An unconventional News Portal.

ರಾಜಕೀಯ
    ...
    tomoto-3
    ರಾಜ್ಯ

    ‘ರೆಡ್ ಅಲರ್ಟ್‌’: ಮಾರುಕಟ್ಟೆಯಲ್ಲಿ ಟೊಮೊಟೊ ಬೆಲೆ ಶೇ. 700 ಪಟ್ಟು ಹೆಚ್ಚಳ; ಲಾಭ ಯಾರಿಗೆ?

    ಈರುಳ್ಳಿಗೆ ಇರುವ ‘ರಾಜಕೀಯ ಸ್ಥಾನಮಾನ’ ಟೊಮೊಟೊಗೂ ಇದ್ದಿದ್ದರೆ ಇಷ್ಟೊತ್ತಿಗೆ -ವಿರೋಧ ಪಕ್ಷಗಳಿಂದ ಹಿಡಿದು, ಸಾಮಾಜಿಕ ಜಾಲತಾಣಗಳವರೆಗೆ- ಚರ್ಚೆಯ ಕೇಂದ್ರದಲ್ಲಿ ಕೆಂಪು ಬಣ್ಣದ ಆಹಾರ ಬೆಳೆ ಇರುತ್ತಿತ್ತು. ಮಾರುಕಟ್ಟೆಯಲ್ಲಿ ಟೊಮೊಟೊ ಬೆಲೆ ಶೇ. 700 ಪಟ್ಟು ಹೆಚ್ಚಾಗಿದೆ. ಇದು ಸಾಮಾನ್ಯವಾಗಿ ಪ್ರತಿ ವರ್ಷ ಈ ಹೊತ್ತಿನಲ್ಲಿ ಏರಿಕೆಯಾಗುತ್ತಿದ್ದ ಬೆಲೆಗೆ ಹೋಲಿಸಿದರೆ ನೂರಾಟು ಪಟ್ಟು ಹೆಚ್ಚಿದೆ. ಸದ್ಯ ದೇಶಾದ್ಯಂತ ಒಂದು ಕೆ.ಜಿ ಟೊಮೊಟೊ 80- 120 ರೂಗೆ ಬಿಕರಿಯಾಗುತ್ತಿದೆ. ಯಾಕೆ? ಟೊಮೊಟೊ ಬೆಲೆ ಹೆಚ್ಚಳಕ್ಕೆ ಕಾರಣಗಳೇನಿವೆ? ಇದಕ್ಕಾಗಿ ಸರಕಾರ ಏನು ಮಾಡುತ್ತಿದೆ?..

    July 20, 2017
    ...
    siddaramayya-farmer-loan-final
    ರಾಜ್ಯ

    ರೈತರ ಸಾಲ ಮನ್ನಾ ಬೇಡಿಕೆಗೆ ‘ರಾಜಕೀಯ ನಂಟು’; ಶಾಶ್ವತ ಪರಿಹಾರ ಎಂಬ ‘ಕನ್ನಡಿಯೊಳಗಿನ ಗಂಟು’!

    ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ರೈತರ ಪ್ರತಿಭಟನೆ ಕಾವೇರಿರುವ ಹಿನ್ನೆಲೆಯಲ್ಲಿ ರೈತರ ಸಾಲ ‘ಮನ್ನಾ’ ವಿಚಾರ ಮತ್ತೊಮ್ಮೆ ಚರ್ಚಾ ಕೇಂದ್ರಕ್ಕೆ ಬಂದಿದೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ನಡೆದ ಆಡಳಿತ ಪಕ್ಷದ ಶಾಸಕಾಂಗ ಸಭೆಯಲ್ಲಿಯೂ ಇದೇ ವಿಚಾರ ಪ್ರಸ್ತಾಪವಾಗಿದೆ. ಆದರೆ ಈ ಕುರಿತು ‘ಚಕಾರ ಎತ್ತದಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು’ ಎಂದು ವರದಿಗಳು ಹೇಳುತ್ತಿವೆ. ವಿಧಾನಸಭೆಯ ಒಳಗೆ ಹಾಗೂ ಹೊರಗೆ ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ, “ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲ ಮನ್ನಾ ಮಾಡಿದರೆ, ರಾಜ್ಯ..

