An unconventional News Portal.

ರಿಲಯನ್ಸ್
  ...

  ಒಎನ್‌ಜಿಸಿ ಹಡಗು ಅಂಗಳದಲ್ಲಿ ಬೆತ್ತಲಾಯಿತು ಸರಕಾರಿ ತೈಲ ಸಂಸ್ಥೆಯ ಸ್ಥಿತಿ- ಗತಿ!

  ಒಂದೆಡೆ ಖಾಸಗಿ ತೈಲೋತ್ಪನ್ನ ಸಂಸ್ಥೆಗಳು ಸರಕಾರೀ ಸ್ವಾಮ್ಯದ ತೈಲ ಸಂಸ್ಥೆಗಳನ್ನೂ ಮೀರಿ ಬೆಳೆದು ನಿಂತಿದೆ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಮತ್ತಿತರ ಇಂಧನಗಳ ಬೆಲೆಯನ್ನು ಸರಕಾರದ ಬದಲಾಗಿ ಖಾಸಗಿ ಸಂಸ್ಥೆಗಳೇ ನಿರ್ಧರಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗಲೇ, ಮಂಗಳವಾರ ಮಧ್ಯಾಹ್ನ ಕೇರಳದ ಕೊಚ್ಚಿಯಲ್ಲಿರುವ ‘ತೈಲ ಮತ್ತು ನೈಸರ್ಗಿಕ ಅನಿಲ ನಿಗಮ’ (ಒಎನ್‌ಜಿಸಿ)ಗೆ ಸೇರಿದ ಸರಕಾರಿ ಶಿಪ್‌ ಯಾರ್ಡ್‌ನಲ್ಲಿ ನೀರು ತುಂಬಿದ್ದ ಟ್ಯಾಂಕರ್‌ ಸ್ಫೋಟವಾಗಿದೆ. ದುರ್ಘಟನೆಯಲ್ಲಿ ಐವರು ಅಸುನೀಗಿದ್ದರೆ, 6 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಸರಕಾರಿ ಸ್ವಾಮ್ಯದ ಒಎನ್‌ಜಿಸಿಯಲ್ಲಿ ನಡೆದಿರುವ ಘಟನೆ […]

  February 13, 2018
  ...

  ಇನ್ನು ಮುಂದೆ ಪ್ರತಿದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ: ಯಾರಿಗೇನು ಲಾಭ?

  ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ಜೂನ್ 16ರಿಂದ ಬೆಂಗಳೂರು ಸೇರಿದಂತೆ ದೇಶದ ಐದು ಮಹಾನಗರಗಳ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನಿನಿತ್ಯದ ಆಧಾರದ ಮೇಲೆ ಬದಲಾವಣೆಯಾಗಲಿದೆ. ಇಲ್ಲೀವರೆಗೆ ಮುಂದುವರಿದ ದೇಶಗಳಲ್ಲಿ ಇಂಧನ ಬೆಲೆಯಲ್ಲಿ ಹೀಗೊಂದು ಸಂಪ್ರದಾಯವನ್ನು ಪಾಲಿಸಲಾಗುತ್ತಿತ್ತು. ಆಯಾ ದಿನದ ಕಚ್ಚಾತೈಲ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಪ್ರತಿ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿತ್ತು. ‘ಡೈನಾಮಿಕ್ ಫ್ಯೂಯಲ್ ಪ್ರೈಸಿಂಗ್’ ಎಂದು ಕರೆಯುವ ಈ ಪದ್ಧತಿಯನ್ನು ಭಾರತದಲ್ಲಿಯೂ ಜಾರಿಗೆ ತರಲು ಸರಕಾರಿ ಸ್ವಾಮ್ಯದ ಪೆಟ್ರೋಲಿಯಂ […]

  June 14, 2017
  ...

  ಮುಂಬೈ ಇಂಡಿಯನ್ಸ್ ಓನರ್ ನೀತಾ ಅಂಬಾನಿ: ಭರತನಾಟ್ಯದಿಂದ ಕಾರ್ಪೊರೇಟ್ ರಂಗಸ್ಥಳಕ್ಕೆ!

