An unconventional News Portal.

ರೈತ
  ...
  mp-farmers-protest-cover
  ದೇಶ

  ‘ಆರ್‌ಎಸ್‌ಎಸ್‌ ಬೇರು; ಕಾಂಗ್ರೆಸ್ ಚಿಗುರು’: ಮಧ್ಯಪ್ರದೇಶ ರೈತ ಹೋರಾಟದ ಹಿಂದಿರುವ ನಾಯಕರಿವರು!

  ಮಹಾರಾಷ್ಟ್ರದಲ್ಲಿ ಆರಂಭವಾಗಿ, ಮಧ್ಯಪ್ರದೇಶದಲ್ಲಿ ಪೊಲೀಸರ ಗುಂಡಿಗೆ ಎದೆಯೊಡ್ಡುವ ಮೂಲಕ ‘ರೈತ ಹೋರಾಟ’ ಮತ್ತೊಮ್ಮೆ ದೇಶದ ಚರ್ಚಾ ಕೇಂದ್ರಕ್ಕೆ ಬಂದಿದೆ. ಮಂಗಳವಾರ ನಡೆದ ಇಲ್ಲಿನ ಮಂಡಸೌರ್ ಜಿಲ್ಲೆಯಲ್ಲಿ ನಡೆದ ಫೈರಿಂಗ್‌ನಲ್ಲಿ ಐವರು ರೈತರು ಸಾವನ್ನಪ್ಪಿದ್ದರು. ಆರಂಭದಲ್ಲಿ ಇದು ಅರೆಸೇನಾ ಪಡೆಗಳಿಂದ ನಡೆದ ಗುಂಡಿನ ದಾಳಿ ಎಂದು ಸ್ಥಳೀಯ ಬಿಜೆಪಿ ಸರಕಾರದ ಗೃಹ ಸಚಿವ ಹೇಳಿಕೆ ನೀಡಿದ್ದರು. ಗುರುವಾರ ರೈತರ ಸಾವಿಗೆ ಮಧ್ಯಪ್ರದೇಶದ ಪೊಲೀಸರ ಬಂದೂಕಿನಿಂದ ಹಾರಿದ ಗುಂಡೇ ಕಾರಣ ಎಂದು ಸರಕಾರ ಒಪ್ಪಿಕೊಂಡಿದೆ. ಈ ನಡುವೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್..

  June 8, 2017
  ...
  Tamil Nadu Farmers
  ದೇಶ

  ಬೆತ್ತಲೆ ಪ್ರತಿಭಟನೆಗೆ ಸೊಪ್ಪು ಹಾಕದ ‘ಪ್ರಧಾನ ಸೇವಕ’; ರೈತರ ಸಮಸ್ಯೆಗೆ ಯಾಕಿಲ್ಲ ಬೆಲೆ?

  ಕರ್ನಾಟಕದಲ್ಲಿ ದಿಡ್ಡಳ್ಳಿ ಆದಿವಾಸಿಗಳ ಬೆತ್ತಲೆ ಪ್ರತಿಭಟನೆ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇದಕ್ಕೆ ಅಂದು ಪ್ರತಿಕ್ರಿಯೆ ನೀಡಿದ್ದ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ “ನಾವೇನಾದರೂ ಬೆತ್ತಲೆ ಪ್ರತಿಭಟನೆ ಮಾಡಲು ಹೇಳಿದ್ದೆವಾ?” ಎಂಬ ಬೇಜವಾಬ್ದಾರಿ ನಡವಳಿಕೆಯಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಸಂದರ್ಭ ನಡೆದ ಮಡಿಕೇರಿ ಚಲೋದಲ್ಲಿ ಮಾತನಾಡಿದ್ದ ಹೋರಾಟಗಾರ ನೂರ್ ಶ್ರೀಧರ್ “ಬೆತ್ತಲೆ ಪ್ರತಿಭಟನೆ ಅಸಹಾಯಕತೆಯ ಪರಮಾವಧಿ,” ಎಂದಿದ್ದರು. ಇದೇ ಅಸಹಾಯಕತೆಯ ಪರಮಾವಧಿಗೆ ತಮಿಳುನಾಡು ರೈತರೀಗ ಬಂದಿದ್ದಾರೆ. ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿರುವ ಪ್ರಧಾನಿಮಂತ್ರಿ ನಿವಾಸದ ಆವರಣ ಅಸಹಾಯಕ ಬೆತ್ತಲೆ ಪ್ರತಿಭಟನೆಗೆ..

