An unconventional News Portal.

ರಾಜ್ಯಸಭೆ
    ...
    rajiv-ravi-hegde-final
    ಪತ್ರಿಕೆ

    ‘ಥ್ಯಾಂಕ್ಸ್ ಟು ರಾಜೀವ್ ಚಂದ್ರಶೇಖರ್’: ಕನ್ನಡ ಪ್ರಭ, ಸುವರ್ಣಗಳಲ್ಲಿ ಬದಲಾವಣೆ ಮಾತ್ರವೇ ಶಾಶ್ವತ!

    “ಸ೦ಪಾದಕರನ್ನು ಅತ್ಯ೦ತ ನಿದ೯ಯವಾಗಿ, ಹೇಯವಾಗಿ ಹೇಗೆ ಕೆಲಸದಿ೦ದ ತೆಗೆದುಹಾಕಬಹುದು ಎ೦ಬುದನ್ನು ಒ೦ದು ಕಲೆಯಾಗಿ ಕರಗತ ಮಾಡಿಕೊ೦ಡ ಶ್ರೇಯಸ್ಸು ರಾಜೀವ ಚ೦ದ್ರಶೇಖರ್ ಅವರದ್ದು…” ಹೀಗಂತ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ‘ಸುವರ್ಣ ನ್ಯೂಸ್’ ಮತ್ತು ಕನ್ನಡ ಪ್ರಭ ಪತ್ರಿಕೆಗಳಿಗೆ ಪ್ರಧಾನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ನಂತರದ ದಿನಗಳಲ್ಲಿ ತಮ್ಮ ಅಂಕಣವೊಂದರಲ್ಲಿ ಪ್ರಸ್ತಾಪಿಸಿದ್ದರು. ಇವರ ಮಾತುಗಳಿಗೆ ಪೂರಕವಾಗಿ ಉದ್ಯಮಿ, ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ಸಂಸದ ರಾಜೀವ್ ಚಂದ್ರಶೇಖರ್ ತಮ್ಮ ಮಾಲೀಕತ್ವದ ಕನ್ನಡದ ಮಾಧ್ಯಮ ಸಂಸ್ಥೆಗಳಿಗೆ ಹೊಸ ಸಂಪಾದಕರನ್ನು ಕರೆತರಲು ಹೊರಟಿದ್ದಾರೆ. ಹೊಸ ವರ್ಷ2017ಕ್ಕೆ ‘ಸುವರ್ಣ ನ್ಯೂಸ್’..

    December 30, 2016
    ...
    modi-jio-add-1
    ದೇಶ

    ಜಿಯೋ ಪ್ರಚಾರಕ್ಕೆ ಪ್ರಧಾನಿ ಭಾವಚಿತ್ರ ಬಳಕೆ: ಹೆಚ್ಚೆಂದರೆ 500 ರೂಪಾಯಿ ದಂಡ ಬೀಳಬಹುದು!

    ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ಅನುಮತಿ ಇಲ್ಲದೆ ‘ಜಿಯೋ’ ಸಿಮ್ ವ್ಯಾಪಾರದ ಪ್ರಚಾರಕ್ಕೆ ಬಳಸಿಕೊಂಡ ಆರೋಪ ಮೇಲೆ ರಿಲಾಯನ್ಸ್ ಕಂಪನಿ ಮೇಲೆ ದಂಡ ಹಾಕುವ ಸಾಧ್ಯತೆ ಇದೆ. ಅದು ಎಷ್ಟು ಎಂದು ಹೇಳಿದರೆ ನೀವು ಅಚ್ಚರಿ ಪಡುತ್ತೀರ… ಬರೀ 500 ರೂಪಾಯಿಗಳು! ಹೌದು, ಮೂರು ತಿಂಗಳ ಹಿಂದೆ ಜಿಯೋ ಮಾರುಕಟ್ಟೆಗೆ ಬಿಡುಗಡೆ ಮಾಡುವ ಹೊತ್ತಿನಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭಾರಿ ಪ್ರಮಾಣದ ಜಾಹೀರಾತುಗಳನ್ನು ನೀಡಲಾಗಿತ್ತು. ಈ ಸಮಯದಲ್ಲಿ ಪ್ರಧಾನಿ ಮೋದಿ ಭಾವಚಿತ್ರವನ್ನು ಕಂಪನಿ ಬಳಸಿಕೊಂಡಿತ್ತು. ಆದರೆ, ಇದಕ್ಕೆ..

