An unconventional News Portal.

ವಿಶ್ವಸಂಸ್ಥೆ

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ

    ...
    ವಿದೇಶ

    ನಿಗೂಢ ದೇಶದ ಕಿರಿಯ ನಾಯಕ ಕಿಮ್ ಜಾಂಗ್ ಉನ್: ಅಣ್ವಸ್ತ್ರ ಬೆದರಿಕೆಯೂ; ಯುದ್ದೋನ್ಮಾದವೂ…

    “ಉತ್ತರ ಕೊರಿಯಾ ಬಳಿ ಅಣ್ವಸ್ತ್ರದ ದಾಸ್ತಾನಿದೆ. ಅಮೇರಿಕದ ಬಹುತೇಕ ಪ್ರದೇಶಗಳನ್ನು ತಲುಪುವ ಸಾಮರ್ಥ್ಯ ನಮ್ಮಲ್ಲಿದೆ. ಈ ಅಣ್ವಸ್ತ್ರದ ಬಟನ್ ಸದಾ ನನ್ನ ಮೇಜಿನ ಮೇಲೆಯೇ ಇರುತ್ತದೆ. ಇದು ಕೇವಲ ಬೆದರಿಯಲ್ಲ, ವಾಸ್ತವ,” 2018ರ ಆರಂಭದಲ್ಲಿಯೇ ಈ ಮಾತುಗಳು ಹೊರಬಂದಿದ್ದು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್‌ರಿಂದ. ತಮ್ಮ ದೇಶವನ್ನುದ್ದೇಶಿಸಿ ಮಾಡಿದ ವಾರ್ಷಿಕ ಭಾಷಣದಲ್ಲಿ ಹೀಗೆ ಹೇಳಿದ್ದಾರೆ. ಈ ಮೂಲಕ ವರ್ಷದ ಸಂದೇಶದಲ್ಲಿ ಅವರು ಅಮೇರಿಕಕ್ಕೆ ನೀಡಿದ ಎಚ್ಚರಿಕೆ ಇದಾಗಿದೆ.  ಅಣ್ವಸ್ತ್ರ ಮತ್ತು ಕ್ಷಿಪಣಿಗಳ ಉತ್ಪಾದನೆ ಹೆಚ್ಚು ಒತ್ತು ಕೊಡುವಂತೆ..

    January 3, 2018
    ...
    ಸುದ್ದಿ ಸಾರ

    ಆಂಗ್ ಸಾನ್ ಸೂಕಿ; ರೊಹಿಂಗ್ಯಾ ವಿಚಾರದಲ್ಲಿ ಯಾಕೆ ‘ಮೂಕಿ’?

    ರೋಹಿಂಗ್ಯರ ಮೇಲೆ ನಡೆದ ಹಿಂಸಾಚಾರ ಮತ್ತು ಅತ್ಯಾಚಾರ ಪ್ರಕರಣಗಳ ಕುರಿತು ವಿಶ್ವಸಂಸ್ಥೆಯಲ್ಲಿ ಮಾತನಾಡಲು ಆಂಗ್ ಸಾನ್ ಸೂಕಿ ನಿರಾಕರಿಸಿದ್ದಾರೆ. ‘ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ನಡೆದ ಹಿಂಸಾಚಾರ ಮತ್ತು ಲೈಂಗಿಕ ಹಿಂಸೆಯ ಕುರಿತು ಯಾವುದೇ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ,’ ಎಂದು ಆಂಗ್ ಸಾನ್ ಸೂಕಿ ಕಳೆದ ವಾರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರೆಸ್‌ಗೆ ಕಳುಹಿಸಿದ ಪತ್ರ ಈಗ ಬಹಿರಂಗವಾಗಿದೆ. ಈ ಮೊದಲು, “ಎಲ್ಲ ಮುಸ್ಲಿಮರೂ ದೇಶವನ್ನು ತೊರೆದಿಲ್ಲ. ಅನೇಕ ಮುಸ್ಲಿಮರು ಇಲ್ಲಿಯೇ ಉಳಿದಿದ್ದಾರೆ. ಈ ಕುರಿತು ಪರಿಶೀಲಿಸಲು ಅಂತಾರಾಷ್ಟ್ರೀಯ ಸಮಿತಿಗೆ..

