An unconventional News Portal.

ಸುದ್ದಿ ವಾಹಿನಿಗಳು
    ...
    news-channels-sex-scandal
    ಟಿವಿ

    ‘ಕಾವಿಧಾರಿಗಳ ಕಾಮ ಪುರಾಣಂ’: ನ್ಯೂಸ್‌ ಚಾನಲ್‌ಗಳಲ್ಲಿ ರಾಸಲೀಲೆ ಆಚರಣೆಗೆ ಒಂದು ದಶಕ!

    ಅವತ್ತು ಮನೆಯಲ್ಲಿದ್ದ ಆ ಮಗುವಿಗೆ ಶಾಲೆ ರಜೆ. ಬೆಳಗ್ಗೆ ಎದ್ದು, ಹಾಲು ಕುಡಿದು, ಟಿವಿ ಆನ್‌ ಮಾಡಿಕೊಂಡು ಕುಳಿತಿತ್ತು. ಬೆಳಗ್ಗೆ ಕಚೇರಿಗೆ ಹೊರಡಲು ಅಣಿಯಾಗಿದ್ದ ತಂದೆ ‘ನ್ಯೂಸ್ ಚಾನಲ್’ ಹಾಕು ಪುಟ್ಟ ಎಂದರು. ಮಗು ಕನ್ನಡ ಸುದ್ದಿವಾಹಿನಿಯ ನಂಬರ್ ಒತ್ತಿತು ರಿಮೋಟ್‌ನಲ್ಲಿ. ‘ಕಾವಿ ಧರಿಸಿ ಸ್ವಾಮಿಯ ಪಲ್ಲಂಗದಾಟ; ಈತನ ಜತೆ ಮಂಚ ಏರಿದ ಹೆಂಗಸರ ಸಂಖ್ಯೆ ಎಷ್ಟು ಗೊತ್ತು?; ಇಷ್ಟಕ್ಕೂ ಈ ಸ್ವಾಮಿ ರಾಸಲೀಲೆ ನಡೆಯುವಾಗ ಯಾರಿದ್ದರು ಗೊತ್ತಾ?’ ಹೀಗೆ ಹೆಣ್ಣು ದನಿಯೊಂದು ಹಿನ್ನೆಲೆಯಲ್ಲಿ ಅರಚಿಕೊಳ್ಳುತ್ತಿತ್ತು. ಅಡುಗೆ..

    December 7, 2017
    ...
    justice-for-shobha
    ಟಿವಿ

    ‘ಹತ್ಯೆಯಾದ ಯುವತಿಯ ಚಾರಿತ್ರ್ಯ ಹರಣ’: ಪಾತಕ ಕಾರ್ಯಕ್ರಮಗಳ ನಿರ್ಮಾಪಕರಿಗೆ ಒಂದು ಪತ್ರ!

    ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಳಂಬೆಳಗ್ಗೆಯೇ ಯುವತಿಯೊಬ್ಬಳ ಹತ್ಯೆ ನಡೆಯಿತು. ಅದಾದ ಎರಡು ಗಂಟೆಗಳ ಅಂತರದಲ್ಲಿ ಪೊಲೀಸರು, “ಕೊಲೆಗೀಡಾದ ಶೋಭಾಗೆ ಇನ್ನೊಬ್ಬ ವ್ಯಕ್ತಿಯ ಜತೆ ಸಂಬಂಧ ಇತ್ತು. ಆಕೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ನಡೆಯಿತು,” ಎಂದು ಹೇಳಿಕೆ ನೀಡಿದರು. ರಾಜಧಾನಿ ಬೆಂಗಳೂರಿನಲ್ಲಿ ನಡೆದ ಯುವತಿಯ ಹತ್ಯೆ ಎಂಬ ಕಾರಣಕ್ಕೆ ಸುದ್ದಿ ವಾಹಿನಿಗಳಲ್ಲಿ ಆ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿತು. ಗಂಟೆ ಗಟ್ಟಲೆ ಕ್ರೈಂ ಎಪಿಸೋಡ್ ಪ್ರಸಾರವಾದವು. ಇದು ಕನ್ನಡದ ಅಷ್ಟೂ ಸುದ್ದಿವಾಹಿನಿಗಳಲ್ಲಿ ದಿನಕ್ಕೆ ಅರ್ಧ ಗಂಟೆ ಲೆಕ್ಕದಲ್ಲಿ ಪ್ರಸಾರವಾಗುವ ‘ಅಪರಾಧ..

