An unconventional News Portal.

ಸಿನೆಮಾ
    ...
    parvathamma-1
    ರಾಜ್ಯ

    ‘ದೊಡ್ಮನೆಯ ನಿಜವಾದ ಯಜಮಾನಿ’, ಗಟ್ಟಿ ಮಹಿಳೆ ಪಾರ್ವತಮ್ಮ ರಾಜ್‌ಕುಮಾರ್; ಇನ್ನಿಲ್ಲ

    ದಕ್ಷಿಣ ಭಾರತದ ಸಿನೆಮಾ ಪೈಕಿ ಕನ್ನಡದ ಇಂಡಸ್ಟ್ರಿಯನ್ನು ಒಂದಷ್ಟು ದಿನಗಳ ಕಾಲ ಅಕ್ಷರಶಃ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದವರು ಪಾರ್ವತಮ್ಮ ರಾಜ್‌ಕುಮಾರ್. 1939ರಲ್ಲಿ ಜನಿಸಿದ ಅವರು ಬುಧವಾರ ಮುಂಜಾನೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಉಸಿರು ಎಳೆದಿದ್ದಾರೆ. ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ 78 ವರ್ಷ ವಯಸ್ಸಿನ ಪಾರ್ವತಮ್ಮ ರಾಜ್ ಕುಮಾರ್ ಕಳೆದ ಎರಡು ವಾರಗಳಿಂದ ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಾರ್ವತಮ್ಮ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೆ ತರಲಾಗಿದೆ. ಸದಾಶಿವ ನಗರದ ಪೂರ್ಣಪ್ರಜ್ಞ ಮೈದಾನದಲ್ಲಿ ಬೆಳಗ್ಗೆ..

    May 31, 2017
    ...
    Denzel Washington Visits "Late Show With David Letterman"
    ವಿದೇಶ

    ಈ ಬಾರಿ ‘ಆಸ್ಕರ್ ನಾಟ್ ಸೋ ವೈಟ್’: ಪ್ರಶಸ್ತಿ ರೇಸಿನಲ್ಲಿ ಡೆನ್ಸಿಲ್ ವಾಷಿಂಗ್ಟನ್, ದೇವ್ ಪಟೇಲ್

    ಈ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ನಾಗಾಲೋಟ ಆರಂಭವಾಗಿದೆ. ಗುರುವಾರ ಬಿಡುಗಡೆಗೊಂಡಿರುವ ಪಟ್ಟಿ, ಕಳೆದ ವರ್ಷಕ್ಕೆ ಹೋಲಿಸಿದರೆ ಎಲ್ಲಾ ಜನಾಂಗಗಳಿಗೂ, ಭಿನ್ನ ಹಿನ್ನೆಲೆಯ ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ನೀಡಿದೆ. ಕಳೆದ ವರ್ಷ ಕೇಳಿಬಂದ ಟೀಕೆಗಳಿಗೆ ಅಕಾಡೆಮಿ ತಲೆಬಾಗಿದಂತೆ ಕಾಣಿಸುತ್ತಿದೆ. 89ನೇ ಅಕಾಡೆಮಿ ಪ್ರಶಸ್ತಿಗಾಗಿ ಸಿದ್ಧಗೊಂಡಿರುವ ಪಟ್ಟಿಯಲ್ಲಿ ಬಿಳಿಯ ಜನಾಂಗದ ನಟರು ಹಾಗೂ ನಿರ್ದೇಶಕರನ್ನು ಹೊರತು ಪಡಿಸಿ, ಈ ಬಾರಿ ಹಲವರು ಸ್ಥಾನ ಪಡೆದುಕೊಂಡಿದ್ದಾರೆ. ಅಭಿನಯದ ವಿಭಾಗದಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 20 ಜನರಲ್ಲಿ 9 ಬಿಳಿಯ ವರ್ಣದವರಲ್ಲ..

    January 25, 2017
    ...
    bdayout-4
    ಸಮಾಚಾರ +

    ನೆನಪಿದೆಯಾ ‘ಬೇಬಿಸ್ ಡೇ ಔಟ್’: ಆ ಮುದ್ದು ಬೇಬಿ ಬಿನ್ ಈಗೇನಾಗಿದ್ದಾನೆ?

    ಒಂದು ತಲೆಮಾರಿಗೆ ಚಿಕ್ಕವಯಸ್ಸಿನಲ್ಲಿಯೇ ಹಾಲಿವುಡ್ಗೆ ತೆರೆದುಕೊಳ್ಳುವಂತೆ ಮಾಡಿದ್ದು, ‘ಬೇಬಿಸ್ ಡೇ ಔಟ್’ ಎಂಬ ಸಿನೆಮಾ. ಇದರಲ್ಲಿ ಪುಟ್ಟ ಮಗುವೊಂದು ಮೂವರು ಕಳ್ಳರಿಂದ ಅಪಹರಣಕ್ಕೆ ಈಡಾಗಿ, ಅವರಿಂದ ತಪ್ಪಿಸಿಕೊಂಡು ನಂತರ ತಾಯಿಯ ಮಡಿಲು ಸೇರುವ ಕತೆಯನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಅಂದಹಾಗೆ, ಇಷ್ಟು ಹೇಳುತ್ತಿದ್ದಂತೆ ಇಡೀ ಸಿನೆಮಾ ನಿಮ್ಮ ಕಣ್ಣೆದುರಿಗೆ ಈಗಾಗಲೇ ಬಂದು ಹೋಗಿರುತ್ತದೆ. ಹೀಗಾಗಿ, ಕತೆಯ ಕುರಿತು ಮಾತು ಮುಂದುವರಿಸುವ ಅಗತ್ಯವಿದ್ದಂತೆ ಕಾಣಿಸುವುದಿಲ್ಲ. ಅದರಾಚೆಗಿನ ಕುತೂಹಲ ಏನೆಂದರೆ, ಎರಡು ದಶಕಗಳ ಹಿಂದೆ ಬೆಳ್ಳಿ ತೆರೆಯ ಮೇಲೆ ಅದ್ಭುತ ನಟನೆ..

