An unconventional News Portal.

Kerala
    ...

    ಅಟ್ಟಪಾಡಿ ಆದಿವಾಸಿಗಳ ಕಮರಿದ ಬದುಕಿನ ಹಿಂದಿದೆ ಲ್ಯಾಂಡ್ ಮಾಫಿಯಾ ಕೈ

    ಕೇರಳದ ಆದಿವಾಸಿ ಯುವಕ ಮಧು ಸಾವಿನ ಹಿಂದೆಯೇ ಅಟ್ಟಪಾಡಿಯ ಆದಿವಾಸಿಗಳ ಅನೇಕ ಸಮಸ್ಯೆಗಳು ಬೆಳಕಿಗೆ ಬರುತ್ತಿವೆ. ಕೇರಳದ ಆದಿವಾಸಿಗಳ ಬದುಕು ಭಾರತದ ಯಾವುದೇ ಭಾಗದ ಆದಿವಾಸಿಗಳ ಕಾರ್ಪಣ್ಯದ ಬದುಕಿಗಿಂತ ಭಿನ್ನವಾಗಿಯೇನಿಲ್ಲ. ಆದರೆ, ಅಟ್ಟಪಾಡಿ ಭಾಗದ ಆದಿವಾಸಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಭೂಮಿಯ ಹಕ್ಕನ್ನು ಕಳೆದುಕೊಂಡ ಆದಿವಾಸಿಗಳ ಕಮರಿದ ಬದುಕಿನ ಹಿಂದೆ ಲ್ಯಾಂಡ್‌ ಮಾಫಿಯಾ ಕೈವಾಡವಿರುವ ಗಂಭೀರ ಆರೋಪವಿದೆ. ಅರಣ್ಯ ಸಂರಕ್ಷಣೆಯ ಹೆಸರಿನಲ್ಲಿ ಆದಿವಾಸಿಗಳನ್ನು ಕಾಡಿನಿಂದ ಹೊರಹಾಕುವ ಸರಕಾರ ಅವರ ಮುಂದಿನ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ಕಾಡಿನಿಂದ […]

    February 25, 2018
    ...

    ದೇವರ ಸ್ವಂತನಾಡಲ್ಲಿ ಮನುಷ್ಯತ್ವದ ಸಾವು; ವೈರಲ್ ಸುದ್ದಿಯಾಚೆಗಿನ ಸತ್ಯಗಳು

    ದೇವರ ಸ್ವಂತನಾಡು ಕೇರಳದಲ್ಲಿ ನಡೆದ ಆದಿವಾಸಿ ಯುವಕ ಮಧು ಮೇಲಿನ ಅಮಾನವೀಯ ಹಲ್ಲೆ ಪ್ರಕರಣ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಇದರ ಬಗೆಗಿನ, ಸುದ್ದಿಕೇಂದ್ರದಲ್ಲಿರುವ ಮಾಹಿತಿಯನ್ನು ಪಕ್ಕಕ್ಕಿಟ್ಟು ಪ್ರಕರಣದ ಜಾಡು ಹಿಡಿದು ಹೋದರೆ ಅಲ್ಲಿನ ಬುಡಕಟ್ಟು ಜನರ ದಾರುಣ ಬದುಕು ತೆರೆದುಕೊಳ್ಳುತ್ತದೆ. ಪಾಲಕ್ಕಾಡ್‌ ಜಿಲ್ಲೆಯ ಅಟ್ಟಪಾಡಿಯ ಬುಡಕಟ್ಟು ಸಮುದಾಯಗಳು ಹಲವು ವರ್ಷಗಳಿಂದ ಸರಕಾರದ ಸೌಲಭ್ಯಗಳಿಂದ ವಂಚಿತವಾಗಿಯೇ ಬಂದಿವೆ. ಹೆಚ್ಚಾಗಿರುವ ಶಿಶು ಮರಣ, ಅಪೌಷ್ಠಿಕತೆ, ಬಡತನ, ನಿರುದ್ಯೋಗ, ದೈಹಿಕ ಹಾಗೂ ಮಾನಸಿಕ ಅನಾರೋಗ್ಯದಂಥ ಗಂಭೀರ ಸಮಸ್ಯೆಗಳು ಈ ಭಾಗದ ಆದಿವಾಸಿಗಳನ್ನು […]

    February 24, 2018
    ...