    June 10, 2017
    ...
    social-survey-karnataka-4
    ರಾಜ್ಯ

    ಸಿದ್ದು ಸರಕಾರದ ‘ಜಾತಿ ಸಮೀಕ್ಷೆ’: ಹೊರಬಿದ್ದ ಅಂಕಿ ಅಂಶಗಳಿಗೆ ಈಗ ಅಧಿಕೃತ ಮೊಹರು!

    ಸ್ವತಂತ್ರ ಭಾರತದ ಮೊಟ್ಟ ಮೊದಲ ‘ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ – ಕರ್ನಾಟಕ’ದ ಕೆಲವು ಅಂಕಿ ಅಂಶಗಳು ಈ ಬಾರಿ ಅಧಿಕೃತವಾಗಿ ಸೋರಿಕೆಯಾಗಿವೆ. ಹೆಚ್ಚು ಕಡಿಮೆ 2016ರ ಏಪ್ರಿಲ್ ತಿಂಗಳಿನಲ್ಲಿ ವಾಟ್ಸಾಪ್‌ಗಳ ಮೂಲಕ ಹರಿದಾಡಿದ ಅಂಕಿ ಅಂಶಗಳನ್ನು ಈ ಬಾರಿ ವಿಶ್ವಾಸಾರ್ಹ ದಿನ ಪತ್ರಿಕೆ ‘ಪ್ರಜಾವಾಣಿ’ ಶನಿವಾರದ ತನ್ನ ಮುಖಪುಟದ ವರದಿಯಲ್ಲಿ ಪ್ರಕಟಿಸಿದೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಜಾತೀವಾರು ಜನಸಂಖ್ಯೆ ವಿಚಾರದಲ್ಲಿ ಇದ್ದ ತಿಳಿವಳಿಕೆಗಳನ್ನು ಸಮೀಕ್ಷೆ ಮಾಹಿತಿ ಬುಡಮೇಲು ಮಾಡುವುದು ಸ್ಪಷ್ಟವಾಗಿದೆ. ಚುನಾವಣೆಗೆ ಇನ್ನೊಂದು ವರ್ಷ..

    May 13, 2017
    ...
    macron-1
    ವಿದೇಶ

    ಎಡವೂ ಬೇಡ; ಬಲವೂ ಬೇಡ: ಮಧ್ಯಮ ಪಂಥೀಯ ಮ್ಯಾಕ್ರನ್ ಗೆಲ್ಲಿಸಿದ ಫ್ಯಾನ್ಸ್ ಜನತೆ

    ಪ್ರಪಂಚದಾದ್ಯಂತ ಕುತೂಹಲವನ್ನು ಹುಟ್ಟುಹಾಕಿದ್ದ ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಮಧ್ಯಮ ಪಂಥೀಯ ‘ಆಮ್ ಮಾರ್ಶ್’ ಪಕ್ಷದ ಎಮ್ಯಾನುಯಲ್ ಮ್ಯಾಕ್ರನ್ ಜಯಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಬಲಪಂಥೀಯ ಪಕ್ಷ ‘ನ್ಯಾಷನಲ್ ಫ್ರಂಟ್’ನ ಲಿ ಪೆನ್‌ರನ್ನು ಅಂತಿಮ ಸುತ್ತಿನಲ್ಲಿ ಸೋಲಿಸಿದ ಮ್ಯಾಕ್ರನ್, ನೆಪೋಲಿಯನ್ ನಂತರ ಅತಿ ಚಿಕ್ಕ ವಯಸ್ಸಿನಲ್ಲಿಯೇ ದೇಶವೊಂದರ ಅಧ್ಯಕ್ಷ ಸ್ಥಾನಕ್ಕೇರಿದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಪ್ರಪಂಚದ ಹಲವು ದೇಶಗಳಲ್ಲಿ ಜನಪ್ರಿಯ, ಬಲಪಂಥೀಯ, ಒಡೆದಾಳುವ, ಧಾರ್ಮಿಕ ನೆಲೆಯ ರಾಜಕೀಯದ ಗಾಳಿ ಬೀಸುತ್ತಿರುವ ವೇಳೆಯಲ್ಲಿಯೇ, ಆರ್ಥಿಕ ವ್ಯವಸ್ಥೆ ಸುಧಾರಣೆಯ ಆಶ್ವಾಸನೆ ಹಿನ್ನೆಲೆಯಲ್ಲಿ,..

