An unconventional News Portal.

ಸುದ್ದಿ ವಾಹಿನಿ
    ...
    rajiv-ravi-hegde-final
    ಪತ್ರಿಕೆ

    ‘ಥ್ಯಾಂಕ್ಸ್ ಟು ರಾಜೀವ್ ಚಂದ್ರಶೇಖರ್’: ಕನ್ನಡ ಪ್ರಭ, ಸುವರ್ಣಗಳಲ್ಲಿ ಬದಲಾವಣೆ ಮಾತ್ರವೇ ಶಾಶ್ವತ!

    “ಸ೦ಪಾದಕರನ್ನು ಅತ್ಯ೦ತ ನಿದ೯ಯವಾಗಿ, ಹೇಯವಾಗಿ ಹೇಗೆ ಕೆಲಸದಿ೦ದ ತೆಗೆದುಹಾಕಬಹುದು ಎ೦ಬುದನ್ನು ಒ೦ದು ಕಲೆಯಾಗಿ ಕರಗತ ಮಾಡಿಕೊ೦ಡ ಶ್ರೇಯಸ್ಸು ರಾಜೀವ ಚ೦ದ್ರಶೇಖರ್ ಅವರದ್ದು…” ಹೀಗಂತ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ‘ಸುವರ್ಣ ನ್ಯೂಸ್’ ಮತ್ತು ಕನ್ನಡ ಪ್ರಭ ಪತ್ರಿಕೆಗಳಿಗೆ ಪ್ರಧಾನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ನಂತರದ ದಿನಗಳಲ್ಲಿ ತಮ್ಮ ಅಂಕಣವೊಂದರಲ್ಲಿ ಪ್ರಸ್ತಾಪಿಸಿದ್ದರು. ಇವರ ಮಾತುಗಳಿಗೆ ಪೂರಕವಾಗಿ ಉದ್ಯಮಿ, ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ಸಂಸದ ರಾಜೀವ್ ಚಂದ್ರಶೇಖರ್ ತಮ್ಮ ಮಾಲೀಕತ್ವದ ಕನ್ನಡದ ಮಾಧ್ಯಮ ಸಂಸ್ಥೆಗಳಿಗೆ ಹೊಸ ಸಂಪಾದಕರನ್ನು ಕರೆತರಲು ಹೊರಟಿದ್ದಾರೆ. ಹೊಸ ವರ್ಷ2017ಕ್ಕೆ ‘ಸುವರ್ಣ ನ್ಯೂಸ್’..

    December 30, 2016
    ...
    h-d-kumaraswamy-with-anitha
    ಟಿವಿ

    ಕುಮಾರಣ್ಣ, ಕಸ್ತೂರಿ ಸುದ್ದಿ ವಾಹಿನಿಯ ಸಿಬ್ಬಂದಿಗಳಿಗೇಕೆ ಸಂಬಳ ನೀಡುತ್ತಿಲ್ಲ?

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಡೆತನದ ಸುದ್ದಿ ವಾಹಿನಿ ‘ಕಸ್ತೂರಿ ನ್ಯೂಸ್- 24’ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯಾ? ವಾಹಿನಿಯೊಳಗೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಹೀಗೊಂದು ಅನುಮಾನವನ್ನು ಹುಟ್ಟುಹಾಕಿವೆ. ಕಳೆದ 2 ತಿಂಗಳಿನಿಂದ ಇಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಸಂಬಳವನ್ನು ಆಡಳಿತ ಮಂಡಳಿ ನೀಡಿಲ್ಲ. ಜತೆಗೆ, ವಾಹಿನಿಯಿಂದ ಒಂದಷ್ಟು ಜನ ಪತ್ರಕರ್ತರನ್ನು ಹೊರಗೆ ಹಾಕುವ ಪ್ರಕ್ರಿಯೆಗಳು ತೆರೆಮರೆಯಲ್ಲಿ ಆರಂಭವಾಗಿವೆ ಎಂದು ಮೂಲಗಳು ತಿಳಿಸಿವೆ. ಒಂದು ಕಾಲದಲ್ಲಿ ಅಚ್ಚ ಕನ್ನಡದ ವಾಹಿನಿ ಎಂದು ತೆರೆಗೆ ಬಂದಿದ್ದ ಕಸ್ತೂರಿ ಟಿವಿ ಇತ್ತೀಚಿಗೆ ಆರಕ್ಕೂ..

