An unconventional News Portal.

ಸಿರಿಮನೆ ನಾಗರಾಜ್
    ...
    diddalli-nanjappa-death
    ರಾಜ್ಯ

    ‘ದಿಡ್ಡಳ್ಳಿ ಫಾಲೋಅಪ್’: ಸಂಕಷ್ಟಗಳ ಸುಧಾರಣೆ ಹಾದಿಯಲ್ಲಿ ಈ ಸಾವು ನ್ಯಾಯವೇ?

    ‘ಲೈನ್ ಮನೆ’ ಜೀತದ ನೋವಿನಲ್ಲೇ ಪ್ರಾಣ ಬಿಟ್ಟ ಆದಿವಾಸಿ ನಂಜಪ್ಪ.. ದಿಡ್ಡಳ್ಳಿಗೆ ಕಾಲಿಟ್ಟ ಹೋರಾಟಗಾರರ ವಿರುದ್ಧ ಪೊಲೀಸರಿಗೆ ದೂರು.. ಪುನರ್ವಸತಿಗೆ ಸರಕಾರದ ಕಡೆಯಿಂದ ನಿಧಾನಗತಿಯ ಪ್ರಕ್ರಿಯೆ.. ಇವಿಷ್ಟು ರಾಜ್ಯದ ಸುದ್ದಿಕೇಂದ್ರದಲ್ಲಿ ವಾರಗಳ ಕಾಲ ಜಾಗ ಪಡೆದುಕೊಂಡಿದ್ದ ದಿಡ್ಡಳ್ಳಿ ಆದಿವಾಸಿಗಳ ಹೋರಾಟದ ಸದ್ಯದ ಸ್ಥಿತಿಗತಿ. ಕೊಡಗಿನ ‘ಲೈನ್ ಮನೆ’ ಜೀತದಿಂದ ಬೇಸತ್ತು ದಿಡ್ಡಳ್ಳಿಯಲ್ಲಿ ಬಿಡಾರ ಹೂಡಿದ್ದ ಆದಿವಾಸಿ ಎರವರ ನಂಜಪ್ಪ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ವೈದ್ಯಕೀಯ ಭಾಷೆಯಲ್ಲಿ ಹೃದಯಾಘಾತ ಅವರ ಜೀವ ಬಲಿ ಪಡೆದುಕೊಂಡಿದ್ದರೆ, ವಾಸ್ತವದಲ್ಲಿ ಜೀತ ಪದ್ಧತಿ..

    January 8, 2017
    ...
    chalo-madikeri-5
    ರಾಜ್ಯ

    ‘ಚಲೋ ಮಡಿಕೇರಿ’ ಯಶಸ್ವಿ; ‘ಶಾಶ್ವತ ಪರಿಹಾರಕ್ಕೆ ತಿಂಗಳೊಳಗೆ ಅಂತಿಮ ರೂಪ’ –ಆಂಜನೇಯ ಭರವಸೆ

    ಕಳೆದ 16 ದಿನಗಳಿಂದ ರಾಜ್ಯದ ಜನರ ಗಮನ ಸೆಳೆದಿದ್ದ ದಿಡ್ಡಳ್ಳಿ ಹೋರಾಟ ಕೊನೆಗೂ ನಿರ್ಣಾಯಕ ಘಟ್ಟ ತಲುಪಿದೆ. ಶುಕ್ರವಾರ ದಿಡ್ಡಳ್ಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಮತ್ತು ಕಾರ್ಯದರ್ಶಿ ಮಣಿವಣ್ಣನ್ ತಿಂಗಳೊಳಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಸಮಸ್ಯೆಗೆ ಪರಿಹಾರವನ್ನು ಅಂತಿಮಗೊಳಿಸಲಾಗುವುದು ಎಂದು ಹೋರಾಟಗಾರರ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಇದರೊಂದಿಗೆ ಅನಿರ್ಧಿಷ್ಟಾವಧಿ ಧರಣಿಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ಸಿರಿಮನೆ ನಾಗರಾಜ್ ಸ್ಪಷ್ಟಪಡಿಸಿದ್ದಾರೆ. ದಿಡ್ಡಳ್ಳಿಯಲ್ಲಿ ಪ್ರತ್ಯಕ್ಷರಾದ ಆಂಜನೇಯ: ದಿಡ್ಡಳ್ಳಿ ಆದಿವಾಸಿಗಳ ಮನೆ..

