An unconventional News Portal.

ರಾಹುಲ್ ಗಾಂಧಿ
    ...
    Hardik Patel
    ದೇಶ

    ಬಾಪೂ ನಾಡಿನ ‘ಹನಿಟ್ರ್ಯಾಪ್‌ ಸರಣಿ’: ಹಾರ್ದಿಕ್ ಪಟೇಲ್, ಬಿಜೆಪಿ ಮತ್ತು ‘ಡರ್ಟಿ ಪಾಲಿಟಿಕ್ಸ್’

    ನಿರೀಕ್ಷೆಯಂತೆಯೇ ಗುಜರಾತ್‌ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ‘ಸೀಡಿಯ’ ಮೊರೆ ಹೋಗಿದೆ; ಹಾರ್ದಿಕ್ ಪಟೇಲ್ ಹೋಲುವ ಖಾಸಗಿ ದೃಶ್ಯಗಳು ಹರಿದಾಡುತ್ತಿವೆ. ಇಲ್ಲಿ ಪಾಟೀದಾರ್ ಸಮುದಾಯದ ಮೀಸಲಾತಿ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ನಾಯಕ, 24 ವರ್ಷದ ಹಾರ್ದಿಕ್ ಪಟೇಲ್ ಹೋಲುವ ‘ಸೆಕ್ಸ್‌ ಸಿಡಿ’ಯೊಂದು ಹೊರಬಿದ್ದಿದೆ. ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ, ನಂತರ ಗುಜರಾತ್‌ನ ಸುದ್ದಿ ವಾಹಿನಿಗಳಲ್ಲಿ ಕಳೆದ 24 ಗಂಟೆಯಿಂದ ಈ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಇದರ ಹಿಂದೆ ಬಿಜೆಪಿಯ ರಾಜಕೀಯ ತಂತ್ರಗಾರಿಕೆ ಇದೆ ಎಂದು ಮಾಧ್ಯಮಗಳ ವರದಿಗಳು ಹೇಳುತ್ತಿವೆ. ಸೀಡಿಯಲ್ಲೇನಿದೆ?: ..

    November 14, 2017
    ...
    modi-amit
    ದೇಶ

    ಧರ್ಮ ಮೀರಿಸಿದ ಜಾತಿ ಅಜೆಂಡಾ: ಮೋದಿ- ಶಾ ಜೋಡಿಗೆ ಈ ಬಾರಿ ಗುಜರಾತ್‌ ಸುಲಭದ ತುತ್ತಲ್ಲ

    “ನನ್ನ 30 ವರ್ಷಗಳ ಪತ್ರಿಕೋದ್ಯಮದ ಅನುಭವದಲ್ಲಿ ಇಂತಹದೊಂದು ಚುನಾವಣೆಯ ಅಖಾಡವನ್ನು ನೋಡಿರಲಿಲ್ಲ,” ಎಂದರು ಆಶಿಶ್ ಅಮಿನ್. ಅಹಮದಬಾದ್‌ನಲ್ಲಿರುವ ‘ನವ ಗುಜರಾತ್‌ ಸಮಯ್‌’ ಪತ್ರಿಕೆಯ ರಾಜಕೀಯ ವಿಭಾಗದಲ್ಲಿ ಅವರೀಗ ಪ್ರಧಾನ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಗುಜರಾತ್‌ ಚುನಾವಣೆಯ ಹಿನ್ನೆಲೆಯಲ್ಲಿ ಅನುಭವಿ ವರದಿಗಾರ ಅಮಿನ್‌ ಸಾಕಷ್ಟು ಒಳನೋಟಗಳೊಂದಿಗೆ ಮಾತನಾಡುತ್ತಿದ್ದಾರೆ. “ಇದೇ ಮೊದಲ ಬಾರಿಗೆ ಜಾತಿ ವಿಚಾರ ಚುನಾವಣೆಯ ಕೇಂದ್ರಸ್ಥಾನಕ್ಕೆ ಬಂದಿದೆ. ಕಳೆದ 22 ವರ್ಷಗಳಲ್ಲಿ ಗುಜರಾತ್‌ ಚುನಾವಣೆಗಳು ನಡೆದಿದ್ದು ಧರ್ಮ ಮತ್ತು ಅಭಿವೃದ್ಧಿಯ ತಳಹದಿಯ ಮೇಲೆ. ಆದರೆ ಇದೇ ಮೊದಲ..