  ಆತ ರಿಲಾಯನ್ಸ್ ಜಿಯೋ ಟೆಲಿಕಾಂ ಕಂಪನಿಯಲ್ಲಿ ಟವರ್‌ ರಿಪೇರಿ ಮಾಡುವ ಸಾಮಾನ್ಯ ಉದ್ಯೋಗಿ. ಭಾನುವಾರ ಐಪಿಎಲ್ ಪಂದ್ಯಾವಳಿಯ ಕೊನೆಯ ಹಣಾಹಣಿಯ ರೋಚಕತೆಯನ್ನು ತನ್ನ ಪುಟ್ಟ ಮೊಬೈಲ್ ಪರದೆಯ ಮೇಲೆ ಆಸ್ವಾದಿಸುತ್ತಿದ್ದ ಆತ, “ಮುಂಬೈ ಗೆದ್ರೆ ಜಿಯೋ ಆಫರ್ ಮುಂದುವರಿಯಬಹುದು,” ಎಂಬ ಭರವಸೆಯನ್ನು ಇಟ್ಟುಕೊಂಡಿದ್ದ. ಆತನ ಆಶಯ ಹುಸಿ ಹೋಗಲಿಲ್ಲ. ಐಪಿಎಲ್ ಟೂರ್ನಿಯನ್ನು ಮುಂಬೈ ಇಂಡಿಯನ್ಸ್ ಜಯಗಳಿಸಿತು. ಇದರಿಂದ ಜಿಯೋ ಆಫರ್‌ ಅವಧಿ ಹೆಚ್ಚಾಗುತ್ತೋ, ಬಿಡುತ್ತೋ ಗೊತ್ತಿಲ್ಲ. ಆದರೆ, ಸಹಜವಾಗಿಯೇ ಇದು ತಂಡದ ಪ್ರೊಮೋಟರ್ಗಳಾದ ನೀತಾ ಅಂಬಾನಿ ಮತ್ತು ಇತರ […]

  May 22, 2017
  ...

  ‘ಒಎನ್‌ಜಿಸಿ’ ಬಾವಿಗೆ ಕನ್ನ ಹಾಕಿದ ಅಂಬಾನಿಗೆ 10,000 ಕೋಟಿ ದಂಡ; ಮೋದಿ ಸರಕಾರದ ‘ಡ್ರಾಮ’?

  ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಮುಖೇಶ್ ಅಂಬಾನಿ ಒಡೆತನದ ‘ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್)’ಗೆ ಸುಮಾರು 10,300 ಕೋಟಿ ರೂಪಾಯಿ ದಂಡ ವಿಧಿಸಿದೆ. ‘ಕೃಷ್ಣಾ ಗೋದಾವರಿ ಬೇಸಿನ್’ನಲ್ಲಿ ಸರಕಾರಿ ಸ್ವಾಮ್ಯದ ‘ಒಎನ್‌ಜಿಸಿ’ಗೆ ನಿಗದಿಯಾಗಿದ್ದ ಪ್ರದೇಶದಲ್ಲಿ ಅಕ್ರಮವಾಗಿ ನೈಸರ್ಗಿಕ ಅನಿಲ ಹೊರತೆಗೆದ ಪ್ರಕರಣದಲ್ಲಿ ಈ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ಆದರೆ ಈ ದಂಡ ಕೇವಲ ‘ತೋರಿಕೆಗಾಗಿ’ ಎನ್ನುತ್ತಿದೆ ‘ಬಿಸಿನೆಸ್ ಸ್ಟಾಂಡರ್ಡ್’ನ ವರದಿ. ಪೆಟ್ರೋಲಿಯಂ ಸಚಿವಾಲಯದಿಂದ ದಂಡ ಪಾವತಿಸುವಂತೆ ರಿಲಯನ್ಸ್ ಕಂಪೆನಿಗೆ ನವೆಂಬರ್ 3ರಂದು ನೊಟೀಸ್ ಕಳುಹಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ […]

  November 4, 2016
  ...