    May 8, 2017
    ...
    diddalli-final
    ರಾಜ್ಯ

    ಕೈ ಕೊಟ್ಟ ಕಾಗೋಡು; ಅಖಾಡಕ್ಕಿಳಿದ ಬಿಜೆಪಿ: ದಿಡ್ಡಳ್ಳಿ ಆದಿವಾಸಿಗಳ ಹೋರಾಟದ ಪರಿಣಾಮಗಳೇನು?

    ಕಾಫಿ ತೋಟಗಳು ಹಾಗೂ ಪ್ರವಾಸೋದ್ಯಮದ ಮೆರಗನ್ನು ಹೊದ್ದುಕೊಂಡಿರುವ ಕೊಡಗು ಜಿಲ್ಲೆಯ ತೆರೆಮರೆಯಲ್ಲಿ ನಡೆಯುತ್ತಿದ್ದ ‘ಆಧುನಿಕ ಜೀತ’ದ ಸ್ವರೂಪವನ್ನು ಹೊರಜಗತ್ತಿಗೆ ಪರಿಚಯಿಸಿದ್ದು ದಿಡ್ಡಳ್ಳಿ ಆದಿವಾಸಿಗಳ ಹೋರಾಟ. ಕಳೆದ ವರ್ಷದ ಕೊನೆಯಲ್ಲಿ ವಿರಾಜಪೇಟೆ ಸಮೀಪದ ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಮುಂದಾಗುತ್ತಿದ್ದಂತೆ ಹೋರಾಟವೊಂದು ಹುಟ್ಟಿಕೊಂಡಿತು. ಆದಿವಾಸಿಗಳ ಬೆತ್ತಲೆ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ಇದು ಸದ್ದು ಮಾಡಿತು. ಈ ಮೂಲಕ, ಕೊಡಗು ಜಿಲ್ಲೆಯ ಕಾಫಿತೋಟಗಳ ಬೇಲಿಯ ಒಳಗೆ ನಡೆಯುತ್ತಿದ್ದ ‘ಲೈನ್ ಮನೆ ಜೀತ’ ಪ್ರಕರಣಗಳು ಸುದ್ದಿ ಕೇಂದ್ರಕ್ಕೆ ಬಂದವು…

    May 6, 2017
    ...
    Vinod-Khanna-1
    ಫೋಕಸ್

    70ರ ದಶಕದಲ್ಲಿ ‘ಬಿಗ್ ಬಿ’ಯನ್ನು ಸರಿಗಟ್ಟುವ ತಾಕತ್ತಿದ್ದ ಏಕೈಕ ನಟ ವಿನೋದ್ ಖನ್ನಾ…

    ಮಧು ಚಂದ್ರಪ್ಪ ಅದು 70ರ ದಶಕ. ಹಿಂದಿ ಸಿನೆಮಾ ರಂಗದಲ್ಲಿ ಭರವಸೆ ಮೂಡಿದ್ದ ಇಬ್ಬರು ನಟರ ಪೈಕಿ ಒಬ್ಬರು ಅಮಿತಾಬ್ ಬಚ್ಚನ್; ಇನ್ನೊಬ್ಬರು ವಿನೋದ್ ಖನ್ನಾ. ಅವತ್ತಿಗೆ ಅಮಿತಾಬ್‌ ಅವರಿಗೆ ವೃತ್ತಿರಂಗದಲ್ಲಿ ಪೈಪೋಟಿ ನೀಡುವ ಸಾಧ್ಯತೆ ಇದ್ದ ಏಕೈಕ ನಟ ಖನ್ನಾ. ಗಡಸು ದನಿ, ಸುಂದರ ದೇಹ ಸೌಂದರ್ಯ, ನಟನೆಯ ಕೌಶಲ್ಯ ಹೀಗೆ ಒಬ್ಬ ಯಶಸ್ವಿ ನಟನಾಗಲು ಏನೇನು ಬೇಕಿದ್ದವೋ ಎಲ್ಲವೂ ವಿನೋದ್‌ ಖನ್ನಾ ಅವರಿಗಿತ್ತು. ಜನ ಅವರನ್ನು ಮೆಚ್ಚಿಕೊಂಡಿದ್ದರು; ಅದಕ್ಕಿಂತ ಹೆಚ್ಚಾಗಿ ನಿರ್ಮಾಪಕರು ಅವರನ್ನು ಇಷ್ಟ ಪಡುತ್ತಿದ್ದರು…

    April 27, 2017
    ...
    anganavadi-protest-1
    ರಾಜ್ಯ

    ಆಶ್ವಾಸನೆ ಮೀರಿದ ಬದುಕಿಗಾಗಿ ಕೇಳುತ್ತಿರುವುದು ತಿಂಗಳಿಗೆ 10 ಸಾವಿರ ರೂ.ಗಳು ಮಾತ್ರ!

