An unconventional News Portal.

ಭಾರತ- ಪಾಕ್ ಸಂಬಂಧಕ್ಕೆ ಹುಳಿ ಹಿಂಡುತ್ತಿರುವ ಎರಡೂ ದೇಶಗಳ ಪಠ್ಯಕ್ರಮಗಳು!

ಭಾರತ- ಪಾಕ್ ಸಂಬಂಧಕ್ಕೆ ಹುಳಿ ಹಿಂಡುತ್ತಿರುವ ಎರಡೂ ದೇಶಗಳ ಪಠ್ಯಕ್ರಮಗಳು!

ಸ್ವಾತಂತ್ರ್ಯಕ್ಕೂ ಮುನ್ನ ಒಟ್ಟಿಗೇ ಇದ್ದ ಎರಡು ಭೂ ಭಾಗಗಳು, 1947ರ ನಂತರ ‘ಶತ್ರುಗಳು ರಾಷ್ಟ್ರಗಳು’ ಎಂಬ ಪಟ್ಟವನ್ನು ಕಟ್ಟಿಕೊಂಡಿವೆ.

ಈ 70 ವರ್ಷಗಳ ಅಂತರದಲ್ಲಿ ಉಬಯ ದೇಶಗಳ ನಡುವೆ ನಡೆದ ಯುದ್ಧಗಳು, ನಡೆಯದ ಸಂಧಾನ ಮಾತುಕತೆಗಳು ಮತ್ತು ಕೊಡುಕೊಳ್ಳುವಿಕೆಯ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ನಡೆಗಳು ಎಲ್ಲವೂ ಹೀಗೊಂದು ಪಟ್ಟವನ್ನು ಪಡೆದುಕೊಳ್ಳುವಲ್ಲಿ ಗಣನೀಯ ಪ್ರಮಾಣದ ಕೊಡುಗೆ ನೀಡಿವೆ.

ಸದ್ಯ ಇವೆಲ್ಲವನ್ನೂ ಪಕ್ಕಕ್ಕಿಟ್ಟು, ಭಾರತ ಮತ್ತು ಪಾಕಿಸ್ತಾನ ಈ ಪರಿಯ ಶತ್ರುತ್ವವನ್ನು ಬೆಳೆಸಿಕೊಳ್ಳಲು ನೆರವಾದ ಶಾಲೆಗಳ ಪಠ್ಯಕ್ರಮಗಳನ್ನು ಗಮನಿಸಬೇಕಿದೆ. ಇತಿಹಾಸದ ಒಂದೇ ವಿದ್ಯಮಾನವನ್ನು ಉಬಯ ದೇಶಗಳು, ತಮ್ಮ ಅನುಕೂಲಕ್ಕೆ ತಕ್ಕಂತೆ, ತಮ್ಮ ಆಲೋಚನೆಗೆ ಸರಿ ಹೊಂದುವಂತೆ, ತಮ್ಮದೇ ಮೂಗಿನ ನೇರಕ್ಕೆ ವಿದ್ಯಾಭ್ಯಾಸದ ಪಠ್ಯಕ್ರಮದಲ್ಲಿ ಸೇರಿಸಿರುವುದು ಎದ್ದು ಕಾಣಿಸುತ್ತಿದೆ.

ಉದಾಹರಣೆಗೆ, ಭಾರತದ ಪಠ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಇದ್ಭಾಗವಾಗಲು ಮಹಮದ್ ಅಲಿ ಜಿನ್ಹಾ ಕಾರಣ ಎನ್ನಲಾಗುತ್ತದೆ. ಅದೇ ಪಾಕಿಸ್ತಾನದ ಪಠ್ಯಗಳಲ್ಲಿ, ಪಾಕಿಸ್ತಾನ ಭಾರತದಿಂದ ಪ್ರತ್ಯೇಕವಾಗಲು ಗಾಂಧಿ ಕಾರಣ ಎನ್ನಲಾಗುತ್ತದೆ. ಹೀಗೆ, ಎರಡೂ ದೇಶಗಳ ನಡುವೆ ನಡೆದ ಅನೇಕ ಐತಿಹಾಸಿಕ ಘಟನೆಗಳನ್ನು ಹೇಗೆ ಎರಡೂ ದೇಶಗಳು ಭಿನ್ನವಾಗಿ ತಮ್ಮ ಮಕ್ಕಳಿಗೆ ಉಣಬಿಡಿಸಿಕೊಂಡು ಬರುತ್ತಿವೆ ಎಂಬುದರ ಪಟ್ಟಿಯೊಂದು ಇಲ್ಲಿದೆ.