    December 27, 2017
    ...
    ವಿದೇಶ

    ‘ಬಾಂಬ್ ಸಮಾಚಾರ’: ಉತ್ತರ ಕೊರಿಯದ ‘ಪ್ರಬಲ ಕಂಪನ’ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತಾ?

    ಯುದ್ಧವನ್ನು ಮೈಮೇಲೆ ಎಳೆದುಕೊಂಡಿರುವ ಅಣ್ಣ; ಅದನ್ನು ಪಕ್ಕದಲ್ಲಿ ಆತಂಕದಿಂದಲೇ ಗಮನಿಸುತ್ತಿರುವ, ಅದೇ ವೇಳೆ ಏನೂ ಸಮಸ್ಯೆಯಾಗಲ್ಲ ಎಂಬ ಭರವಸೆಯನ್ನು ಉಳಿಸಿಕೊಂಡಿರುವ ತಮ್ಮ. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ಬೇರ್ಪಡೆಗೊಂಡ, ಇವತ್ತು ಒಂದಾಗುವ ಮುಂಚೆಯೇ ಮೂರನೇ ವಿಶ್ವಯುದ್ಧ ಆರಂಭಕ್ಕೆ ನಾಂದಿ ಹಾಡಲು ಹೊರಟು ನಿಂತಿರುವ ಎರಡು ಅವಳಿ ದೇಶಗಳ ಕತೆ. ಒಂದು ನಾರ್ತ್ ಕೊರಿಯಾ/ ಉತ್ತರ ಕೊರಿಯ ಎಂದು ಜನಪ್ರಿಯವಾಗಿ ಗುರುತಿಸುವ ಡೆಮಾಕ್ರಟಿಕ್ ಪೀಪಲ್ ರಿಪಬ್ಲಿಕ್ ಆಫ್ ಕೊರಿಯ. ಮತ್ತೊಂದು ದಕ್ಷಿಣ ಕೊರಿಯ ಅಥವಾ ಅಧಿಕೃತ ಹೆಸರು ರಿಪಬ್ಲಿಕ್..

    September 5, 2017
    ...
    ವಿದೇಶ

    ಐಸಿಜೆ ಮುಂದೆ ಕುಲಭೂಷಣ್ ಪ್ರಕರಣ: ಏನಿದು ‘ಅಂತಾರಾಷ್ಟ್ರೀಯ ನ್ಯಾಯಾಲಯ’ದ ಹೂರಣ?

    ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾದ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಸಮಾಧಾನಕರ ಹೆಜ್ಜೆಯನ್ನು ಇಟ್ಟಿದೆ. ಜಾದವ್ ಅವರನ್ನು ಮರಣದಂಡನೆಗೆ ಗುರಿಪಡಿಸಿದ ಪಾಕ್‌ ಮಿಲಿಟರಿ ನ್ಯಾಯಾಲಯದ ಆದೇಶಕ್ಕೆ ತಡೆಯನ್ನು ನೀಡುವಂತೆ ‘ಇಂಟರ್‌ನ್ಯಾಷನಲ್ ಕೋರ್ಟ್ ಆಫ್‌ ಜಸ್ಟಿಸ್’ (ಐಸಿಜೆ) ಪಾಕ್‌ಗೆ ಪತ್ರವನ್ನು ಬರೆದಿದೆ. ಭಾರತ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಧ್ಯಕ್ಷ ರೊನ್ನಿ ಅಬ್ರಾಹಂ ಈ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತು ನಮ್ಮ ಮಾಧ್ಯಮಗಳು ಪಾಕ್‌ಗೆ ಮುಖಭಂಗ, ಭಾರತದ ಗೆಲುವು..

