An unconventional News Portal.

ಸಂಶೋಧನೆ
  ...

  ‘ನ್ಯೂಸ್‌ ಇಲ್ಲದ ನ್ಯೂಸ್‌ ಫೀಡ್‌’: ಫೇಸ್‌ಬುಕ್‌ ಹೊಸ ನಿರ್ಧಾರದ ಮೊದಲ ಹೊಡೆತ ಬೀಳುವುದು ಮಾಧ್ಯಮ ಸಂಸ್ಥೆಗಳಿಗೆ!

  “ಫೇಸ್‌ಬುಕ್‌ ತನ್ನ ನ್ಯೂಸ್ ಫೀಡ್ ಗುಣಲಕ್ಷಣಗಳಿಗೆ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಇದರಿಂದ ಫೇಸ್‌ಬುಕ್‌ ಬಳಕೆದಾರರು ಇನ್ನು ಮೇಲೆ ವಹಿವಾಟು, ಬ್ರಾಂಡ್ ಮತ್ತು ಸುದ್ದಿಗಳಿಗಿಂತ ತಮ್ಮ ಕುಟುಂಬ ಮತ್ತು ಸ್ನೇಹಿತರಿಂದ ಹೆಚ್ಚಿನ ಅಪ್‌ಡೇಟ್‌ ಅನ್ನು ಫೇಸ್‌ಬುಕ್‌ನಲ್ಲಿ ನೋಡಬಹುದಾಗಿದೆ,” ಎಂದು ಫೇಸ್ ಬುಕ್ ಸ್ಥಾಪಕ ಮತ್ತು ಸಿಇಓ ಮಾರ್ಕ್ ಝುಕರ್ ಬರ್ಗ್ ಹೇಳಿದ್ದಾರೆ. ಹೊಸ ವರ್ಷದ ನಿರ್ಣಯಗಳ ರೀತಿಯಲ್ಲಿ ಹೊರಬಿದ್ದಿರುವ ಜನಪ್ರಿಯ ಸಾಮಾಜಿಕ ಜಾಲತಾಣದ ಸಂಸ್ಥಾಪಕರ ಈ ಬರಹ ಜಗತ್ತಿನಾದ್ಯಂತ ಕುತೂಹಲವನ್ನೂ, ಚರ್ಚೆಗಳನ್ನು ಏಕಕಾಲಕ್ಕೆ ಹುಟ್ಟು ಹಾಕಿದೆ. “ಸಾರ್ವಜನಿಕರಿಗೆ ಉಪಯೋಗವಾಗುವ […]

  January 23, 2018
  ...

  ಆರ್‌ಎಸ್‌ಎಸ್‌ ಅಂಗಸಂಸ್ಥೆಯಿಂದ ‘ಉತ್ತಮ ಸಂತತಿ’ ಬೆಳೆಸುವ ಯೋಜನೆ: ತಜ್ಞರು ಏನಂತಾರೆ?

  ನೀವು ಕಡಿಮೆ ಬುದ್ದಿವಂತರಾ? ನೋಡಲು ಕಪ್ಪಗಿದ್ದೀರಾ? ಆಕಾರದಲ್ಲಿ ಕುಳ್ಳಗಿದ್ದೀರಾ? ಹೇಗಿದ್ದರೂ ಇರಿ, ನಿಮ್ಮ ಮಗು ಬೆಳ್ಳಗೆ, ಉದ್ದಕ್ಕೆ, ಅತಿ ಬುದ್ದಿವಂತನಾಗಿ (ಬುದ್ದಿವಂತಳಾಗಿ) ಹುಟ್ಟಬೇಕಾ? ಹಾಗಾದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ನ ಅಂಗಸಂಸ್ಥೆಯೊಂದು ನಡೆಸುತ್ತಿರುವ ‘ಗರ್ಭ ವಿಜ್ಞಾನ ಅನುಸಂಧಾನ ಕೇಂದ್ರ’ಗಳಿಗೆ ಭೇಟಿ ನೀಡಿ ಮತ್ತು ಶುದ್ಧೀಕರಣದಲ್ಲಿ ಪಾಲ್ಗೊಳ್ಳಿ! ಓದಲು ವಿಚಿತ್ರ ಅನ್ನಿಸುವಂತಹ, ಜೆನಟಿಕ್ಸ್ ಎಂದು ಕರೆಯುವ ವಂಶವಾಹಿನಿ ವಿಜ್ಞಾನಕ್ಕೇ ಸವಾಲು ಒಡ್ಡುವಂತಹ ಪ್ರಯೋಗವೊಂದರಲ್ಲಿ ಯಶಸ್ಸು ಕಂಡಿದ್ದೇವೆ ಎಂದು ‘ಆರೋಗ್ಯ ಭಾರತಿ’ ಎಂಬ ಸಂಘಪರಿವಾರ ಸಂಸ್ಥೆಯೊಂದು ಪ್ರಕಟಿಸಿದೆ. ಈಗಾಗಲೇ ಗುಜರಾತಿನಲ್ಲಿ […]

