An unconventional News Portal.

ಶಿಕ್ಷಣ
    ...
    pu-board
    ರಾಜ್ಯ

    ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಪಿಯುಸಿ ಉಪನ್ಯಾಸಕರು; ಬಿ.ಎಡ್ ಗೊಂದಲ ಮುಗಿಯುವುದು ಯಾವಾಗ?

    ಕರ್ನಾಟಕ ರಾಜ್ಯ ಸರಕಾರದ ‘ಬಿ.ಎಡ್ ಕಡ್ಡಾಯ’ ಗೊಂದಲ ನಿವಾರಣೆಯಾಗುವಂತೆ ಕಾಣಿಸುತ್ತಿಲ್ಲ. ಪಿಯು ಉಪನ್ಯಾಸಕರಿಗೆ ಬಿ.ಎಡ್ ಕಡ್ಡಾಯ ನಿಯಮದಿಂದ ಇದೀಗ 2013ರಲ್ಲಿ ನೇಮಕೊಂಡವರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಉಪನ್ಯಾಸಕರಿಗೆ ಬಿ.ಎಡ್ ಕಲಿಯಲು ಸರಿಯಾದ ಅವಕಾಶವನ್ನೂ ಸೃಷ್ಟಿಸದೆ ಪದವಿಪೂರ್ವ ಶಿಕ್ಷಣ ಇಲಾಖೆ ಗೊಂದಲ ನಿರ್ಮಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಏನು ಸಮಸ್ಯೆ? 2013ರಲ್ಲಿ ಪಿಯುಸಿ ಉಪನ್ಯಾಸಕರ ನೇಮಕಾತಿಗಾಗಿ ಸುತ್ತೋಲೆ ಹೊರಡಿಸಲಾಗಿತ್ತು. ಈ ವೇಳೆ ವಿಜ್ಞಾನದ ಕೆಲವು ವಿಷಯಗಳಿಗೆ ಬಿ.ಎಡ್ ಮುಗಿಸಿದ ಉಪನ್ಯಾಸಕರ ಕೊರತೆ ಕಾಣಿಸಿಕೊಂಡಿತು. ಆಗ ನಿಯಮಾವಳಿ..

    January 9, 2017
    ...
    DSC_4953
    SPECIAL SERIES

    ದೇವದಾಸಿಯರ ನಾಡಿನಲ್ಲಿ- ಭಾಗ 2: ಒಂದಷ್ಟು ಆಶಯ; ಮತ್ತೊಂದಿಷ್ಟು ವಿಷಾದ…

    ತಾಯಿ ಎದೆ ಹಾಲು ಕುಡಿಯುತ್ತಿದ್ದ ಈಕೆಗೆ ಮುತ್ತು ಕಟ್ಟಿ ದೇವದಾಸಿ ಪಟ್ಟಕ್ಕೇರಿಸಲಾಗಿತ್ತು. ಆದರೆ ಸದ್ಯ ಈಕೆ ಸ್ಥಳೀಯ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಇಂತಹ ಸಕಾರತ್ಮಕ ಬೆಳವಣಿಗೆಗಳ ಆಚೆಗೂ ದೇವದಾಸಿ ಪದ್ಧತಿ ಅದರ ಪಾಡಿಗದು ನಡೆದುಕೊಂಡು ಹೋಗುತ್ತಿದೆ. ಯಾಕೀಗೆ ಎಂಬುದಕ್ಕೆ ನಮ್ಮ ಅಭಿವೃದ್ಧಿ ಅಥವಾ ಆಧುನಿಕ ಕಾನೂನುಗಳಲ್ಲಿ ಎಲ್ಲದಕ್ಕೂ ಪರಿಹಾರಗಳಿಲ್ಲ ಎಂಬುದೇ ಕಾರಣ… ಭಾಗ-2: ಆಕೆಯ ಹೆಸರು ರಾಜಿ(ಹಾಗಂದುಕೊಳ್ಳಬಹುದು); ವಯಸ್ಸು 21. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಸಮೀಪದ ಗ್ರಾಮ ಈಕೆಯ ಊರು. ಇದು 20 ವರ್ಷಗಳ ಹಿಂದೆ ನಡೆದ..