  ಇದು ವಿರುದ್ಧ ನೆಲೆಯ ಗುಜರಾತ್ ‘ಅಸ್ಮಿತೆ’: ಚುನಾವಣಾ ಅಖಾಡಕ್ಕಿಳಿದ ಜಿಗ್ನೇಶ್

  ಅಸ್ಮಿತೆ ಹಾಗೂ ಅಸ್ಥಿತ್ವ… ಗುಜರಾತಿಗೆ ವಿಮಾನ ಏರುವ ಗಡಿಬಿಡಿಯಲ್ಲಿದ್ದ, ಸಾಕಷ್ಟು ದಣಿದಿದ್ದ ಜಿಗ್ನೇಶ್ ಮೆವಾನಿ ಎಂಬ ತರುಣ ಸಂಘಟಕನನ್ನು ‘ಸಮಾಚಾರ’ ಸೋಮವಾರ ಸಂಜೆ ಬೆಂಗಳೂರಿನಲ್ಲಿ ಭೇಟಿ ಮಾಡಿತು. ಈ ಸಮಯದಲ್ಲಿ ಅವರ ಜತೆ ನಡೆದ 4. 07 ನಿಮಿಷದ ಸಂಭಾಷಣೆಯ ಅಕ್ಷರ ರೂಪ ಇಲ್ಲಿದೆ: *ನೀವು ಪತ್ರಕರ್ತರಾಗಿದ್ದವರು ಎಂದು ಕೇಳಿ ಸಂತೋಷವಾಯಿತು. ಪತ್ರಿಕೋದ್ಯಮ ಬೇಡ ಅಂತ ಅನ್ನಿಸಿತಾ? ಜಿ: ಹೌದು.. ಹೌದು… ನಮಗೆ 22-23 ವರ್ಷವಿದ್ದಾಗ, ಈ ಸಮಾಜವನ್ನು ಬರವಣಿಗೆಯಿಂದ ಬದಲಾಯಿಸಬಹುದು ಎಂಬ ರಮ್ಯವಾದ ಕಲ್ಪನೆಯೊಂದು ಇರುತ್ತದೆ. ಅಂತಹ ಕಲ್ಪನೆಗಳು […]

  October 11, 2016
  ...

  ಜಿಯೋ ‘ಸೈಡ್ ಎಫೆಕ್ಟ್ಸ್’: ಹ್ಯಾಂಡ್ ಸೆಟ್ ಮಾರಾಟ ಬಿಡಿ; ಸರ್ವಿಸ್ ಕ್ಷೇತ್ರವೂ ಉಳಿಯುವುದು ಕಷ್ಟ!

  ಜಿಯೋ ಆಗಮನ ದೇಶದಾದ್ಯಂತ ಡೇಟಾ ಕ್ಷೇತ್ರದಲ್ಲಿ ಒಂದಷ್ಟು ಪರಿಣಾಮಗಳನ್ನು ಮೂಡಿಸುತ್ತಿದೆ. ಉಚಿತ ಡಾಟಾ ಸಹಜವಾಗಿಯೇ 4ಜಿ ಮೊಬೈಲ್ಗಳಿಗೆ ಶುಕ್ರ ದೆಸೆ ಕುದುರಿದೆ. ಹ್ಯಾಂಡ್ ಸೆಟ್ಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಅದರ ಆಳ ಅಗಲಗಳನ್ನು ತಿಳಿದುಕೊಳ್ಳಲು ‘ಸಮಾಚಾರ’ ಬೆಂಗಳೂರಿನ ಪ್ರಖ್ಯಾತ ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟ ರಸ್ತೆ ‘ಎಸ್.ಪಿ ರೋಡ್’ಗೆ ಭೇಟಿ ನೀಡಿದಾಗ ಸಿಕ್ಕ ಮಾಹಿತಿಗಳಿವು. ಆಗಿನ್ನೂ ಬೆಳಗ್ಗೆ 10 ಗಂಟೆ. ಅಂಗಡಿಗಳ ಶಟರು ಮೇಲೇರುತ್ತಿತ್ತಷ್ಟೇ. ನಿಂತಿದ್ದ ಬೈಕ್ ಮೇಲಿನ ಹುಡುಗ “ಯಾವುದು ಬೇಕು.. 4ಜಿ.. 3ಜಿ.. ರಿಪೇರಿ…” ಎಂದು ಕರೆಯುತ್ತಿದ್ದ. ದಯಾಳ್ […]