    April 21, 2017
    ...
    janashri-vajipeyi-reddy-final
    ಟಿವಿ

    ಗಣಿ ಧಣಿಯ ಜನಮನದಲ್ಲಿ ‘ಬ್ಲಾಕ್ ಮೇಲ್’ ಅಬ್ಬರ: ಜನಶ್ರೀ ಸಿಇಓ ಬಂಧನದ ಸುತ್ತ…

    ಕನ್ನಡದ ಸುದ್ದಿ ವಾಹಿನಿಗಳ ಪಾಲಿಗೆ ಇದೊಂದು ಬಾಕಿ ಇತ್ತು. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಕೆಲವು ಪತ್ರಕರ್ತರ ಹಾಗೂ ವಾಹಿನಿಗಳ ‘ಬ್ಲಾಕ್‌ ಮೇಲ್‌’ ದಂಧೆಗೆ ಈ ಅಧಿಕೃತ ಮುದ್ರೆ ಬಿದ್ದಿದೆ. ಜನಶ್ರೀ ಸುದ್ದಿವಾಹಿನಿಯ ಸಿಇಓ ಲಕ್ಷ್ಮೀಪ್ರಸಾದ್ ವಾಜಪೇಯಿ ಬಂಧನವಾಗಿದೆ. ಕೋರಮಂಗಲ ಪೊಲೀಸರು ಆತ ಸೇರಿದಂತೆ ಇಬ್ಬರನ್ನು ಶುಕ್ರವಾರ ರಾತ್ರಿ ಚಾನಲ್‌ ಕಚೇರಿಯಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ದಿನದಿಂದ ದಿನಕ್ಕೆ ನೈತಿಕವಾಗಿ ಅಧಃಪತನಗೊಳ್ಳುತ್ತಿರುವ ಸುದ್ದಿ ವಾಹಿನಿಗಳ ಅಂತರಾಳದ ದರ್ಶನವಾದಂತಾಗಿದೆ. ಏನಿದು ಬೆಳವಣಿಗೆ?:  ಜನಶ್ರೀ ವಾಹಿನಿ ಅತ್ಯಂತ ಕೆಟ್ಟ..

    April 15, 2017
    ...
    karnataka-news-channel-logos
    ಟಿವಿ

    ‘ಸದನ ಸಮಿತಿ’ ಎಂಬ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಾಯಿತು; ಮುಂದೇನು?

      ನಮ್ಮ ದೇಶದಲ್ಲಿ ‘ಟ್ಯಾಬೂ’ ಅಂತ ಅನ್ನಿಸಿಕೊಳ್ಳುವ ಹಲವು ನಿಷಿದ್ಧ ವಿಚಾರಗಳಿವೆ. ಅವುಗಳಲ್ಲಿ ಪ್ರಮುಖವಾದುದು ‘ಮಾಧ್ಯಮಗಳಿಗೆ ನೀತಿ ಸಂಹಿತೆ’ ಅಥವಾ ‘ಮಾಧ್ಯಮಗಳಿಗೆ ಕಡಿವಾಣ ಹಾಕಬೇಕು’ ಎಂಬದು ಒಂದು. ಸ್ವಾತಂತ್ರ್ಯ ನಂತರ, ದೇಶದಲ್ಲಿ ನಡೆದ ಹಲವು ವಿಫಲ ಚರ್ಚೆಗಳಲ್ಲಿ ಮಾಧ್ಯಮಗಳ ಮೇಲೆ ಕಡಿವಾಣ ಹಾಕಬೇಕು ಎಂಬ ಕುರಿತು ನಡೆದ ವಾಗ್ವಾದಗಳೂ ಸೇರಿವೆ. ಸದ್ಯ ದಕ್ಷಿಣ ಭಾರತ ಎರಡು ರಾಜ್ಯಗಳಾದ ಕರ್ನಾಟಕ ಮತ್ತು ಕೇರಳದಲ್ಲಿ ಮಾಧ್ಯಮ ಮತ್ತು ಅವುಗಳಿಗೆ ಇರಬೇಕಾದ ನೈತಿಕ ಚೌಕಟ್ಟುಗಳ ಚರ್ಚೆ ನಡೆಯುತ್ತಿದೆ. ಈ ಎರಡೂ ರಾಜ್ಯಗಳಲ್ಲಿ ನಡೆಯುತ್ತಿರುವ..

    April 4, 2017
    ...
    farmer-media-drama-2
    ಟಿವಿ

    ಟೀಕೆ ಅತಿಯಾಯ್ತು; ಸಮಸ್ಯೆ ಮರೆಯಾಯ್ತು: ಬಳ್ಳಾರಿ ರೈತ ‘ಆತ್ಮಹತ್ಯೆ ಡ್ರಾಮಾ’ದ ಅಸಲಿ ಕತೆ ಇದು!

