An unconventional News Portal.

ವಿಶ್ವ ಹಿಂದೂ ಪರಿಷತ್
  ...

  ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

  “ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ ಎಂದು ನನಗೆ ಆತ್ಮೀಯರೊಬ್ಬರು ಹೇಳಿದ್ದರು. ಹೀಗಾಗಿ ನಾನು ಯಾರಿಗೂ ತಿಳಿಸದೇ ಆಟೋದಲ್ಲಿ ಹೊರಹೋದೆ. ಹಿಂದುತ್ವ ಮತ್ತು ರಾಮ ಮಂದಿರದ ಬಗ್ಗೆ ನಾನು ಮಾತನಾಡುವುದನ್ನು ಬಯಸದ ಜನ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ಯಾರು ನನ್ನ ದನಿ ಅಡಗಿಸಲು ಬಯಸುತ್ತಿದ್ದಾರೆ ಎಂಬುದನ್ನು ಸಮಯ ಬಂದಾಗ ಸಾಕ್ಷ್ಯ ಸಮೇತ ಬಹಿರಂಗಪಡಿಸುವೆ…”  ಹೀಗೆ ಹೊಸ […]

  January 17, 2018
  ...

  ಲೆಫ್ಟ್ ವರ್ಸಸ್ ರೈಟ್: ಫೆ. 25ಕ್ಕೆ ಮಂಗಳೂರಿನಲ್ಲಿ ಮತ್ತೊಂದು ಸುತ್ತಿನ ‘ಸೈದ್ಧಾಂತಿಕ ಸಂಘರ್ಷ’

  ರಾಜ್ಯದಲ್ಲಿ ನಡೆಯುತ್ತಿರುವ ಎಡ ಮತ್ತು ಬಲದ ‘ಸೈದ್ಧಾಂತಿಕ ಸಂಘರ್ಷ’ಕ್ಕೆ ಇದೇ ತಿಂಗಳ 25ರಂದು ಮಂಗಳೂರಿನ ಬೀದಿಗಳು ಸಾಕ್ಷಿಯಾಗಲಿವೆ. ಸಿಪಿಎಂ ಕರ್ನಾಟಕ ಪಕ್ಷವು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಳ್ಳಲಿದ್ದಾರೆ. ‘ಕೋಮುವಾದಕ್ಕೆ ಸೋಲಾಗಲಿ; ಸೌಹಾರ್ದತೆ ಗಟ್ಟಿಯಾಗಲಿ’ ಎಂಬುದು ಕಾರ್ಯಕ್ರಮದ ಘೋಷವಾಕ್ಯ. ಕಾರ್ಯಕ್ರಮದ ಮಾಹಿತಿ ಹೊರ ಬೀಳುತ್ತಿದ್ದಂತೆ ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಭಜರಂಗದಳ ಮತ್ತು ಬಿಜೆಪಿ, ಪಿಣರಾಯಿ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿವೆ. ಕಾರ್ಯಕ್ರಮದ ವಿರುದ್ಧ ಫೆ. 24ರಂದು ಮೆರವಣಿಗೆ ಮತ್ತು ಫೆ. 25ರಂದು ಬಂದ್ ನಡೆಸುವುದಾಗಿ ಪ್ರಕಟಿಸಿವೆ. […]

  February 22, 2017
  ...

  ‘ಹೊಡೀರಿ, ಆದ್ರೆ ಮೂಳೆ ಮುರಿಯಬೇಡಿ’: ಗೋ ರಕ್ಷಣೆಗೆ VHP ಮುಂದಿಟ್ಟ ಹೊಸ ಸೂತ್ರ!

  ಹೊಡೀರಿ; ಆದರೆ ಮೂಳೆ ಮುರಿಯಬೇಡಿ… ಇದು ವಿಶ್ವಹಿಂದೂ ಪರಿಷತ್ ಗೋ ರಕ್ಷಣೆಗಾಗಿ ತನ್ನ ಕಾರ್ಯಕರ್ತರ ಮುಂದಿಟ್ಟಿರುವ ಹೊಸ ಸೂತ್ರ. ಉತ್ತರ ಪ್ರದೇಶ, ಉತ್ತರಖಾಂಡ್ ಮತ್ತು ಬೃಜ್ ಪ್ರದೇಶದ ಹಿರಿಯ ಗೋ ರಕ್ಷಕರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ‘ಕೇಂದ್ರ ಗೋ ರಕ್ಷಾ ಸಮಿತಿ’ಯ ಖೇಮ್ಚಂದ್ ಹೀಗೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ‘ಟಿಓಐ’ ವರದಿ ಮಾಡಿದೆ. ಸಭೆಯಲ್ಲಿ ಮಾತನಾಡಿದ ಖೇಮ್ಚಂದ್, “ಗೋ ಸಾಗಣೆ ಮಾಡುವವರಿಗೆ ಪಾಠ ಕಲಿಸಬೇಕಿದೆ. ಇದಕ್ಕಾಗಿ ಕಾನೂನು ಕೈಗೆತ್ತಿಕೊಳ್ಳಬೇಕಿದೆ. ಆದರೆ, ಗೋ ಸಾಗಣೆ ಮಾಡುವವರನ್ನು ಹೊಡೆದರೂ ಮೂಳೆ […]