  April 11, 2017
  ...
  farmer_ploughing
  ದೇಶ

  ರೈತರ ಆತ್ಮಹತ್ಯೆಗೆ ಬ್ಯಾಂಕುಗಳ ಕೊಡುಗೆ ಅಪಾರ: ಲೇವಾದೇವಿಗಾರರ ಮೇಲಿನ ಆರೋಪ ನಿರಾಧಾರ

  ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ, ಲೇವಾದೇವಿದಾರರಿಂದ ಪಡೆದ ಸಾಲವೇ ಜೀವಕ್ಕೆ ಕುತ್ತಾಯಿತು ಎಂಬ ಮಾತು ಕೇಳಿ ಬರುತ್ತದೆ. ಆದರೆ ಅದು ಸುಳ್ಳು ಎನ್ನುತ್ತಿದೆ ‘ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ’ (ಎನ್.ಸಿ.ಆರ್.ಬಿ) ದ ಮಾಹಿತಿ. 2015ರಲ್ಲಿ ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆಗೆ ಶರಣಾದ ರೈತರಲ್ಲಿ ಶೇಕಡಾ 80 ರಷ್ಟು ಜನ ಬ್ಯಾಂಕುಗಳು ಮತ್ತು ನೋಂದಾಯಿತ ಮೈಕ್ರೋಫೈನಾನ್ಸ್ ಗಳಿಂದ ಸಾಲ ಪಡೆದವರು ಎಂದು ಈ ದಾಖಲೆಗಳು ಹೇಳುತ್ತಿವೆ. ಇದೇ ಮೊದಲ ಬಾರಿಗೆ ಆತ್ಯಹತ್ಯೆ ಮಾಡಿಕೊಂಡ ರೈತರ ಮರು ಪಾವತಿಸಲಾಗದ ಸಾಲದ ಬಗ್ಗೆಯೂ ಎನ್.ಸಿ.ಆರ್.ಬಿ ಮಾಹಿತಿ..

  January 7, 2017
  ...
  Prison
  PRISON STORIES

  ಕಂಬಿ ಹಿಂದಿನ ಕತೆ- 3: ಗುಂಡಿಸಿದ್ದನ ಮೇಲೆ ಸಮಾಜ ಹೊರಿಸಿದ ಆರೋಪಕ್ಕೆ ಜೈಲಿನ ಗೋಡೆಗಳ ನಡುವೆ ನ್ಯಾಯ ಸಿಕ್ತು!

  ಸಮಾಜದ ಕುರುಡು ನಂಬಿಕೆಗಳು, ಸಣ್ಣತನಗಳು ವ್ಯಕ್ತಿಯೊಬ್ಬನನ್ನು ಅನ್ಯಾಯವಾಗಿ 5 ವರ್ಷ ಜೈಲಿಗೆ ತಳ್ಳಿದ ದುರಂತ ಕತೆ ಇದು. ಇಲ್ಲಿ ಸಮಾಜ, ಪೊಲೀಸ್, ನ್ಯಾಯಾಂಗ ನಾವು ನೀವು ಎಲ್ಲರೂ ಪಾಲುದಾರರೇ. ಸೋತಿದ್ದು ಮಾತ್ರ ಈ ಮುಗ್ದ ಮನುಷ್ಯ ಗುಂಡಿಸಿದ್ದ; ಇದು ಕಂಬಿನ ಹಿಂದಿನ ಕತೆಯ ಮೂರನೇ ಕಂತು. ಆತನ ಊರು ತುಮಕೂರು. ಆತನನ್ನು ಎಲ್ಲರೂ ಗುಂಡಿಸಿದ್ಧ (ಬದಲಾಯಿಸಲಾಗಿದೆ) ಎಂದು ಕರೆಯುತ್ತಿದ್ದರು. ಹೆಸರಿನ ಜೊತೆಗೆ ಗುಂಡಿ ಅಂಟಿಕೊಂಡಿದ್ದಕ್ಕೂ ಕಾರಣ ಉಂಟು. ಆತ ಮುಗ್ಧನಾಗಿದ್ದ; ಮುಗ್ಧ ಅಂದರೆ ಮುಗ್ಧ. ಬಡಕೃಷಿಕ; ಮದುವೆಯಾಗಿತ್ತು…

  November 2, 2016

Top