  May 8, 2017
  ...

  ‘ಸ್ಟೋರಿ ಆಫ್ ಮಾರ್ಸ್ ಮಿಶನ್’: ಕುತೂಹಲ ಮೂಡಿಸಿದ ‘ಅಯಸ್ಕಾಂತೀಯ ಹೊದಿಕೆ’!

  ಮಂಗಳಯಾನಕ್ಕೆ ಸಿದ್ಧತೆಗಳು ನಡೆಯುತ್ತಿರುವ ಹೊತ್ತಿಗೇ ವಿಜ್ಞಾನಿಗಳು ಹೊಸ ಆಲೋಚನೆಯೊಂದನ್ನು ಹರಿಬಿಟ್ಟಿದ್ದಾರೆ. ಮಂಗಳ ಗ್ರಹದ ವಾತಾವರಣವನ್ನು ಕಾಪಾಡಲು ಬೃಹತ್ ಗಾತ್ರದ ಅಯಸ್ಕಾಂತೀಯ ಹೊದಿಕೆಯನ್ನು ರೂಪಿಸಿದರೆ, ಮುಂದಿನ ದಿನಗಳಲ್ಲಿ ಕೆಂಪು ಗ್ರಹದ ಮೇಲೂ ಮನುಷ್ಯ ಮನೆ ಮಾಡಿಕೊಂಡಿರಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2030ರ ಹೊತ್ತಿಗೆ ಮೊದಲ ಬಾರಿಗೆ ಮನುಷ್ಯನನ್ನು ಮಂಗಳ ಗ್ರಹದ ಮೇಲೆ ಇಳಿಸಲು ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಸಿದ್ಧತೆ ಮಾಡಿಕೊಳ್ಳುತ್ತಿದೆ. 90ರ ದಶಕದಲ್ಲಿ ಶುರುವಾದ ಈ ಯೋಜನೆಗಾಗಿ ಸಾಕಷ್ಟು ಪ್ರಯೋಗಗಳು ಜಾರಿಯಲ್ಲಿವೆ. ಹೀಗಿರುವಾಗಲೇ, ಬೃಹತ್ ಅಯಸ್ಕಾಂತೀಯ […]

  March 7, 2017
  ...

  ಜೀನಿಯಸ್ ಮ್ಯಾನ್- 2: ವಯಸ್ಸಲ್ಲದ ವಯಸ್ಸಲ್ಲಿ ಐನ್‌ಸ್ಟೈನ್ ಬರೆದ ಸಿದ್ದಾಂತವನ್ನು ಅರಗಿಸಿಕೊಳ್ಳುವವರು ಯಾರೂ ಇರಲಿಲ್ಲ!

