An unconventional News Portal.

‘ಮರಳಿ ಕಾಡಿಗೆ’: ಇದು ಚಿಂಪಾಂಜಿಗಳ ‘ಸರ್ವ ಶಿಕ್ಷಣ ಅಭಿಯಾನ’ದ ಕತೆ!

‘ಮರಳಿ ಕಾಡಿಗೆ’: ಇದು ಚಿಂಪಾಂಜಿಗಳ ‘ಸರ್ವ ಶಿಕ್ಷಣ ಅಭಿಯಾನ’ದ ಕತೆ!

ಚಿಂಪಾಂಜಿ ಜಾತಿಗೆ ಸೇರಿದ ‘ಒರಾಂಗ್ಟನ್ (orangutan)’ ಪ್ರಾಣಿ ಅಳಿವಿನಂಚಿನಲ್ಲಿದೆ. ಇವುಗಳನ್ನು ಉಳಿಸಲು ‘ದಿ ಒರಾಂಗ್ಟನ್ ಪ್ರಾಜೆಕ್ಟ್’ ಕೆಲಸ ಮಾಡುತ್ತಿದೆ. ಕಳ್ಳ ಸಾಗಣೆಯಿಂದ ನಗರಕ್ಕೆ ಬರುವ ಒರಾಂಗ್ಟನ್ ಗಳನ್ನು ಮರಳಿ ಕಾಡಿಗೆ ಸೇರಿಸುವ ಕೆಲಸ ಇದರದ್ದು. ಕಾಡಿನ ಸ್ಪರ್ಷವೇ ಇಲ್ಲದೆ ಕಾಂಕ್ರಿಟ್ ಕಾಡಿನಲ್ಲಿ ಹುಟ್ಟುವ ಈ ಒರಾಂಗ್ಟನ್ ಗಳನ್ನು ಮರಳಿ ಗೂಡು ತಲುಪಿಸುವ ರೋಚಕ ಕತೆಯಿದು.

the orangutan projectಚಿಂಪಾಂಜಿ ಜಾತಿಗೆ ಸೇರಿದ ಏಷ್ಯಾದ ಎರಡು ವಿಶೇಷ ತಳಿಗಳೇ ಈ ಒರಾಂಗ್ಟನ್ಗಳು. ಒಂದು ಇಂಡೋನೇಷ್ಯಾದ ‘ಸುಮಾತ್ರ’ (ಇಲ್ಲಿ 2004ರಲ್ಲಿ ಭೀಕರ ಸುನಾಮಿ ಅಪ್ಪಳಿಸಿತ್ತು) ಸುತ್ತ ಮುತ್ತ ಇದ್ದರೆ, ಇನ್ನೊಂದು ಮಲೇಷ್ಯಾದ ‘ಬೊರ್ನೆವೋ’ ಸುತ್ತ ಮುತ್ತ ವಾಸಿಸುತ್ತವೆ. ಇವುಗಳಲ್ಲಿ ಸುಮಾತ್ರ ತಳಿಯ ಮೇಲೆ ಆಸ್ಟ್ರೇಲಿಯಾ ಮೂಲದ ಇದೇ ‘ದಿ ಒರಾಂಗ್ಟನ್ ಪ್ರಾಜೆಕ್ಟ್’ ಕೆಲಸ ಮಾಡುತ್ತಿದೆ. ವಿಶೇಷವೆಂದರೆ ಮನುಷ್ಯನಿಗೂ ಈ ಒರಾಂಗ್ಟನ್ನುಗಳಿಗೂ ‘ಡಿಎನ್ಎ’ನಲ್ಲಿ ಶೇಕಡಾ 97 ಸಾಮ್ಯತೆ ಇದೆ.

ನಿಮಗೆಲ್ಲ ಗೊತ್ತಿರಬಹದು ಅರಬ್ ದೇಶಗಳೂ ಸೇರಿದಂತೆ ಹಲವು ದೇಶಗಳ ಶ್ರೀಮಂತರ ಮನೆಗಳಲ್ಲಿ ಚಿಂಪಾಂಜಿಗಳನ್ನು ಸಾಕುವುದು ಪ್ರತಿಷ್ಠೆಯ ವಿಷಯ. ಈ ಕಾರಣಕ್ಕೆ ಈ ಒರಾಂಗ್ಟನ್ಗಳನ್ನು ಕಳ್ಳ ಸಾಗಣೆ ಮಾಡುತ್ತಾರೆ. ಕಳ್ಳ ಸಾಗಣೆ ಮಾಡಿ ಸಿಕ್ಕು ಬಿದ್ದ ಒರಾಂಗ್ಟನ್ಗಳನ್ನು ಮರಳಿ ಕಾಡಿಗೆ ಸೇರಿಸುವ ಕೆಲಸವನ್ನು ಈ ಯೋಜನೆಯ ಪ್ರಾಣಿ ತಜ್ಞರು ಕಳೆದ 10 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ.

