An unconventional News Portal.

ಸೈನಿಕರು
    ...
    online-click-1
    ದೇಶ

    ‘ONLINE ವಂಚನೆ’: 3600 ಕೋಟಿ ದೋಚಿದ ‘ದೇಶ ಪ್ರೇಮಿ’ ಗುಜರಾತಿ ಉದ್ಯಮಿ ಬಂಧನ

    ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆದ ಅತ್ಯಂತ ದೊಡ್ಡ ಆನ್’ಲೈನ್ ವಂಚನೆ ಎಂದು ಹೇಳಲಾಗುತ್ತಿರುವ ಪ್ರಕರಣವೊಂದನ್ನು ಉತ್ತರ ಪ್ರದೇಶದ ವಿಶೇಷ ತನಿಖಾ ದಳ ಪತ್ತೆ ಹಚ್ಚಿದೆ. ಪ್ರತಿ ‘ಕ್ಲಿಕ್’ಗೆ 5 ರೂಪಾಯಿ ನೀಡಲಾಗುವುದು ಎಂದು ಜನರಿಗೆ ಆಮಿಷವೊಡ್ಡುವ ಜಾಲವೊಂದು ಸುಮಾರು 3, 700 ಕೋಟಿ ರೂಪಾಯಿ ವಂಚನೆ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ‘ಆನ್’ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಕಂಪನಿಯೊಂದನ್ನು ತೆರೆದ ಆರೋಪಿ ವಂಚಕರು ಈವರೆಗೆ ಸುಮಾರು 7 ಲಕ್ಷ ಜನರಿಗೆ ವಂಚಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಉತ್ತರ ಪ್ರದೇಶದ ನೋಯ್ಡಾ..

    February 3, 2017
    ...
    snow-AVALANCHE-1
    ಸುದ್ದಿ ಸಾರ

    ದೇಶದೆಲ್ಲೆಡೆ ಸಂಭ್ರಮದ ಗಣರಾಜ್ಯೋತ್ಸವ: ಕಾಶ್ಮೀರದಲ್ಲಿ ಹಿಮಪಾತಕ್ಕೆ 10 ಸೈನಿಕರ ಸಾವು

    ಇಡೀ ದೇಶ ಇತ್ತ ಗಣರಾಜ್ಯೋತ್ಸವದ ಸಂಭ್ರದಲ್ಲಿರುವಾಗಲೇ, ಅತ್ತ ಶ್ರೀನಗರದಿಂದ 200 ಕಿ. ಮೀ ದೂರದ ಬಂಡಿಪೋರ ಗುರೆಝ್ ಕಣಿವೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಸಾವನ್ನಪ್ಪಿದ ಮತ್ತಿಬ್ಬರು ಸೈನಿಕರ ದೇಹಗಳನ್ನು ಹೊರತೆಗೆಯಲಾಗಿದೆ. ಬುಧವಾರ ಮತ್ತು ಗುರುವಾರದಂದು ಎರಡು ಪ್ರತ್ಯೇಕ ಹಿಮಪಾತ ಪ್ರಕರಣಗಳಿಗೆ ಕಾಶ್ಮೀರ ಸಾಕ್ಷಿಯಾಗಿದ್ದು, ಈವರೆಗೆ 10 ಸೈನಿಕರು ಸಾವನ್ನಿಪ್ಪಿದ್ದರೆ, ಹಲವರು ನಾಪತ್ತೆಯಾಗಿದ್ದಾರೆ. ಈವರೆಗೆ ರಕ್ಷಿಸಿದ ಸೈನಿಕರ ಸಂಖ್ಯೆ 7ಕ್ಕೇರಿದೆ. ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. “ಸೇನಾ ನೆಲೆ ಮತ್ತು ಪ್ಯಾಟ್ರೋಲ್ ನಡೆಸುತ್ತಿದ್ದ ತುಕಡಿ ಪ್ರತ್ಯೇಕ ಸ್ಥಳಗಳಲ್ಲಿ ಹಿಮಪಾತಕ್ಕೆ ಸಿಲುಕಿದೆ. ಸದ್ಯ ವಾತಾವರಣ..