  September 5, 2016
  ...

  ಮಲೆನಾಡಿನ ಹಿಂದೂ ಸಂಘಟನೆಗಳಿಗೆ ‘ಖಾಂಡ್ಯ’ ಮುಳುಗು ನೀರು: ಪ್ರವೀಣನನ್ನು ಅರೆಸ್ಟ್ ಮಾಡ್ತಾರಾ ಅಣ್ಣಾಮಲೈ?

  ಬೇರೆ ದಾರಿ ಕಾಣದೆ ‘ಗೋ ರಕ್ಷಣೆ’ಗೆ ಹೊರಟವರು ಕೊಟ್ಟಿಗೆಯನ್ನೇ ರದ್ದು ಮಾಡಿ ಕುಳಿತಿದ್ದಾರೆ. ಮಲೆನಾಡು ಭಾಗದಲ್ಲಿ ಒಂದು ಕಾಲದಲ್ಲಿ ಹಿಂದುತ್ವದ ಬೀಜಕ್ಕೆ ಕಸಿ ಮಾಡಿ, ನೀರು ಎರೆದು, ಬೆಳೆಸಿ, ರಾಜಕೀಯದ ಫಸಲನ್ನು ನೀಡಿದ್ದು ಚಿಕ್ಕಮಗಳೂರಿನ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಮಿತಿಗಳನ್ನು ವಿಸರ್ಜನೆ ಮಾಡಲಾಗಿದೆ. ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ನಂತರ ಶುರುವಾದ ಬೆಳವಣಿಗೆಗಳ ಪರಿಣಾಮ ಇದು. ಕೆಲವು ದಿನಗಳ ಹಿಂದೆ ಅಮರನಾಥ ಯಾತ್ರೆ ಮುಗಿಸಿಕೊಂಡು ಬರುತ್ತಿದ್ದಂತೆ, ಭಜರಂಗದಳದ ದಕ್ಷಿಣ ಪ್ರಾಂಥ್ಯ ಸಂಚಾಲಕ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ನಡೆದ ಬೈಟೆಕ್ನಲ್ಲಿ […]

  August 22, 2016
  ...

  ‘ಗೋ ರಾಜಕೀಯ’- ಭಾಗ 4: ‘ಭಜರಂಗದಳ’ದವರ ಗೋ ರಕ್ಷಣೆ ಮತ್ತು ತಳಮಟ್ಟದ ವಾಸ್ತವಗಳು!

  ದೇಶದಲ್ಲಿ ಗೋ ಮಾಂಸ ವಿಚಾರವಾಗಿ ಮುಸ್ಲಿಮರ ಮೇಲೆ ಪದೇ ಪದೇ ದಾಳಿಗಳು ನಡೆಯತ್ತಿರುತ್ತವೆ. ಆದರೆ ಗೋ ಮಾಂಸ ರಫ್ತಿನ ಹಿಂದಿರುವವರು ಯಾರು ಎಂದು ಹುಡುಕುತ್ತಾ ಹೋದರೆ ಸಿಗುವುದು ಹಿಂದೂಗಳೇ. ದೇಶದ ಬೃಹತ್ ಬೀಫ್ ರಫ್ತು ಕಂಪೆನಿಗಳಲ್ಲಿ ಒಂದೋ ಹಿಂದೂಗಳು ಪಾಲುದಾರರಾಗಿದ್ದಾರೆ; ಇಲ್ಲವೇ ಮಾಲಿಕರಾಗಿದ್ದಾರೆ. ಉತ್ತರ ಪ್ರದೇಶದ ಮಹೇಂದ್ರ ಸಿಂಗ್ ಒಡೆತನಕ್ಕೆ ಸೇರಿದ ಹಿಂದ್ ಆಗ್ರೋ ಇಂಡಸ್ಟ್ರೀಸ್, ಸುನೀಲ್ ಸೂದ್ ಪಾಲುದಾರಿಕೆಯ ಅಲ್ ನೂರ್ ಎಕ್ಸ್‌ಪೋರ್ಟ್ಗಳು ಬೀಫ್ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿವೆ. ಇನ್ನು ದೇಶದಲ್ಲಿ ಬೀಫ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ […]

  August 16, 2016
  ...

