An unconventional News Portal.

ಹಲ್ಲೆ

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ

    ...
    ದೇಶ

    ಚರ್ಚೆಯ 7ನೇ ನಿಮಿಷಕ್ಕೆ ವಿವಾದಾತ್ಮಕ ಹೇಳಿಕೆ: ಆರ್‌ಎಸ್‌ಎಸ್‌ ‘ಥಿಂಕ್ ಟ್ಯಾಂಕ್’ ಹೇಳಿದ್ದೇನು?

    ಭಾರತೀಯರು ಜನಾಂಗೀಯ ದ್ವೇಷಿಗಳಲ್ಲ. ಒಂದು ವೇಳೆ ಆಗಿದ್ದರೆ, ದಕ್ಷಿಣ ಭಾರತದ ಕಪ್ಪು ಜನರ ಜತೆ ಅವರೇಕೆ ಬದುಕುತ್ತಿದ್ದರು? ಹೀಗಂತ ಪ್ರಶ್ನಿಸುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ಥಿಂಕ್ ಟ್ಯಾಂಕ್’ ತರುಣ್ ವಿಜಯ್. ಆರ್‌ಎಸ್‌ಎಸ್‌ನ ಮುಖವಾಣಿ ‘ಪಾಂಚಜನ್ಯ’ದ ಸಂಪಾದಕರಾಗಿದ್ದ ತರುಣ್, ಬಿಜೆಪಿಯಿಂದ ರಾಜ್ಯಸಭೆಯ ಸದಸ್ಯರೂ ಆಗಿದ್ದರು. ಸದ್ಯ ಅವರು ‘ಇಂಡಿಯಾ ಆಫ್ರಿಕಾ ಪಾರ್ಲಿಮೆಂಟರಿ ಫ್ರೆಂಡ್‌ಶಿಪ್ ಗ್ರೂಪ್‌’ನ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆಯಲ್ಲಿ  ಕತಾರ್ ಮೂಲದ ‘ಆಲ್‌ ಜಝೀರಾ’ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಅಹ್ವಾನಿಸಲಾಗಿತ್ತು…

    April 7, 2017
    ...
    ವಿಚಾರ

    ‘ಜನಾರೋಗ್ಯದ ಬಿಕ್ಕಟ್ಟು’: ವೈದ್ಯರು ಮತ್ತು ರೋಗಿಗಳ ಸಂಬಂಧ ಯಾಕೆ ರಕ್ತಸಿಕ್ತವಾಗುತ್ತಿದೆ?

      ಕಳಪೆಯಾದ ಸಾರ್ವಜನಿಕ ಆರೋಗ್ಯ ಸೇವಾ ಸೌಲಭ್ಯಗಳು ವೈದ್ಯರು ಮತ್ತು ರೋಗಿಗಳನ್ನು ಪರಸ್ಪರ ಹೊಡೆದಾಟಕ್ಕೆ ಹಚ್ಚುತ್ತಿವೆ.   ವೈದ್ಯರು ಆತಂಕದಲ್ಲಿದ್ದಾರೆ; ರೋಗಿಗಳು ದುಃಖದಲ್ಲಿದ್ದಾರೆ. ಇದೀಗ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚೂ ಕಡಿಮೆ ಇದೇ ವಾತಾವರಣವೇ ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಂತೂ ಇತ್ತಿಚೆಗೆ ಐದು ಪ್ರತ್ಯೇಕ ಪ್ರಕರಣಗಳಲ್ಲಿ ರೋಗಿಯ  ಬಗ್ಗೆ ನಿರ್ಲಕ್ಶ್ಯ ತೋರಿದರೆಂದು ಆರೋಪಿಸಿ ಸಂಬಂಧಿಕರು ಸಾರ್ವಜನಿಕ ಆಸ್ಪತ್ರೆಗಳ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇದೇ ರೀತಿಯ ಪ್ರಕರಣಗಳು ದೆಹಲಿ, ಸೂರತ್, ಅಹಮದಾಬಾದ್, ಬುಲಂದ್‌ಶಹರ್ ಮತ್ತು ಚೆನ್ನೈಗಳಿಂದಲೂ ವರದಿಯಾಗಿದೆ. ಹಾಗೆ..

