An unconventional News Portal.

ವರ್ಷ 1; ಬಲಿ 3800 ಮನುಷ್ಯರು: ಈ ವರ್ಷ ಮೆಡಿಟರೇನಿಯನ್ ಸಮುದ್ರದಲ್ಲಿ ‘ಸಾವಿನ ಪರ್ವ’!

ವರ್ಷ 1; ಬಲಿ 3800 ಮನುಷ್ಯರು: ಈ ವರ್ಷ ಮೆಡಿಟರೇನಿಯನ್ ಸಮುದ್ರದಲ್ಲಿ ‘ಸಾವಿನ ಪರ್ವ’!

ಮೆಡಿಟೆರೇನಿಯನ್ ಸಮುದ್ರದಲ್ಲಿ ಮನುಷ್ಯರ ಬಲಿಯ ಪರ್ವ ಮುಂದುವರಿದಿದೆ.

ಲಿಬಿಯಾ ದೇಶದ ಕರಾವಳಿಯಲ್ಲಿ ಇತ್ತೀಚೆಗೆ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ 29 ಜನ ಸಾವನ್ನಪ್ಪಿದ್ದರು. ಈ ಮೂಲಕ, 2016ರ ಆರಂಭದಿಂದ ಈವರೆಗೆ ಮೆಡಿಟರೇನಿಯನ್ ಸಮುದ್ರವನ್ನು ದಾಟುವ ಸಮಯದಲ್ಲಿ ಜೀವತೆತ್ತ ನಿರಾಶ್ರಿತರ ಸಂಖ್ಯೆ 3800ರ ಗಡಿ ಮುಟ್ಟಿದೆ.

ಬುಧವಾರ ಫ್ರೆಂಜ್ ಪರಿಹಾರ ತಂಡ ‘ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್’ (ಎಂಎಸ್ಎಫ್) ನವರು ಲಿಬಿಯಾ ಕರಾವಳಿಯಲ್ಲಿ ಮುಳುಗುತ್ತಿರುವ ನೌಕೆಯಿಂದ 107 ಜನರನ್ನು ರಕ್ಷಿಸಿದ್ದಾರೆ ಇದೇ ಘಟನೆಯಲ್ಲಿ 29 ಜನ ಸಾವಿಗೀಡಾಗಿದ್ದಾರೆ.

ಎಂಎಸ್ಎಫ್ ಪ್ರಕಾರ ಲಿಬಿಯಾದಿಂದ 26 ನಾಟಿಕಲ್ ಮೈಲು ದೂರದಲ್ಲಿ ನೌಕೆಯು ಮುಳುಗುತ್ತಿತ್ತು. ಈ ಸಂದರ್ಭ ಎಂಎಸ್ಎಫ್’ನ ಬೋರ್ಬೋನ್ ಏಗೋಸ್ ನೌಕೆಯು ಹೋಗಿ 107 ಜನರನ್ನು ರಕ್ಷಿಸಿದೆ. ಇದಾದ ಬೆನ್ನಿಗೆ ಇನ್ನೊಂದು ಬೋಟ್ ಮುಳುಗಿದ್ದು. ಅಲ್ಲಿಗೂ ಈ ತಂಡ ಹೋಗಿ 139 ಜನರನ್ನು ರಕ್ಷಿಸಿದೆ.

ಜನರ ಭಾರ ತಾಳಲಾರದೆ ಸಮುದ್ರದಲ್ಲಿ ಮುಳುಗಿದ ಸಿರಿಯಾ ನಿರಾಶ್ರಿತರ ದೋಣಿ (ಚಿತ್ರ: ಅಲ್ ಜಝೀರಾ)

ಜನರ ಭಾರ ತಾಳಲಾರದೆ ಸಮುದ್ರದಲ್ಲಿ ಮುಳುಗಿದ ಸಿರಿಯಾ ನಿರಾಶ್ರಿತರ ದೋಣಿ (ಚಿತ್ರ: ಅಲ್ ಜಝೀರಾ)

 

“ನೀರಿನಲ್ಲಿ ಮುಳುಗಿ ಸತ್ತವರಲ್ಲದೆ, ನೀರಿಗೆ ಚೆಲ್ಲಿದ ಆಯಿಲ್ (ಕಚ್ಛಾ ತೈಲ)ದ ಕಾರಣದಿಂದಲೂ ಅಸುನೀಗಿದ್ದಾರೆ,” ಎಂದು ಎಂಎಸ್ಎಫ್ ಮುಖ್ಯಸ್ಥ ಮೈಖೇಲ್ ತೆಲಾರೋ ಹೇಳಿದ್ದಾರೆ.

