An unconventional News Portal.

ಸಿದ್ದರಾಮಯ್ಯ
  ...

  LIVE: ಸಿದ್ದು ’13ನೇ ಮುಂಗಡ ಪತ್ರ’: ಕಾಂಗ್ರೆಸ್‌ ಸರಕಾರದ ಕೊನೆಯ ಬಜೆಟ್‌ನಲ್ಲಿ ಏನುಂಟು? ಏನಿಲ್ಲ?

  ವಿಧಾನಸೌಧದಲ್ಲಿ ಬಜೆಟ್ ಅಧಿವೇಶನವು 11.30ಕ್ಕೆ ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತದ ಅವಧಿಯ ಕೊನೆಯ ಬಜೆಟ್‌ ಇದಾಗಿದೆ . ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಈ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು (13) ಬಜೆಟ್ ಮಂಡಿಸಿದ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಏರಲಿದ್ದಾರೆ. ಬಜೆಟ್ ಎಂಬುದು ರಾಜ್ಯದ ಮುಂದಿನ ಒಂದು ವರ್ಷದ ಆಯವ್ಯಯ ಪತ್ರ. 365 ದಿನಗಳಲ್ಲಿ ಜನರ ನಿರ್ದಿಷ್ಟ ಆಶೋತ್ತರಗಳನ್ನು ಈಡೇರಿಸಲು ಜನರೇ ಆಯ್ಕೆ ಮಾಡಿದ ಸರಕಾರ ಮಂಡಿಸುವ ಲೆಕ್ಕಪತ್ರ. ಈ […]

  February 16, 2018
  ...

  ಕಾವೇರಿ ನದಿ ನೀರು ಹಂಚಿಕೆ ವಿವಾದ: ನೀವು ಓದಲೇಬೇಕಾದ 12 ವರದಿಗಳು…

  ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್‌ನಿಂದ ಅಂತಿಮ ತೀರ್ಪು ಹೊರಬೀಳಲಿದೆ. ಹೀಗಾಗಿ ಕರ್ನಾಟಕ ಪಾಲಿಗೆ ಇಂದು ಐತಿಹಾಸಿಕ ದಿನವಾಗಲಿದೆ. 1890ರಿಂದಲೇ ನಡೆಯುತ್ತಿರುವ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅಧ್ಯಕ್ಷತೆಯ ತ್ರಿಸದಸ್ಯ ಪೀಠ ಅಂತಿಮ ಇಂದು ತೀರ್ಪು ನೀಡಲಿದೆ.  ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ‘ಸಮಾಚಾರ’ ಸಂದರ್ಭಕ್ಕನುಸಾರವಾಗಿ ವಿಸ್ತ್ರತ ವರದಿಗಳನ್ನು ಭಿತ್ತರಿಸುತ್ತಲೇ ಬಂದಿದೆ. ನೀವು […]

  February 16, 2018
  ...

  ನಾಯಕತ್ವದ ಮೊಟ್ಟೆ, ಸಿದ್ದರಾಮಯ್ಯ ಬುಟ್ಟಿಗೆ: ರಾಹುಲ್ ಗಾಂಧಿ ಹೈಕ ಪ್ರವಾಸ ಮತ್ತು ಪರಿಣಾಮ

  ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವ ಬುದ್ಧಿವಂತಿಕೆ ಪ್ರದರ್ಶಿಸುತ್ತಿದೆ. ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಮರಳಲು ಇದ್ದ ನಾಯಕತ್ವದ ಗೊಂದಲವನ್ನು ಅರಾಮಾಗಿಯೇ ನಿವಾರಿಸಿಕೊಂಡಿದೆ. ಅದಕ್ಕೆ ಕಾರಣವಾದವರು ಮತ್ಯಾರು ಅಲ್ಲ, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ. ಮೇ ತಿಂಗಳಿನಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಪ್ರಚಾರವನ್ನು ಆರಂಭಿಸಿರುವ ರಾಹುಲ್ ಗಾಂಧಿ, ಶಾಸಕಾಂಗ ಪಕ್ಷವನ್ನು ಸಿದ್ದರಾಮಯ್ಯ ಅವರೇ ಮುನ್ನಡೆಸಲಿದ್ದಾರೆ ಎಂದು ನೇರವಾಗಿಯೇ ಹೇಳಿಕೆ ನೀಡಿದ್ದಾರೆ. ಅದು ಒಮ್ಮೆ ಅಲ್ಲ, ಬದಲಿಗೆ ಕಾಂಗ್ರೆಸ್ ಭದ್ರಕೋಟೆ ಉತ್ತರ ಕರ್ನಾಟಕದ ಪ್ರದೇಶದಲ್ಲಿ ಹಲವು ಬಾರಿ ರಾಹುಲ್ ಇದೇ […]