ಅಸಹಕಾರ ಚಳುವಳಿ (1930- 34):

ಸ್ವಾತಂತ್ರ್ಯ ಬರುವುದಕ್ಕೆ ಒಂದು ದಶಕದ ಮುಂಚೆ ಬ್ರಿಟಿಷ್ ಸಾಮ್ರಾಜ್ಯವನ್ನು ನಿದ್ದೆಗೆಡಿಸಿದ್ದ ಅಸಹಾಕಾರ ಚಳುವಳಿ ಭಾರತದ ಪಠ್ಯಕ್ರಮದಲ್ಲಿ ಪ್ರಮುಖ ಅಂಶ. ಇಲ್ಲಿನ ಯಾವ ಮಕ್ಕಳೂ ಅಸಹಕಾರ ಚಳುವಳಿಯ ಕುರಿತು ಓದದೇ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಆದರೆ, ಈ ಚಳವಳಿಯ ಕುರಿತು ಪಾಕಿಸ್ತಾನದ ಯಾವ ಪಠ್ಯಗಳಲ್ಲೂ ಚಿಕ್ಕದೊಂದು ಮಾಹಿತಿಯೂ ಸಿಗುವುದಿಲ್ಲ.

ಇಂಡಿಯಾ- ಪಾಕಿಸ್ತಾನ್ ಪಾರ್ಟಿಷನ್ (1947):

“ಸ್ವಾತಂತ್ರ್ಯವನ್ನು ಗೆದ್ದ ನಂತರ, ಅವರು (ಮುಸ್ಲಿಂರು) ತಮ್ಮದೇ ಕಾನೂನುಗಳನ್ನು ಜಾರಿಗೊಳಿಸುವಂತಹ, ಅಂದರೆ ಅಲ್ಲಾ ಹೇಳಿದ ಕಾನೂನನ್ನು ಜಾರಿಗೊಳಿಸುವ ಮನಸ್ಸು ಮಾಡಿದರು. ಆದರೆ, ಭಾರತದಲ್ಲಿ ಹಿಂದೂ ಸಂಖ್ಯೆ ಹೆಚ್ಚಿರುವುದರಿಂದ ಹಿಂದೂ ಕಾನೂನುಗಳು ಜಾರಿಯಾಗುವುದರಲ್ಲಿ ಯಾವುದೇ ಅನುಮಾಗಳಿರಲಿಲ್ಲ. ಹಾಗೇನಾದರೂ ಆದರೆ ಮುಸ್ಲಿಂರು ಹಿಂದೂ ಕಾನೂನಿನ ಅಡಿಯಲ್ಲಿ ಅಸ್ಪೃಶ್ಯರಾಗುತ್ತಿದ್ದರು. .ಮುಸ್ಲಿಂ ಕಾನೂನನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಮುಸ್ಲಿಂರು ನಿಜವಾದ ಸ್ವಾತಂತ್ರ್ಯವನ್ನು ಬಯಸಿದರು.”

  • ಉರ್ದು ಕ್ಲಾಸ್ 4, ಪಂಜಾಬ್ ಪಠ್ಯಪುಸ್ತಕ ಮಂಡಳಿ, ಲಾಹೋರ್- 2002

“ಆರಂಭದಲ್ಲಿ ಮುಸ್ಲಿಂ ನಾಯಕರೂ ಕೂಡ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಕುರಿತು ಗಂಭೀರವಾಗಿರಲಿಲ್ಲ. ಮಹಮದ್ ಅಲಿ ಜಿನ್ಹಾ ಕೂಡ ಬ್ರಿಟಿಷರ ಜತೆ ಮುಸ್ಲಿಂರಿಗಾಗಿ ಹೆಚ್ಚಿನ ಬೇಡಿಕೆಗಳನ್ನು ಇಡಲು ಈ ಅಸ್ತ್ರವನ್ನು ಬಳಸಿದರು.”

  • ಎನ್ಸಿಇಆರ್ಟಿ ಕ್ಲಾಸ್ 12, ಇತಿಹಾಸ ಪಠ್ಯ.