    November 29, 2016
    ...
    vishweshwara-bhat-twitter-grab
    ಸುದ್ದಿ ಸಾರ

    ‘ಆದಾಯ ತೆರಿಗೆ ದಾಳಿ ಗಾಳಿ ಸುದ್ದಿ’: ವಿಶ್ವೇಶ್ವರ ಭಟ್

    ಬೆಂಗಳೂರು ಮೂಲದ ಪತ್ರಕರ್ತರೊಬ್ಬರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಸುದ್ದಿಗೆ ಶನಿವಾರ ಮಧ್ಯಾಹ್ನ ಆಹಾರವಾಯಿತು. ‘ವಿಶ್ವವಾಣಿ ಸಂಪಾದಕ ವಿಶ್ವೇಶ್ವರ್ ಭಟ್ ಮನೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 19 ಕೋಟಿ ನಗದು ಮತ್ತು 119 ಕೋಟಿ ಮೌಲ್ಯದ ಆಸ್ತಿಪಾಸ್ತಿಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ’ ಎಂದು ವಾಟ್ಸಾಪ್ ಗ್ರೂಪುಗಳಲ್ಲಿ ಹರಿದಾಡಿತು. ಇದೇ ಸಮಯದಲ್ಲಿ ಕನ್ನಡದ ಕೆಲವು ಸುದ್ದಿ ವಾಹಿನಿಗಳು ‘ರಾಜರಾಜೇಶ್ವರಿನಗರದ ಪತ್ರಕರ್ತರ ಮನೆ ಮೇಲೆ ದಾಳಿ’ ಎಂದು ಸ್ಕ್ರೋಲಿಂಗ್ ಭಿತ್ತರಿಸಿದವು. ಜತೆಗೆ ಅಪಾರ..

    November 19, 2016
    ...
    Arnab_G
    ಟಿವಿ

    Update: ಜೈನ್ ಮಾಲೀಕರ ‘ಚಿನ್ನದ ಮೊಟ್ಟೆ ಕೋಳಿ’; ಅರ್ನಾಬ್ ‘IS BACK’!

    ಭಾರತದ ವಿದ್ಯುನ್ಮಾನ ಮಾಧ್ಯಮದ ಚಹರೆಯನ್ನು ಕಳೆದ ಒಂದು ದಶಕಗಳ ಕಾಲ ತನಗೆ ಬೇಕಾದಂತೆ ಬದಲಿಸಿಕೊಂಡಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿ ‘ನ್ಯೂಸ್ ಅವರ್’ ಸ್ಟುಡಿಯೋದಿಂದ ಹೊರ ಬಂದಿದ್ದಾರೆ. ಕ್ಷಮಿಸಿ, ‘ಟೈಮ್ಸ್ ನೌ’ ವಾಹಿನಿಯ ಸಂಪಾದಕ ಸ್ಥಾನದಿಂದ ಮಾತ್ರ. ಬದಲಿಗೆ ಅವರು ‘ನ್ಯೂಸ್ ಅವರ್’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಅರ್ನಾಬ್ ಮತ್ತೆ ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಂದರ್ಶನದ ಮೊದಲ ಅತಿಥಿ ಮರಳಿ ಸ್ವಾಗತ ಕೋರಿಯೇ ಮಾತನ್ನು ಶುರು ಮಾಡಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ‘ಜೈಲ್..

    November 1, 2016
    ...
    zee-tv9
    ಟಿವಿ

    ‘ಟಿವಿ 9 ಫಾರ್ ಸೇಲ್’: ಆಂಧ್ರ ಮೂಲದ ಸುದ್ದಿವಾಹಿನಿಗಳ ಗುಚ್ಛ ಝೀ ತೆಕ್ಕೆಗೆ?