    January 17, 2017
    ...
    shivrajkumar-banumati
    ಮೀಡಿಯಾ 2.0

    ‘ರಾಜ್ ಲೀಲಾ ವಿನೋದ’: ಶಿವರಾಜ್ ಕುಮಾರ್ ಮುಂದೆ ಪತ್ರಕರ್ತೆ ಪ್ರಶ್ನೆ ಮುಂದಿಟ್ಟಾಗ…

    ಇತ್ತೀಚೆಗೆ ಬಿಡುಗಡೆಗೊಂಡ ನಟ ರಾಜ್ ಕುಮಾರ್ ಹಾಗೂ ನಟಿ ಲೀಲಾವತಿ ಅವರ ವೈಯಕ್ತಿಕ ಸಂಬಂಧದ ಮಾಹಿತಿಗಳನ್ನೊಳಗೊಂಡ ಪುಸ್ತಕದ ಕುರಿತು ನಟ ಶಿವರಾಜ್ ಕುಮಾರ್ ಅವರಿಗೆ ಪತ್ರಕರ್ತೆಯೊಬ್ಬರು ಪ್ರಶ್ನೆ ಕೇಳಿದ್ದು ಚರ್ಚೆಗೆ ಗ್ರಾಸವಾಗಿದೆ. ಸೋಮವಾರ ಸಂಜೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶಿವರಾಜ್ ಕುಮಾರ್ ಅಭಿನಯದ ‘ಶ್ರೀಕಂಠ’ ಸಿನೆಮಾದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಗೋಷ್ಠಿಯ ನಂತರ ‘ಸಿನಿ ಅಡ್ಡ’ ವೆಬ್ ತಾಣದ ಪತ್ರಕರ್ತೆ ಬಿ. ಸಿ. ಭಾನುಮತಿ, ಶಿವರಾಜ್ ಕುಮಾರ್ ಸಂದರ್ಶನ ನಡೆಸಿದ್ದಾರೆ. ಈ ಸಮಯದಲ್ಲಿ ಪತ್ರಕರ್ತೆ ನಟ ಶಿವರಾಜ್ ಕುಮಾರ್ ಮುಂದೆ, ರವಿ..

    January 3, 2017
    ...
    rajini-kabali-flight
    ದೇಶ

    ಕನ್ನಡದ ಶಿವಾಜಿ ಮತ್ತು ಕಾರ್ಪೊರೇಟ್ ಕಬಾಲಿ!

    ತಮಿಳುನಾಡಿನಲ್ಲಿ ಎದ್ದಿರುವ ಸುನಾಮಿಯೊಂದು ಈಗ ದೇಶ, ವಿದೇಶಗಳ ಗಡಿಯನ್ನು ದಾಟಿ ಅಪ್ಪಳಿಸುತ್ತಿದೆ; ವಿಮಾನಗಳ ಹೊರಮೈ ಬಣ್ಣವನ್ನು ಬದಲಿಸಿದೆ; ಕಾರ್ಪೊರೇಟ್ ಸಂಸ್ಥೆಗಳಿಗೆ ರಜೆಯನ್ನು ಘೋಷಿಸುವಂತೆ ಮಾಡಿದೆ; ಟೀ ಶರ್ಟ್ಗಳ ಪ್ರಿಂಟ್ ಶೈಲಿಯನ್ನು ಮಾರ್ಪಡಿಸಿದೆ; ಸಾಮಾಜಿಕ ಜಾಲತಾಣಗಳಲ್ಲೂ ಅಲೆಗಳನ್ನು ಎಬ್ಬಿಸಿದೆ; ಅಷ್ಟೇಕೆ, ನಮ್ಮದೇ ‘ತಿಥಿ’ ಸಿನೆಮಾದ ಗಡ್ಡಪ್ಪನನ್ನೂ ರೂಪಾಂತರಿಸಿದೆ… ಅಂದಹಾಗೆ ಆ ಸುನಾಮಿಯ ಹೆಸರು ‘ಕಬಾಲಿ’ ಕೇರ್ ಆಫ್ ರಜನಿಕಾಂತ್! ಜುಲೈ 22ರಂದು ರಜನಿಕಾಂತ್ ಅಭಿನಯದ ಕಬಾಲಿ ಸಿನೆಮಾ ತೆರೆಗೆ ಬರುತ್ತಿದೆ; ಅಥವಾ ನ್ಯೂಸ್ ಚಾನಲ್ಗಳ ಭಾಷೆಯಲ್ಲಿ ಹೇಳುವುದಾದರೆ ಅಪ್ಪಳಿಸಲಿದೆ…

    July 21, 2016

Top