    May 10, 2017
    ...
    ವಿದೇಶ

    ಕ್ಷಮಿಸಿ; ಇದು ಮಾನವೀಯತೆಯ ಸಾವು: ಹಿಟ್ಲರ್, ಭೋಪಾಲ್ ದುರಂತಗಳನ್ನು ನೆನಪಿಸಿದ ‘ರಾಸಾಯನಿಕ ದಾಳಿ’

    ಸಿರಿಯಾದಲ್ಲಿ ಸರಕಾರ, ಜನ, ಐಸಿಲ್ (ಹಿಂದಿನ ಐಸಿಸ್) ಬಂಡುಕೋರರ ನಡುವೆ ನಡೆಯುತ್ತಿರುವ 6 ವರ್ಷಗಳ ಕಾದಾಟ ಈಗ ಆತಂಕಕಾರಿ ತಿರುವನ್ನು ತೆಗೆದುಕೊಂಡಿದೆ.  ಪರಿಣಾಮ; ಭಯಾನಕ. ರಾಸಾಯನಿಕ ದಾಳಿಗೆ ನೂರಾರು ಜನ ಸಾವನ್ನಪ್ಪಿದ್ದು ಅರ್ಧ ಸಹಸ್ರಕ್ಕಿಂತ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಡಾಲ್ಫ್ ಹಿಟ್ಲರನ ವಿಷಾನಿಲ ಚೇಂಬರ್ ಗಳು, ಭೋಪಾಲ್ ಅನಿಲ ದುರಂತಗಳನ್ನು ಕಿವಿಯಾರೆ ಕೇಳಿ, ಪುಸ್ತಕಗಳಲ್ಲಿ ಓದಿದ್ದ ಹೊಸ ತಲೆಮಾರು, ರಾಸಾಯನಿಕ ದಾಳಿಗಳ ಬೀಭತ್ಸತೆಯನ್ನು ಪ್ರತ್ಯಕ್ಷ ಕಂಡು ಬೆಚ್ಚಿಬಿದ್ದಿದೆ; ಉಸಿರಾಡಲಾಗದೇ ವಿಲ ವಿಲ ಒದ್ದಾಡುವ ಜೀವಗಳನ್ನು ಕಂಡು ವಿಶ್ವವೇ ಪತರಗುಟ್ಟಿ ಹೋಗಿದೆ…

    April 6, 2017
    ...
    SPECIAL SERIES

    ಜೀನಿಯಸ್ ಮ್ಯಾನ್- 2: ವಯಸ್ಸಲ್ಲದ ವಯಸ್ಸಲ್ಲಿ ಐನ್‌ಸ್ಟೈನ್ ಬರೆದ ಸಿದ್ದಾಂತವನ್ನು ಅರಗಿಸಿಕೊಳ್ಳುವವರು ಯಾರೂ ಇರಲಿಲ್ಲ!

    ವಿಜ್ಙಾನಿ ಐನ್‌ಸ್ಟೈನ್‌ರನ್ನು ಮನುಕುಲ ಕಂಡ ಅತ್ಯಂತ ಬುದ್ಧಿವಂತರು; ಅವರಲ್ಲೇನೋ ವಿಶೇಷವಿದೆ ಎಂದು ಕರೆಯುವುದಕ್ಕೆ ಅವರು ವಿಜ್ಞಾನದ ನಂಬಿಕೆಯ ಬುಡವನ್ನು ಅಲ್ಲಾಡಿಸಿದ್ದು ಪ್ರಮುಖ ಕಾರಣ. ಐನ್‌ಸ್ಟೈನ್ಗೂ ಮೊದಲು ನ್ಯೂಟನ್ ತನ್ನ ಸಿದ್ಧಾಂತದಲ್ಲಿ ವಿಶ್ವದ ಯಾವುದೇ ಎರಡು ವಸ್ತುಗಳ ನಡುವೆ ಗುರುತ್ವದ ಆಕರ್ಷಣಾ ಬಲ ವರ್ತಿಸುತ್ತಲೇ ಇರುತ್ತದೆ ಎಂದಿದ್ದ. ಆದರೆ ಅದನ್ನು ತಲೆ ಕೆಳಗು ಮಾಡಿದ ಐನ್‌ಸ್ಟೈನ್ ‘ಸಾಮಾನ್ಯ ಸಾಪೇಕ್ಷ ಸಿದ್ಧಾಂತ’ (ವಿಶೇಷ ಸಾಪೇಕ್ಷ ಸಿದ್ಧಾಂತದ ಮುಂದುವರಿದ ಭಾಗ) ಮಂಡಿಸಿದರು. ಆ ಸಿದ್ಧಾಂತ ಏನು ಅದನ್ನು ನಾವಿಲ್ಲಿ ವಿವರಿಸುತ್ತಿಲ್ಲ (ಹೆಚ್ಚಿನ ಓದಿಗೆ..