    October 24, 2017
    ...
    indira-canteen-2
    ಸುದ್ದಿ ಸಾರ

    ‘ಅವರದ್ದು ಮನ್ ಕಿ ಬಾತ್; ನಮ್ಮದು ವಾಂಗೀಬಾತ್’: ರಾಜಧಾನಿಯ ಬಡವರ ಪಾಲಿನ ‘ಅನ್ನ ಭಾಗ್ಯ’ ಇಂದಿರಾ ಕ್ಯಾಂಟೀನ್

    ಅವರದ್ದು ಮೂರು ವರ್ಷಗಳಲ್ಲಿ ‘ಮನ್ ಕಿ ಬಾತ್’, ನಮ್ಮದು… ವಾಂಗೀಬಾತ್… ಹೀಗಂತ ಹೇಳಿದ್ದು ಸಿಎಂ ಸಿದ್ದರಾಮಯ್ಯ. ಬೆಂಗಳೂರಿನ ಅಶೋಕ ಪಿಲ್ಲರ್ ಸಮೀಪದ ‘ಇಂದಿರಾ ಕ್ಯಾಂಟೀನ್’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು ಮಾತುಗಳಲ್ಲಿ ಛೇಡಿಸಿದರು. “ಇಂದಿರಾ ಗಾಂಧಿ ಬಡವರನ್ನು, ರೈತರನ್ನು ಬ್ಯಾಂಕ್ ಮೆಟ್ಟಿಲು ಹತ್ತುವಂತೆ ಮಾಡಿದ್ದರು. ಆದರೆ, ಡಿಮಾನಟೈಸೇಷನ್ ಹೆಸರಿನಲ್ಲಿ ಪ್ರಧಾನಿ ಮೋದಿ ಬ್ಯಾಂಕ್’ಗಳಿಂದ ಬಡವರನ್ನು, ರೈತರನ್ನು ದೂರ ಇಡಲು ಹೊರಟಿದ್ದಾರೆ. ಕಪ್ಪು ಹಣ ತರುತ್ತೇನೆ ಎಂದರು. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದರು. ಆದರೆ..

    August 16, 2017
    ...
    national-herald-final
    ರಾಜ್ಯ

    ‘ನ್ಯಾಷನಲ್ ಹೆರಾಲ್ಡ್‌’ಗೆ ರಾಹುಲ್ ಗಾಂಧಿ ಮರುಜೀವ: ಸ್ಮರಣಿಕೆ ನೆಪದಲ್ಲಿ ಸಾಂಕೇತಿಕ ನಡೆ!

    ದೇಶಾದ್ಯಂತ ಅಧಿಕಾರ ಕೇಂದ್ರಗಳನ್ನು ಕಳೆದುಕೊಂಡಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ‘ನ್ಯಾಷನಲ್ ಹೆರಾಲ್ಡ್’ ದಂತಕತೆಗೆ ಮರುಹುಟ್ಟು ನೀಡುವ ತಯಾರಿಯಲ್ಲಿದೆ. ಸೋಮವಾರ ಬೆಂಗಳೂರಿಗೆ ಭೇಟಿ ನೀಡಿರುವ ರಾಹುಲ್ ಗಾಂಧಿ, ನೆಹರೂ ಹುಟ್ಟು ಹಾಕಿದ ಪತ್ರಿಕೆಯ ‘ಸ್ಮರಣ ಸಂಚಿಕೆ’ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸ್ವಾತಂತ್ರ ಪೂರ್ವದ ಇತಿಹಾಸ, ಸುದೀರ್ಘ ಹಾದಿಯಲ್ಲಿ ಎದುರಿಸಿದ ಆರ್ಥಿಕ ಮುಗ್ಗಟ್ಟುಗಳು, ಇತ್ತೀಚೆಗೆ ಕೇಳಿಬಂದ ವ್ಯವಹಾರಿಕ ಅವ್ಯವಹಾರಗಳ ಆರೋಪ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ತನ್ನ ಪುನರುಜ್ಜೀವನಕ್ಕಾಗಿ ನಡೆಸುತ್ತಿರುವ ಹೋರಾಟಗಳ ಹಿನ್ನೆಲೆಯಲ್ಲಿ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ಹೆಸರಿನಲ್ಲಿ ನಡೆಯುತ್ತಿರುವ..

    June 12, 2017
    ...
    uttar-pradesh-election-1
    ವಿಚಾರ

    ‘ಮಾಡು ಇಲ್ಲವೇ ಮಡಿ’: ಉತ್ತರಪ್ರದೇಶದ ‘ದಿಕ್ಸೂಚಿ ಚುನಾವಣೆ’ಯಲ್ಲಿ ಯಾರು ಗೆದ್ದರೆ ಏನೇನು?