  ವಿಜ್ಙಾನಿ ಐನ್‌ಸ್ಟೈನ್‌ರನ್ನು ಮನುಕುಲ ಕಂಡ ಅತ್ಯಂತ ಬುದ್ಧಿವಂತರು; ಅವರಲ್ಲೇನೋ ವಿಶೇಷವಿದೆ ಎಂದು ಕರೆಯುವುದಕ್ಕೆ ಅವರು ವಿಜ್ಞಾನದ ನಂಬಿಕೆಯ ಬುಡವನ್ನು ಅಲ್ಲಾಡಿಸಿದ್ದು ಪ್ರಮುಖ ಕಾರಣ. ಐನ್‌ಸ್ಟೈನ್ಗೂ ಮೊದಲು ನ್ಯೂಟನ್ ತನ್ನ ಸಿದ್ಧಾಂತದಲ್ಲಿ ವಿಶ್ವದ ಯಾವುದೇ ಎರಡು ವಸ್ತುಗಳ ನಡುವೆ ಗುರುತ್ವದ ಆಕರ್ಷಣಾ ಬಲ ವರ್ತಿಸುತ್ತಲೇ ಇರುತ್ತದೆ ಎಂದಿದ್ದ. ಆದರೆ ಅದನ್ನು ತಲೆ ಕೆಳಗು ಮಾಡಿದ ಐನ್‌ಸ್ಟೈನ್ ‘ಸಾಮಾನ್ಯ ಸಾಪೇಕ್ಷ ಸಿದ್ಧಾಂತ’ (ವಿಶೇಷ ಸಾಪೇಕ್ಷ ಸಿದ್ಧಾಂತದ ಮುಂದುವರಿದ ಭಾಗ) ಮಂಡಿಸಿದರು. ಆ ಸಿದ್ಧಾಂತ ಏನು ಅದನ್ನು ನಾವಿಲ್ಲಿ ವಿವರಿಸುತ್ತಿಲ್ಲ (ಹೆಚ್ಚಿನ ಓದಿಗೆ […]

  December 27, 2016
  ...

  ಇಂತಿ ಪ್ರೀತಿಯ ‘ಬ್ಯಾಡ್ ಬಾಯ್’: ರಹಸ್ಯ ಬಿಚ್ಚಿಟ್ಟ ಹೊಸ ಸಂಶೋಧನೆ!

  ಹಿಂದೆಲ್ಲಾ ಮದುವೆಯಾಗದ ಹೆಣ್ಣು ಮಕ್ಕಳು ತಮ್ಮ ವರನನ್ನು ಹುಡುಕುವಾಗ ಕುಡಕನಲ್ಲದವನನ್ನು ಕೊಡಪ್ಪಾ ಅಂತಾ ದೇವರ ಮೊರೆ ಹೋಗ್ತಾ ಇದ್ದರು. ಕೆಟ್ಟಚಟಗಳಿಗೆ ಬಲಿಯಾಗದೇ ಇದ್ದರೆ ಸಂಸಾರ ನೆಮ್ಮದಿಯಿಂದ ಇರುತ್ತದೆ ಎಂದುದೇ ಇದಕ್ಕೆ ಕಾರಣ. ಆದರೆ ಕಾಲ ಸಂಪೂರ್ಣ ಬದಲಾಗಿದೆ. ಈಗಿನ ಹುಡುಗಿಯರ ಮದುವೆಯ ಬೇಡಿಕೆಗಳೂ ಬದಲಾಗಿವೆ. ಕುಡುಕನಲ್ಲದ ಗಂಡು ಇರಲಿ ಎಂಬ ಬೇಡಿಕೆಗಳ ಜಾಗದಲ್ಲಿ ‘ಬ್ಯಾಡ್ ಬಾಯ್’ಗಳು ಜಾಗ ಪಡೆದುಕೊಂಡಿದ್ದಾರೆ. ಹಾಗಂತ ಹೇಳುತ್ತಿವೆ ಈ ಸಂಶೋಧನೆ. ಇತ್ತೀಚೆಗೆ ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯ (ಈ ವಿಶ್ವವಿದ್ಯಾನಿಲಯ ಕರ್ನಾಟಕದ ಸೈದ್ಧಾಂತಿಕ ವರ್ಗಕ್ಕೆ ಪರಿಚಿತ ಹೆಸರು!)  ಸಂಶೋಧನೆಯೊಂದನ್ನು […]

  May 21, 2016

Top