An unconventional News Portal.

ಹೃದಯಾಘಾತ
  ...
  dharm-sing-final
  ರಾಜ್ಯ

  ಹೈದ್ರಾಬಾದ್ ಕರ್ನಾಟಕದ ‘ಅವಳಿ ಜವಳಿ’ಗಳಲ್ಲಿ ಒಬ್ಬರಾದ ‘ಅಜಾತ ಶತ್ರು ಧರ್ಮಸಿಂಗ್’ ಇನ್ನಿಲ್ಲ

  ‘ಲಾಯಾ ಥಾ ಕ್ಯಾ ಸಿಕಂದರ್; ಕ್ಯಾ ಲೇ ಚಲಾ ಜಹಾ ಸೇ; ಥೇ ದೋನೋ ಹಾತ್ ಖಾಲಿ ಬಾಹರ್‌ ಕಫನ್‌…’  2006ರ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಧರ್ಮ ಸಿಂಗ್ ಅಂದಿನ ತಮ್ಮ ನಿವಾಸ ‘ಅನುಗ್ರಹ’ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಶಾಯರಿಯ ಸಾಲುಗಳಿವು. ‘ಸಿಕಂದರ್ ಎಂಬ ರಾಜ ಬರುವಾಗಲೂ ಏನೂ ತರಲಿಲ್ಲ; ಹೋಗುವಾಗಲೂ ಏನೂ ತೆಗೆದುಕೊಂಡು ಹೋಗಲಿಲ್ಲ. ಆತನ ಕೈ ಖಾಲಿಯಾಗಿತ್ತು ಎಂಬುದನ್ನು ಜನ ನೋಡಲಿ’ ಎಂಬರ್ಥವನ್ನು ಸೂಸುವ ಶಾಯರಿ ಇದು. ಶಾಯರಿಯನ್ನು ಮಾತು ಮಾತಿಗೂ ಎಳೆದು..

  July 27, 2017
  ...
  1mahadev-prasad
  ರಾಜ್ಯ

  ‘ಜುಗಾರಿ ಕ್ರಾಸ್’ನ ಸೋಲಿಲ್ಲದ ಸರದಾರ, ಸಚಿವ ಎಚ್. ಎಸ್. ಮಹದೇವ ಪ್ರಸಾದ್ ಸಾವು

  ರಾಜ್ಯ ಸಕ್ಕರೆ ಮತ್ತು ಸಹಕಾರಿ ಸಚಿವ, ಗುಂಡ್ಲುಪೇಟೆ ಎಂಬ  ‘ಜುಗಾರಿ ಕ್ರಾಸ್’ ಹೋಲುವ ವಿಧಾನಸಭಾ ಕ್ಷೇತ್ರದ ಸೋಲಿಲ್ಲದ ಸರದಾರ, ಹಳೇ ಮೈಸೂರು ಭಾಗದ ಲಿಂಗಾಯತ ರಾಜಕಾರಣಿ, ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿದ್ದ ಎಚ್. ಎಸ್. ಮಹದೇವ ಪ್ರಸಾದ್ ಮಂಗಳವಾರ ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಸಮೀಪ, ಮಾಜಿ ಸಿಎಂ ಎಸ್. ಎಂ. ಕೃಷ್ಣಾ ಅವರ ಅಳಿಯ ಸಿದ್ಧಾರ್ಥ ಅವರಿಗೆ ಸೇರಿದ ಸೆರಾಯ್ ರೆಸಾರ್ಟಿನಲ್ಲಿ ಅವರು ಸರಕಾರಿ ಕಾರ್ಯಕ್ರಮ ನಿಮಿತ್ತ ಸೋಮವಾರ ತಂಗಿದ್ದರು. ರಾತ್ರಿ ಸ್ನೇಹಿತರ ಮನೆಯಲ್ಲಿ ಊಟ..

  January 3, 2017
  ...
  INDIA-VOTE-JAYALALITHAA
  ದೇಶ

  ‘ಜಯಲಲಿತಾ ಹೆಲ್ತ್ ರಿಪೋರ್ಟ್’: ಅಮ್ಮ ಆರೋಗ್ಯ ಗಂಭೀರ; ಸ್ಪಷ್ಟತೆ ಇನ್ನೂ ದೂರ

  ತಮಿಳುನಾಡಿನ ಮುಖ್ಯಮಂತ್ರಿ, ಎಐಎಡಿಎಂ ಪಕ್ಷದ ಕಾರ್ಯಕರ್ತರ ಪಾಲಿನ ಆರಾಧ್ಯ ದೈವ ಜೆ. ಜಯಲಲಿತಾ ಆರೋಗ್ಯದ ಗಂಭೀರತೆ ಮುಂದುವರಿದೆ. ಸೋಮವಾರ ಮಧ್ಯಾಹ್ನ ತಾನೆ ಚೆನ್ನೈ ಅಪೊಲೋ ಆಸ್ಪತ್ರೆ ಬಿಡುಗಡೆ ಮಾಡಿರುವ ‘ಪ್ರಕಟಣೆ’ಯಲ್ಲಿ, ‘ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ನಿನ್ನೆ (ಭಾನುವಾರ) ಸಂಜೆ ಹೃದಯಾಘಾತಕ್ಕೆ ಒಳಗಾಗಿದ್ದರು. ಇವತ್ತೂ ಆರೋಗ್ಯ ಸ್ಥಿತಿಯಲ್ಲಿ ಗಂಭೀರತೆ ಮುಂದುವರಿದೆ. ಪರಿಣಿತ ತಜ್ಞ ವೈದ್ಯರು ನಿಗಾವಹಿಸಿದ್ದು, ಇಸಿಎಂಓ ಸೇರಿದಂತೆ ತೀವ್ರ ನಿಗಾ ಕ್ರಮಕ್ಕೆ ಒಳಗಾಗಿದ್ದಾರೆ’ ಎಂದು ತಿಳಿಸಿದೆ. ಜಯಲಲಿತಾ 74 ದಿನಗಳ ಹಿಂದೆ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಅಪೊಲೋ ಆಸ್ಪತ್ರೆಗೆ ಅನಾರೋಗ್ಯದ..

  December 5, 2016
  ...
  jayalalitha-tn-2
  ಸುದ್ದಿ ಸಾರ

  ಅಪೊಲೋದಲ್ಲಿ 74ನೇ ದಿನ: ಎಐಎಡಿಎಂಕೆ ನಾಯಕಿ ಜಯಲಲಿತಾಗೆ ಹೃದಯಾಘಾತ

  ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಭಾನುವಾರ ಸಂಜೆ ವೇಳೆಗೆ ಹೃದಯಾಘಾತವಾಗಿದೆ ಎಂದು ಚೆನ್ನೈ ಅಪೊಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಕಳೆದ 73 ದಿನಗಳಿಂದ ಅನಾರೋಗ್ಯದ ಕಾರಣಕ್ಕೆ ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ‘ಅಮ್ಮ’ಗೆ ಇದು ಮೂರನೇ ಬಾರಿಗೆ ಆಗುತ್ತಿರುವ ಹೃದಯಾಘಾತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಎಐಎಡಿಎಂಕೆ ಕಾರ್ಯಕರ್ತರು, ಅಮ್ಮ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಆರ್ಪಿಎಫ್ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಭಾನುವಾರ ಬೆಳಗ್ಗೆಯಷ್ಟೆ ಜಯಲಲಿತಾ ಆರೋಗ್ಯ ಸ್ಥಿತಿ ಸುಧಾರಿಸಿದೆ…

  December 5, 2016

Top