An unconventional News Portal.

ಸಮಾಚಾರ
    ...
    dakshinayana-smg-3
    ಸಮಾಚಾರ +

    ಕಳಚಿದ ಕೊಂಡಿಗೆ ಕಾರಣ ಹುಡುಕಿ; ಅದನ್ನು ಮತ್ತೆ ಜೊಡಿಸುವುದೇ ‘ದಕ್ಷಿಣಾಯಣ’!

    ಡಾ.ಕಿರಣ್. ಎಂ ಗಾಜನೂರು “ನಮ್ಮ ತಲೆಮಾರಿನ ಕೆಲಸ, ಕಳಚಿರುವ ಕೊಂಡಿಗೆ ಕಾರಣ ಹುಡುಕಿ; ಅದನ್ನು ಮತ್ತೆ ಜೊಡಿಸುವುದು ಅಷ್ಟೆ” ಎಂಬ ಉಪಮೆಯೊಂದಿಗೆ ನನ್ನ ಅಭಿಪ್ರಾಯ ದಾಖಲಿಸುತ್ತಿದ್ದೇನೆ. ಕಳೆದ ನಾಲ್ಕೈದು ವರ್ಷಗಳಿಂದ ಸಾಂಸ್ಕೃತಿಕ ಲೋಕದಲ್ಲಿ ಆಗುತ್ತಿರುವ ತಲ್ಲಣಗಳನ್ನು ಸಿಮೀತ ಅರ್ಹತೆಯ ನೆಲೆಯಲ್ಲಿ ನೋಡಲು ಪ್ರಯತ್ನಿಸುತ್ತಿದ್ದೇವೆ. ಇವತ್ತಿನ ಸಮಾಜದಲ್ಲಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಲೋಕದಲ್ಲಿನ ತಲ್ಲಣಗಳು  ಕೇವಲ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದ ತಲ್ಲಣಗಳು ಮಾತ್ರ ಅಲ್ಲ! ಬದಲಾಗಿ ಇವು ಜನ ಸಾಮಾನ್ಯರು ಎದುರಿಸುತ್ತಿರುವ ತಲ್ಲಣಗಳೂ ಹೌದು ಎಂಬ ಅಭಿಪ್ರಾಯ ಬಲಗೊಂಡಿದೆ. ನಿಜವಾದ..

    April 10, 2017
    ...
    samachara-1
    ಫೋಕಸ್

    ‘ಓದುಗರು ಏನಂತಾರೆ?’: ಆನ್ ಲೈನ್ ಪತ್ರಿಕೋದ್ಯಮದ ಸಂಪ್ರದಾಯಗಳನ್ನು ಮುರಿದಿದ್ದು ‘ಸಮಾಚಾರ’!

    *ಗುರು ಕುಂಟವಳ್ಳಿ, ಡಿಜಿಟಲ್ ಪತ್ರಕರ್ತ. ಇದು ಸುಮಾರು ಮೂರು ವರ್ಷಗಳ ಹಿಂದಿನ ಮಾತು. ಸೌತ್ ಅಂಡ್ ಸರ್ಕಲ್ ಬಳಿಯ ಆನ್‌ಲೈನ್ ಸುದ್ದಿ ಮಾಧ್ಯಮದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಫೋನ್ ಕರೆ ಬಂತು. ‘ಸಂಜೆ ಸಿಗುವೆ’ ಎಂದೆ. ಅಶೋಕ ಪಿಲ್ಲರ್ ಬಳಿ ಭೇಟಿ, ‘ಏನಪ್ಪ ಸಮಾಚಾರ?’ ಎಂದು ಮಾತು ಶುರು ಆಯಿತು. ವೆಬ್ ಸೈಟ್ ಬಗ್ಗೆ ಒಂದಷ್ಟು ಮಾಹಿತಿ ವಿನಿಮಯವಾಯಿತು. ಕನ್ನಡದಲ್ಲಿ ವೆಬ್‌ಸೈಟ್‌ಗಳು ಎಷ್ಟಿವೆ? ಹೇಗಿವೆ? ಜನ ಓದುತ್ತಾರಾ? ಯಾವ ರೀತಿಯ ವಿಷಯಗಳನ್ನು ಹೇಗೆ ಓದುತ್ತಾರೆ? ಸನ್ನಿ ಲಿಯೋನ್ ಕುರಿತು ಬರೆದರೆ..

    April 2, 2017
    ...
    karnataka-assembly-1
    LIVE

    ‘ಬಜೆಟ್ ವಿಶ್ಲೇಷಣೆ’-1: 49 ಹೊಸ ತಾಲೂಕುಗಳ ಘೋಷಣೆ; ಕೊನೆಗೂ ಸಿಕ್ಕ ‘ಮೋಕ್ಷ’!