    ಒಎನ್‌ಜಿಸಿ ಹಡಗು ಅಂಗಳದಲ್ಲಿ ಬೆತ್ತಲಾಯಿತು ಸರಕಾರಿ ತೈಲ ಸಂಸ್ಥೆಯ ಸ್ಥಿತಿ- ಗತಿ!

    ಒಂದೆಡೆ ಖಾಸಗಿ ತೈಲೋತ್ಪನ್ನ ಸಂಸ್ಥೆಗಳು ಸರಕಾರೀ ಸ್ವಾಮ್ಯದ ತೈಲ ಸಂಸ್ಥೆಗಳನ್ನೂ ಮೀರಿ ಬೆಳೆದು ನಿಂತಿದೆ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಮತ್ತಿತರ ಇಂಧನಗಳ ಬೆಲೆಯನ್ನು ಸರಕಾರದ ಬದಲಾಗಿ ಖಾಸಗಿ ಸಂಸ್ಥೆಗಳೇ ನಿರ್ಧರಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗಲೇ, ಮಂಗಳವಾರ ಮಧ್ಯಾಹ್ನ ಕೇರಳದ ಕೊಚ್ಚಿಯಲ್ಲಿರುವ ‘ತೈಲ ಮತ್ತು ನೈಸರ್ಗಿಕ ಅನಿಲ ನಿಗಮ’ (ಒಎನ್‌ಜಿಸಿ)ಗೆ ಸೇರಿದ ಸರಕಾರಿ ಶಿಪ್‌ ಯಾರ್ಡ್‌ನಲ್ಲಿ ನೀರು ತುಂಬಿದ್ದ ಟ್ಯಾಂಕರ್‌ ಸ್ಫೋಟವಾಗಿದೆ. ದುರ್ಘಟನೆಯಲ್ಲಿ ಐವರು ಅಸುನೀಗಿದ್ದರೆ, 6 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಸರಕಾರಿ ಸ್ವಾಮ್ಯದ ಒಎನ್‌ಜಿಸಿಯಲ್ಲಿ ನಡೆದಿರುವ ಘಟನೆ […]

    February 13, 2018
    ...

    ಫೇಕ್‌ ನ್ಯೂಸ್‌; ಮಾಧ್ಯಮ ಸಂಸ್ಥೆಗಳ ಮಾಲೀಕ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಪ್ರಕರಣ

    ಹಲವು ವರ್ಷಗಳಿಂದ ‘ನೇರ, ದಿಟ್ಟ, ನಿರಂತರ’ ಎಂಬ ಶೀರ್ಷಿಕೆಯಡಿ ಮಾಧ್ಯಮ ಸಂಸ್ಥೆಗಳನ್ನು ನಡೆಸಿಕೊಂಡು ಬಂದಿರುವ ಸಂಸದ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಫೇಕ್‌ ನ್ಯೂಸನ್ನು ಟ್ವೀಟ್‌ ಮಾಡಿದ್ದಕ್ಕೆ ದೂರು ದಾಖಲಾದ ಹಾಸ್ಯಾಸ್ಪದ ಪ್ರಕರಣ ಕೇರಳದಲ್ಲಿ ನಡೆದಿದೆ. ಕೇರಳ ಪೊಲೀಸ್‌ ಮಹಾ ನಿರ್ದೇಶಕ ಲೋಕನಾಥ್‌ ಬೆಹೆರಾ ಆದೇಶದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಕೇರಳ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಈ ಮೂಲಕ ಸಮೂಹ ಸುದ್ದಿ ಸಂಸ್ಥೆಗಳ ಒಡೆಯನೊಬ್ಬನ ಮೇಲೆಯೇ ನಕಲಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತಿದ ಆರೋಪ ಸದ್ದು […]

    January 18, 2018

Top