    April 4, 2017
    ...
    ರಾಜ್ಯ

    ‘ಹೋರಾಟಕ್ಕೆ ನಾಂದಿ’: ಹಲ್ಲೆಗೊಳಗಾದ ತುಮಕೂರು ದಲಿತ ಯುವಕನ ಮೇಲೆ ಪೋಕ್ಸೊ ಕಾಯ್ದೆ

      ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯನ್ನು ‘ಪ್ರೀತಿಸುವಂತೆ ಒತ್ತಾಯಿಸಿದ ಆರೋಪ’ದ ಮೇಲೆ ಅಮಾನವೀಯವಾಗಿ ಹಲ್ಲೆಗೆ ಒಳಗಾದ ತುಮಕೂರಿನ ಗುಬ್ಬಿಯ ದಲಿತ ಯುವಕನ ಮೇಲೆಯೇ ಪೋಸ್ಕೋ ಕಾಯ್ದೆ ಅಡಿಯಲ್ಲಿ ದೂರು ದಾಖಲಿಕೊಳ್ಳಲಾಗಿದೆ. ಸೋಮವಾರ ‘ಸಮಾಚಾರ’ಕ್ಕೆ ಮಾಹಿತಿ ನೀಡಿರುವ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, “ಯುವತಿಯ ತಾಯಿ ಕಡೆಯಿಂದ ದೂರು ಬಂದಿತ್ತು. ಹಲ್ಲೆಗೊಳಗಾಗುವ ಮುನ್ನ ಯುವತಿಯನ್ನು ಕೈ ಹಿಡಿದು ಅಭಿಷೇಕ್ ಅಸಭ್ಯವಾಗಿ ವರ್ತಿಸಿದ್ದ ಎಂದು ದೂರಿದ್ದರು. ಈ ಕುರಿತು ತನಿಖೆ ನಡೆಸಿದ ನಂತರ ಐಪಿಸಿ 165 ಅಡಿಯಲ್ಲಿ..

    January 23, 2017
    ...
    ದೇಶ

    ‘ಕ್ರೀಡಾ ರಾಜಕೀಯ’: ಕರ್ನಾಟಕದ ಮಹಿಳಾ ಕ್ರೀಡಾಪಟುಗಳ ಮೇಲೆ ದಿಲ್ಲಿಯಲ್ಲಿ ಹಲ್ಲೆ

    ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಚಾರದಲ್ಲಿ ದಿಲ್ಲಿ ಕೇಂದ್ರಿತ ರಾಷ್ಟ್ರೀಯ ಮಾಧ್ಯಮಗಳು ‘ಸುದ್ದಿ ಗದ್ದಲ’ವನ್ನು ಎಬ್ಬಿಸಿವೆ. ಅದೇ ವೇಳೆ, ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಕರ್ನಾಟಕದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆದಿದೆ. ಘಟನೆ ನಡೆದು 24 ಗಂಟೆಗಳು ಕಳೆದಿದ್ದರೂ, ಈವರೆಗೆ ತಮಿಳುನಾಡಿನ ವಾಹಿನಿಗಳನ್ನು ಹೊರತು ಪಡಿಸಿ, ರಾಷ್ಟ್ರೀಯ ಮಾಧ್ಯಮಗಳಾಗಲೀ, ಕರ್ನಾಟಕದ ಮಾಧ್ಯಮಗಳಲ್ಲಿ ‘ಗದ್ದಲ’ ಹಾಳಾಗಿ ಹೋಗಲೀ, ಸುದ್ದಿಯೂ ಪ್ರಸಾರವಾಗಿಲ್ಲ. ಈ ಸಮಯದಲ್ಲಿ ದಿಲ್ಲಿಯಲ್ಲಿ ನಡೆದ ಘಟನೆಯ ಕುರಿತು ‘ಸಮಾಚಾರ’ಕ್ಕೆ ಸಿಕ್ಕಿರುವ ಚಿತ್ರಗಳು, ವಿಡಿಯೋಗಳನ್ನು..

    January 6, 2017

FOOT PRINT

Top