    ‘ಸಮಾಚಾರ’ ಓದುಗರಿಗೆ ಶುಭೋದಯ… ಇದು ಬೆಂಗಳೂರಿನಲ್ಲಿರುವ ‘ಸಮಾಚಾರ’ದ ಪುಟ್ಟ ಕಚೇರಿಯಿಂದ ಬರೆಯುತ್ತಿರುವ ‘ಬಜೆಟ್ ಪತ್ರ’. ನಮ್ಮ ತಂಡ ಇವತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುತ್ತಿರುವ ಆಯವ್ಯಯ ಪತ್ರದ ನೇರ ವಿವರಗಳನ್ನು ಇಲ್ಲಿ ನೀಡಲಿದೆ. ಇದು ಬಜೆಟ್‌ ದಿನದ ‘ನೇರ ಪ್ರಸಾರ’! ಟಿವಿಗಳೂ ‘ಫೇಸ್‌ಬುಕ್’ ಲೈವ್ ಮಟ್ಟಕ್ಕೆ ಇಳಿದ ಈ ದಿನಗಳಲ್ಲಿ, ಡಿಜಿಟಲ್ ಮಾಧ್ಯಮವೊಂದು ‘ಲೈವ್’ ನೀಡಲು ಇರುವ ಸಾಧ್ಯತೆಗಳನ್ನು ಅನ್ವೇಷಿಸಬೇಕಿದೆ. ಈ ಸಮಯದಲ್ಲಿ ಇದನ್ನು ‘ನೇರ ಪ್ರಸಾರ’ ಎಂದು ಕರೆಯಬಹುದಾದರೂ, ನಿಜಕ್ಕೂ ಇದು ತಂತ್ರಜ್ಞಾನ ಮತ್ತು ಸುದ್ದಿ ಬೆಳವಣಿಗೆಯೊಂದರ..

    March 15, 2017
    ...
    irom-sharmila-manipu
    ದೇಶ

    ಇರೋಮ್ ಶರ್ಮಿಳಾ ಸಂದರ್ಶನ: ‘ಜನ ಬದಲಾವಣೆ ಬಯಸುತ್ತಾರೆ; ಆದರೆ ಪಾಲ್ಗೊಳ್ಳುವಿಕೆ ಕಡಿಮೆ’

    ಸುಮಾರು 16 ವರ್ಷಗಳ ಕಾಲ ಸೇನಾ ವಿಶೇಷಾಧಿಕಾರ ಕಾಯ್ದೆಯನ್ನು ವಿರೋಧಿಸಿ ಸತ್ಯಾಗ್ರಹ ನಡೆಸಿದ್ದವರು ಇರೋಮ್ ಶರ್ಮಿಳಾ. ಮುಂದಿನ ತಿಂಗಳು ಮಣಿಪುರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅವರ ಸ್ವತಂತ್ರ ಪಕ್ಷ ‘ಪೀಪಲ್ ರಿಸರ್ಜೆನ್ಸ್ ಅಂಡ್ ಜಸ್ಟಿಸ್ ಅಲಯನ್ಸ್ (PRJA) ಪಕ್ಷ ಸ್ಪರ್ಧಿಸುತ್ತಿದೆ. ಮುಖ್ಯಮಂತ್ರಿ  ಒ. ಇಬೋಬಿ ಸಿಂಗ್‌ ವಿರುದ್ಧ ಇರೋಮ್ ಶರ್ಮಿಳಾ ಅಖಾಡಕ್ಕೆ ಇಳಿಯುವ ಪ್ರಕಟಣೆ ಹೊರಬಿದ್ದಿದೆ. ಜತೆಗೆ, ಮಣಿಪುರ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರಿಗೆ ಪಕ್ಷ ಟಿಕೆಟ್ ನೀಡಿದೆ. ವಿಶೇಷ ಅಂದರೆ, ಮುಂದಿನ ಅರ್ಧ ಶತಮಾನದ ಯೋಜನೆ..

    January 18, 2017
    ...
    feature-image
    ಸಮಾಚಾರ +

    ‘ಓದುಗರಿಗೊಂದು ಮೊದಲ ಪತ್ರ’: ಅಂದಹಾಗೆ, ಯಾರದ್ದು ಈ ‘ಸಮಾಚಾರ’?

    ಆತ್ಮೀಯ ಓದುಗರೇ,  ನಾವು ನಿಮಗಾಗಿ ಈ ಪತ್ರವನ್ನು ಬರೆಯುತ್ತಿರುವ ಹೊತ್ತಿಗೆ ‘ಸಮಾಚಾರ’ 9 ತಿಂಗಳು ತುಂಬಿ ಹತ್ತನೇ ತಿಂಗಳಿಗೆ ಕಾಲಿಟ್ಟಿದೆ. ಮಗುವೊಂದು ತಾಯಿಯ ಮಡಿಲಿನಿಂದ ಹೊರಜಗತ್ತಿಗೆ ಕಾಲಿಡಲು ತೆಗೆದುಕೊಳ್ಳುವ ಸಮುಯ ಇದು. ಈವರೆಗೂ ‘ಸಮಾಚಾರ’ವನ್ನು ನಾವೇ ನಮ್ಮ ಗರ್ಭದಲ್ಲಿ ಇಟ್ಟು ಪೋಷಿಸಿ ಬೆಳೆಸಿದ್ದೀವಿ. ಇದೀಗ ಅದು ಹೊರ ಜಗತ್ತಿಗೆ ಕಾಲಿಡುವ ಸಮಯ. ಅಂದರೆ, ನಮ್ಮ ಪರಿಧಿಯನ್ನು ದಾಟಿ ಇನ್ನಷ್ಟು ಪಾರದರ್ಶಕವಾಗುವ ಕಾಲ ಇದು. ಈ ವರ್ಷದ ಆರಂಭದಲ್ಲಿ ಕರ್ನಾಟಕದ ನಾನಾ ಸುದ್ದಿಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕದೊಂದು ಪತ್ರಕರ್ತರ ತಂಡ,..