ಉದ್ದೇಶಿತ ಕೆಲಸಕ್ಕಾಗಿ ಇಂಡೋನೇಷ್ಯಾದ ಸುಮಾತ್ರ ಬಳಿಯಲ್ಲಿರುವ 34 ಸಾವಿರ ಹೆಕ್ಟೇರ್ ಪ್ರದೇಶವನ್ನು ಈ ಸಂಸ್ಥೆ ಬಾಡಿಗೆಗೆ ಪಡೆದುಕೊಂಡಿದೆ. ಈ ಪ್ರದೇಶದಲ್ಲಿ ಹಿಂದೊಮ್ಮೆ ದೊಡ್ಡ ಸಂಖ್ಯೆಯಲ್ಲಿದ್ದ ಒರಾಂಗ್ಟನ್ಗಳು ಇವತ್ತು ಅಳಿವಿನ ಅಂಚಿನಲ್ಲಿವೆ. ಕಾಡಿನ ನಾಶ, ಕಳ್ಳ ಸಾಗಣೆ ಮುಂತಾದ ಪ್ರಕರಣಗಳು ಇವುಗಳ ಸಂತತಿಗೇ ಕುತ್ತು ತಂದಿವೆ. ಪರಿಣಾಮ ಇವತ್ತು ಸುಮಾತ್ರಾ ಸುತ್ತ ಮುತ್ತಲಿನ 1.33 ಲಕ್ಷ ಹೆಕ್ಟೇರ್ ಕಾಡಿನಲ್ಲಿ ಕೇವಲ 400 ರಿಂದ 600 ಒರಾಂಗ್ಟನ್ಗಳು ಉಳಿದುಕೊಂಡಿವೆ. ಒಂದೊಮ್ಮೆ ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ಒರಾಂಗ್ಟನ್ಗಳನ್ನು ಚಿತ್ರದಲ್ಲಿ ಮಾತ್ರ ನೋಡಬೇಕಾಗುತ್ತದೆ. ಈ ಕಾರಣಕ್ಕೆ ಲೀಫ್ ಕಾಕ್ ‘ದಿ ಒರಾಂಗ್ಟನ್ ಪ್ರಾಜೆಕ್ಟ್’ ಆರಂಭಿಸಿ ಸಂತತಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅನಾಥ ಒರಾಂಗ್ಟನ್ನಿಗೆ ಹಾಲುಣಿಸುತ್ತಿರುವುದು

ಅನಾಥ ಒರಾಂಗ್ಟನ್ನಿಗೆ ಹಾಲುಣಿಸುತ್ತಿರುವುದು

ಇವರ ಬಳಿ ಪ್ರಾಣಿ ತಜ್ಞರ ತಂಡವಿದೆ. ಅಲ್ಲಲ್ಲಿ ಕಳ್ಳ ಸಾಗಣೆ ಮಾಡುವಾಗ ಸಿಕ್ಕಿ ಬಿದ್ದ ಒರಾಂಗ್ಟನ್ಗಳನ್ನು ತಂದು ಇದೇ ಸುಮಾತ್ರಾ ಕಾಡಿಗೆ ಬಿಡುತ್ತಾರೆ. ಆದರೆ ಕಾಡಿನ ಸ್ಪರ್ಷವೇ ಇಲ್ಲದೇ ನಗರಗಳಲ್ಲೇ ಹುಟ್ಟಿದ ಈ ಪ್ರಾಣಿಗಳನ್ನು ಕಾಡಿಗೆ ಬಿಟ್ಟರೆ ಅವು ಆಹಾರವಿಲ್ಲದೇ ಸತ್ತು ಹೋಗುತ್ತವೆ. ಅದಕ್ಕಾಗಿ ಕಾಡನ್ನು ಈ ಪ್ರಾಣಿಗಳಿಗೆ ಅಭ್ಯಾಸ ಮಾಡಿಸುವುದೇ ಒರಾಂಗ್ಟನ್ ಪ್ರಾಜೆಕ್ಟಿನ ಬಹುಮುಖ್ಯ ಕೆಲಸ.

