An unconventional News Portal.

ಉತ್ತರಖಾಂಡ್ ಬಿಕ್ಕಟ್ಟು: ಬಹುಮತ ಸಾಬೀತುಪಡಿಸಲು ದಿನಾಂಕ ನಿಗದಿ

ಉತ್ತರಖಾಂಡ್ ಬಿಕ್ಕಟ್ಟು: ಬಹುಮತ ಸಾಬೀತುಪಡಿಸಲು ದಿನಾಂಕ ನಿಗದಿ

ಉತ್ತರಾಖಾಂಡ್ನಲ್ಲಿ ಮೇ.10ರಂದು ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ಸಾಬೀತು ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಬಹುಮತ ಸಾಬೀತು ಪಡಿಸಲು ಕೇಂದ್ರ ಸರಕಾರ ತಕರಾರು ಸಲ್ಲಿಸದ ಹಿನ್ನೆಲೆಯಲ್ಲಿ ಸುಪ್ರೀಂ ಈ ಆದೇಶ ನೀಡಿದೆ. ಮೇ 10ರಂದು ಬೆಳಗ್ಗೆ 11 ಗಂಟೆಗೆ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಬಹುಮತ ಸಾಬೀತು ಪಡಿಸಬೇಕಿದೆ.

ಅಂದು ಒಂಬತ್ತು ಮಂದಿ ಕಾಂಗ್ರೆಸ್ಸಿನ ಬಂಡಾಯ ಶಾಸಕರು ಉತ್ತರಾಖಾಂಡ್ ಸ್ಪೀಕರ್ ಅವರಿಂದ ಮಾನ್ಯತೆಯನ್ನು ಕಳೆದುಕೊಂಡ ಶಾಸಕರಾದ ಕಾರಣ ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪ್ರಸ್ತುತ ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ಅಂದು ಈ ಒಂಬತ್ತು ಮಂದಿ ಬಂಡಾಯ ಶಾಸಕರು ಮತ ಚಲಾಯಿಸದಿದ್ದರೆ ಹರೀಶ್ ರಾವತ್ ಅವರು ಬಹುಮತವನ್ನು ಸಾಬೀತುಪಡಿಸಲಿಕ್ಕೆ 31 ಮಂದಿ ಶಾಸಕರು ಅವರ ಪರ ಮತ ಚಲಾಯಿಸಿದರೆ ಸಾಕುತ್ತದೆ ಎಂದು ವರದಿಗಳು ಹೇಳಿವೆ.

ಇದೇ ವೇಳೆ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟರ್ನಿ ಜನರಲ್ ಮುಕುಲ್ ರೋಹ್ಟಗಿ ಬಹುಮತ ಸಾಬೀತು ಪಡಿಸುವ ವೇಳೆ ವೀಕ್ಷಕರನ್ನು ನೇಮಕ ಮಾಡಬೇಕು. ಈ ವೀಕ್ಷಕರು ನಿವೃತ್ತ ಚುನಾವಣಾ ಆಯುಕ್ತರಾಗಬೇಕು ಎಂದು ಮನವಿ ಮಾಡಿದ್ದಾರೆ.

ಉತ್ತರಾಖಂಡ್‍ನಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ್ದನ್ನು ಪ್ರಶ್ನಿಸಿ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ನೈನಿತಾಲ್ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ರಾಷ್ಟ್ರಪತಿ ಆಡಳಿತವನ್ನು ವಜಾಗೊಳಿಸಿ ಬಹುಮತ ಸಾಬೀತು ಮಾಡಲು ಕಾಂಗ್ರೆಸ್ ಸರಕಾರಕ್ಕೆ ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಒಟ್ಟು 70 ಮಂದಿ ಶಾಸಕರಲ್ಲಿ 9 ಮಂದಿ ಬಂಡಾಯ ಶಾಸಕರು ಇಲ್ಲವಾದರೆ 61 ಮಂದಿ ಶಾಸಕರು ಮಾತ್ರ ಉಳಿಯುತ್ತಾರೆ. ಆಗ ರಾವತ್ ಅವರಿಗೆ 31 ಶಾಸಕರ ಬೆಂಬಲವಿದ್ದರೆ ಸಾಕಾಗುತ್ತದೆ. ಈ ಒಂಬತ್ತು ಮಂದಿ ಶಾಸಕರ ಅಮಾನ್ಯತೆಯ ಕುರಿತು ಉತ್ತರಾಖಾಂಡದ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ನಾಳೆ ಈ ಕುರಿತು ತೀರ್ಪು ಹೊರಬೀಳಲಿದೆ. ಒಂದು ವೇಳೆ ಈ ತೀರ್ಪು ಈ ಒಂಬತ್ತು ಮಂದಿ ಶಾಸಕರ ಪರ ಬಂದರೆ, ಮಂಗಳವಾರದಂದು ಮತ ಚಲಾಯಿಸುವ ಹಕ್ಕನ್ನು ಪಡೆಯುತ್ತಾರೆ ಎನ್ನಲಾಗಿದೆ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top