    December 3, 2016
    ...
    manmohan-singh
    ದೇಶ

    ‘ಅನಾಣ್ಯೀಕರಣದ ಚರ್ಚೆ’: ಇವತ್ತೂ ಮೌನ ಮುರಿಯದ ಮೋದಿ; ‘ಮೌನಿ ಮಾತಿಗೆ’ ಮರುಳಾದ ಸಂಸತ್!

    ನಿರೀಕ್ಷೆಯಂತೆಯೇ, ಗುರುವಾರವೂ ಪ್ರಧಾನಿ ನರೇಂದ್ರ ಮೋದಿ ಸಂಸತ್ ಅಧಿವೇಶದಲ್ಲಿ ನೋಟು ಬದಲಾವಣೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಹೊರ ನಡೆದಿದ್ದಾರೆ. ಕಳೆದ ಐದು ದಿನಗಳಿಂದ ದೇಶದಲ್ಲಿ ಎದ್ದಿರುವ ನೋಟು ಬದಲಾವಣೆ ಹಾಹಾಕಾರದ ಬಗ್ಗೆ ಪ್ರಧಾನಿ ಪ್ರತಿಕ್ರಿಯೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಲೇ ಬಂದಿದ್ದವು. ಇದೊಂದು ಕಾರಣಕ್ಕಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಧಿವೇಶನ ಸಾಂಗವಾಗಿ ನಡೆಯದೆ ಮುಂದೂಡಲ್ಪಡುತ್ತಲೇ ಬಂದಿತ್ತು. ಕೊನೆಗೆ, ಗುರುವಾರ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಪ್ರಕಟಿಸಿತ್ತು. ಗುರುವಾರ ಬೆಳಗ್ಗೆ ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜ್ಯಸಭೆಯಲ್ಲಿ..

    November 24, 2016
    ...
    kpsc-kagodu-1
    KPSC NEWS

    ಕೆಪಿಎಸ್ಸಿ ಅದ್ಯಕ್ಷ ಸ್ಥಾನಕ್ಕೆ ಕಳಂಕಿತ ಅಧಿಕಾರಿ ಶಾಮ್ ಭಟ್: ಸರಕಾರದ ನಡೆಗೆ ಸ್ಪೀಕರ್ ಕಾಗೋಡು ಗರಂ

    ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಅಧ್ಯಕ್ಷ ಸ್ಥಾನಕ್ಕೆ ಬಿಡಿಎ ಆಯುಕ್ತ ಶಾಮ್‍ ಭಟ್ ಅವರ ಹೆಸರನ್ನು ಶಿಫಾರಸು ಮಾಡಿರುವ ಸರ್ಕಾರದ ಕ್ರಮಕ್ಕೆ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, “ಕಳಂಕವನ್ನು ಹೊತ್ತುಕೊಂಡಿರುವ ಅಧಿಕಾರಿ ಶಾಮ್‍ ಭಟ್ ಹೆಸರನ್ನು ಶಿಫಾರಸು ಮಾಡಿರುವ ಕ್ರಮ ಸರಿಯಲ್ಲ,” ಎಂದು ಗರಂ ಆಗಿ ನುಡಿದರು. “ರಾಜ್ಯಪಾಲರು ಅವರ ಹೆಸರನ್ನು ಅಂಗೀಕರಿಸುತ್ತಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಇವರ ಹೆಸರನ್ನು ಶಿಫಾರಸು..