    December 27, 2016
    ...
    ವಿದೇಶ

    ಪ್ರತಿಭಟನಾಕಾರರ ಮೇಲೆ ಹರಿದ ವ್ಯಾನ್: ತಲೆ ಕೆಟ್ಟ ಫಿಲಿಪ್ಪೀನ್ಸ್ ಪೊಲೀಸರ ಹಿನ್ನೆಲೆ ಏನು?

    ಫಿಲಿಪ್ಪೀನ್ಸ್ ‘ಮಾದಕ ಲೋಕದಲ್ಲಿ ಮರಣ ಮೃದಂಗ’ವನ್ನು ನುಡಿಸಿದ್ದ ಪೊಲೀಸರು, ಇದೀಗ ಪ್ರತಿಭಟನಾಕಾರರ ಮೇಲೆ ವ್ಯಾನ್ ಹರಿಸಿದ್ದು ಜಾಗತಿಕ ಸುದ್ದಿಗೆ ಗ್ರಾಸವಾಗಿದೆ. ಈ ಮೂಲಕ ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ದುತಾರ್ತೆಯ ಪೊಲೀಸರ ನಿರ್ದಯತೆ ಹೇಗಿರುತ್ತದೆ ಎಂಬುದಕ್ಕೆ ಜಗತ್ತು ಮತ್ತೊಮ್ಮೆ ಸಾಕ್ಷಿಯಾಗಿದೆ. ಹಿಂದೆ, ಸ್ಥಳೀಯ ಮಾದಕ ಲೋಕವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಲ್ಲಿನ ಪೊಲೀಸರು ಸಾಲು ಸಾಲು ಎನ್ ಕೌಂಟರ್ಗಳನ್ನು ನಡೆಸಿದ್ದರು. ಈ ಕುರಿತು ‘ಸಮಾಚಾರ’ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ಬುಧವಾರ ದೇಶದ ರಾಜಧಾನಿ ಮನಿಲಾದಲ್ಲಿರುವ ಅಮೆರಿಕಾ ರಾಯಭಾರ ಕಚೇರಿ ಹೊರಗಡೆ ಜನರು..

    October 19, 2016
    ...
    ವಿದೇಶ

    ಜಗತ್ತೇ ಒಂದೇ ಸೂರಿನಡಿ: ಇದು ‘ವಿಶ್ವಸಂಸ್ಥೆಯ ಸಾಮಾನ್ಯ ಸಭೆ’!

    ಭಾರತ ಪಾಕ್ ವಾಗ್ಯುದ್ಧಕ್ಕೆ ವೇದಿಕೆಯಾಗಿದ್ದು ಇದೇ ಸಭೆ. ಎರಡೂ ರಾಷ್ಟ್ರಗಳು ಜಗತ್ತಿನ ಮುಂದೆ ಪರಸ್ಪರ ರಾಷ್ಟ್ರಗಳ ಕುತಂತ್ರ ಬಯಲು ಮಾಡಲು ತಂತ್ರ ಪ್ರತಿತಂತ್ರ ಹೆಣೆಯುತ್ತಿರುವುದೂ ಇಲ್ಲೇ. ಇದರ ಹೆಸರು ‘ವಿಶ್ವಸಂಸ್ಥೆಯ ಸಾಮಾನ್ಯ ಸಭೆ’. ಆರರಲ್ಲಿ ಒಂದು ವಿಶ್ವಂಸ್ಥೆಯ ಆರು ಅಂಗಗಳಲ್ಲಿ ಸಾಮಾನ್ಯ ಸಭೆಯೂ ಒಂದು. ಇದನ್ನು ಸಂಕ್ಷಿಪ್ತವಾಗಿ ‘ಯುಎನ್ಜಿಎ’ ಎಂದು ಕರೆಯುತ್ತಾರೆ. ಇಲ್ಲಿ ಎಲ್ಲಾ ದೇಶಗಳಿಗೂ ಸಮಾನ ಪ್ರಾತಿನಿಧ್ಯವಿದೆ. ಈ ಕಾರಣಕ್ಕೆ ಇದರ ಮೇಲೆ ಎಲ್ಲಾ ರಾಷ್ಟ್ರಗಳಿಗೂ ತುಸು ಗೌರವ ಜಾಸ್ತಿ. ಇಡೀ ವಿಶ್ವಸಂಸ್ಥೆಯ ಆಯವ್ಯಯಗಳನ್ನು ನೋಡಿಕೊಳ್ಳುವುದು,..