    January 26, 2017
    ...
    general-rawath-1
    ಸುದ್ದಿ ಸಾರ

    ‘ಸೇನಾಂತರಂಗ’: ಎಚ್ಚರಿಕೆಗಳ ಆಚೆಗೂ ಸಮಸ್ಯೆಗಳನ್ನು ಮುಂದಿಡುತ್ತಿರುವ ಸೈನಿಕರು

    ಯೋಧಾರಾಧನೆಯ ರಾಜಕೀಯ ನಡೆಯುತ್ತಿರುವ ದೇಶದಲ್ಲಿ ಸೈನಿಕರ ಸ್ಥಿತಿಗತಿಗಳು ಹೇಗಿದ್ದಿರಬಹುದು ಎಂಬುದಕ್ಕೆ ಪ್ರತಿ ದಿನವೂ ಹೊಸ ಸಾಕ್ಷಿಗಳು ಲಭ್ಯವಾಗುತ್ತಿವೆ. ಭಾನುವಾರವಷ್ಟೆ ಸೈನಿಕರಿಗೆ ತಮ್ಮ ಸಂಕಷ್ಟಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಂತೆ ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಿಗೇ ಸೋಮವಾರ, ಸೈನಿಕನೊಬ್ಬ ತನ್ನ ಸಂಕಷ್ಟಗಳನ್ನು ಹಾಡಿನ ಮೂಲಕ ವಿವರಿಸುತ್ತಿದ್ದ ವಿಡಿಯೋ ಒಂದು ಬಹಿರಂಗಗೊಂಡಿದೆ. ‘ಸೈನಿಕರು ಉಪ್ಪಿನಕಾಯಿ ಮತ್ತು ರೊಟ್ಟಿಯನ್ನು ತಿನ್ನಬೇಕು. ಅದೇ ನಗರದಲ್ಲಿರುವವರು ಪಂಚತಾರ ಹೋಟೆಲ್ಗಳಿಗೆ ಹೋಗುತ್ತಾರೆ’ ಎಂಬರ್ಥದ ಹಾಡನ್ನು ರಾಗವಾಗಿ ಸೈನಿಕ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ…

    January 16, 2017
    ...
    bsf-1
    ದೇಶ

    ‘ದೇಶಪ್ರೇಮಿಗಳ ಗಮನಕ್ಕೆ’: ಯೋಧನೊಬ್ಬನ ಗಂಭೀರ ಆರೋಪ ಮತ್ತು ಬಿಎಸ್ಎಫ್ ಅಂತರಂಗ

    ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಅಥವಾ ಗಡಿ ರಕ್ಷಣಾ ಪಡೆ… ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ಚಕಮಕಿಯಾದಾಗ, ಬಾಂಗ್ಲದೇಶದ ಗಡಿಯಲ್ಲಿ ಅಕ್ರಮ ವಲಸೆಗಳು ನಡೆದಾಗ, ಅರಬ್ಬೀ ಸಮುದ್ರದಲ್ಲಿ ಒಳನುಸುಳುವಿಕೆಯ ಸಂಗತಿ ಬಹಿರಂಗವಾದಾಗ, ಆಂಧ್ರ- ಒರಿಸ್ಸಾ- ಬಿಹಾರ ಗಡಿಯಲ್ಲಿ ನಕ್ಸಲ್ ಕಾರ್ಯಾಚರಣೆಗಳು ನಡೆದಾಗ ಸುದ್ದಿಕೇಂದ್ರದಕ್ಕೆ ಬರುವ ಪದವಿದು. ಆದರೆ ಈ ಬಾರಿ, ಗಡಿ ನಿಯಂತ್ರಣ ಪಡೆಯ ಸೈನಿಕನೊಬ್ಬ ಜಮ್ಮ ಮತ್ತು ಕಾಶ್ಮೀರದ ಹಿಮಚ್ಛಾದಿತ ಪ್ರದೇಶದಿಂದ ‘ಸರಿಯಾಗಿ ಊಟ ಸಿಗುತ್ತಿಲ್ಲ’ ಎಂಬ ಆರೋಪ ಮಾಡಿರುವ ವಿಡಿಯೋ ಕಾರಣಕ್ಕೆ ಬಿಎಸ್ಎಫ್ ಸುದ್ದಿಯಲ್ಲಿದೆ. ತೇಜ್ ಬಹುದ್ದೂರ್ ಯಾದವ್ ಎಂಬ..

    January 10, 2017

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top