1947 ದಂಗೆ:

“ಭಾರತದಿಂದ ಹೊರಟ ಮುಸ್ಲಿಂರಿಗೆ ನೆರವು ನೀಡಲು ಪಾಕಿಸ್ತಾನ ತಯಾರಾಗಿತ್ತು. ಆದರೆ, ಭಾರತದ ಪ್ರಜೆಗಳು ಮುಸ್ಲಿಂ (ನಿರಾಶ್ರಿತರ) ಮೇಲೆ ದಾಳಿಗಳನ್ನು ಮಾಡಿ, ದೋಚಿದರು. ಈ ಸಮಯದಲ್ಲಿ ಸಾವಿರಾರು ಜನರ ಮಾರಣಹೋಮ ನಡೆಯಿತು.”

  • ಸಿವಿಕ್ಸ್ ಆಫ್ ಪಾಕಿಸ್ತಾನ್ ಪಠ್ಯಪುಸ್ತಕದಿಂದ.

“ಇದೊಂದು ಸರಳವಾದ ಪ್ರತ್ಯೇಕಗೊಳ್ಳುವ ಪ್ರಕ್ರಿಯೆಯಾಗಿತ್ತು. ಸಂವಿಧಾನಬದ್ಧವಾಗಿ ಎರಡೂ ಭೂಭಾಗಗಳು, ಆಸ್ತಿಪಾಸ್ತಿಗಳ ಸಮೇತ ಹಂಚಿಕೊಂಡಿದ್ದವು. ಈ ಸಮಯದಲ್ಲಿ ಎರಡೂ ಕಡೆಗಳಿಂದ ವ್ಯವಸ್ಥಿತ ಶಕ್ತಿಗಳು ತಮಗೆ ಆಗದಿರುವವರನ್ನು ಶತ್ರುಗಳು ಎಂದು ಬಿಂಬಿಸಿ, ನಿರ್ನಾಮ ಮಾಡುವ ಪ್ರಯತ್ನ ಮಾಡಿದವು.”

  • ಎನ್ಸಿಆರ್ಟಿಇ ಪಠ್ಯಕ್ರಮದಲ್ಲಿ.

ಭಾರತ- ಪಾಕಿಸ್ತಾನ ಯುದ್ಧ (1965):

“ಪಾಕಿಸ್ತಾನ ಸೇನೆ ಭಾರತದ ಅನೇಕ ಭೂ ಭಾಗಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಆಕೆ (she) ಇನ್ನೇನು ಸೋಲು ಅನುಭವಿಸುವ ಹೊತ್ತಿಗೆ ವಿಶ್ವಸಂಸ್ಥೆಗೆ ಕೋರಿಕೆ ಸಲ್ಲಿಸಿ ಸಂಧಾನಕ್ಕೆ ಅಣಿಗೊಳಿಸಲಾಯಿತು.”

  • ಪೇಶಾವರದ ಎನ್ಡಬ್ಲ್ಯೂಎಫ್ಪಿ ಮಂಡಳಿ ಪಠ್ಯಕ್ರಮದಲ್ಲಿ.

“ನಡೆದ ವಿರೋಚಿತ ಯುದ್ಧದಲ್ಲಿ ಭಾರತ ಹೆಚ್ಚುಕಡಿಮೆ ಲಾಹೋರ್ ಅವರೆಗೂ ತನ್ನ ಸೇನೆಯನ್ನು ತೆಗೆದುಕೊಂಡು ಹೋಗಿತ್ತು. ಕೊನೆಗೆ ವಿಶ್ವಸಂಸ್ಥೆಯ ಮಧ್ಯ ಪ್ರವೇಶದಿಂದ ಯುದ್ಧವನ್ನು ನಿಲ್ಲಿಸಲಾಯಿತು. ಇದು ಪಾಕಿಸ್ತಾನದಲ್ಲಿ ಸಾವು ನೋವುಗಳನ್ನು ಸೃಷ್ಟಿಮಾಡಿತ್ತು, ಜತೆಗೆ ಭಾರತ ಆರ್ಥಿಕ ಪರಿಸ್ಥಿತಿಗೆ ಹೊರೆಯಾಗಿತ್ತು.”

  • ಎನ್ಸಿಆರ್ಟಿಇ ಪಠ್ಯಕ್ರಮದಲ್ಲಿ.