    September 27, 2016
    ...
    ಸುದ್ದಿ ಸಾರ

    ‘ಅಂದು.. ಇಂದು.. ಎಂದೆಂದೆಗೂ’: ಕಾಶ್ಮೀರ ನಮ್ಮದೇ ಎಂದು ಪುನರುಚ್ಚರಿಸಿದ ಸುಷ್ಮಾ ಸ್ವರಾಜ್!

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಸುಷ್ಮಾ ಸ್ವರಾಜ್ ಭಾಷಣ ಮಾಡುತ್ತಿದ್ದಾರೆ. ಅಂದು, ಇಂದು ಮಾತ್ರವಲ್ಲ ಮುಂದೆಯೂ ಕಾಶ್ಮೀರ ಭಾರತದ್ದೇ ಅಂಗ ಎಂದು ಜಾಗತಿಕ ನಾಯಕರ ಮುಂದೆ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಉರಿ ದಾಳಿಯ ಬೆನ್ನಿಗೆ ಭಾರತ ಪಾಕಿಸ್ತಾನದ ವಿರುದ್ಧ ಕೆಂಡ ಕಾರುತ್ತಿದ್ದು, ಈ ಭಾಷಣದ ಮೂಲಕ ಮತ್ತಷ್ಟು ತೀಕ್ಷ್ಣ ದಾಳಿ ನಡೆಸಿದೆ. ವಿಶ್ವಸಂಸ್ಥೆಯ ವೇದಿಕೆಯಿಂದ ಹಿಂದಿಯಲ್ಲಿ ಭಾಷಣ ಆರಂಭಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನರೇಂದ್ರ ಮೋದಿ ಸರಕಾರ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಜಗತ್ತಿನ ಮುಂದಿಟ್ಟರು. ಇದಾದ ಬಳಿಕ ನಿರೀಕ್ಷೆಯಂತೆ..

    September 26, 2016
    ...
    ಸುದ್ದಿ ಸಾರ

    ಉರಿ ದಾಳಿ ಹಿನ್ನೆಲೆಯಲ್ಲಿ ಯುದ್ಧಕ್ಕೆ ತಯಾರಿ; ಎಲ್ಓಸಿ ದಾಟಿತಾ ಭಾರತ ಸೇನೆ?

    ಉರಿಯ ಸೇನಾ ನೆಲೆಯ ಮೇಲೆ ನಡೆದ  ದಾಳಿ ಇದೀಗ ಅಂತಾರಾಷ್ಟ್ರೀಯ ರೂಪ ಪಡೆದುಕೊಂಡಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಕಾಶ್ಮೀರ ವಿವಾದವನ್ನು ಈಗ ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದು, ತಮ್ಮ ಪರವಾಧ ಅಭಿಪ್ರಾಯ ರೂಪಿಸುವಲ್ಲಿ ನಿರತವಾಗಿವೆ. ಬುಧವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ “ಪಾಕಿಸ್ತಾನ ಉಗ್ರ ರಾಷ್ಟ್ರ ಮತ್ತು ಜಾಗತಿಕ ಭಯೋತ್ಪಾದನೆಯ ಕೇಂದ್ರ,” ಎಂದು ಭಾರತ ಪ್ರತಿಪಾದಿಸಿದೆ. ಪಾಕಿಸ್ತಾನದ ಉಗ್ರವಾದದಿಂದ ಭಾರತ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಇರಾನಿಗೂ ಸಮಸ್ಯೆ ಸೃಷ್ಟಿಯಾಗಿದೆ ಎಂದು ನೆರೆಯ ರಾಷ್ಟ್ರದ ‘ಭಯತ್ಪಾದಕ ಸ್ನೇಹಿ’ ನಿಲುವುಗಳನ್ನು ಖಂಡಿಸಿದೆ. “ಮಾನವ ಹಕ್ಕುಗಳ..

    September 22, 2016
  • 1
  • 2

FOOT PRINT

Top