An unconventional News Portal.

supreme court
  ...

  ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆದಾಯ ಮೂಲ ಬಹಿರಂಗ ಕಡ್ಡಾಯ; ಸುಪ್ರೀಂಕೋರ್ಟ್

  ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಆದಾಯ ಮಾತ್ರವಲ್ಲ, ಅದರ ಮೂಲವನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ. ಅಭ್ಯರ್ಥಿಯ ಪತ್ನಿ ಮತ್ತು ಮಕ್ಕಳ ಆದಾಯ ಮೂಲದ ಮಾಹಿತಿಯನ್ನೂ ನಾಮಪತ್ರದೊಂದಿಗೆ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.  ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಆದಾಯದ ಮಾಹಿತಿ ನೀಡುವುದರ ಜತೆಗೆ ಆದಾಯದ ಮೂಲವನ್ನೂ ಬಹಿರಂಗ ಪಡಿಸಬೇಕೆಂದು ಕೋರಿ ‘ಲೋಕ ಪ್ರಹರಿ’ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರ ನೇತೃತ್ವದ ನ್ಯಾಯಪೀಠ ಈ […]

  February 16, 2018
  ...

  ಕಾವೇರಿ ತೀರ್ಪಿಗೆ ಭಿನ್ನ ಪ್ರತಿಕ್ರಿಯೆಗಳು: ಕರ್ನಾಟಕಕ್ಕೆ ಸಮಾಧಾನ, ತಮಿಳುನಾಡಿನ ಅಸಮಾಧಾನ

  ಕಾವೇರಿ ನೀರು ಹಂಚಿಕೆ ವಿಷಯವಾಗಿ ಸುಪ್ರೀಂಕೋರ್ಟ್‌ನ ತೀರ್ಪು ಶುಕ್ರವಾರ ಹೊರಬಿದ್ದಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದ ಕಾವೇರಿ ನ್ಯಾಯಮಂಡಳಿಯಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿದ್ದಕ್ಕಿಂತ 14.75 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಕ್ಕಂತಾಗಿದೆ. “ಈ ತೀರ್ಪು ಸಮಾಧಾನ ತಂದಿದೆ” ಎಂಬ ಅಭಿಪ್ರಾಯ ಕರ್ನಾಟಕದಲ್ಲಿ ವ್ಯಕ್ತವಾಗಿದ್ದರೆ, “ನಮಗೆ ಅನ್ಯಾಯವಾಗಿದೆ” ಎಂದು ತಮಿಳುನಾಡು ಹೇಳಿದೆ. ಈ ಮೂಲಕ ತಮಿಳುನಾಡು ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದೆ. “ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ 28 ವರ್ಷಗಳ ಕರ್ನಾಟಕದ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಇದೊಂದು ಐತಿಹಾಸಿಕ ತೀರ್ಪು. ಎರಡೂ […]

  February 16, 2018
  ...

  ಕಾವೇರಿ ವಿವಾದ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ಬೆಂಗಳೂರಿಗೆ ನಿಜವಾಗಿಯೂ ವರವೇ ಅಥವಾ ವಿಪತ್ತೇ?

  ಲೇಖನ: ಕೆ.ವಿ. ಧನಂಜಯ್‌, ಸುಪ್ರೀಂ ಕೋರ್ಟ್‌ ವಕೀಲರು ನಾವು ಇಂದಿನ ತೀರ್ಪನ್ನು ಒಟ್ಟಾರೆಯಾಗಿ ಗಮನಿಸಿದಾಗ, ಒಂದು ಕಡೆ ಸಮಾಧಾನಗೊಳ್ಳಬಹುದು. ಇದು ಮೇಲ್ನೋಟದ ಸತ್ಯ ಮಾತ್ರ. ಆದರೆ ಮಾಧ್ಯಮಗಳ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಬೆಂಗಳೂರಿನಂತಹ ಬೃಹತ್ ನಗರಕ್ಕೆ ಇದೊಂದು ಆಪತ್ತು ಎದುರಿಸುವ ಸನ್ನಿವೇಶ ಬಂದೆರಗಿದೆ ಎಂದರೆ ತಪ್ಪಾಗಲಾರದು. ನ್ಯಾಯಾಧೀಕರಣ 2007 ರ ಫೆಬ್ರುವರಿಯಲ್ಲಿ ಒಂದು ಆದೇಶವನ್ನು ಹೊರಡಿಸುತ್ತದೆ. ಅದರ ಪ್ರಕಾರ, ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಎಲ್ಲಾ ನಗರ, ಪಟ್ಟಣ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ರೂಪದಲ್ಲಿ 8.75 […]

  February 16, 2018
  ...