    August 27, 2016
    ...
    free-school-under-bridge-1
    ದೇಶ

    ಫಲಿತಾಂಶದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ನೆನಪಾದ ದೇಶದ ಮೊದಲ ‘ಅಂಡರ್ ಬ್ರಿಡ್ಜ್’ ಶಾಲೆ!

    ತಮ್ಮ ಕಿರಾಣಿ ಅಂಗಡಿಯನ್ನು ತೆರೆಯುವ ಮುನ್ನ, ಪ್ರತಿ ದಿನ ಬೆಳಗ್ಗೆ 46 ವರ್ಷದ ರಾಜೇಶ್ ಕುಮಾರ್ ಶರ್ಮಾ ದಿಲ್ಲಿಯ ಮೆಟ್ರೊ ಮೇಲ್ಸೇತುವೆ ಬಳಿ ಹೋಗುತ್ತಾರೆ. ಮೇಲ್ಸೇತುವೆ ಬಳಿ ಅಂದರೆ ಅದರ ಅಡಿಯಲ್ಲಿರುವ ಅವರ ಕನಸಿನ ತಾಣಕ್ಕೆ! ಅಲ್ಲೊಂದು ಶಾಲೆ ನಡೆಯುತ್ತಿದೆ. ಶಾಲೆ ಎಂದರೆ ಕಟ್ಟಡವಿಲ್ಲ, ಗೋಡೆ ಇಲ್ಲ, ಆಟದ ಮೈದಾನವಿಲ್ಲ. ಅಲ್ಲಿ ಪ್ರತಿ ದಿನ ಸುಮಾರು 300 ಮಕ್ಕಳು, ಹೆಚ್ಚಾಗಿ ವಲಸೆ ಕಾರ್ಮಿಕರ ಕುಟುಂಬದ ಪುಟಾಣಿಗಳಿಗೆ ಶಿಕ್ಷಣ ಕಲಿಯುವ ಪುಟ್ಟ ಅವಕಾಶವೊಂದನ್ನು ಕಲ್ಪಿಸಲಾಗಿದೆ. “ನಮ್ಮ ಈ ಶಾಲೆಗೆ..

    May 17, 2016
    ...
    india-wed-1
    ರಾಜ್ಯ

    ಓದಿಗಾಗಿ ನಿಗದಿಯಾಗಿದ್ದ ಮದುವೆ ನಿರಾಕರಣೆ: ಹಾಸನ ಯುವತಿಯ ದಿಟ್ಟ ನಡೆ

    ಅರಕಲಗೂಡು ಜಯಕುಮಾರ್ ಮದುವೆ ಬಂಧನಕ್ಕೆ ಒಳಗಾಗಬೇಕಿದ್ದ ಯುವತಿ ಶಿಕ್ಷಣ ಮುಂದುವರಿಸುವ ಹಂಬಲದಿಂದ ನಿಗದಿಯಾಗಿದ್ದ ಮದುವೆಯನ್ನೇ ಮುರಿದುಕೊಂಡ ಘಟನೆ ಅರಕಲಗೂಡು ತಾಲೂಕಿನಲ್ಲಿ ಬುಧವಾರ ನಡೆದಿದೆ. ಏಪ್ರಿಲ್ 27ರಂದು ಹಸೆಮಣೆ ಏರಬೇಕಿದ್ದ ತಾಲೂಕಿನ ಮೇನಕ (ಹೆಸರು ಬದಲಿಸಿದೆ) ಮದುವೆಯನ್ನು ನಿರಾಕರಿಸಿದ ಯುವತಿ. ಅಧಿಕಾರಿಗಳ ಮಧ್ಯ ಪ್ರವೇಶಿಸುವಂತೆ ಯುವತಿ ಕೋರಿದ ಹಿನ್ನೆಲೆಯಲ್ಲಿ ಮದುವೆ ನಿಂತು ಹೋಗಿದೆ. ಕೊನೆಗೆ, ಪೋಷಕರನ್ನೂ ಕರೆಸಿ ಮಾತನಾಡಿದ ಅಧಿಕಾರಿಗಳು ಮಗಳನ್ನು ಅವರ ಬಳಿ ಕಳಿಸಿಕೊಟ್ಟಿದ್ದಾರೆ. ಪದವಿ ಓದಿಸುವ ಭರವಸೆ ಸಿಕ್ಕ ನಂತರ ಯುವತಿ ಮನೆಗೆ ಹಿಂತಿರುಗಿದ್ದಾಳೆ. ಘಟನೆ ವಿವರ:  ಮೈಸೂರು..