    June 8, 2016
    ...
    RS investigation
    ಟಿವಿ

    ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ: ‘ಟೈಮ್ಸ್ ನೌ’ಗೆ ‘ಆಫ್ ದಿ ರೆಕಾರ್ಡ್’ ಮಾಹಿತಿಯೇ ವರ!

    ‘ಆಫ್ ದಿ ರೆಕಾರ್ಡ್’.. ಪತ್ರಿಕೋದ್ಯಮದಲ್ಲಿದ್ದವರಿಗೆ ಈ ಪದದ ಅರ್ಥ ಗೊತ್ತಿರುತ್ತದೆ. ಮೂಲಗಳ ಜತೆ ವರದಿಗಾರರು ಒಂದು ಕ್ಷಣ ವೃತ್ತಿಯನ್ನು ಮರೆತು ಮಾತನಾಡುವುದು, ಅವುಗಳನ್ನು ಭಿತ್ತರಿಸುವುದಿಲ್ಲ ಅಥವಾ ಪ್ರಕಟಿಸುವುದಿಲ್ಲ ಎಂಬ ಕರಾರಿನ ಮೇಲೆ ಮಾಹಿತಿ ಪಡೆದುಕೊಳ್ಳುವುದೇ ಈ ‘ಆಫ್ ದಿ ರೆಕಾರ್ಡ್’… ಅಲ್ಲಿ ಕರಾಳ ಸತ್ಯಗಳು ಅನಾವರಣಗೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಂತ ಅವುಗಳನ್ನು ಯಾರೂ ಸುದ್ದಿ ಮಾಡುವುದಿಲ್ಲ. ಅದು ವರದಿಗಾರಿಕೆಯ ಅಲಿಖಿತ ನಿಯಮ. ಇದಕ್ಕಿರುವ ಕಾರಣಗಳಲ್ಲಿ ಒಂದು ಪತ್ರಿಕೋದ್ಯಮದ ಕೆಲವು ಮೂಲಭೂತ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿದೆ. ಅದರ ಆಚೆಗೂ, ‘ಆಫ್ ದಿ ರೆಕಾರ್ಡ್’ ಮಾಹಿತಿ..

    June 4, 2016
    ...
    cm-crow-public-1
    ಟಿವಿ

    ಸಿಎಂ ಕಾರು, ಕಪ್ಪು ಕಾಗೆ ಮತ್ತು ಮಾಧ್ಯಮ ‘ಅಪಶಕುನಿ’ಗಳಿಗೆ ಆದ ಕಪಾಳಮೋಕ್ಷ!

    ಗುರುವಾರ ಮುಂಜಾನೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಗೃಹ ಕಚೇರಿ ಕೃಷ್ಣಾ ಮುಂದೆ ಕನ್ನಡ ಸುದ್ದಿ ವಾಹಿನಿಗಳ ಪಾಲಿಗೆ ‘ಅಘಾತ’ಕಾರಿ ಘಟನೆಯೊಂದು ನಡೆದು ಹೋಯ್ತು. ಇಡೀ ರಾಜ್ಯವನ್ನೇ ‘ಬೆಚ್ಚಿ ಬೀಳಿಸಿದ’ ಪ್ರಕರಣದಲ್ಲಿ ಘಟನೆಗೆ ಕಾರಣವಾಗಿದ್ದು ಒಂದು ಸಣ್ಣ ಕಾಗೆ ಮರಿ… ನಿರೂಪಣೆ ಯಾಕೋ ಕೊಂಚ ಅತಿಯಾಯಿತು ಅಂತ ಅನ್ನಿಸುತ್ತಿದೆಯಾ? ಗುರುವಾರ ಸಂಜೆ ಹೊತ್ತಿಗೆ ಟಿವಿ ನೋಡುತ್ತಿದ್ದವರಿಗೆ ಇದೇ ಭಾವವೊಂದು ಮೂಡಿತ್ತು. ಮನೆ ಮುಂದೆ ನಿಲ್ಲಿಸಿದ್ದ ಮುಖ್ಯಮಂತ್ರಿ ಕಾರಿನ ಮೇಲೆ ಕೆಲ ನಿಮಿಷಗಳ ಕಾಲ ಕೂತ ಕಾಗೆ ಮರಿ ಅಲ್ಲಿಂದ ಕದಲಿಲ್ಲ. ಸಿಬ್ಬಂದಿ ಓಡಿಸಲು..