    December 24, 2016
    ...
    diddalli-protest
    ರಾಜ್ಯ

    ಇಳೀ ವಯಸ್ಸಿನಲ್ಲಿ ಆಕ್ರೋಶ ಹೊರಹಾಕಿದ ದೊರೆಸ್ವಾಮಿ: ದಿಡ್ಡಳ್ಳಿ ಆದಿವಾಸಿಗಳಿಗೆ ತಕ್ಷಣದ ನೆರವು

    “ನಾವು ಅಲ್ಲಿಗೆ (ದಿಡ್ಡಳ್ಳಿ) ಹೋಗಿಯೇ ಹೋಗುತ್ತೇವೆ. ಜೈಲಿಗೆ ಕಳುಹಿಸುತ್ತೀರೋ ಕಳುಹಿಸಿ ನೋಡಿ,” ಹೀಗಂತ ಗುಡುಗಿದವರು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ. ದಿಡ್ಡಳ್ಳಿ ನಿರಾಶ್ರಿತ ಆದಿವಾಸಿಗಳ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್ ರನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ನಿಯೋಗ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿತು. ಈ ಸಂದರ್ಭ ಸರಕಾರ ದಿಡ್ಡಳ್ಳಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದದರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು. “ನಕ್ಸಲರು ಬರುತ್ತಾರೆ ಎಂದೆಲ್ಲಾ ಸರಕಾರ ಸುಮ್ಮನೆ ಹೇಳಬಾರದು. ಯಾರು ನಕ್ಸಲರು. ಅವರನ್ನು (ನೂರ್..

    December 22, 2016
    ...
    diddalli
    ರಾಜ್ಯ

    ಭೂಮಿ, ವಸತಿ ಹಕ್ಕು ವಂಚಿತರ ನಡಿಗೆ ‘ದಿಡ್ಡಳ್ಳಿ’ ಕಡೆಗೆ; ಕೊಡಗಿನಲ್ಲಿಂದು ಸಿದ್ದು ಸರಕಾರಕ್ಕೆ ಛೀಮಾರಿ

    ದಿಡ್ಡಳ್ಳಿಗೆ ನಡೆಯೋಣ… ಹೀಗಂತ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ಹೋರಾಟಗಾರರು ಮತ್ತು ಸಮಾನ ಮನಸ್ಕರು ಇವತ್ತು ಮಂಜಿನ ನಾಡು ಕೊಡಗಿನ ದಿಡ್ಡಳ್ಳಿಯ ಸೇರಿದ್ದಾರೆ. ಕಳೆದ ಡಿಸೆಂಬರ್ 7ರ ಮುಂಜಾನೆ ಇಲ್ಲಿನ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯಲ್ಲಿದ್ದ 577 ಕುಟುಂಬಗಳನ್ನು ಅರಣ್ಯ ಇಲಾಖೆ ಬೀದಿಪಾಲು ಮಾಡಿತ್ತು. ಕಳೆದ 6 ತಿಂಗಳಿನಿಂದ ಈ ಕುಟುಂಬಗಳು ಇಲ್ಲಿನ ಸರಕಾರಿ ಭೂಮಿಯಲ್ಲಿ ಕಟ್ಟಿಕೊಂಡಿದ್ದ ಮನೆಯನ್ನು ಕೆಡವಿ, ಲಾಠಿ ಬೀಸಿ ಅವರನ್ನೆಲ್ಲಾ ಅಲ್ಲಿಂದ ಓಡಿಸಲಾಗಿತ್ತು. ಇದೀಗ ಈ ವಸತಿ ವಂಚಿತರಿಗೆ ಮೂಲಭೂತ..

    December 18, 2016
    ...
    bhumi-horata-1
    ರಾಜ್ಯ

    ಭೂಮಿ ಹಂಚಿಕೆಗೆ ಎರಡು ವರ್ಷದ ಗಡುವು: ‘ಹೈಪವರ್ ಕಮಿಟಿ’ ರಚನೆಗೆ ಮುಂದಾದ ಸರಕಾರ

    ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ಹೋರಾಟಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ಸಮಿತಿಯ ಹಕ್ಕೊತ್ತಾಯಗಳನ್ನು ಸರಕಾರ ತಾತ್ವಿಕವಾಗಿ ಒಪ್ಪಿಕೊಂಡಿದ್ದು ನಿರ್ಧಿಷ್ಟ ತೀರ್ಮಾನಗಳನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಹೋರಾಟಗಾರರ ಪರವಾಗಿ ಎಚ್.ಎಸ್. ದೊರೆಸ್ವಾಮಿ, ನೂರ್ ಶ್ರೀಧರ್, ಡಿ.ಎಚ್. ಪೂಜಾರ್, ಎನ್. ವೆಂಕಟೇಶ್, ಕುಮಾರ್ ಸಮಾತಳ, ಸ್ವರ್ಣ ಭಟ್ ಅವರನ್ನೊಳಗೊಂಡ ನಿಯೋಗ ಮಾತುಕತೆ ನಡೆಸಿ, ರಾಜ್ಯದ ಭೂಮಿ ಮತ್ತು ವಸತಿ ಪರಿಸ್ಥಿತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಿತು. ಈ ಸಂದರ್ಭ ಚರ್ಚೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ..

    November 23, 2016

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top