  ಕಾವೇರಿ ನದಿ ನೀರು ಹಂಚಿಕೆ ವಿವಾದ: ಎಲ್ಲರಿಗೂ ಸಮಾಧಾನ ತಂದ ಸುಪ್ರಿಂ ತೀರ್ಪು

  ಕಾವೇರಿ ನದಿ ನೀರಿ ಹಂಚಿಕೆ ಸಂಬಂಧ ಶುಕ್ರವಾರ ಹೊರಬಿದ್ದ ಸುಪ್ರಿಂ ಕೋರ್ಟ್ ತೀರ್ಪು ರಾಜ್ಯಕ್ಕೆ ನ್ಯಾಯ ಒದಗಿಸಿದೆ; ಅದೇ ವೇಳೆ ತಮಿಳನಾಡಿಗೂ ನಿರಾಸೆ ಮೂಡಿಸಿಲ್ಲ. ಸುಪ್ರಿಂ ಕೋರ್ಟ್ ತ್ರಿಸದಸ್ಯ ಪೀಠ ನೀಡಲಿರುವ ತೀರ್ಪು ಕರ್ನಾಟಕಕ್ಕೆ ವ್ಯತಿರಿಕ್ತವಾಗಿರಲಿದೆ ಎಂಬ ಊಹಾಪೋಹಗಳಿಗೂ ಈ ಮೂಲಕ ತೆರೆ ಬಿದ್ದಿದೆ.  ಕಾವೇರಿ ಟ್ರಿಬ್ಯೂನಲ್ ಈ ಹಿಂದೆ ನೀಡಿದ್ದ ಏಕಪಕ್ಷೀಯವಾದ ತೀರ್ಮಾನವನ್ನು ಮಾರ್ಪಡಿಸಿರುವ ಸುಪ್ರಿಂ ಕೋರ್ಟ್, ನದಿ ನೀರನ್ನು ನೆಚ್ಚಿಕೊಂಡ ಮೂರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಸಮಾನ ನ್ಯಾಯ ಒದಗಿಸುವ ಪ್ರಯತ್ನ […]

  February 16, 2018
  ...

  ಕಾವೇರಿ ನದಿ ನೀರು ಹಂಚಿಕೆ ವಿವಾದ: ನೀವು ಓದಲೇಬೇಕಾದ 12 ವರದಿಗಳು…

  ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್‌ನಿಂದ ಅಂತಿಮ ತೀರ್ಪು ಹೊರಬೀಳಲಿದೆ. ಹೀಗಾಗಿ ಕರ್ನಾಟಕ ಪಾಲಿಗೆ ಇಂದು ಐತಿಹಾಸಿಕ ದಿನವಾಗಲಿದೆ. 1890ರಿಂದಲೇ ನಡೆಯುತ್ತಿರುವ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅಧ್ಯಕ್ಷತೆಯ ತ್ರಿಸದಸ್ಯ ಪೀಠ ಅಂತಿಮ ಇಂದು ತೀರ್ಪು ನೀಡಲಿದೆ.  ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ‘ಸಮಾಚಾರ’ ಸಂದರ್ಭಕ್ಕನುಸಾರವಾಗಿ ವಿಸ್ತ್ರತ ವರದಿಗಳನ್ನು ಭಿತ್ತರಿಸುತ್ತಲೇ ಬಂದಿದೆ. ನೀವು […]

  February 16, 2018
  ...