    ಉತ್ತರಪ್ರದೇಶದ ಶಾಸನ ಸಭಾ ಚುನಾವಣೆಗಳ ಫಲಿತಾಂಶವು ಭಾರತದ ರಾಜಕಾರಣದ ಭವಿಷ್ಯದ ಮೇಲೆ ನಿರ್ಣಾಯಕ ಪ್ರಭಾವನ್ನು ಬೀರಲಿದೆ. ಪ್ರತಿ ಆರು ಭಾರತೀಯರಲ್ಲಿ ಒಬ್ಬರು ಉತ್ತರ ಪ್ರದೇಶದಲ್ಲಿ ವಾಸಿಸುತ್ತಾರೆ ಎಂಬುದೂ ಮತ್ತು ಅದು ಪ್ರತ್ಯೇಕ ರಾಷ್ಟ್ರವಾಗಿದ್ದಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಐದನೇ ರಾಷ್ಟ್ರವಾಗಿರುತ್ತಿತ್ತೆಂಬುದೇ ಅದರ ಮಹತ್ವವನ್ನು ಹೇಳುತ್ತದೆ. ಆದರೆ ಇತಿಹಾಸದಲ್ಲಿ ಒಮ್ಮೊಮ್ಮೆ ಉತ್ತರ ಪ್ರದೇಶದ ಚುನಾವಣೆಗಳಿಗೆ ಅದರ ಬೃಹತ್ ಗಾತ್ರಕ್ಕೂ ಮಿಗಿಲಾದ ಮಹತ್ವವಿರುವ ಗಳಿಗೆಯು ಬರುತ್ತದೆ. ಈ ಚುನಾವಣೆಯ ನಡೆಯುತ್ತಿರುವ ಸಂದರ್ಭ ಮತ್ತು ಸಮಯದ ಕಾರಣದಿಂದ ಅಂತಹ..

    February 20, 2017
    ...
    sonia-rajdeep-interview-2
    ದೇಶ

    ಅತ್ತೆ ಕಾಲವನ್ನು ಬಣ್ಣಿಸಿದ ಸೊಸೆ: ಭಾರತದ ‘ಉಕ್ಕಿನ ಮಹಿಳೆ’ ಬಗ್ಗೆ ಸೋನಿಯಾ ಏನಂದರು?

    ದೇಶದ ಕಂಡ ಖಡಕ್ ರಾಜಕಾರಣಿ, ಉಕ್ಕಿನ ಮಹಿಳೆ, ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ವ್ಯಾಪಕ ಟೀಕೆಗೆ ಗುರಿಯಾದ ರಾಜಕಾರಣಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮಶತಮಾನೋತ್ಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿರಾ ಅವರನ್ನು ಹತ್ತಿರದಿಂದ ಬಲ್ಲ ಕಾಂಗ್ರೆಸ್ ಅಧ್ಯಕ್ಷೆ, ಸೊಸೆ ಸೋನಿಯಾ ಗಾಂಧಿ ಅವರ ಸಂದರ್ಶನವನ್ನು ‘ಇಂಡಿಯಾ ಟುಡೆ’ ಭಿತ್ತರಿಸಿದೆ. ಪತ್ರಕರ್ತ ರಾಜ್ದೀಪ್ ಸರ್ ದೇಸಾಯಿ ನಡೆಸಿದ ಸಂದರ್ಶನ ಆಯ್ದ ಭಾಗಗಳನ್ನು ‘ಸಮಾಚಾರ’ ಇಲ್ಲಿ ಕನ್ನಡಕ್ಕೆ ತಂದಿದೆ.  ಇಂದಿರಾ ಗಾಂಧಿ ವ್ಯಕ್ತಿತ್ವ, ಅವರ ಸಾವಿನ ಕ್ಷಣ, 1971ರ..

    November 25, 2016
    ...
    Rahul arrest
    ದೇಶ

    ‘OROP ಹೈಡ್ರಾಮ’: ಮಾಜಿ ಸೈನಿಕನ ಸಾವಿಗೆ ಕಾರಣ ಯಾರು?