    “ಹೋರಾಟ ಹೀಗೆಯೇ ಮುಂದುವರಿದರೆ ನಾವು ಬೆಂಗಳೂರಿಗೆ ಮತ್ತೆ ಬರಬೇಕಾಗುತ್ತದೆ. ನಮಗಾಗಿ ಅವರು ಅಲ್ಲಿ ಹೋರಾಟ ಮಾಡಿಕೊಂಡು ಕುಳಿತಿರುವಾಗ ನಾವು ಹೇಗೆ ಮನೆಯಲ್ಲಿ ಅರಾಮಾಗಿ ಇರಲು ಸಾಧ್ಯ. ನೋಡುವ ರಾತ್ರಿ ಹೊತ್ತಿಗೆ ಏನಾಗುತ್ತೆ ಅಂತ…?” ಹೀಗಂದವರು ಮಡಿಕೇರಿ ಮೂಲ ಅಂಗನವಾಡಿ ಕಾರ್ಯಕರ್ತೆಯೊಬ್ಬರು.  ಮಾ18ಕ್ಕೆ ವೈಯಕ್ತಿಕ ಕಾರಣಕ್ಕೆ ಬೆಂಗಳೂರಿಗೆ ಬಂದವರು, ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಆರಂಭಗೊಂಡ ಹೋರಾಟದಲ್ಲಿ ಪಾಲ್ಗೊಂಡು ಇವತ್ತು ಮುಂಜಾನೆ ಮನೆಗೆ ಮರಳಿದ್ದಾರೆ. ಇದೀಗ, ಅಂಗನವಾಡಿ ಕಾರ್ಯಕರ್ತೆಯರ ಹೋರಾಟ ವಿಚಾರ ಮಾಧ್ಯುಮಗಳ ಮೂಲಕ ಪ್ರಸಾರವಾಗುತ್ತಿರುವುದನ್ನು ನೋಡುತ್ತಿರುವ ಅವರಿಗೆ ಮತ್ತೆ ಹೋರಾಟಕ್ಕೆ..

    March 21, 2017
    ...
    yogi-adithyanath-1
    ದೇಶ

    Mockery Of Democracy: ಇದ್ದಲ್ಲೇ ಎದ್ದು ನಿಂತ ‘ದೇವಸ್ಥಾನದ ಅರ್ಚಕ’ ಯೋಗಿ!

    ‘ಯೋಗ’ ಎಂಬುದು ನಾಮಪದ. ಹೊಂದಿಕೆ, ಕೂಡುವುದು, ಇಂದ್ರಿಯ ನಿಗ್ರಹ, ಪ್ರಾಪ್ತಿ, ಧ್ಯಾನ, ಅದೃಷ್ಟ ಹೀಗೆ ಹಲವು ಅರ್ಥಗಳು ಈ ಪದಕ್ಕೆ ಕನ್ನಡದಲ್ಲಿವೆ. ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿರುವ ಆದಿತ್ಯನಾಥ್ ಅವರಿಗೆ ‘ಯೋಗ’ ಒಲಿದಿದೆ ಎಂಬ ವ್ಯಾಖ್ಯಾನಗಳು ಕಳೆದ ಎರಡು ದಿನಗಳ ಅಂತರದಲ್ಲಿ ಕರ್ನಾಟಕದ ಮಾಧ್ಯಮಗಳ ಮೂಲಕ ಸಾರಿ ಸಾರಿ ಹೇಳಲಾಗುತ್ತಿದೆ. ಅವುಗಳ ಪ್ರಕಾರ, ಉತ್ತರ ಪ್ರದೇಶದ ಗೋರಖ್‌ಪುರ್ ಜಿಲ್ಲೆಯ ಸಂಸದರಾಗಿರುವ ಆದಿತ್ಯನಾಥರಿಗೆ ಒಲಿದಿರುವುದು ‘ಯೋಗ’! ವಾಸ್ತವದಲ್ಲಿ ಆ ರಾಜ್ಯದ ಯಾವುದೇ..