ಭಾರತ- ಪಾಕಿಸ್ತಾನ ಯುದ್ಧ (1971):

“1965 ಯುದ್ಧದ ನಂತರ ಪೂರ್ವ ಪಾಕಿಸ್ತಾನದಲ್ಲಿದ್ದ ಹಿಂದೂ ಸಹಾಯದಿಂದ ಭಾರತ ಪಶ್ಚಿಮ ಪಾಕಿಸ್ತಾನದ ವಿರುದ್ಧ ಪಿತೂರಿ ನಡೆಸಿತು. ಕೊನೆಗೆ, 1971ರಲ್ಲಿ ಪಿತೂರಿಯ ಭಾಗವಾಗಿ ನಮ್ಮಿಂದ ಪೂರ್ವ ಪಾಕಿಸ್ತಾನ ಬೇರೆಯಾಯಿತು. ನಾವೆಲ್ಲವೂ ಸೈನ್ಯದ ತರಬೇತಿಯನ್ನು ತೆಗೆದುಕೊಂಡು, ಯುದ್ಧಕ್ಕೆ ಸಿದ್ಧರಾಗಬೇಕು.”

  • ಪೇಶಾವರದ ಎನ್ಡಬ್ಲ್ಯೂಎಫ್ಪಿ ಮಂಡಳಿ ಪಠ್ಯಕ್ರಮದಲ್ಲಿ.

“ಪೂರ್ವ ಪಾಕಿಸ್ತಾನದಲ್ಲಿದ್ದ ಬೆಂಗಾಳಿ ಸಮುದಾಯದವರು ಪೂರ್ವ ಪಾಕಿಸ್ತಾನದ ನಾಯಕರು ತಮ್ಮನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಮತ ಚಲಾಯಿಸಿದ್ದರು. ಆದರೆ, ಪಶ್ಚಿಮ ಪಾಕಿಸ್ತಾನದ ನಾಯಕರು ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ತಯಾರಿರಲಿಲ್ಲ. ಕೊನೆಗೆ, 1971ರಲ್ಲಿ ಶೇಖ್ ಮುಜೀಬ್ ಬಂಧಿಸುವ ಮೂಲಕ ಪೂರ್ವ ಪಾಕಿಸ್ತಾನ ಜನರಲ್ಲಿ ಭಯವನ್ನು ಹುಟ್ಟು ಹಾಕುವ ಪ್ರಯತ್ನ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಜನ ಪಾಕಿಸ್ತಾನದಿಂದ ಬೇರ್ಪಡಲು ಹೋರಾಟವನ್ನು ಶುರುಮಾಡಿದರು.”

  • ಎನ್ಸಿಆರ್ಟಿಇ ಪಠ್ಯಕ್ರಮದಲ್ಲಿ.

 

ಹೀಗೆ, 1947ರ ನಂತರದ ಇತಿಹಾಸವನ್ನು ಎರಡೂ ದೇಶಗಳ ಪಠ್ಯಪುಸ್ತಕಗಳು ಅವರವರ ಮೂಗಿನ ನೇರಕ್ಕೆ ತಮ್ಮ ಮಕ್ಕಳಿಗೆ ಉಣಬಿಡಿಸುತ್ತಿವೆ. ಅದು ಕಾಶ್ಮೀರದಿಂದ ಆರಂಭವಾಗಿ ಕಾರ್ಗಿಲ್ ಯುದ್ಧದವರೆಗೂ, ಉಬಯ ದೇಶಗಳ ಮಕ್ಕಳು ಪ್ರತ್ಯೇಕ ಇತಿಹಾಸವನ್ನು ಓದಿಕೊಂಡು ದೊಡ್ಡವರಾಗುತ್ತಿದ್ದಾರೆ. ಹೀಗಿರುವಾಗ, ಎರಡೂ ದೇಶಗಳ ನಡುವೆ ಶಾಂತಿ ಮತ್ತು ಸಹಬಾಳ್ವೆಯನ್ನು ಆಯಾ ದೇಶದ ಪ್ರಬುದ್ಧ ಪ್ರಜೆಗಳು ಬಯಸಬೇಕು ಎಂದು ನಿರೀಕ್ಷಿಸಲು ಹೇಗೆ ಸಾಧ್ಯ?

ಮಾಹಿತಿ: ಸ್ಕೂಪ್ ವೂಪ್

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top