An unconventional News Portal.

‘ಬಂಧನದ ವಾರೆಂಟ್’: ಗೌರಿ ಲಂಕೇಶ್ ನ್ಯಾಯಾಲಯಕ್ಕೆ ಹಾಜರು

‘ಬಂಧನದ ವಾರೆಂಟ್’: ಗೌರಿ ಲಂಕೇಶ್ ನ್ಯಾಯಾಲಯಕ್ಕೆ ಹಾಜರು

ನ್ಯಾಯಾಲಯ ಬಂಧನ ವಾರೆಂಟ್ ಹೊರಟಿದ್ದ ಹಿನ್ನೆಲೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ರನ್ನು ಹುಬ್ಬಳ್ಳಿ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ‘ದರೋಡೆಗೆ ಇಳಿದ ಬಿಜೆಪಿಗಳು’ ಎಂಬ ತಲೆ ಬರಹದಲ್ಲಿ ವರದಿಯನ್ನು ತಮ್ಮ ವಾರ ಪತ್ರಿಕೆಯಲ್ಲಿ ಗೌರಿ ಪ್ರಕಟಿಸಿದ್ದರು. ಬಿಜೆಪಿ ನಾಯಕ ಪ್ರಹ್ಲಾದ್ ಜೋಷಿ ಇದರ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. ಇದರ ವಿಚಾರಣೆಗೆ ಸತತ ಮೂರು ಬಾರಿ ಹಾಜರಾಗದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ವಿರುದ್ಧ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಹುಬ್ಬಳ್ಳಿಯಿಂದ ಆಗಮಿಸಿದ ಪೊಲೀಸರು ಗೌರಿ ಅವರನ್ನು ಕರೆದುಕೊಂಡು ಹೋಗಿ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

“ಜಾಮೀನು ಸಿಗುವ ಪ್ರಕರಣ ಇದಾಗಿದೆ. ನ್ಯಾಯಾಲಯದ ವಿಚಾರಣೆಗೆ ಹಾಜರಾದ ಹಿನ್ನೆಲೆಯಲ್ಲಿ ಅವರ ಮೇಲೆ ವಾರೆಂಟ್ ಜಾರಿಯಾಗಿತ್ತು. ಹೀಗಾಗಿ ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ. ನ್ಯಾಯಾಲಯ ಅಲ್ಲಿಯೇ ಜಾಮೀನು ನೀಡಿ ಮುಂದಿನ ವಿಚಾರಣೆ ದಿನಾಂಕವನ್ನು ನೀಡಬಹುದು. ಪ್ರಕರಣದ ಕಾಲ್ ಔಟ್ ಇನ್ನೂ ಆಗಿಲ್ಲ,” ಎಂದು ಹುಬ್ಬಳ್ಳಿಯ ಕೇಶವಾಪುರ ಠಾಣಾಧಿಕಾರಿ ಶ್ಯಾಮರಾಜ್ ಸಜ್ಜನ್ ‘ಸಮಾಚಾರ’ಕ್ಕೆ ತಿಳಿಸಿದರು.

ಚಿತ್ರ ಕೃಪೆ: ದಿ ಹಿಂದೂ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top