ಇದಕ್ಕಾಗಿ ಕಾಡೊಳಗಡೆ ಚಿಂಪಾಂಜಿಗಳಿಗಾಗಿಯೇ ಇವರು ಶಾಲೆಗಳನ್ನು ಕಟ್ಟಿದ್ದಾರೆ. ಪ್ರತಿ ಅನಾಥ ಚಿಂಪಾಂಜಿಗಳು ಬಂದಾಗಲೂ ಅವುಗಳನ್ನು ಪರೀಕ್ಷೆ ಮಾಡಿ, ಯಾವುದೇ ರೋಗ ಲಕ್ಷಣ ಇಲ್ಲವೆಂದು ಖಚಿತಪಡಿಸಿಕೊಂಡು ಇಲ್ಲಿನ ಶಾಲೆಗಳಿಗೆ ಸೇರಿಸಿಕೊಳ್ಳಲಾಗುತ್ತದೆ. ಎಲ್.ಕೆ.ಜಿಯಿಂದ ಆರಂಭಿಸಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆಗಳಂತೆ ಇಲ್ಲಿ ಹಂತ ಹಂತದ ತರಬೇತಿಯನ್ನು ಚಿಂಪಾಜಿಗಳಿಗೆ ನೀಡಲಾಗುತ್ತದೆ. ಇದು ಬೇರೆ ಯಾವುದಕ್ಕೂ ಅಲ್ಲ; ಚಿಂಪಾಂಜಿಗಳನ್ನು ಮರಳಿ ಕಾಡಿಗೆ ಸೇರಿಸುವುದಕ್ಕೆ ಅಷ್ಟೆ.

ಲೀಫ್ ಕುಕ್

ಲೀಫ್ ಕುಕ್

ಇಲ್ಲಿ ಮರ ಹತ್ತುವುದು, ಕಾಡಿನಲ್ಲಿರುವ ಹಣ್ಣುಗಳನ್ನು ಹುಡುಕಿ ತಿನ್ನುವುದು, ಗೂಡುಕಟ್ಟಿಕೊಡುವುದನ್ನು ಕಲಿಸಲಾಗುತ್ತದೆ. ಸುಮಾರು 20 ಬಗೆಯ ಹಣ್ಣುಗಳನ್ನು ಪತ್ತೆ ಮಾಡಿ ತಿನ್ನುವುದನ್ನು ಅಭ್ಯಾಸ ಮಾಡಿಸ್ತಾರೆ. ಹಣ್ಣುಗಳಿಲ್ಲದಾಗ ಬೇರೆ ಆಹಾರಗಳು ಏನೇನು ಬಳಸಬಹುದು ಎಂಬುದನ್ನೂ ಹೇಳಿ ಕೊಡುತ್ತಾರೆ; ಎಲ್ಲವೂ ಪ್ರಾಕ್ಟಿಕಲ್ ಕ್ಲಾಸ್ಗಳು.

ತರಬೇತಿ ಅಂತಿಮ ಹಂತಕ್ಕೆ ಬಂದಾಗ ಅವುಗಳಿಗೆ ರೇಡಿಯೋ ಕಾಲರ್ ಕಟ್ಟಿ ಕಾಡಿಗೆ ಬಿಡುತ್ತಾರೆ. ನಂತರ ಒಂದಷ್ಟು ಸಮಯ ಅವುಗಳ ಚಲನವಲನದ ಮೇಲೆ ನಿರಂತರ ಕಣ್ಣಿಡಲಾಗುತ್ತದೆ. ಒಮ್ಮೆ ಕಾಡಿನಲ್ಲಿ ಬದುಕುವ ಕಲೆ ಅವುಗಳಿಗೆ ಸಿದ್ಧಿಸಿದೆ ಎಂದು ಗೊತ್ತಾಗುತ್ತಿದ್ದಂತೆ ಅವುಗಳನ್ನು ಸ್ವತಂತ್ರವಾಗಿ ಬಿಟ್ಟು ಬಿಡುತ್ತಾರೆ.

ಒಂದೊಮ್ಮೆ ಸಂಸ್ಥೆ ಬಾಡಿಗೆಗೆ ಪಡೆದ ಜಾಗದಲ್ಲಿ ಕೇವಲ 18-30 ಒರಾಂಗ್ಟನ್ಗಳಿದ್ದವು. ಇವತ್ತು ಲೀಫ್ ಕಾಕ್ ಕೆಲಸದಿಂದಾಗಿ ಅಲ್ಲಿ 200ಕ್ಕೂ ಹೆಚ್ಚು ಒರಾಂಗ್ಟನ್ಗಳು ಬೆಳೆದು ನಿಂತಿವೆ. “ನನಗೆ ಇವುಗಳ ಸಂಖ್ಯೆಯನ್ನು 8,000ಕ್ಕೆ ಹೆಚ್ಚಿಸುವ ಆಸೆ ಇದೆ ಬೇರೇನೂ ಇಲ್ಲ,” ಎನ್ನುತ್ತಾರೆ ಒರಾಂಗ್ಟನ್ಗಳಿಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟ ಲೀಫ್ ಕಾಕ್.

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top