    ದೆಹಲಿಯ ಜನಪಥ್ ನಲ್ಲಿ ಮಾಜಿ ಸೈನಿಕರೊಬ್ಬರು ‘ಏಕ ಶ್ರೇಣಿ ಏಕ ಪಿಂಚಣಿ’ಗಾಗಿ ಆಗ್ರಹಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮಂಗಳವಾರ ನಡೆದಿತ್ತು. ಈ ಘಟನೆಯೀಗ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದೇ ವಿಚಾರವಾಗಿ ಸೈನಿಕರ ಜೊತೆ ದೀಪಾವಳಿ ಆಚರಿಸಿದ್ದ ಮೋದಿ ವಿರುದ್ಧ ವಿರೋಧ ಪಕ್ಷಗಳು ಹರಿಹಾಯುತ್ತಿದ್ದು, ರಾಜಕೀಯ ಕೆಸರೆರೆಚಾಟಕ್ಕೆ ನಾಂದಿ ಹಾಡಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ದೀರ್ಘ ಕಾಲದಿಂದ ‘ಏಕ ಶ್ರೇಣಿ ಏಕ ಪಿಂಚಣಿ’ಗಾಗಿ ಆಗ್ರಹಿಸಿ ಮಾಜಿ ಸೈನಿಕರು ಧರಣಿ ನಡೆಸುತ್ತಿದ್ದರು. ಕೆಲವು ದಿನಗಳ..

    November 3, 2016
    ...
    up-election
    ದೇಶ

    ಹನಿಟ್ರ್ಯಾಪ್; ಪಕ್ಷಾಂತರ ಮತ್ತು ಕೌಟುಂಬಿಕ ಕಲಹ: ಇದು ಉತ್ತರ ಪ್ರದೇಶ ಚುನಾವಣಾ ಪ್ರಹಸನದ ‘ಅಂಕ ಒಂದು’!

    ದೇಶದಲ್ಲಿಯೇ ಅತಿ ಹೆಚ್ಚು ವಿಧಾನಸಭಾ ಹಾಗೂ ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ, ಉತ್ತರ ಪ್ರದೇಶದಲ್ಲಿ ಚುನಾವಣಾ ಪೂರ್ವ ಚಟುವಟಿಕೆಗಳು ಗರಿಗೆದರಿವೆ. 2017ರ ಮಾರ್ಚಿನಲ್ಲಿ ನಡೆಯಲಿರುವ ಇಲ್ಲಿನ ವಿಧಾನಸಭಾ ಚುನಾವಣೆಯ ಕಾವು ನಿಧಾನವಾಗಿ ಏರಲಾರಂಭಿಸಿದೆ. ಉತ್ತರ ಪ್ರದೇಶದ ಗೆದ್ದುಗೆಗೂ, ದೇಶದ ಚುಕ್ಕಾಣಿಗೂ ಹತ್ತಿರ ಸಂಬಂಧವೊಂದು ಇದೆ ಎಂಬ ನಂಬಿಕೆ ಸಹಜವಾಗಿಯೇ, ದೊಡ್ಡ ರಾಜ್ಯದ ಆಡಳಿತದ ಕುರ್ಚಿಗಾಗಿ ನಡೆಯುತ್ತಿರುವ ಕಸರತ್ತುಗಳಿಗೆ ರಂಗು ತುಂಬಿದೆ. ಗುರುವಾರ ನಡೆದ ಪ್ರಮುಖ ಬೆಳವಣಿಗೆಯಲ್ಲಿ ಕಾಂಗ್ರಸ್ ಪಕ್ಷದ ಹಿರಿಯ ನಾಯಕಿ ರೀಟಾ ಬಹುಗುಣ ಜೋಶಿ ಕಾಂಗ್ರೆಸ್ ಪಾಳೆಯ ತೊರೆದು ಬಿಜೆಪಿಯ..

    October 21, 2016
    ...
    india-court-1
    ದೇಶ

    ಕ್ರಿಮಿನಲ್ ಮಾನನಷ್ಟ ಕಾನೂನಿನಲ್ಲಿ ಬದಲಾವಣೆ ಅಗತ್ಯವಿಲ್ಲ: ಸುಪ್ರಿಂ ಮಹತ್ವದ ತೀರ್ಪು

    ‘ಲ್ಯಾಂಡ್ ಮಾರ್ಕ್’ ಎಂದು ಕರೆಯಬಹುದಾದ ತೀರ್ಪೊಂದನ್ನು ನೀಡಿರುವ ಸುಪ್ರಿಂ ಕೋರ್ಟ್ ಕ್ರಿಮಿನಲ್ ಮಾನನಷ್ಟ ಕಾನೂನಿನಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಎಂದು ಶುಕ್ರವಾರ ತಿಳಿಸಿದೆ. ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕಾನೂನುಗಳನ್ನು (ಐಪಿಸಿ 499, 500) ಸುಧಾರಣೆ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಇದು ರಾಜಕಾರಣಿಗಳು, ಹೋರಾಟಗಾರರು ಹಾಗೂ ಪತ್ರಕರ್ತರ ಮೇಲೆ ನೇರ ಪರಿಣಾಮ ಬೀರುಲಿರುವ ತೀರ್ಪು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಐಪಿಸಿ..

    May 13, 2016

Top