  ‘ಮತ ಹಾಕುವ ಮುನ್ನ…’: ಪಿಐಎಲ್‌ ವಿಷಯ; ಪ್ರಜಾಪ್ರತಿನಿಧಿ ಕಾಯ್ದೆಯ ಪರಿಚಯ

  ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ವ್ಯಕ್ತಿ ರಾಜಕೀಯ ಪಕ್ಷವೊಂದರ ಅಧ್ಯಕ್ಷ ಅಥವಾ ಆ ಪಕ್ಷದ ಪ್ರಮುಖ ಹುದ್ದೆಯಲ್ಲಿದ್ದುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಎಷ್ಟು ಸರಿ? ಎಂಬ ಚರ್ಚೆಯನ್ನು ಸುಪ್ರೀಂಕೋರ್ಟ್‌ನ ಸೋಮವಾರದ ಕಲಾಪ ಮುನ್ನೆಲೆಗೆ ತಂದಿದೆ. “ಅಪರಾಧ ಹಿನ್ನೆಲೆಯ ವ್ಯಕ್ತಿ ರಾಜಕೀಯ ಪಕ್ಷದ ಅಧ್ಯಕ್ಷನಾಗಲು ಹೇಗೆ ಸಾಧ್ಯ?” ಎಂದು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ. ಪ್ರಜಾಪ್ರತಿನಿಧಿ ಕಾಯ್ದೆಯ ನಿಯಮಗಳಡಿ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ವ್ಯಕ್ತಿಗಳು ಪರೋಕ್ಷವಾಗಿ ಚುನಾವಣಾ ವ್ಯವಸ್ಥೆಯಲ್ಲಿ ಭಾಗಿಯಾಗುವ ಹಿಂದಿನ ತರ್ಕ ಎಂಥದ್ದು ಎಂಬ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿದೆ. ಈ ಹಿನ್ನೆಲೆಯಲ್ಲಿ […]

  February 13, 2018
  ...

  ಸುಪ್ರಿಂ ಕೋರ್ಟ್ ಮೌಖಿಕ ಪ್ರಶ್ನೆ: ಅಪರಾಧ ಹಿನ್ನೆಲೆಯ ವ್ಯಕ್ತಿ ರಾಜಕೀಯ ಪಕ್ಷದ ಅಧ್ಯಕ್ಷನಾಗಲು ಹೇಗೆ ಸಾಧ್ಯ?

  “ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾದ ವ್ಯಕ್ತಿ ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಲು ಹೇಗೆ ಸಾಧ್ಯ?” ಎಂದು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಪ್ರಶ್ನಿಸಿದ್ದಾರೆ. ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ, ರಾಜಕೀಯ ಪಕ್ಷಗಳ ಈ ವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗ ಮುಂದಾಗಬೇಕು ಎಂದು ಸೋಮವಾರ ಮೌಖಿಕವಾಗಿ ತಿಳಿಸಿದೆ. “ಅಪರಾಧ ಹಿನ್ನೆಲೆಯ ವ್ಯಕ್ತಿ ರಾಜಕೀಯ ಪಕ್ಷವೊಂದರ ಮುಖ್ಯಸ್ಥನಾಗಿದ್ದುಕೊಂಡು ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಸ್ಪರ್ಧಿಸಬೇಕೆಂಬುದನ್ನು […]

  February 12, 2018
  ...

  ಮತ್ತೆ ಮಹದಾಯಿ: ರಾಜ್ಯ ಬಂದ್‌ಗೆ ಕರೆ; ಮುಂದುವರಿದ ರೈತರ ಮೊರೆ

  ಮಹದಾಯಿ ವಿಷಯಕ್ಕೆ ಸಂಬಂಧಿಸಿ ಗುರುವಾರ ಮತ್ತೆ ಕರ್ನಾಟಕ ಬಂದ್‍ಗೆ ವಾಟಾಳ್ ನಾಗರಾಜ್ ಹಾಗೂ ರೈತ ಸಂಘಟನೆ ಕರೆ ಕೊಟ್ಟಿವೆ. ರಾಜ್ಯ ಬಂದ್ ಹಿನ್ನೆಲೆಯಲ್ಲಿ ಬಹುತೇಕ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ; ಚಿತ್ರರಂಗದವರು ಬೆಂಬಲದ ಬಗ್ಗೆ ಇನ್ನೂ ಹೇಳಿಕೆ ಹೊರಬಿದ್ದಿಲ್ಲ. ಈ ಹಿಂದೆ ಯಡಿಯೂರಪ್ಪನವರು ಗೋವಾ ಸಿಎಂ ಜೊತೆ ಮಾತನಾಡಿ 15 ದಿನಗಳಲ್ಲಿ ಈ ಮಹಾದಾಯಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದರು. ರೈತರ ಮುಂದೆ ನಿಂತು, ಪರ್ರಿಕರ್ ಕೊಟ್ಟ ಸಮಾಧಾನದ ಪತ್ರ ಓದಿ ರೈತರ […]

  January 24, 2018

Top