    13 ವರ್ಷಗಳನ್ನು ಕಳೆದ ಕಂಪನಿ, ಪ್ರಾದೇಶಿಕ ಭಾಷಾ ಟಿವಿ ಮಾಧ್ಯಮದಲ್ಲಿ ಹೆಸರುವಾಸಿಯಾಗಿರುವ ಟಿವಿ 9 ಸಮೂಹ ‘ಝೀ ಗ್ರೂಪ್’ ಪಾಲಾಗಲಿದೆ. ಹೈದರಾಬಾದ್ ಮೂಲದ ಮಾಧ್ಯಮ ಸಂಸ್ಥೆ ‘ಅಸೋಸಿಯೇಟೆಡ್ ಬ್ರಾಡ್ಕಾಸ್ಟಿಂಗ್ ಕಂಪೆನಿ ಪ್ರೈವೇಟ್ ಲಿಮಿಟೆಡ್’ (ಎಬಿಸಿಎಲ್)ನಲ್ಲಿ ದೊಡ್ಡ ಪ್ರಮಾಣದ ಶೇರು ಖರೀದಿಗೆ ‘ಝೀ ಸಂಸ್ಥೆ’ ಮುಂದಾಗಿದೆ. ಇದೇ ‘ಎಬಿಸಿಎಲ್’ ಕಂಪೆನಿ ವತಿಯಿಂದ ಕನ್ನಡವೂ ಸೇರಿದಂತೆ, ಹಲವು ಭಾಷೆಗಳಲ್ಲಿ 24/7 ಸುದ್ದಿ ವಾಹಿನಿಗಳು ಟಿವಿ 9 ಬ್ರ್ಯಾಂಡ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಟಿವಿ 9 ಮಾರಾಟದ ಸುದ್ದಿಯನ್ನು ಮೂಲಗಳು ಖಚಿತಪಡಿಸಿದ್ದು, ಸದ್ಯದಲ್ಲೇ ವ್ಯವಹಾರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು..

    October 27, 2016
    ...
    suddi-tv-1
    ಟಿವಿ

    ನಾವು ಸುಳ್ ಹೇಳಲ್ಲ: ಸುದ್ದಿ ಟಿವಿ; ಇದು ‘ಕಾಂಗ್ರೆಸ್ ಸಂಗಾತಿ’!

    ಫೆಬ್ರವರಿ 23, 2016ರ ಮಧ್ಯಾಹ್ನ… ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದ ದಿನವದು. ಅವತ್ತಿಗೆ ‘ಸುದ್ದಿ ಟಿವಿ’ ಶಾಂತಿ ನಗರ ಬಸ್ ಸ್ಟ್ಯಾಂಡ್ ಎದುರಿಗೆ ಇರುವ ‘ಖೈಖಾ ಬಿಸಿನೆಸ್ ಪಾರ್ಕ್’ ಕಟ್ಟಡದ ಒಂದನೇ ಮಹಡಿಯಲ್ಲಿನ್ನೂ ಭ್ರೂಣಾವಸ್ಥೆಯಲ್ಲಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಾ ಕಾರ್ಯಕ್ರಮವನ್ನು ಇದ್ದ ಚಿಕ್ಕ ಜಾಗದಲ್ಲಿಯೇ ತರಬೇತಿ ಕಾರಣಕ್ಕೆ ಮಧ್ಯಾಹ್ನ ನಡೆಸಲಾಯಿತು. ಪ್ಯಾನಲ್ನಲ್ಲಿ ವಾಹಿನಿಯ ಪ್ರಧಾನ ಸಂಪಾದಕ ಶಶಿಧರ್ ಭಟ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಆ್ಯಂಕರ್ ಚರ್ಚೆಯನ್ನು ಆರಂಭಿಸುತ್ತ ಭಟ್ಟರಿಗೆ ಪ್ರಶ್ನೆಯೊಂದನ್ನು ಕೇಳಿದರು. ತಕ್ಷಣ..

    October 9, 2016
    ...
    janshri-prakash-rai-2
    ಟಿವಿ

    ಜನಶ್ರೀ- ರೈ ‘ರಾಂಪಾಯಣ’: ಪರ- ವಿರೋಧಗಳ ಆಚೆಗೆ ಒಳ್ಳೆ ಪಾಠವಾಗಲಿ!