  February 15, 2018
  ...

  ಎಡಿಆರ್‌ ವರದಿಯಲ್ಲಿ ಸಿಎಂಗಳ ಆಸ್ತಿಪಾಸ್ತಿ: ಸಿದ್ದರಾಮಯ್ಯ ಬಳಿ ಆಸ್ತಿ ಎಷ್ಟಿದೆ?

  ‘ದೇಶದ 29 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಎಲ್ಲ ಮುಖ್ಯಮಂತ್ರಿಗಳ ಪೈಕಿ 25 ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳಾಗಿದ್ದಾರೆ,’ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್  ವಿಶ್ಲೇಷಣೆ ಮಾಡಿದ ವರದಿಯೊಂದು ಹೇಳಿದೆ. ಚುನಾವಣೆಗೆ ಸ್ಪರ್ಧಿಸಿದಾಗ ಅಭ್ಯರ್ಥಿಗಳು ‘ಚುನಾವಣಾ ಆಯೋಗ’ಕ್ಕೆ ಸಲ್ಲಿಸಿದ ಪ್ರಮಾಣ ಪತ್ರದ ಮಾಹಿತಿ ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ದೇಶದ ಎಲ್ಲಾ ಮುಖ್ಯಮಂತ್ರಿಗಳು ಹೊಂದಿರುವ ಆಸ್ತಿ, ವಿದ್ಯಾರ್ಹತೆ ಮತ್ತು ಅವರ ವಿರುದ್ಧ ಇರುವ ಎಲ್ಲ ಪ್ರಕರಣಗಳು ಇದರಲ್ಲಿವೆ. ನ್ಯಾಶನಲ್ ಎಲೆಕ್ಷನ್ ವಾಚ್‌ನಲ್ಲಿಯೂ ಈ ಕುರಿತು ಮಾಹಿತಿ […]

  February 13, 2018
  ...

  ಎನ್‌ಡಿಟಿವಿ ಸಿಎಂ ಸಂದರ್ಶನ: ‘ನಾನು ದೇವರನ್ನು ನಂಬುತ್ತೇನೆ…’ ಎಂದವರು ಸಿದ್ದರಾಮಯ್ಯ!

  ಇದು ಚುನಾವಣೆಗೂ ಮುನ್ನ ರಾಷ್ಟ್ರೀಯ ವಾಹಿನಿಯೊಂದು ನಡೆಸಿದ ಸಂದರ್ಶನದ ಸಂಪೂರ್ಣ ಮಾಹಿತಿ. ಮುಂಬರುವ ಕರ್ನಾಟಕ ವಿಧಾನಸಸಭಾ ಚುನಾವಣೆಯನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಈ ಚುನಾವಣೆಯ ಗೆಲುವು ಅನಿವಾರ್ಯ ಹಾಗೂ ಅಗತ್ಯ ಕೂಡ. ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನೇ ಮುಂದಿಡಲು ತೀರ್ಮಾನ ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದರೂ, ಸಿಎಂ ಸಿದ್ದರಾಮಯ್ಯ ಅವರೇ, ಚುನಾವಣೆಯ ಮುಂಚೂಣಿ ನಾಯಕರಾಗಲಿದ್ದಾರೆ. ಅಂತಹದೊಂದು ಬೆಳವಣಿಗೆಯನ್ನು […]

  February 7, 2018
  ...

