Home ಕರ್ನಾಟಕ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ 1952-2014: ದಾಖಲೆ ಬರೆಯಲಿದೆಯಾ 2019ರ ಮತದಾನ?

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ 1952-2014: ದಾಖಲೆ ಬರೆಯಲಿದೆಯಾ 2019ರ ಮತದಾನ?

SHARE

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಕೇವಲ ಮೂರು ವಾರಗಳಷ್ಟೇ ಬಾಕಿ ಉಳಿದಿದೆ. ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತದಾನ ನಡೆಯುವಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಕಾರ್ಯಕ್ರಮ, ಮತದಾರರ ಪಟ್ಟಿಯಲ್ಲಿನ ದೋಷ ಸರಿಪಡಿಸುವಿಕೆ, ಮತದಾನದ ಬಗ್ಗೆ ಬೀದಿ ನಾಟಕ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗಿದ್ದು ಗುರುತಿನ ಚೀಟಿ ಇಲ್ಲದವರಿಗೆ ಇತರ 18 ದಾಖಲೆಗಳನ್ನು ತೋರಿಸಿ ಮತಚಲಾಯಿಸುವ ಅವಕಾಶ ಮಾಡಿಕೊಡಲಾಗಿದೆ. ಪಾಸ್‌ಪೋರ್ಟ್‌, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಉದ್ಯೋಗ ಖಾತ್ರಿ ಯೋಜನೆಯ ಗುರುತಿನ ಚೀಟಿ ಸೇರಿದಂತೆ ವಿವಿಧ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಮತ ಚಲಾಯಿಸುವ ಅವಕಾಶವಿದೆ.

ಜತೆಗೆ ಮತದಾನದ ದಿನದಂದು ಈ ಬಾರಿ ವಿಶೇಷ ಚೇತನರಿಗೆ ವ್ಹೀಲ್‍ಛೇರ್, ರ್ಯಾಂಪ್ ಸೌಲಭ್ಯವನ್ನು ಮತಗಟ್ಟೆಗಳಲ್ಲಿ ಕಲ್ಪಿಸಲಾಗುತ್ತದೆ. ಅಲ್ಲದೆ, ಮತದಾರರಿಗೆ ಸಾರಿಗೆ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ. ಇದಲ್ಲದೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಆಯೋಗ ಮುಂದಾಗಿದೆ.

ಈ ಎಲ್ಲಾ ಕ್ರಮಗಳ ಮೂಲಕ ಗರಿಷ್ಠ ಮತದಾರರು ಮತ ಚಲಾಯಿಸುವಂತೆ ಮಾಡಲು ಚುನಾವಣಾ ಆಯೋಗ ಮುಂದಾಗಿದೆ.

ಸದ್ಯದ ದಾಖಲೆಗಳನ್ನು ನೋಡಿದರೆ ಇದುವರೆಗೆ ನಡೆದ 16 ಲೋಕಸಭಾ ಚುನಾವಣೆಗಳಲ್ಲಿ ಒಮ್ಮೆಯೂ ಮತದಾನ ಪ್ರಮಾಣ ಶೇಕಡಾ 70ರ ಗಡಿಯನ್ನು ದಾಟಿಲ್ಲ. 1999ರಲ್ಲಿ ರಾಜ್ಯದಲ್ಲಿ ಶೇ.67.58ರಷ್ಟು ಮತದಾನವಾಗಿತ್ತು. ಇದೇ ಇಂದಿಗೂ ದಾಖಲೆಯಾಗಿ ಉಳಿದಿದೆ.

ಈ ದಾಖಲೆಯನ್ನು ಮುರಿಯಬೇಕು ಎಂಬ ಗುರಿಯನ್ನು ಚುನಾವಣಾ ಆಯೋಗ ಹಾಕಿಕೊಂಡಿದೆ.

1951-2014:

ದೇಶದಲ್ಲಿ ಮೊದಲ ಲೋಕಸಭೆ ಚುನಾವಣೆ ನಡೆದಿದ್ದು 1951ರಲ್ಲಿ. ಆಗ ಮೈಸೂರು ರಾಜ್ಯ ಅಸ್ತಿತ್ವದಲ್ಲಿತ್ತು. ಅಲ್ಲಿಂದ ಇಲ್ಲಿಯವರೆಗೆ 16 ಲೋಕಸಭೆ ಚುನಾವಣೆಗಳಿಗೆ ಕರ್ನಾಟಕ ಸಾಕ್ಷಿಯಾಗಿದೆ. ಈ ಚುನಾವಣೆಗಳಲ್ಲಿ ದಾಖಲಾಗಿರುವ ಮತದಾನ ಪ್ರಮಾಣ ಹೀಗಿದೆ,

5 ಕೋಟಿಗೂ ಹೆಚ್ಚು ಮತದಾರರು:

ಪ್ರಸಕ್ತ ಲೋಕಸಭೆಗೆ ಏಪ್ರಿಲ್‌ 18 ಹಾಗೂ 23 ರಂದು ಎರಡು ಹಂತದಲ್ಲಿ ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 5 ಕೋಟಿಗೂ ಹೆಚ್ಚು ಜನರು ಮತದಾನದ ಅವಕಾಶ ಪಡೆದಿದ್ದಾರೆ. ಈ ಬಾರಿ ರಾಜ್ಯದಲ್ಲಿ 5,03,46,721 ಮತದಾರರಿದ್ದಾರೆ. ಇವರಲ್ಲಿ 2,54,94,711 ಪುರುಷ, 2,48,47,292 ಮಹಿಳಾ ಹಾಗೂ 4,718 ತೃತೀಯ ಲಿಂಗಿ ಮತದಾರರಿದ್ದಾರೆ.

ಇಷ್ಟು ದೊಡ್ಡ ಪ್ರಮಾಣದ ಜನರ ಮತದಾನಕ್ಕೆ ಬೇಕಾದ ಅಗತ್ಯ ಏರ್ಪಾಟುಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದ್ದು ರಾಜ್ಯದಲ್ಲಿ 58,186 ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಕಳೆದ ಬಾರಿಗಿಂತ ಶೇ.7ರಷ್ಟು ಹೆಚ್ಚಿನ ಮತಗಟ್ಟೆಗಳನ್ನು ಈ ಬಾರಿ ತೆರೆಯಲಾಗುತ್ತಿದ್ದು, ಹೆಚ್ಚಿನ ಮತದಾನದ ನಿರೀಕ್ಷೆ ಇದೆ.

ಅಂದ ಹಾಗೆ ಕಳೆದ ನಾಲ್ಕು ಚುನಾವಣೆಗಳಲ್ಲಿ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳು ಪಡೆದ ಮತ ಹಾಗೂ ಗಳಿಸಿದ ಸ್ಥಾನಗಳ ವಿವರಗಳು ಕೆಳಗಿನಂತಿವೆ.