    ‘ಸಮಯ ಕೆಟ್ಟರೆ, ಭೂಮಿ ಒಳಗಿರುವ ಎರೆಹುಳ ಕೂಡ ನಾಗರಹಾವಾಗಿ ಕಚ್ಚುತ್ತದೆ’ ಎಂಬ ಗಾದೆ ಮಾತೊಂದಿದೆ. ಇವತ್ತು ಜನಶ್ರೀ ವಾಹಿನಿ ಮತ್ತು ಪ್ರಕಾಶ್ ರೈ ನಡುವೆ ನಡೆದ ‘ರಾಮಾಯಣ’ದ ಎಪಿಸೋಡಿಗೆ ಒಪ್ಪುವ ಮಾತಿದು. ಕಾವೇರಿ ವಿಚಾರದಲ್ಲಿ ಕಿಚ್ಚು ಹೊತ್ತಿಸಿದ ತಪ್ಪಿಗೆ ಜನರಿಂದ ಛೀಮಾರಿಗೆ ಒಳಗಾದ ಸಮಯದಲ್ಲಿ, ‘ಬಿಳಿ ಕಾಗೆಯನ್ನು ಹಾರಿಸಲು’ ಹೋಗಿ ಅಪ್ರಬುದ್ಧತೆಯನ್ನು ಮೆರೆದ ಸಮಯದಲ್ಲಿಯೇ ಸುದ್ದಿವಾಹಿನಿಗಳ ವಲಯದಲ್ಲಿ ಹೀಗೊಂದು ಅಪಸವ್ಯ ನಡೆದಿದೆ. ಸಾಮಾನ್ಯ ಜನರ ಆಕ್ರೋಶ ಒಂದು ದಿಕ್ಕಿಗೆ ಕೇಂದ್ರೀಕೃತಗೊಂಡು, ಸುದ್ದಿ ವಾಹಿನಿಗಳ ಕುರಿತು ಸರಳೀಕೃತ ಅಭಿಪ್ರಾಯಗಳು ಸಾರ್ವತ್ರಿಕಗೊಳ್ಳುತ್ತಿರುವ ಸಮಯದಲ್ಲಿಯೇ, ಬಹುಬಾಷಾ ನಟ ಕ್ಯಾಮೆರಾ..

    October 3, 2016
    ...
    sad-journalist
    ಟಿವಿ

    ‘ಜರ್ನಲಿಸಂ ಶವಪರೀಕ್ಷೆ’: ಸುಮ್ಮನೆ ಕುಳಿತ ಪತ್ರಕರ್ತನಿಗೆ ಹಳೆಯದೆಲ್ಲವೂ ನೆನಪಾಗುತ್ತವೆ!

    ಅದ್ಯಾಕೋ ಗೊತ್ತಿಲ್ಲ, ಸುಮ್ಮನೆ ಕುಳಿತ ಅವನಿಗೆ ಆತನ ಹಳೆಯದೆಲ್ಲಾ ನೆನಪಾಗುತ್ತದೆ. ನಾಲ್ಕಾರು ತಿಂಗಳು ಜಂಜಾಟದ ಬದುಕಲ್ಲಿ ಬೇಯುತ್ತಾ, ಅವರಿಬ್ಬರು ಕಾಯಕವನ್ನೇ ಕೈಲಾಸ ಅಂತೆಲ್ಲ ಅಂದುಕೊಂಡು ಬದುಕಿದ ಬದುಕು ನೆನಪಾಗುತ್ತದೆ. ಕಣ್ಣ ತುಂಬ ಕನಸುಗಳನ್ನು ಹೊತ್ತುಕೊಂಡು, ಹಳ್ಳಿಯ ಪ್ರಶಾಂತ ಬದುಕಿನ ಚೌಕಟ್ಟನ್ನ ಮೀರಿ ಆತನಲ್ಲಿ ಮುಗ್ಧತೆ ಇತ್ತು. ಆದರೆ ಅದು ಮಾಯಾನಗರದ ಭ್ರಮೆಯ ಬದುಕಲ್ಲಿ ಕಳೆದು ಹೋಗುವ ಆತಂಕವೂ ಇತ್ತು. ಬಯೋಡಾಟದಲ್ಲಿ ವೃತ್ತಿ ಜೀವನದ ಅನುಭವಗಳು ಅಂತ ಮುಕ್ತವಾಗಿ ಪಟ್ಟಿ ಮಾಡಲಾರದ ಕೆಲಸಗಳನ್ನು ಹೊಟ್ಟೆಪಾಡಿಗಾಗಿ ಮಾಡಿಕೊಂಡು ಬಂದವನ ಕೈಗೆ..

    September 28, 2016
    ...
    mukhesh-ambani-1
    ಮೀಡಿಯಾ 2.0

    ದೇಶದ ನಂ. 1 ಶ್ರೀಮಂತ ಬಿಚ್ಚಿಟ್ಟ ಮಾಧ್ಯಮ ವಹಿವಾಟಿನ ವಿವರ ಮತ್ತು ‘ರಿಲಯನ್ಸ್ ಜಿಯೋ’!