    April 28, 2016
    ...
    empower-university-1
    ಫೋಕಸ್

    ಇದು ಅವರ ‘ಎಂಪವರ್’ಗಾಗಿ ತೆರೆದ ಮೊದಲ ವಿಶ್ವವಿದ್ಯಾನಿಲಯ!

    ಜಗತ್ತಿನಾದ್ಯಂತ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿರುವ ಮಹಿಳೆಯರು, ಯುವತಿಯರು ಹಾಗೂ ಮಕ್ಕಳ ಸಂಖ್ಯೆ ಇವತ್ತಿಗೆ, 1. 40 ಕೋಟಿ ಎಂಬುದು ವಿಶ್ವಸಂಸ್ಥೆ ವರದಿಯೊಂದು ಹೇಳುತ್ತದೆ. ಇದರಲ್ಲಿ 2.5 ಲಕ್ಷ ಲೈಂಗಿಕ ಕಾರ್ಯಕರ್ತೆಯರು ಥಾಯ್ಲೆಂಡ್ ದೇಶವೊಂದರಲ್ಲೇ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕಡೆ ಇರುವಂತೆಯೇ, ಇಲ್ಲಿಯೂ ಕೂಡ ಲೈಂಗಿಕ ಕಾರ್ಯಕರ್ತೆಯನ್ನು ಸಮಾಜದ ಪಿಡುಗು ಎಂಬಂತೆ ನೋಡುವ ಸಾಮಾಜಿಕ ವಾತಾವರಣವಿದೆ. ಇದನ್ನು ಹೋಗಲಾಡಿಸುವುದು ಸದ್ಯದ ಸ್ಥಿತಿಯಲ್ಲಿ ಸವಾಲು. ಆದರೆ, ಅಂತಹದೊಂದು ಸವಾಲನ್ನು ಸ್ವೀಕರಿದ ಗಟ್ಟಿಗಿತ್ತಿ ಇದ್ದಾರೆ- ಆಕೆಯ ಹೆಸರು ಚಂತವಿಪಾ ಅಪಿಸುಕ್. ಆಕೆಯ ರೋಚಕ ಕತೆಯೊಂದನ್ನು..

    April 22, 2016
    ...
    ayub master
    ಫೋಕಸ್

    ಪಾಕಿಸ್ತಾನದಲ್ಲೊಂದು ಪಾರ್ಕ್ ಶಾಲೆ ಮತ್ತು ಅಪರೂಪದ ಆಯೂಬ್ ಮೇಸ್ಟ್ರು!

    ಪ್ರತಿ ನಿತ್ಯ ಮಧ್ಯಾಹ್ನ 3 ಗಂಟೆ ಆಯ್ತು ಅಂದ್ರೆ ಸಾಕು ಆ ವ್ಯಕ್ತಿ ತನ್ನ ಸೈಕಲ್ ಏರಿ ಹೊರಟು ಬಿಡ್ತಾರೆ. ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿರುವ ಪಾರ್ಲಿಮೆಂಟ್ ಭವನದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಪಾರ್ಕ್ ಕಡೆಗೆ ಅವರ ಪಯಣ. ಆ ಪಾರ್ಕ್ ನಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳು ಈ ಹಿರಿ ಜೀವದ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಪುಸ್ತಕ ಹಿಡಿದುಕೊಂಡು.. ಭವಿಷ್ಯದ ಕನಸುಗಳನ್ನು ತಮ್ಮೊಳಗೆ ಅದುಮಿಟ್ಟುಕೊಂಡು.. ಆ ಪುಟಾಣಿ ಮಕ್ಕಳಿಗೆಲ್ಲಾ ಮೊಹಮ್ಮದ್ ಅಯೂಬ್ ಅಂದ್ರೆ ಗೊತ್ತಾಗಲ್ಲ. ಅವರಿಗೆ ಗೊತ್ತಿರೋದು ಮಾಸ್ಟರ್ ಅಯೂಬ್ ಮಾತ್ರ…

    April 12, 2016

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top