  September 25, 2016
  ...

  ‘ಜಿಯೋ’ UPDATE: ಟ್ರಾಯ್ ಅಂಗಳದಲ್ಲಿ ‘ಇಂಟರ್ ಕನೆಕ್ಟ್’ ವಿವಾದ; ‘ಫ್ರೀ ಕಾಲಿಂಗ್’ಗೆ ಗಂಡಾಂತರ?

  ‘ಜಿಯೋ’ ಉದ್ಘಾಟನೆಯ ಬೆನ್ನಿಗೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ‘ಟೈಮ್ಸ್ ಆಫ್ ಇಂಡಿಯಾ’ಗೆ ಸುದೀರ್ಘ ಎರಡು ಗಂಟೆಗಳ ಸಂದರ್ಶನ ನೀಡಿದ್ದಾರೆ. ನರೇಂದ್ರ ಮೋದಿ ಜಾಹೀರಾತಿನಿಂದ ಹಿಡಿದು ಜಿಯೋದ ಆದಾಯದವರೆಗೆ ರಿಲಯನ್ಸ್ ದಿಗ್ಗಜ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇದಾದ ಬೆನ್ನಿಗೇ ‘ಇಂಟರ್ ಕನೆಕ್ಟ್’ ವಿವಾದ ‘ಟ್ರಾಯ್’ (ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ಮೆಟ್ಟಿಲೇರಿದೆ. ಸದ್ಯ, ಇದನ್ನು ಪರಿಹರಿಸಿಕೊಳ್ಳಲು ‘ಟ್ರಾಯ್’ ಜಿಯೋಗೆ ಅವಕಾಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯ ಜಾಹೀರಾತಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಖೇಶ್, ತಾವು […]

  September 11, 2016
  ...

  ‘ಜಿಯೋ’ದಿಂದಾಗಿ ಏರ್ಟೆಲ್ ಕಳೆದುಕೊಳ್ಳೋದು ನಗಣ್ಯ!

  ರಿಲಯನ್ಸ್ ಜಿಯೋ ಸೇವೆಯಿಂದಾಗಿ ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಕಂಪೆನಿ ಏರ್ಟೆಲ್ ಒಂದಷ್ಟು ನಷ್ಟ ಅನುಭವಿಸಲಿದೆ. ಆದರೆ, ಗ್ರಾಹಕರ ವಿಚಾರದಲ್ಲಿ ಏರ್ಟೆಲ್ ದೊಡ್ಡ ಮಟ್ಟದ ಕುಸಿತ ಕಾಣುವುದಿಲ್ಲ ಎಂದು ‘ಎಸ್ ಆ್ಯಂಡ್ ಪಿ’ ಗ್ಲೋಬಲ್ ರೇಟಿಂಗ್ಸ್ ಹೇಳಿದೆ. ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಏರ್ಟೆಲ್ ತನ್ನ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಕುಸಿತ ಕಾಣಲಿದೆ. 2016ರ ಆರ್ಥಿಕ ವರ್ಷದಲ್ಲಿ ಶೇಕಡಾ 10ರಷ್ಟು ಕಳೆದುಕೊಳ್ಳಲಿದೆ. ಆದರೆ ಮುಂದಿನ ಎರಡು ವರ್ಷಗಳಲ್ಲಿ, ಅಂದರೆ 2017 ಹಾಗೂ 2018ರ ಆರ್ಥಿಕ ವರ್ಷದಲ್ಲಿ ನಷ್ಟದ […]

  September 7, 2016
  ...

