Home news-in-brief ಜೆಡಿಎಸ್ 2ನೇ ಪಟ್ಟಿ ಬಿಡುಗಡೆ: ಎರಡು ಕ್ಷೇತ್ರಗಳಿಂದ ಎಚ್‌ಡಿಕೆ ಸ್ಪರ್ಧೆ!

ಜೆಡಿಎಸ್ 2ನೇ ಪಟ್ಟಿ ಬಿಡುಗಡೆ: ಎರಡು ಕ್ಷೇತ್ರಗಳಿಂದ ಎಚ್‌ಡಿಕೆ ಸ್ಪರ್ಧೆ!

SHARE

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವುದರ ಕುರಿತು ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಇದೀಗ ಜಾತ್ಯಾತೀತ ಜನತಾದಳ (ಜೆಡಿಎಸ್) ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿರುವ ಜೆಡಿಎಸ್‌ನ ಜೆಪಿ ಭವನದಲ್ಲಿ ಪಕ್ಷದ ವರಿಷ್ಠ , ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಜೆಡಿಎಸ್‌ ಪಕ್ಷದಿಂದ ಸ್ಪರ್ಧೆ ಮಾಡಲಿರುವ 58 ಅಭ್ಯರ್ಥಿಗಳನ್ನು ಒಳಗೊಂಡಿರುವ 2ನೇ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಜೆಡಿಎಸ್‌ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ ತಿಂಗಳಿನಲ್ಲಿಯೇ ಬಿಡುಗಡೆ ಮಾಡಿತ್ತು. ಅದರಲ್ಲಿ ಬಿಎಸ್ಪಿ 20 ಅಭ್ಯರ್ಥಿಗಳು ಸೇರಿದಂತೆ 146 ಅಭ್ಯರ್ಥಿಗಳು ಪಟ್ಟಿಯಲ್ಲಿದ್ದರು. ಆಗ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿರಲಿಲ್ಲ.

ಜೆಡಿಎಸ್‌ 2ನೇ ಪಟ್ಟಿ

ಜೆಡಿಎಸ್‌ ಎರಡನೇ ಪಟ್ಟಿ 
ಜೆಡಿಎಸ್‌ ಎರಡನೇ ಪಟ್ಟಿ 

ಜೆಡಿಎಸ್‌ ಬಿಡುಗಡೆ ಮಾಡಿರುವ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಹೊಸ ದುರ್ಗದುರ್ಗದಿಂದ ಶಶಿಕುಮಾರ್, ರಾಜಾಜಿನಗರದಿಂದ ಜೇಡರಹಳ್ಳಿ ಕೃಷ್ಣಪ್ಪ, ಜಯನಗರದಿಂದ ತನ್ವೀರ್ ಅಹ್ಮದ್ ಹಾಗೂ ಚನ್ನಪಟ್ಟಣದಿಂದ ಕುಮಾರಸ್ವಾಮಿ ಸೇರಿದಂತೆ ಇತರ ಅಭ್ಯರ್ಥಿಗಳ ಹೆಸರುಗಳಿವೆ.

ಹೊಸದುರ್ಗದಿಂದ ಶಶಿಕುಮಾರ್:

ಇತ್ತೀಚಿಗಷ್ಟೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟ್ ಸಿಗದೇ ಅಸಮಾಧಾನಗೊಂಡು ಜೆಡಿಎಸ್ ಸೇರಿಕೊಂಡಿದ್ದ ನಟ ಶಶಿಕುಮಾರ್ ಅವರಿಗೆ ಹೊಸದುರ್ಗದಿಂದ ಟಿಕೆಟ್ ನೀಡಲಾಗಿದೆ. ಇನ್ನು ವಿಶೇಷ ಏನೆಂದರೆ ಕೇವಲ ರಾಮನಗರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರ್ ಸ್ವಾಮಿ ಇದೀಗ ಕಾರ್ಯಕರ್ತರ ಒತ್ತಡದಿಂದ ಚನ್ನಪಟ್ಟಣ್ಣದಿಂದಲೂ ಕೂಡ ಸ್ಪರ್ಧಿಸುತ್ತಿದ್ದಾರೆ.

ಕುತೂಹಲ ಕೆರಳಿಸಿರುವ ಬಾದಾಮಿ ಕ್ಷೇತ್ರ:

ಬಾದಾಮಿ ಕ್ಷೇತ್ರದಲ್ಲಿ ಜೆಡಿಎಸ್‌‌ನಿಂದ ಹನುಮಂತಪ್ಪ ಮಾವಿನಮರದ ಸ್ಪರ್ಧೆ ಮಾಡಲಿದ್ದಾರೆ ಎಂದು ಈ ಮೊದಲೇ ತಿಳಿದು ಬಂದಿತ್ತು. ಅದೇ ಪ್ರಕಾರ ಶನಿವಾರ ಅವರು ನಾಮ ಪತ್ರ ಸಲ್ಲಿಸಲಿದ್ದಾರೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕೂಡ ನಾಮಪತ್ರ ಸಲ್ಲಿಸುವ ವೇಳೆ ಜೊತೆಯಾಗಲಿದ್ದಾರೆ.

ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲೇಬೇಕು ಎಂದು ಜೆಡಿಎಸ್‌ ಹಾಗೂ ಬಿಜೆಪಿ ರಣತಂತ್ರ ರೂಪಿಸುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಕಾರಣ ಬಾದಾಮಿ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ.

ನಾಮಪತ್ರ ಸಲ್ಲಿಸಲು ಏ.24 ಕೊನೆಯ ದಿನವಾಗಿದ್ದು, ಟಿಕೇಟ್ ವಂಚಿತ ಅಭ್ಯರ್ಥಿಗಳು ಆಯಾ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ. ಇನ್ನು ರಾಜಿ ಸಂಧಾನ ಆಗದವರು ಬೇರೆ ಪಕ್ಷಗಳಿಗೆ ಹಾರಿ ಟಿಕೇಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೇನು ನಾಮಪತ್ರ ಸಲ್ಲಿಸಲು ನಾಲ್ಕೇ ದಿನಗಳು ಬಾಕಿ ಇದ್ದು ಕೊನೆಯ ಕ್ಷಣಗಳಲ್ಲಿಯ ಬದಲಾವಣೆಗಳನ್ನು ಕಾದು ನೋಡಬೇಕಿದೆ.