ಸಾವಿನ ಸರಣಿ:

ಮಧ್ಯಪೂರ್ವ ದೇಶಗಳಲ್ಲಿ ಭಯೋತ್ಪಾದನೆಯ ಸಮಸ್ಯೆ ಆರಂಭವಾದ ನಂತರ ಲಕ್ಷಾಂತರ ಜನ ಮೆಡಿಟರೇನಿಯನ್ ಸಮುದ್ರ ದಾಟಿ ಯೂರೋಪ್ ದೇಶಗಳತ್ತ ವಲಸೆ ಹೋಗುತ್ತಾರೆ ಹೀಗೆ ವಲಸೆ ಹೋಗುವವರು ಸಣ್ಣ ಸಣ್ಣ ದೋಣಿಗಳಲ್ಲಿ ಮಿತಿಗಿಂತ ಜಾಸ್ತಿ ಜನ ಒಟ್ಟಾಗಿ ಪ್ರಯಾಣಿಸುತ್ತಾರೆ. ಇಂಥಹ ದೋಣಿಗಳೆಲ್ಲಾ ಸಮುದ್ರ ಮಧ್ಯದಲ್ಲಿ ಅವಘಡಕ್ಕೆ ತುತ್ತಾಗುವ ಸಂಭವಗಳೇ ಜಾಸ್ತಿ.

ಬುಧವಾರದ ಸಾವಿನೊಂದಿಗೆ ಮೆಡಿಟರೇನಿಯನ್ ಸಮುದ್ರದಲ್ಲಿ ಈ ವರ್ಷವೊಂದರಲ್ಲೇ ಸಾವಿಗೀಡಾದವರ ಸಂಖ್ಯೆ 3800 ದಾಟಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಇದರಲ್ಲಿ ಹೆಚ್ಚಿನ ಪಾಲನ್ನು ಇರಿಯಾದ ನಿರಾಶ್ರಿತರೇ ಹೊಂದಿದ್ದಾರೆ.

ಸದ್ಯ ಈ ಘಟನೆಯಲ್ಲಿ 29 ಜನ ಸಾವಿಗೀಡಾಗಿದ್ದರೆ ಅತ್ತ ಲಿಬಿಯಾದ ಕರಾವಳಿಯಲ್ಲಿ ಮತ್ತೊಂದು ಬೋಟ್ ಮುಳುಗಿದ್ದು 90 ಜನ ಇನ್ನೂ ನಾಪತ್ತೆಯಾಗಿದ್ದಾರೆ. ಇವರೆಲ್ಲಾ ಆಫ್ರಿಕಾದಿಂದ ಯುರೋಪಿನತ್ತ ವಲಸೆ ಹೋಗುವವರಾಗಿದ್ದಾರೆ.

