An unconventional News Portal.

ಸ್ವತಂತ್ರ ಮಾಧ್ಯಮ
  ...

  ‘ದಿ ಸ್ಟೋರಿ ಆಫ್ ಸಮಾಚಾರ’: ಸ್ವತಂತ್ರ ಮಾಧ್ಯಮ ಕಟ್ಟುವ ನಿಟ್ಟಿನಲ್ಲಿ ಮೊದಲ ಯಶಸ್ವಿ ಹೆಜ್ಜೆ; ಧನ್ಯವಾದಗಳು!

  ಅದು 2016ರ ಜನವರಿ ತಿಂಗಳು. ಅಷ್ಟೊತ್ತಿಗಾಗಲೇ ಕರ್ನಾಟಕದ ಸಾಕಷ್ಟು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಮಿಂದೆದ್ದ ಒಂದು ಚಿಕ್ಕ ಪತ್ರಕರ್ತರ ತಂಡಕ್ಕೆ ‘ಸ್ವಾತಂತ್ರ್ಯ’ದ ಮಹತ್ವ ಅರಿವಿಗೆ ಬಂದಿತ್ತು. ಮಾಧ್ಯಮಗಳು ರಾಜಕೀಯ ವ್ಯಕ್ತಿಗಳಿಂದ, ಪಕ್ಷಗಳಿಂದ, ಕಾರ್ಪೊರೇಟ್ ರಂಗದಿಂದ, ಉದ್ಯಮಿಗಳಿಂದ ಹೀಗೆ ನಾನಾ ಬಂಡವಾಳದ ಮೂಲಗಳಿಂದ ಮುಕ್ತವಾಗಿರಬೇಕು ಎಂದು ಅನ್ನಿಸಿತ್ತು. ಆದರೆ ಅದು ಆಶಯ ಮಾತ್ರ. ವಾಸ್ತವದಲ್ಲಿ ಹಣವಿಲ್ಲದೆ, ಬಂಡವಾಳ ಹೂಡುವವರು ಇಲ್ಲದೆ ಮಾಧ್ಯಮ ನಡೆಸುವುದು ಸಾಧ್ಯವಾ? ಸಾಧ್ಯವಿದೆ ಎಂಬುದು ನಮ್ಮ ಬಲವಾದ ನಂಬಿಕೆಯಾಗಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ಇಳಿಸದೆ ಜನರನ್ನು ನಂಬಿಸುವುದು […]

  December 22, 2017
  ...

  ಉದ್ಯಮಿಯ ‘ಘನತೆಗೆ ಧಕ್ಕೆ’: ‘ದಿ ವೈರ್’ ವರದಿಗಳಿಗೆ ನ್ಯಾಯಾಲಯದ ತಡೆಯಾಜ್ಞೆ

  ದೇಶದ ಟಿಜಿಟಲ್ ಪತ್ರಿಕೋದ್ಯಮದಲ್ಲಿ ‘ಸ್ವತಂತ್ರ’ ಮಾಧ್ಯಮವಾಗಿ ದಾಪುಗಾಲಿಡುತ್ತಿರುವ ‘ದಿ ವೈರ್ ಡಾಟ್ ಇನ್‌’ ಪ್ರಕಟಿಸಿದ ಎರಡು ವರದಿಗಳಿಗೆ ಬೆಂಗಳೂರಿನ ನ್ಯಾಯಾಲಯವೊಂದು ಅನೀಕ್ಷಿತ ನಡೆಯಲ್ಲಿ ತಡೆಯಾಜ್ಷೆ ನೀಡಿದೆ. ಇದೇ ತಿಂಗಳ ಕೊನೆಯಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ಸಂಸದ, ಉದ್ಯಮಿ ರಾಜೀವ್‌ ಚಂದ್ರಶೇಖರ್ ಬೆಂಗಳೂರಿನ 40ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಾ. 2 ರಂದು ‘ಘನತೆಗೆ ಧಕ್ಕೆ ಮಾಡುವ’ ವರದಿಗಳ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿನರಲ್ಕರ್ ಭೀಮರಾವ್ ಲಗಮಪ್ಪ […]

  March 13, 2017
  ...

  ‘ಓದುಗರಿಗೊಂದು ಮೊದಲ ಪತ್ರ’: ಅಂದಹಾಗೆ, ಯಾರದ್ದು ಈ ‘ಸಮಾಚಾರ’?

  ಆತ್ಮೀಯ ಓದುಗರೇ,  ನಾವು ನಿಮಗಾಗಿ ಈ ಪತ್ರವನ್ನು ಬರೆಯುತ್ತಿರುವ ಹೊತ್ತಿಗೆ ‘ಸಮಾಚಾರ’ 9 ತಿಂಗಳು ತುಂಬಿ ಹತ್ತನೇ ತಿಂಗಳಿಗೆ ಕಾಲಿಟ್ಟಿದೆ. ಮಗುವೊಂದು ತಾಯಿಯ ಮಡಿಲಿನಿಂದ ಹೊರಜಗತ್ತಿಗೆ ಕಾಲಿಡಲು ತೆಗೆದುಕೊಳ್ಳುವ ಸಮುಯ ಇದು. ಈವರೆಗೂ ‘ಸಮಾಚಾರ’ವನ್ನು ನಾವೇ ನಮ್ಮ ಗರ್ಭದಲ್ಲಿ ಇಟ್ಟು ಪೋಷಿಸಿ ಬೆಳೆಸಿದ್ದೀವಿ. ಇದೀಗ ಅದು ಹೊರ ಜಗತ್ತಿಗೆ ಕಾಲಿಡುವ ಸಮಯ. ಅಂದರೆ, ನಮ್ಮ ಪರಿಧಿಯನ್ನು ದಾಟಿ ಇನ್ನಷ್ಟು ಪಾರದರ್ಶಕವಾಗುವ ಕಾಲ ಇದು. ಈ ವರ್ಷದ ಆರಂಭದಲ್ಲಿ ಕರ್ನಾಟಕದ ನಾನಾ ಸುದ್ದಿಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕದೊಂದು ಪತ್ರಕರ್ತರ ತಂಡ, […]

  January 7, 2017

Top