    June 3, 2016
    ...
    D-V-Sadananda-Gowda
    ಸುದ್ದಿ ಸಾರ

    ಮೂರು ಕೋಟಿ ಪ್ರಕರಣಗಳ ಬಾಕಿ ಉಳಿಸಿಕೊಂಡಿರುವ ನ್ಯಾಯಾಲಯಗಳು

    ದೇಶದ 24 ಹೈಕೋರ್ಟ್ ಹಾಗೂ ಹಲವು ಕೆಳ ನ್ಯಾಯಾಲಯಗಳಲ್ಲಿ 3 ಕೋಟಿಗೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಲು ಬಾಕಿ ಇವೆ ಎಂದು ರಾಜ್ಯಸಭೆಗೆ ಶನಿವಾರ ಕೇಂದ್ರ ಕಾನೂನು ಸಚಿವ ಡಿ. ವಿ. ಸದಾನಂದಗೌಡ ತಿಳಿಸಿದ್ದಾರೆ. ಕಳೆದ ವರ್ಷ 2 ಕೋಟಿ ಮೊಕದ್ದಮೆಗಳು ಇತ್ಯರ್ಥಗೊಂಡಿದ್ದರೂ, ಹೈ ಕೋರ್ಟ್‍ಗಳಲ್ಲಿ 38.70 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಬೇಕಿದೆ. ಜಿಲ್ಲಾ ಮತ್ತು ಕೆಳ ನ್ಯಾಯಾಲಯಗಳಲ್ಲಿ ಒಟ್ಟು 2.70 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಈಗಾಗಲೇ ಇತ್ಯರ್ಥಗೊಂಡಿರುವ ಪ್ರಕರಣಗಳ ಬಗ್ಗೆ ನ್ಯಾಯಾಲಯದ..

    April 30, 2016
    ...
    kharge-loksabhe
    ದೇಶ

    ಮೊದಲ ದಿನವೇ ಕೋಲಾಹಲ: ಅಧಿವೇಶನಕ್ಕೆ ಉತ್ತರಖಾಂಡ್ ವಿಚಾರವೇ ಹಾಲಹಲ!

    ನಿರೀಕ್ಷೆಯಂತೆ ಸೋಮವಾರದಿಂದ ಪ್ರಾರಂಭವಾದ ಸಂಸತ್ತಿನ ಮುಂದುವರೆದ ಬಜೆಟ್ ಅಧಿವೇಶನದ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಯಾಗಿ ಕಲಾಪವನ್ನು ಮುಂದೂಡಿದ ಪ್ರಸಂಗ ಮೊದಲ ದಿನವೇ ನಡೆಯಿತು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳು ಆಡಳಿತರೂಢ ಎನ್‍ಡಿಎ ವಿರುದ್ದ ಮುಗಿ ಬಿದ್ದವು. ಚುನಾಯಿತ ಸರ್ಕಾರವನ್ನು(ಉತ್ತರಖಾಂಡ್) ದುರುದ್ದೇಶಪೂರ್ವಕವಾಗಿ ವಜಾಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಗ್ಗೊಲೆ ಮಾಡಿದೆ. ಜನ ಅಧಿಕಾರ ಕೊಟ್ಟಿದ್ದಾರೆಂಬ ಒಂದೇ ಒಂದು ಕಾರಣಕ್ಕಾಗಿ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದರ ಬಗ್ಗೆ ಚರ್ಚೆ ನಡೆಸಲು ಸಭಾಪತಿ..

    April 25, 2016

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top