An unconventional News Portal.

ಜಾತಿ ಪ್ರಾಬಲ್ಯ ಮರೆಯಲು ‘ಪ್ರೈವೇಟ್ ಸಮೀಕ್ಷೆ’ಗಳಿದ ವೀರಶೈವ ವೇದಿಕೆ!

ಜಾತಿ ಪ್ರಾಬಲ್ಯ ಮರೆಯಲು ‘ಪ್ರೈವೇಟ್ ಸಮೀಕ್ಷೆ’ಗಳಿದ ವೀರಶೈವ ವೇದಿಕೆ!

ಸರಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಗಣತಿಯ ಮಾಹಿತಿ ಸೋರಿಕೆ ಸುದ್ದಿಯಾದ ಬೆನ್ನಲ್ಲೇ ವೀರಶೈವ ಲಿಂಗಾಯತ ಜಾತಿಯ ಸದಸ್ಯರು ಫೋನ್ ಮೂಲಕ ಜನಗಣತಿ ಶುರುಮಾಡಿದ್ದಾರೆ.

“ಜಾತಿ ಜನಗಣತಿ ಎಣಿಕೆಯ ಸಂಖ್ಯೆಯಲ್ಲಿ ಲಿಂಗಾಯಿತರ ಗಮನಾರ್ಹ ಸಂಖ್ಯೆ ಕಡಿಮೆ ಇರುವ ಸಾಧ್ಯತೆ ಇದ್ದು, ಅದರಲ್ಲಾಗಿರುವ ತಪ್ಪನ್ನು ಸರಿಮಾಡಲು ಫೋನ್ ಮೂಲಕ ಜಾತಿ ಜನಗಣತಿ ಶುರುಮಾಡಲಾಗಿದೆ,” ಎಂದು ಲಿಂಗಾಯತ ಸಮುದಾಯದ ಸದದ್ಯರು ತಿಳಿಸಿದ್ದಾರೆ.

“ರಾಜ್ಯದ ಜನಸಂಖ್ಯೆಯಲ್ಲಿ ಲಿಂಗಾಯತ ವೀರಶೈವ ಸಮುದಾಯದ ಜನಸಂಖ್ಯೆ ಶೇ. 15 ರಿಂದ 20 ಇದ್ದಾರೆ. ಈ ಸಮುದಾಯದಲ್ಲಿ ಎರಡು ಬೇರೆ ವಿಭಾಗಗಳನ್ನು ಮಾಡುವುದರ ಮೂಲಕ ಕಡಿಮೆ ಜನಸಂಖ್ಯೆಯನ್ನು ತೋರಿಸಲಾಗಿದೆ. ನಾವು ನಮ್ಮ ಫೋನ್ ಮೂಲಕ ಎಲ್ಲರನ್ನು ತಲುಪಲಾಗದಿದ್ದರೂ, ನಮ್ಮ ಕೈಲಾದಷ್ಟು ಪ್ರಯತ್ನ ಪಡುತ್ತಿದ್ದೇವೆ,” ಎಂದು ವೀರಶೈವ ವೇದಿಕೆಯ ಸದಸ್ಯ ಆನಂದ ಹಾವಣ್ಣವರ್ ತಿಳಿಸಿದ್ದಾರೆ.

ಇತ್ತೀಚಿಗೆ ‘ಸೋರಿಕೆ’ಯಾದ ಜಾತಿ ಜನಗಣತಿ ವರದಿಯಲ್ಲಿ ಲಿಂಗಾಯತ ಸಮುದಾಯದ ಬಗ್ಗೆ ತಪ್ಪು ಎಣಿಕೆ ನೀಡಲಾಗಿದೆ. ಆದ್ದರಿಂದ ನಾವು ಸ್ವತಂತ್ರ ವೀರಶೈವ ವೇದಿಕೆಯಿಂದ ಜನಗಣತಿ ಮಾಡಲಾಗುತ್ತಿದ್ದು, ಎಲ್ಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರು ದಯವಿಟ್ಟು 18004190717 ಮಿಸ್ ಕಾಲ್ ಕೊಡಿ. ಇದರಿಂದ ಕರ್ನಾಟಕದಲ್ಲಿರುವ ಲಿಂಗಾಯತರ ಒಟ್ಟು ಶಕ್ತಿಯನ್ನು ಎಣಿಸಬಹುದು ಎಂಬುದು ಪ್ರಕಟಣೆ.

ಕಳೆದ ವರ್ಷ ನಡೆಸಿದ್ದ ಜಾತಿ ಜನಗಣತಿಯನ್ನು ಕೂಡ ಕರ್ನಾಟಕದ ಎರಡು ರಾಜಕೀಯ ಪ್ರಭಾವಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಾದ ವಿರೋಧಿಸಿದ್ದವು. ಇದು ಮರುಕಳಿಸುವ ಸಾಧ್ಯತೆ ಕಾಣಿಸುತ್ತಿದೆ. ಆದರೆ ಈ ಸಮೀಕ್ಷೆ ನಡೆಸಿರುವ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳು, ಮಾಹಿತಿ ಸೋರಿಕೆಯಾಗಿರುವುದನ್ನು ಅಲ್ಲಗಳೆದಿದ್ದಾರೆ. ಇನ್ನು ಅನೇಕ ಜಿಲ್ಲೆಗಳ ಮಾಹಿತಿ ಸಂಗ್ರಹಿಸಬೇಕಿದ್ದು, ಅಂತಿಮ ಎಣಿಕೆ ಮುಂದಿನ ತಿಂಗಳಲ್ಲಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.

Top