    “ಬಳ್ಳಾರಿಯಲ್ಲಿ ರೈತರ ಸಮಸ್ಯೆ ಇರುವುದು ನಿಜ ಸರ್. ಅವರ ಸಂಕಷ್ಟಗಳು ಘೋರವಾಗಿವೆ. ನಾವೇನೂ ಸಮಸ್ಯೆಯೇ ಇಲ್ಲದೇ ಡ್ರಾಮಾ ಮಾಡಲು ಹೊರಟಿರಲಿಲ್ಲ. ಇದೀಗ ಮಾಧ್ಯಮದವರೆಲ್ಲಾ ಸೇರಿಕೊಂಡು ಇದನ್ನೇ ಕಾಂಟ್ರಾವರ್ಸಿ ಮಾಡುತ್ತಿದ್ದಾರೆ. ಇದರಿಂದ ರೈತರ ಸಮಸ್ಯೆಯನ್ನು ಎಲ್ಲರೂ ಮರೆಯುತ್ತಿದ್ದಾರೆ,” ಎಂದು ವಿಷಾದದ ದನಿಯಲ್ಲೇ ಮಾತು ಆರಂಭಿಸಿದರು ಬಳ್ಳಾರಿ ಮೂಲದ ರೈತ ಮುಖಂ ಪುರುಷೋತ್ತಮ್ ಗೌಡ. ಗುರುವಾರ ಬೆಳಿಗ್ಗೆ ಬಳ್ಳಾರಿಯ ಕೊರಲಗುಂದಿ ಗ್ರಾಮದಲ್ಲಿ ನಡೆದಿರುವ ರೈತರೊಬ್ಬರ ವಿಷ ಸೇವನೆ ಪ್ರಹಸನದಿಂದಾಗಿ ರೈತರ ಸಮಸ್ಯೆಗಳು ಸುದ್ದಿ ಕೇಂದ್ರಕ್ಕೆ ಬರುವ ಹಾದಿಯಲ್ಲಿಯೇ ದಿಕ್ಕು ತಪ್ಪಿವೆ. ವಿವಾದ ಮತ್ತು..

    October 13, 2016
    ...
    ಫಾಲಿ ಎಸ್ ನಾರಿಮನ್ (ಚಿತ್ರ: ಔಟ್ಲುಕ್)
    ಕಾವೇರಿ ವಿವಾದ

    ‘ಕ್ಷಮಿಸು ಕಾವೇರಿ’: ಈ ಹೊತ್ತಿನಲ್ಲಿ ಹಿರಿಯ ವಕೀಲ ಫಾಲಿ ನಾರಿಮನ್ ನಮಗೇಕೆ ಮುಖ್ಯವಾಗಬೇಕು?

    ಕಾವೇರಿ ವಿಚಾರದಲ್ಲಿ ಟಿವಿ ಚಾನಲ್ಗಳು ಹೊತ್ತಿಸಿದ ಕಿಚ್ಚು ತಣ್ಣಗಾಗುತ್ತಿದ್ದಂತೆ ‘ನಾರಿಮನ್ ಬದಲಾಯಿಸಿ’ ಎಂಬ ಅರಚಾಟಗಳು ಶುರುವಾಗಿವೆ. ಕಳೆದ ಮೂರು ದಶಕಗಳಿಂದ ಕರ್ನಾಟಕ ಹಲವು ಹಲವು ಜಲ ವಿವಾದಗಳಲ್ಲಿ, ಗಡಿ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಮುಂದೆ ವಾದ ಮಂಡಿಸುತ್ತ ಬಂದವರು 87 ವರ್ಷದ ಫಾಲಿ ಸ್ಯಾಮ್ ನಾರಿಮನ್. ಇವರಿಗೆ ರಾಜ್ಯ ಸರಕಾರ ಕೋಟ್ಯಾಂತರ ರೂಪಾಯಿ ಶುಲ್ಕ ನೀಡಿದೆ; ಕಾವೇರಿಗಾಗಿ ನಡೆಯುತ್ತಿರುವ ನ್ಯಾಯಾಂಗ ಹೋರಾಟವನ್ನು ಕೆಲವರು ‘ಅಕ್ಷಯ ಪಾತ್ರೆ’ ಮಾಡಿಕೊಂಡಿದ್ದಾರೆ, ಸುಪ್ರಿಂ ಕೋರ್ಟ್ನಲ್ಲಿ ರಾಜ್ಯದ ಕಡೆಯಿಂದ ಸರಿಯಾಗಿ ವಾದ ಮಂಡಿಸಿಲ್ಲ, ರಾಜ್ಯದ..

