Home news-for-4-1-display ‘ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ’: ಈಗ ಜಾಮೀನಿಗಾಗಿ ಹೋರಾಟ!

‘ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ’: ಈಗ ಜಾಮೀನಿಗಾಗಿ ಹೋರಾಟ!

SHARE

ಗಾರ್ಮೆಂಟ್ ಮಹಿಳೆಯರ ಪ್ರತಿಭಟನೆ ವೇಳೆ ನಡೆದ ಹೆಬ್ಬುಗೋಡಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರದ ವೇಳೆಗೆ 54 ಜನರನ್ನು ಬಂಧಿಸಲಾಗಿದೆ.

ಬಂಧಿತರನ್ನು ಅನೇಕಲ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಬಂಧಿತರ ಮೇಲೆ ದೊಂಬಿ ಗಲಾಟೆ, ಸಾರ್ವಜನಿಕ ಆಸ್ತಿ ಹಾನಿ, ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ, ಕೊಲೆ ಹತ್ನ ಸೇರಿದಂತೆ ಒಟ್ಟು 11 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

“ಪ್ರಕರಣದಲ್ಲಿ ಈವರೆಗೆ 54 ಜನರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳು ನಡೆಯಲಿವೆ,” ಎಂದು ಹೆಬ್ಬುಗೋಡಿ ಪೊಲೀಸ್ ಠಾಣಾಧಿಕಾರಿ ವಿಶ್ವನಾಥ್ ತಿಳಿಸಿದ್ದಾರೆ.

“ನಮ್ಮ ಅಳಿಯ ಫುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಅವನನ್ನು ಸುಖಾಸುಮ್ಮನೆ ಬಂಧಿಸಿದ್ದಾರೆ. ಇವನಿಗೆ ಜಾಮೀನು ಕೊಡಿಸಲು ಓಡಾಡುತ್ತಿದ್ದೇವೆ,” ಎಂದು ಆರೋಪಿ ಸಂಬಂಧಿಕರರೊಬ್ಬರು ಮಾಹಿತಿ ನೀಡಿದರು. “ನನ್ನ ಹೆಸರನ್ನು ಬಳಸಬೇಡಿ. ದಿನಾ ಇಲ್ಲೇ ಸುತ್ತಮುತ್ತ ಓಡಾಡುತ್ತಿರುತ್ತೇನೆ. ನನಗೂ ತೊಂದರೆಯಾಗಬಹುದು,” ಎಂದು ಅವರು ಹೇಳದರು.

ಬಂಧನ ಪ್ರಕ್ರಿಯೆ:

ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ ಮುಗಿದ ಬೆನ್ನಲ್ಲೇ ಪೊಲೀಸರು ಬಂಧನ ಕಾರ್ಯಾಚರಣೆ ಆರಂಭಿಸಿದ್ಧಾರೆ. ಶುಕ್ರವಾರ ಸಂಜೆ ವೇಳೆಗೆ ಸುಮಾರು 200ಕ್ಕೂ ಹೆಚ್ಚು ಮಂದಿಯನ್ನು ನಾನಾ ಪೊಲೀಸ್ ಠಾಣೆಗಳ ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಶನಿವಾರವೂ ಪೊಲೀಸರು ಕಾರ್ಯಾಚರಣೆ ಮುಂದುವರಿದಿದ್ದು, ಈವರೆಗೆ ಎಲ್ಲಿಯೂ ಬಂಧನವಾಗಿರುವ ಮಾಹಿತಿ ಲಭ್ಯವಾಗಿಲ್ಲ.

ಬೆಂಗಳೂರು ಉತ್ತರ ಹಾಗೂ ಆಗ್ನೇಯ ವಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಪ್ರಥಮ ಮಾಹಿತಿ ವರದಿಗಳಲ್ಲಿ ಆರೋಪಿಗಳನ್ನು ‘ಅನಾಮದೇಯ ವ್ಯಕ್ತಿ’ಗಳು ಎಂದು ನಮೋದಿಸಲಾಗಿದೆ. ಬಸ್ ಸುಟ್ಟ ಪ್ರಕರಣ ಹಾಗೂ ಇತರೆ ಪ್ರಕರಣಗಳಲ್ಲಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.