An unconventional News Portal.

ಶಶಿಕಲಾ
  ...

  ‘ಅಮ್ಮ’ನಿಲ್ಲದ ಒಂದು ವರ್ಷ: ತಮಿಳುನಾಡು ಸಾಕ್ಷಿಯಾದ ಆರು ಪ್ರಮುಖ ರಾಜಕೀಯ ಬೆಳವಣಿಗೆಗಳು

  ‘ಅಮ್ಮ’ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ನಟಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಒಂದು ವರ್ಷ ತುಂಬಿದೆ. ನೆರೆರಾಜ್ಯದ ರಾಜಕೀಯದಲ್ಲಿ ದಶಕಗಳಿಂದ ಪ್ರಾಬಲ್ಯ ಸಾಧಿಸಿದ, ಅಧಿಕಾರದ ಗದ್ದುಗೆಯಲ್ಲಿ 6 ವರ್ಷಗಳನ್ನು ಕಳೆದಿದ್ದ ಕರ್ನಾಟಕ ಮೂಲದ ಜಯಲಲಿತಾ ಕಳೆದ ವರ್ಷ 2016, ಡಿ. 5ರಂದು ಚೆನ್ನೈನಲ್ಲಿ ಅಸುನೀಗಿದ್ದರು. ‘ಅಮ್ಮ’ನಿಂದಾಗಿ ತಮಿಳುನಾಡಿನ ರಾಜಕೀಯ ಗತಿ ಬದಲಿಸಿತ್ತು. ಇದೀಗ ‘ಅಮ್ಮ’ನಿಲ್ಲದೆಯೂ ಇಲ್ಲಿನ ರಾಜಕೀಯ ಪಥ ಬದಲಿಸಿದೆ. ಕಳೆದ ಒಂದು ವರ್ಷದಲ್ಲಿ ತಮಿಳುನಾಡಿನ ರಾಜಕೀಯದಲ್ಲಾದ ಆರು ಮಹತ್ವದ ಬದಲಾವಣೆಗಳನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ. ಈ ಬದಲಾವಣೆಗಳಿಗೂ, […]

  December 5, 2017
  ...

  ಶಶಿಕಲಾ, ತೆಲಗಿ ಆಚೆಗೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ ರೂಪ ಪತ್ರ

  ರಾಜ್ಯದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆಂತರಿಕ ಪರಿಸ್ಥಿತಿಯ ಕುರಿತು ಡಿಐಜಿ ರೂಪಾ ತಮ್ಮ ಮೇಲಾಧಿಕಾರಿಗೆ ಬರೆದ ಪತ್ರ ಈಗ ಚರ್ಚೆಗೆ ಗ್ರಾಸವಾಗಿದೆ. ಪತ್ರದಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ನಕಲಿ ಛಾಪಾ ಕಾಗದ ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕರೀಂ ಲಾಲ್ ತೆಲಗಿ ಹೆಸರೂ ಇರುವುದರಿಂದ ಸುದ್ದಿಗೆ ರಾಷ್ಟ್ರೀಯ ಆಯಾಮಯೂ ದೊರಕಿದೆ. ಒಟ್ಟು ನಾಲ್ಕು ಪುಟಗಳ ಪತ್ರದ ಜತೆಗೆ 6 ಪುಟಗಳ ಜೈಲಿನ ವೈದ್ಯಾಧಿಕಾರಿಗಳ ಪತ್ರವನ್ನೂ ಮೇಲಾಧಿಕಾರಿಗೆ ಸಲ್ಲಿಸಿದ್ದಾರೆ ಡಿಐಜಿ ರೂಪಾ. ವಿಶೇಷ ಅಂದರೆ ಪತ್ರದಲ್ಲಿ […]

  July 13, 2017
  ...

  ವೈವಿಧ್ಯಮಯ ಸಿಎಂಗಳನ್ನು ಕಂಡಿದ್ದ ‘ದ್ರಾವಿಡ ಗದ್ದುಗೆ’ & ಪಳನಿಸ್ವಾಮಿ ಎಂಬ ‘ಪ್ರಾಕ್ಸಿ’!

  ನಾಯಕತ್ವಕ್ಕೆ ತಮ್ಮನ್ನು ತಾವು ಸಂಪೂರ್ಣವಾಗಿ ಒಪ್ಪಿಸಿಕೊಂಡರೆ ಮಾತ್ರ ಅಧಿಕಾರ ಎಂಬುದು ತಮಿಳುನಾಡಿನ ರಾಜಕಾರಣದಲ್ಲಿ ಮತ್ತೊಮ್ಮೆ ಸಾಭೀತಾಗಿದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ನಂತರ ಪಕ್ಷವನ್ನು ಹತೋಟಿಗೆ ತೆಗೆದುಕೊಂಡ ಆಪ್ತೆ ಶಶಿಕಲಾ ಜೈಲು ಪಾಲಾಗಿದ್ದಾರೆ. ಆದರೆ, ತಮ್ಮ ನೆರಳನ್ನು ತಮಿಳುನಾಡಿನ ಮುಖ್ಯಮಂತ್ರಿ ಗಾಧಿಯ ಮೇಲೆ ಕೂರಿಸುವಲ್ಲಿ ಅವರ ಯಶಸ್ವಿಯಾಗಿದ್ದಾರೆ. ಗುರುವಾರ ನೂತನ ಮುಖ್ಯಮಂತ್ರಿಯಾಗಿ ಎಡಿಪಡ್ಡಿ ಕೆ. ಪಳನಿಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜತೆಗೆ ಇನ್ನೂ 30 ಜನ ಎಐಎಡಿಎಂಕೆ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ […]

  February 16, 2017
  ...

  ‘ಸೆರೆಮನೆಯತ್ತ ಶಶಿಕಲಾ’: ತಮಿಳುನಾಡು ರಾಜಕೀಯದ ದಿಕ್ಕು ಬದಲಿಸಿದ ಸುಪ್ರಿಂ ತೀರ್ಪು

  ದೇಶದ ಗಮನ ಸೆಳೆದಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ ಶಶಿಕಲಾ ಮತ್ತು ಉಳಿದ ಆರೋಪಿಗಳನ್ನು ದೋಷಿ ಎಂದು ಸುಪ್ರಿಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಪಿ. ಸಿ. ಘೋಶ್ ಹಾಗೂ ಅಮಿತಾವ್ ರಾಯ್ ಅವರಿದ್ದ ಪೀಠ ನೀಡಿದ ತೀರ್ಪು ತಮಿಳುನಾಡಿನ ರಾಜಕೀಯದ ದಿಕ್ಕನ್ನೇ ಬದಲಿಸಿದೆ. ಈ ಹಿಂದೆ ಕರ್ನಾಟಕ ಹೈ ಕೋರ್ಟ್ ಎರಡು ಸಾಲಿನ ಆದೇಶದಲ್ಲಿ ನೀಡಿದ ತೀರ್ಪನ್ನು ಬದಿಗಿಟ್ಟ ನ್ಯಾಯಪೀಠ, ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನೇ ಎತ್ತಿ ಹಿಡಿದಿದೆ. ಜತೆಗೆ, ತಕ್ಷಣವೇ ಬೆಂಗಳೂರಿನ […]

  February 14, 2017

Top