    September 14, 2016
    ...
    Arnab_G
    ಟಿವಿ

    ‘ದಿ ರೈಸ್ ಅಂಡ್ ಫಾಲ್’ ಆಫ್ ಅರ್ನಾಬ್ ಗೋಸ್ವಾಮಿ!

    ಅದು 1990ರ ದಶಕ… ಭಾರತದಲ್ಲಿ ಇನ್ನೂ 24/7 ಸುದ್ದಿ ವಾಹಿನಿಗಳ ಮೊಗ್ಗು ಬಿಡುತ್ತಿದ್ದ ಕಾಲ. ಅದು ರಾಜದೀಪ್ ಸರ್ದೇಸಾಯಿ ಎಂಬ ‘ಟೈಮ್ಸ್ ಆಫ್ ಇಂಡಿಯಾ’ದ ಪತ್ರಕರ್ತ ಟಿವಿ ಮಾಧ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ಸಮಯ ಕೂಡ. ಅದಾಗಲೇ, ಆರಂಭವಾಗಿ ಎರಡು ವರ್ಷವಾಗಿದ್ದ ನ್ಯೂಡೆಲ್ಲಿ ಟೆಲಿವಿಷನ್ (NDTV)ಗೆ ಕಾಲಿಟ್ಟಿದ್ದರು ರಾಜದೀಪ್. ಇಸವಿ 1994; ಆಗ ರಾಜದೀಪ್ ಮನೆಗೆ ಜೋಬರ್ ಅಂತ ಅನ್ನಿಸುವ, ಉದ್ದ ಕೂದಲಿನ ಹುಡುಗನೊಬ್ಬ ಬರುತ್ತಿದ್ದ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಸಾಮಾಜಿಕ ಮಾನವಿಕ ಶಾಸ್ತ್ರ ವಿಭಾಗದಲ್ಲಿ ಆತ ಉನ್ನತ ವ್ಯಾಸಾಂಗ ಮಾಡಿದ್ದ. ಮೂಗಿನ ತುದಿಯಲ್ಲಿ..

    April 11, 2016
    ...
    Untitled-1 copy
    ಟಿವಿ

    ಟ್ಯಾಗ್ ಲೈನ್ ಎಂಬ ಪ್ರಚಾರ ತಂತ್ರ ಮತ್ತು ಅಡಿಬರಹದ ಹಿಂದಿರುವ ಆಶಯ!

    ಟ್ಯಾಗ್ ಲೈನ್ ಅಥವಾ ಸ್ಲೋಗನ್ಸ್… ಯಾವುದೇ ಸಂಸ್ಥೆ ಜನರನ್ನು ತನ್ನತ್ತ ಸೆಳೆಯಲು ಬಳಸುವ ಆಕರ್ಷಕರ ವಾಕ್ಯಗಳು. ಜನರ ಮನಸ್ಸನ್ನು ಗೆಲ್ಲಬೇಕು ಎಂದುಕೊಂಡ ಎಲ್ಲಾ ಕಂಪೆನಿಗಳು ಇದನ್ನು ಬಳಸಿಯೇ ಬಳಸುತ್ತವೆ. ಇವತ್ತಿನ ಮುಕ್ತ ಮಾರುಕಟ್ಟೆಯ ಓಘದಲ್ಲಿ ಟ್ಯಾಗ್ ಲೈನ್ಸ್ ಅಗತ್ಯವಾಗಿರುವ ಮಾರುಕಟ್ಟೆಯ ತಂತ್ರ ಕೂಡ. ಕೆಲವೊಮ್ಮೆ ಕಂಪೆನಿಗಳಿಗಿಂತ ಟ್ಯಾಗ್ ಲೈನ್ ಗಳೇ ಜನಪ್ರಿಯತೆ ಗಳಿಸಿರುವ ಉದಾಹರಣೆಗಳೂ ಇವೆ. ಕೆಲವೊಮ್ಮೆ ಇದೇ ಅಡಿಬರಹಗಳು ನಗೆಪಾಟಲಿಗೆ ಈಡಾಗಿದ್ದೂ ಇದೆ. ಇದು ಹೆಚ್ಚು ಕಡಿಮೆ ಎಲ್ಲಾ ಉದ್ಯಮಗಳಿಗೆ ಅನ್ವಯಿಸುವ ಮಾತು. ಆದರೆ ಮಾಧ್ಯಮ ಸಂಸ್ಥೆಗಳ..

    April 6, 2016

Top