An unconventional News Portal.

ಮುಂದುವರಿದ ‘ವಾರ್ದಾ’ ಅಬ್ಬರ: ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಮಳೆಗೆ 2 ಬಲಿ

ಮುಂದುವರಿದ ‘ವಾರ್ದಾ’ ಅಬ್ಬರ: ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಮಳೆಗೆ 2 ಬಲಿ

ಜೋರಾಗಿ ಬೀಸುತ್ತಿರುವ ಬಿರುಗಾಳಿ ಮತ್ತು ಭಾರಿ ಮಳೆಯನ್ನು ಹೊತ್ತು ತಂದಿರುವ ವಾರ್ದಾ ಚಂಡಮಾರುತಕ್ಕೆ ತಮಿಳುನಾಡು ಮತ್ತು ಆಂಧ್ರದ ವಾತಾವರಣವೇ ಬದಲಾಗಿ ಹೋಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸೋಮವಾರ ಸಂಜೆ ವೇಳೆಗೆ ತುಂತುರು ಮಳೆಯಾಗುತ್ತಿದೆ.

ತಮಿಳುನಾಡಿನ ಉತ್ತರ ಭಾಗದಲ್ಲಿ ಭಾರಿ ಮಳೆ ಮತ್ತು ಗಾಳಿಗೆ ಇಬ್ಬರು ಬಲಿಯಾಗಿದ್ದು, ಸರಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಸೇನಾ ಪಡೆಗಳು ಹಾಗೂ ರಾಷ್ಟ್ರೀಯ ವಿಕೋಪ ನಿಯಂತ್ರಣ ಪಡೆಗಳು ಸ್ಥಳದಲ್ಲಿದ್ದು, ಜನರ ಸ್ಥಳಾಂತರಕ್ಕೆ ನೆರವಾಗುತ್ತಿವೆ.

ತಮಿಳುನಾಡು ಸರಕಾರದ ಪರವಾಗಿ ಆದಾಯ ಆಡಳಿತದ ಪ್ರಧಾನ ಕಾರ್ಯದರ್ಶಿ ಕೆ. ಸತ್ಯಗೋಪಾಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ಇಬ್ಬರು ಸಾವನ್ನಪ್ಪಿದ್ದಾರೆ. 260 ಮರಗಳು ಮತ್ತು 37 ವಿದ್ಯತ್ ಕಂಬಗಳು ಧರೆಗೆ ಉರುಳಿವೆ. ಸುಮಾರು 224 ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. 24 ಮನೆಗಳು ದ್ವಂಸಗೊಂಡಿವೆ,” ಎಂದು ತಿಳಿಸಿದ್ದಾರೆ.

ರಾಜಧಾನಿ ಚೆನ್ನೈನಲ್ಲಿ ಗಾಳಿಯು ಗಂಟೆಗೆ 90- 100 ಕಿಮೀ ವೇಗದಲ್ಲಿ ಬೀಸುತ್ತಿದೆ. ಮಧ್ಯಾಹ್ನದಿಂದ ಮಳೆ ಸುರಿಯಲು ಶುರುವಾಗಿದ್ದು, ಪರಸ್ಥಿತಿ ಗಂಭೀರವಾಗಿದೆ.

ನಗರಾದ್ಯಂತ ವಿದ್ಯುತ್ ಸರಬರಾಜನ್ನು ನಿಲ್ಲಿಸಲಾಗಿದೆ. ಉತ್ತರ ಚೆನ್ನೈ, ತಿರುವೆಲ್ಲೂರು ಜಿಲ್ಲೆಗಳಲ್ಲಿ 8 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿವೆ ಸ್ಥಳಾಂತರಿಸಲಾಗಿದೆ. ಇದಕ್ಕಾಗಿಯೇ 95 ಶಿಬಿರಗಳನ್ನು ನಿರ್ಮಿಸಲಾಗಿದೆ. ಬೆಳಗ್ಗೆಯಿಂದ ವಿಮಾನ ಹಾರಾಟವನ್ನು ರಾತ್ರಿ 9 ಗಂಟೆವರೆಗೆ ನಿಷೇಧಿಸಲಾಗಿದೆ.

ನಗರ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ರೈಲ್ವೆ ಇಲಾಖೆ ಚೆನ್ನೈಗೆ ತೆರಳಲಿದ್ದ 17 ರೈಲುಗಳ ಸಂಚಾರವನ್ನು ನಿಲ್ಲಿಸಲು ಸೂಚನೆ ನೀಡಿದೆ.

ರಾತ್ರಿಯೂ ಬಿರುಗಾಳಿ ಮುಂದುವರಿಯಲಿದ್ದು, ಮಳೆ ಸುರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದ ಚೆನ್ನೈನಲ್ಲಿ ಪ್ರವಾಹದ ಪರಿಸ್ಥಿತಿಯನ್ನೂ ನಿರೀಕ್ಷಿಸಲಾಗಿದೆ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top