  ಧಾರ್ಮಿಕ ರಾಜಕಾರಣದ ಖಡಕ್ ಮುಸ್ಲಿಂ ಧ್ವನಿ ಓವೈಸಿ; ರಾಜ್ಯಕ್ಕೆ ಬಂದರೆ ಏನಾಗಬಹುದು ಊಹಿಸಿ!

  “ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ ಜೊತೆಗೆ ಬಿಜೆಪಿ ನಾಯಕರು ಹೈದರಾಬಾದ್‌ನಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಇರುವ ಹಿನ್ನಲೆಯಲ್ಲಿ ಮತ ವಿಭಜನೆ ಮಾಡುವ ಸಲುವಾಗಿ ಅವರು ಓವೈಸಿ ಜೊತೆಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಗೆ ಇಂತಹ ಮಾರ್ಗಗಳು ಹೊಸದೇನೂ ಅಲ್ಲ. ಉತ್ತರ ಪ್ರದೇಶದಲ್ಲಿ ಇಂಥ ಮಾರ್ಗಗಳನ್ನು ಅನುಸರಿಸಿಯೇ ಅದು ಅಧಿಕಾರಕ್ಕೆ ಬಂದಿದೆ. ಅಲ್ಲಿನ ಮುಸ್ಲಿಮ್ ಸಮುದಾಯ ಹೆಚ್ಚಿರುವ ಪ್ರದೇಶದಲ್ಲಿ ಬಿಜೆಪಿಯು ಒಳಮೈತ್ರಿ ಮಾಡಿಕೊಂಡಿತ್ತು. ಈಗ ಕರ್ನಾಟಕದಲ್ಲೂ ಅದೇ ತಂತ್ರವನ್ನು ಅನುಸರಿಸಲು ಬಿಜೆಪಿ ಮುಂದಾಗಿದೆ,” ಎಂದು ಎರಡು […]

  January 31, 2018
  ...

  ಬಂದ್ ನಡುವೆಯೇ ಬಿಜೆಪಿ ಪರಿವರ್ತನಾ ಯಾತ್ರೆ: ಸರಕಾರದ ವಿರುದ್ಧ ವಾಗ್ದಾಳಿಗೆ ಸಾಕ್ಷಿಯಾದ ಅರಮನೆ ನಗರಿ

  “ಭ್ರಷ್ಟಾಚಾರ ಅಂದರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದರೆ ಭ್ರಷ್ಟಾಚಾರ. ಭ್ರಷ್ಟಾಚಾರ ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನು ಹೇಳುತ್ತಾ ಹೋದರೆ 7 ದಿನ ಬೇಕಾಗುತ್ತದೆ. ಅಷ್ಟು ಮಾಹಿತಿ ನನ್ನ ಬಳಿ ಇದೆ, ಭ್ರಷ್ಟ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಲೇಬೇಕು,” ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು. ಗುರುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಾವಿ ಮುಖ್ಯಮಂತ್ರಿ ಯಡಿಯೂರಪ್ಪ’ ಎಂದು ಸಂಬೋಧಿಸುವ […]

  January 25, 2018
  ...

  ‘ಮಹದಾಯಿ ಬಂದ್‌’: ರಾಜಧಾನಿಯಲ್ಲಿ ಅಭೂತಪೂರ್ವ ಸ್ಪಂದನೆ; ಕೆಸರೆರಚಾಟಕ್ಕೆ ಮುನ್ಸೂಚನೆ

  ‘ಮಹದಾಯಿ ನದಿ ನೀರು ಹಂಚಿಕೆ  ವಿವಾದದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿ ಇತ್ಯರ್ಥ ಮಾಡಬೇಕು, ಕರ್ನಾಟಕ ರಾಜ್ಯದ ಜನರಿಗೆ ನ್ಯಾಯ ಒದಗಿಸಬೇಕು ’ ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ‘ಕರ್ನಾಟಕ ಬಂದ್‌’ಗೆ ಇಂದು ಕರೆ ನೀಡಿದ್ದವು. ಇದಕ್ಕೆ ಬೆಂಗಳೂರು ಮತ್ತು ಹೈದ್ರಾಬಾದ್ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ. ‘ನಮ್ಮದು ನಮ್ಮದು ಮಹದಾಯಿ ನಮ್ಮದು’, ‘ಸತ್ತಾನಪ್ಪೋ ಸತ್ತಾನೋ, ನರೇಂದ್ರ ಮೋದಿ ಸತ್ತಾನೋ’ […]

  January 25, 2018
  ...

  ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

  ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ ವರದಿಗಳಿಗೆ ಮಾತ್ರ ಪ್ರತಿಕ್ರಿಯಿಸುವುದಲ್ಲ, ಬದಲಿಗೆ ವರದಿ ಮಾಡುವ ಮಾಧ್ಯಮಗಳ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ನೆನಪಿಸಲು ಹೊರಟಂತಾಗಿದೆ. ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಸಮಯದಲ್ಲಿ ಮಾಧ್ಯಮ ಸಂಸ್ಥೆಗಳಿಗೆ ಸರಕಾರ ಪಾಠ ಹೇಳಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ‘ಟೈಮ್ಸ್‌ ಆಫ್‌ ಇಂಡಿಯಾ’ ವರದಿಯ ಅನ್ವಯ ಸರಕಾರ ಕಳೆದ ಆರ್ಥಿಕ ವರ್ಷದಲ್ಲಿ […]

  January 19, 2018
  ...

  ಕಾವೇರಿ ವಿಚಾರದಲ್ಲಿ ಒಕ್ಕಟ್ಟು; ಮಹದಾಯಿ ವಿಚಾರದಲ್ಲಿ ಬಿಕ್ಕಟ್ಟು: ಇದ್ಯಾವ ಸೀಮೆ ‘ನೀರಿನ ರಾಜಕೀಯ’?

  ಮೂರು ದಶಕಗಳ ನೀರು ಹಂಚಿಕೆ ವಿವಾದಕ್ಕೆ ಮೂರು ದಿನಗಳಲ್ಲಿ ಪರಿಹಾರ ಸಿಗದಿದ್ದರೂ; ಚುನಾವಣಾ ಹಿನ್ನಲೆಯಲ್ಲಿ ರಾಜ್ಯದ ಎರಡು ಪ್ರಮುಖ ಪಕ್ಷಗಳಿಗೆ ಮಹಾದಾಯಿ ವಿಚಾರ ದಾಳವಾಗಿ ಬಳಕೆಯಾಗಿದೆ. ಕಾವೇರಿ ವಿಚಾರದಲ್ಲಿ ದೇವರಾಜ್‌ ಅರಸು ಸರಕಾರದಿಂದ ಹಿಡಿದು ಮೊನ್ನೆಮೊನ್ನೆವರೆಗೂ ಪಕ್ಷಾತೀತವಾಗಿ ದನಿ ಎತ್ತಿದ ರಾಜಕಾರಣಿಗಳೀಗ, ಮಹದಾಯಿ ನೀರಿಗಾಗಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಬೆಂಗಳೂರಿಗೆ ಬಂದ ರೈತರನ್ನು ಬೀದಿ ಬೀದಿ ಸುತ್ತಿಸುವ ‘ಹೀನ ರಾಜಕೀಯ’ವನ್ನು ಯಶಸ್ವಿಯಾಗಿ ಮಾಡಿಮುಗಿಸಿದ್ದಾರೆ. ಈ ಮೂಲಕ ಕಾವೇರಿಯಲ್ಲಿ ಒಗ್ಗಟ್ಟು, ಚುನಾವಣೆ ಹತ್ತಿರ ಬಂದಾಗ ಮಹಾದಾಯಿ ಬಿಕ್ಕಟ್ಟು ಎಂದು ಬಿಂಬಿಸುವ ಪ್ರಯತ್ನಕ್ಕೆ […]

  December 27, 2017

Top