    ದೇಶದ ಅತಿ ದೊಡ್ಡ ಕಾರ್ಪೊರೇಟ್ ಸಂಸ್ಥೆಯ ಮಹಾತ್ವಕಾಂಕ್ಷಿ ಯೋಜನೆ, ‘ರಿಲಯನ್ಸ್ ಜಿಯೋ’ ಕುರಿತು ಅಧಿಕೃತ ಮಾಹಿತಿ ಗುರುವಾರ ಹೊರಬಿದ್ದಿದೆ. ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಯೋಜನೆಯ ವಿವರಗಳ ಜತೆಗೆ, ಕಂಪನಿಯ ಇತರೆ ವಹಿವಾಟುಗಳ ಕುರಿತು ‘ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್’ (ಆರ್ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಮಾಹಿತಿ ನೀಡಿದ್ದಾರೆ. ಇದರಲ್ಲಿ ಅವರು ಮಾಧ್ಯಮ ಕ್ಷೇತ್ರದಲ್ಲಿ ರಿಲಯನ್ಸ್ ವಹಿವಾಟಿನ ಕುರಿತು ನೀಡಿರುವ ವಿವರಗಳ ಪಟ್ಟಿ ಇಲ್ಲಿದೆ. ಭಾರತದಲ್ಲಿ ಸುದ್ದಿ ಮತ್ತು ಮನೋರಂಜನೆ ಎರಡೂ ಮಾಧ್ಯಮ ವಿಭಾಗಗಳಲ್ಲಿ ರಿಲಯನ್ಸ್ ದೊಡ್ಡ ಪಾಲನ್ನು ಹೊಂದಿದೆ…

    September 1, 2016
    ...
    journalism-technology-1
    ಪತ್ರಿಕೆ

    ಪತ್ರಿಕೋದ್ಯಮ ಮತ್ತು ತಂತ್ರಜ್ಞಾನದ ನಡುವಿನ ಹಗ್ಗಜಗ್ಗಾಟಕ್ಕೆ ‘ಸ್ನಾಪ್’ ಉತ್ತರ!

    ಪತ್ರಿಕೋದ್ಯಮ ಮತ್ತು ತಂತ್ರಜ್ಞಾನ ಒಂದಕ್ಕೊಂದು ಸಮಾನಾಂತರವಾಗಿ ಬೆಳೆಯದ ಹಿನ್ನೆಲೆಯಲ್ಲಿ ಹಲವು ಸಮಸ್ಯೆಗಳನ್ನು ಕ್ಷೇತ್ರ ಎದುರಿಸುತ್ತಿದೆ ಎಂಬ ಮಾತಿದೆ. ಇದು ನ್ಯೂಸ್ ರೂಮ್ ಅಂತರಾಳವನ್ನು ಬಲ್ಲವರಿಗೆ ಸರಿಯಾಗಿ ಅರ್ಥವಾಗಿರುತ್ತದೆ. ಹೀಗಾಗಿಯೇ, ‘ಲಾಸ್ ಏಂಜಲೀಸ್ ಟೈಮ್ಸ್’ ತನ್ನ ಪತ್ರಕರ್ತರ ಬರವಣಿಗೆಗೆ ಅನುಕೂಲವಾಗುವಂತಹ ಪ್ರತ್ಯೇಕ ಸಾಫ್ಟ್ವೇರ್ ಒಂದನ್ನು ಪರಿಚಯಿಸಿದೆ. ವಿಶೇಷ ಎಂದರೆ, ಟೈಮ್ಸ್ ಒಳಗಿನ ಒಬ್ಬರು ಸಿಬ್ಬಂದಿಯೂ ಸೇರಿ ರೂಪಿಸಿರುವ ಈ ಸಾಫ್ಟ್ವೇರ್, ಪತ್ರಕರ್ತರ ಬರವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಈ ಕುರಿತು ಇನ್ನಷ್ಟು ಆಳಕ್ಕಿಳಿಯುವ ಮುನ್ನ ಸಿಎಂಎಸ್ ಎಂದರೇನು ಎಂಬುದನ್ನು ಮೊದಲ..

    August 11, 2016

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top