  ಬದಲಾಗುತ್ತಿದ್ದ ಕೊಡವರ ನಾಡಿನಲ್ಲಿ ಕೇಸರಿ ಝಂಡಾ ಮತ್ತು ಗುರುವಾರದ ‘ಬಂದ್ ಶಾಸ್ತ್ರ’ ಮುಗಿಸಿದ ಬಿಜೆಪಿ ನಾಯಕರು!

  ನಿರೀಕ್ಷೆಯಂತೆ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಮಾಧ್ಯಮಗಳೆದುರಿನ ಬಂದ್ ‘ಶಾಸ್ತ್ರ’ವನ್ನು ಗುರುವಾರ ಮುಗಿಸಿತು. ಇದರೊಂದಿಗೆ ಕಾಂಗ್ರೆಸ್ ಸಮಾಧಾನದ ನಿಟ್ಟುಸಿರು ಬಿಟ್ಟಿತು. ಸಂಘ ಪರಿವಾರದ ಕೃಪಾಪೋಷಿತ ಬಂದ್ ಅದರ ಶಕ್ತಿ ಪ್ರದರ್ಶನಕ್ಕೆ ಮೀಸಲಾಗಿದ್ದು ‘ಗಣಪತಿ ಆತ್ಮಹತ್ಯೆ ಪ್ರಕರಣ’ದ ವಿಶೇಷ. ‘ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು, ಕೆ.ಜೆ ಜಾರ್ಜ್ ಬಂಧಿಸಬೇಕು’ ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಜುಲೈ 14ರಂದು ಕರೆ ನೀಡಿದ್ದ ಕೊಡಗು ಜಿಲ್ಲಾ ಬಂದ್ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ರಾಜ್ಯಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಯೂ […]

  July 15, 2016
  ...

  ‘ಮೋದಿ ಸವೆಸಿದ ಹಾದಿ’-5: ಹರೇನ್ ಪಾಂಡ್ಯ ಹತ್ಯೆ ನೆನಪಿನಲ್ಲಿ ಗುಜರಾತಿನ ಗದ್ದುಗೆ ಕತೆಗೆ ಉಪಸಂಹಾರ!

  ‘ಮೋದಿ ಸವೆಸಿದ ಹಾದಿ’ಯ ಕೊನೆಯ ಭಾಗಕ್ಕೆ ಬಂದು ನಿಂತಿದ್ದೇವೆ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನರೇಂದ್ರ ಮೋದಿ, ಆರ್ ಎಸ್ಎಸ್ ಸಂಘಟನೆ ಮೂಲಕ ವಿಚಾರಗಳನ್ನು ಬೆಳೆಸಿಕೊಂಡು, ಉತ್ತಮ ಸಂಘಟಕ ಎನ್ನಿಸಿಕೊಂಡು, ನಂತರ ಬಿಜೆಪಿ ಪ್ರವೇಶಿಸಿ, ಪಕ್ಷದ ಹುದ್ದೆಗಳಲ್ಲಿ ಹಂತಹಂತವಾಗಿ ಏರುವ ಮೂಲಕ ಗುಜರಾತ್ ಮುಖ್ಯಮಂತ್ರಿಯಾಗಿ, ನಂತರ ದೇಶದ ಪ್ರಧಾನಿಯಾಗಿ ಎರಡು ವರ್ಷಗಳ ಆಡಳಿತವನ್ನು ಪೂರೈಸಿದ್ದಾರೆ. ಇದು ವ್ಯಕ್ತಿಯೊಬ್ಬನ ಬದುಕಿನಲ್ಲಿ ಸುದೀರ್ಘ ಪ್ರಯಾಣದ ಹಾದಿ. ಅವೆಲ್ಲವನ್ನೂ ಸಮಗ್ರವಾಗಿ ಐದು ಸಂಚಿಕೆಗಳ ಮಿತಿಯಲ್ಲಿ ನಿರೂಪಿಸುವುದು ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ ‘ಸಮಾಚಾರ’ […]

  May 29, 2016

Top