರ, ಪ್ರಕರಣದ ಪ್ರಮುಖ ಆರೋಪಿ ನಲಪಾಡ್ ಸೋಮವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದ. ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಭಾನುವಾರ ರಾತ್ರಿ ಕೆಲ […]

  February 19, 2018

Top