ಆಫ್ರಿಕಾದಿಂದ ಬರುವ ನಿರಾಶ್ರಿತರು ಹೆಚ್ಚಾಗಿ ಲಿಬಿಯಾ ಕರಾವಳಿಯಿಂದ ಯುರೋಪಿನತ್ತ ಪ್ರಯಾಣ ಆರಂಭಿಸುತ್ತಾರೆ. ಕಳೆದ ಮಾರ್ಚಿನಲ್ಲಿ ಟರ್ಕಿ ಮತ್ತು ಯುರೋಪಿಯನ್ ಯೂನಿಯನ್ ನಡುವೆ ಒಪ್ಪಂದ ಏರ್ಪಟ್ಟ ನಂತರ ಗ್ರೀಸ್ ದೇಶಕ್ಕೆ ಪ್ರಯಾಣ ಬೆಳೆಸುವ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು. ಇದಾದ ನಂತರ ಇದೀಗ ಇಟಲಿ ಮತ್ತು ಲಿಬಿಯಾದ ನಡುವಿನ ಮಾರ್ಗಗಳನ್ನು ಸದಾ ಗಿಜಿಗುಟ್ಟುತ್ತಿರುತ್ತವೆ. ಒಬ್ಬರಲ್ಲ ಒಬ್ಬರು ಈ ದಾರಿಯಲ್ಲಿ ಸಾಮಾನ್ಯ ರಬ್ಬರ್ ಬೋಟ್ ಹತ್ತಿ ತಮ್ಮ ಭವಿಷ್ಯ ಕಂಡುಕೊಳ್ಳಲು ಯುರೋಪಿನತ್ತ ವಲಸೆ ಹೋಗುತ್ತಿರುತ್ತಾರೆ.

ಮನೆ ಮಠ ಬಿಟ್ಟು ಮಕ್ಕಳನ್ನು ಕಟ್ಟಿಕೊಂಡು ಯುರೋಪಿನತ್ತ ವಲಸೆ ಹೊರಟ ಸಿರಿಯನ್ನರು

ಮನೆ ಮಠ ಬಿಟ್ಟು ಮಕ್ಕಳನ್ನು ಕಟ್ಟಿಕೊಂಡು ಯುರೋಪಿನತ್ತ ವಲಸೆ ಹೊರಟ ಸಿರಿಯನ್ನರು

ಸಾಮಾನ್ಯವಾಗಿ ನಿರಾಶ್ರಿತರಿಗೆ ಬೋಟ್ಗಳನ್ನು ಕಳ್ಳ ಸಾಗಣೆದಾರರು ಸಿದ್ಧ ಮಾಡಿಕೊಡುತ್ತಾರೆ. ಹೀಗೆ ಸಿದ್ಧ ಮಾಡುವಾಗ ಸರಿಯಾದ ವ್ಯವಸ್ಥೆಗಳಿಲ್ಲದೆ, ಹಳೆಯ ಬೋಟುಗಳಲ್ಲಿ ಮಿತಿಮೀರಿ ಜನ ತುಂಬಿಸಿ ಕಳುಹಿಸುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಈ ಬೋಟುಗಳು ಜನರ ಭಾರ ತಾಳಲಾಗದೆ ಸಮುದ್ರ ಮಧ್ಯದಲ್ಲಿ ಮುಳುಗುತ್ತವೆ. ಸದ್ಯ ಇವೆಲ್ಲಾ ಸಾಮಾನ್ಯ ಘಟನೆಗಳಂತಾಗಿದ್ದು ಅಂತರಾಷ್ಟ್ರೀಯ ರಕ್ಷಣಾ ತಂಡಗಳು ನಂತರ ಇವರನ್ನು ಬಂದು ರಕ್ಷಿಸುತ್ತಾರೆ. ಕೆಲವೊಮ್ಮೆ ತುಂಬು ಗರ್ಭಿಣಿಯರು ಈ ಬೋಟುಗಳಲ್ಲಿ ಪ್ರಯಾಣಿಸುವುದುಂಟು. ರಕ್ಷಣಾ ಕಾರ್ಯಚರಣೆ ಮಾಡಿದ ತಕ್ಷಣ ಈ ತಾಯಂದಿರು ಮಗುವನ್ನು ಹೆತ್ತ ಉದಾಹರಣೆಗಳೂ ಇವೆ.

You may find Interesting:

‘ಅಲನ್ ಕುರ್ದಿ ಸಾವಿನ ವರ್ಷದ ಸ್ಮರಣೆ’: ಬದಲಾಗದ ಪರಿಸ್ಥಿತಿಯನ್ನು ಮುಂದಿಡುತ್ತಿರುವ ಅಂಕಿಅಂಶಗಳು!

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top