  ಸರಕಾರಿ ಸ್ವಾಮ್ಯದ BSNL ಉದ್ಧಾರ ಮಾಡಲು ಪ್ರಧಾನಿ ಮೋದಿ ಇಷ್ಟು ಮಾಡಿದ್ದರೆ ಸಾಕಿತ್ತು!

  ‘ರಿಲಯನ್ಸ್ ಜಿಯೋ’ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡ ಬೆನ್ನಿಗೆ ಟೀಕೆಗಳು ಶುರುವಾಗಿವೆ. ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಪ್ರಚಾರ ಮಾಡುವುದು ಬಿಟ್ಟು ಖಾಸಗಿ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೇಕೆ ಎಂಬ ಪ್ರಶ್ನೆಸಹಜವಾಗಿಯೇ ಕೇಳಿಬರುತ್ತಿದೆ. ಇವತ್ತು ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ನಷ್ಟದಲ್ಲಿ ಮುಳುಗಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಸರಕಾರಗಳ ನಿರ್ಲಕ್ಷ, ಅಧಿಕಾರಿ ವರ್ಗದ ಅಸಡ್ಡೆ ಮತ್ತು ಭ್ರಷ್ಟಾಚಾರಗಳು ಕಣ್ಣಿಗೆ ರಾಚುತ್ತವೆ. ಜತೆಗೆ, ದೂರ ಸಂಪರ್ಕ ಕ್ಷೇತ್ರದಲ್ಲಿ ಸರಕಾರಿ ಸ್ವಾಮ್ಯದ ಖಾಸಗಿ ಕಂಪೆನಿಗಳ ಉದ್ಧಾರಕ್ಕೆ ನೀರು ಗೊಬ್ಬರ ಸುರಿದಿರುವುದು ಕಾಣಿಸುತ್ತದೆ. […]

  September 5, 2016
  ...

  ‘ದಿ ಪ್ರೈಮ್ ಮಿನಿಸ್ಟರ್ಸ್ ಆಫ್ ರಿಲಯನ್ಸ್ ಇಂಡಿಯಾ’: ಇಂದಿರಾ ಗಾಂಧಿಯಿಂದ ಮೋದಿವರೆಗೆ…!

  ದಿನ ಪತ್ರಿಕೆಗಳ ಮುಖಪುಟದಲ್ಲಿ ಮುಖೇಶ್ ಅಂಬಾನಿ ಒಡೆತನದ ‘ರಿಲಯನ್ಸ್ ಜಿಯೋ’ ಜಾಹೀರಾತಿನಲ್ಲಿ ಮೋದಿ ಫೋಟೋ ಅಚ್ಚಾಗಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಸರಕಾರದ ಅಧಿಕೃತ ಪ್ರತಿನಿಧಿಯೊಬ್ಬರ ಫೊಟೋ ಕಾರ್ಪೋರೇಟ್ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಮೋದಿ ಸರಕಾರದ ಜೊತೆ ರಿಲಯನ್ಸ್ ಹೊಂದಿರಬಹುದಾದ ‘ವಿಶೇಷ ಸಂಬಂಧ’ವೂ ಈ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದೆ. ಹಾಗೆ ನೋಡಿದರೆ ನರೇಂದ್ರ ಮೋದಿ, ರಿಲಯನ್ಸ್ ಕಂಪನಿ ಜೊತೆಗೆ ವಿಶೇಷ ಸಂಬಂಧ ಹೊಂದಿರುವ ಮೊದಲ ಭಾರತದ ಪ್ರಧಾನಿ ಏನಲ್ಲ ಎನ್ನುತ್ತದೆ ಇತಿಹಾಸ. ಇಂದಿರಾಗಾಂಧಿ ಹಾಗೂ […]

  September 3, 2016
 • 1
 • 2

Top