    January 7, 2017
    ...
    Untitled-1
    ವಿಚಾರ

    ಇ. ರಾಘವನ್ ನೆನಪಿಸಿಕೊಳ್ಳುತ್ತಿರುವ ಈ ವೇಳೆಯಲ್ಲಿ- Welcome to ‘ಸಮಾಚಾರ’

    ‘ಪತ್ರಿಕೋದ್ಯಮ ನಿಂತ ನೀರಲ್ಲ. ಆದರೆ ಪತ್ರಕರ್ತರು ಕಾಲಕ್ಕಿಂತ ಮುಂದೆಯೂ ಇರಬಾರದು, ಕಾಲದಿಂದ ಹಿಂದೆಯೂ ಉಳಿಯಬಾರದು. ಕಾಲದ ಜತೆಗೆ ನಡೆದುಕೊಂಡು ಹೋಗಬೇಕು’ ಎನ್ನುತ್ತಿದ್ದವರು ಇ. ರಾಘವನ್. ಆಗ ಅವರಿಗೆ 62 ವರ್ಷ ವಯಸ್ಸಾಗಿತ್ತು. ಟೈಮ್ಸ್ ಆಫ್ ಇಂಡಿಯಾ, ಎಕನಾಮಿಕ್ ಟೈಮ್ಸ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದವರು. ಅವರ ಕೊನೆಯ ದಿನಗಳಲ್ಲಿ ಕನ್ನಡದ ದಿನ ಪತ್ರಿಕೆ, ‘ವಿಜಯ ಕರ್ನಾಟಕ’ದ ಸಂಪಾದಕರಾಗಿದ್ದರು. ಬಹುಶಃ ಕನ್ನಡ ಪತ್ರಿಕೋದ್ಯಮಕ್ಕೆ ಸಿಕ್ಕ ಅಪರೂಪದ ಸಂಪಾದಕ ಅವರು. ತಮ್ಮ ವೃತ್ತಿಬದುಕಿನ ಕೊನೆಯ ದಿನದವರೆಗೂ ಅವರು ಪತ್ರಕರ್ತರಾಗಿಯೇ ಉಳಿದುಕೊಂಡರು. ಭ್ರಷ್ಟರಾಗಲಿಲ್ಲ; ರಾಜಕೀಯ..

    April 2, 2016
    ...
    Korowai-Tree-houses-2
    ಸಮಾಚಾರ +

    ನರಭಕ್ಷಕರ ಬದುಕೇ ಒಂದು ನಮೂನೆ; ಆಗಸದಲ್ಲೇ ಇವರ ಅರಮನೆ!

    ಇದು ನರಭಕ್ಷಣೆಯನ್ನು ಇವತ್ತಿಗೂ ಪಾಲಿಸುತ್ತಿರುವ ಬುಡಕಟ್ಟು ಸಮುದಾಯದ  ಕತೆ. ಇವರ ಪಾಲಿಗೆ ಬಿಳಿ ಚರ್ಮದ ಮುನುಷ್ಯರು ರಾಕ್ಷಸರ ಭೂತಗಳು! ಹಾಗೆಯೇ, ತಮ್ಮದೇ ಸಮುದಾಯದವರನ್ನೂ ಕೊಂದು ತಿಂದು, ಅವರ ತಲೆ ಬುರಡೆಗಳನ್ನು ಇಟ್ಟುಕೊಳ್ಳುವುದು ಇವರ ಪದ್ಧತಿ. ದಟ್ಟ ಕಾಡಿನ ನಡುವೆ, ಪ್ರಕೃತಿ ಸವಾಲುಗಳನ್ನು ಎದುರಿಸಲು ಅವರು ಕಂಡುಕೊಂಡಿರುವ ಅವರ ಬದುಕಿನ ಒಳನೋಟಗಳು ಇಲ್ಲಿವೆ…   ವಾತಾವರಣದ ಅಗತ್ಯಕ್ಕೆ ತಕ್ಕಂತೆ ಬದುಕು ರೂಪುಗೊಳ್ಳುತ್ತದೆ. ಜೀವಸಂಕುಲಗಳ ಪೈಕಿ ಬಹುತೇಕ ಜೀವಿಗಳಿಗೆ ಇದು ನಿಸರ್ಗ ಸಹಜವಾಗಿ ಒಲಿದು ಬಂದಿರುವ ಕಲೆ. ಇದು  ಇಂಡೋನೇಷ್ಯಾದ ಪುಪುವಾದ..

    February 3, 2016

Top