    March 20, 2017
    ...
    ent-politics-1
    ರಾಜ್ಯ

    ‘ರಿಯಾಲಿಟಿ ರಾಜಕೀಯ’: ಟೀಕೆ- ಟಿಪ್ಪಣಿಗಳ ಆಚೆಗೆ ಸೃಷ್ಟಿಯಾದ ‘ಮಾಯಾಲೋಕ’!

    ಸಾಮಾಜಿಕ ವಾತಾವರಣದಲ್ಲಿ ಬದುಕಿನ ಚೌಕಟ್ಟುಗಳ ಕುರಿತು ನಡೆಯುವ ಚರ್ಚೆಗಳೂ ಕೂಡ ‘ರಾಜಕೀಯ’ಗೊಳ್ಳಬಹುದು ಎಂಬುದಕ್ಕೆ ಸದ್ಯ ಕರ್ನಾಟಕದ ಒಂದು ವರ್ಗ, ಒಂದು ವಿಚಾರದ ಮೇಲೆ ನಡೆಸುತ್ತಿರುವ ‘ಟೀಕೆ- ಟಿಪ್ಪಣಿ’ಗಳು ಸಾಕ್ಷಿ ಒದಗಿಸುತ್ತಿವೆ. ಮಾ.5ರ ಭಾನುವಾರ ರಾತ್ರಿ ‘ಝೀ ಕನ್ನಡ’ ಮನೋರಂಜನಾ ವಾಹಿನಿಯಲ್ಲಿ ಪ್ರಸಾರವಾದ ‘ರಿಯಾಲಿಟಿ ಶೋ’ ಒಂದರ ಎಪಿಸೋಡಿನ ಒಂದು ಭಾಗ ಮತ್ತು ಅದರ ಪಾತ್ರಧಾರಿಗಳು ಇದಕ್ಕೆ ಕಾರಣ. ಸಾಮಾನ್ಯವಾಗಿ ಮನೋಂಜನಾ ವಾಹಿನಿಗಳಲ್ಲಿ ಬರುವ ಕಾರ್ಯಕ್ರಮಗಳು ಹೀಗೆ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು ಕನ್ನಡದ ಪಾಲಿಗೆ ಅಪರೂಪ. ಅದೂ ಒಂದು ಸಂಗೀತ ಸ್ಪರ್ಧಾ ಕಾರ್ಯಕ್ರಮ. ‘ಸರಿಗಮಪ’..

    March 9, 2017
    ...
    varanasi-narendra-roadshow-1
    ದೇಶ

    ವಾರಣಾಸಿಯತ್ತ ಎಲ್ಲರ ಚಿತ್ತ: ಯುಪಿ ಚುನಾವಣೆಯಲ್ಲಿ ಏನಿದು ‘ಕ್ಷೇತ್ರ ಮಹಾತ್ಮೆ’?

    ಉತ್ತರ ಪ್ರದೇಶ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಇನ್ನು 48 ಗಂಟೆಗಳಷ್ಟೆ ಬಾಕಿ ಇರುವಾಗ, ವಾರಣಾಸಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರಮುಖ ಪಕ್ಷಗಳು ಬಲ ಪ್ರದರ್ಶನಕ್ಕೆ ಇಳಿದಿವೆ. ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ವಾರಣಾಸಿಯ ಬೀದಿಗಳಲ್ಲಿ ಮತದಾರರನ್ನು ಸೆಳೆಯುವ ತಂತ್ರ ಅನುಸರಿಸಿದ್ದರೆ, ವಾರಣಾಸಿಯ ಹೊರಭಾಗದ ದಲಿತ ಬಸ್ತಿಗಳಲ್ಲಿ ಬಿಎಸ್‌ಪಿ ಕೊನೆಯ ಹಂತದಲ್ಲಿ ಮತದಾರರನ್ನು ಆಕರ್ಷಿಸುವ ರ್ಯಾಲಿಗಳನ್ನು ಆಯೋಜಿಸಿದೆ. ಪ್ರಧಾನಿ ಮೋದಿ ಕಳೆದ ಮೂರು ದಿನಗಳಿಂದ ವಾರಣಾಸಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಹಸುಗಳಿಗೆ ಮೇವು ನೀಡುತ್ತಿದ್ದಾರೆ. ಲಕ್ಷಾಂತರ ಜನರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ವಾರಣಾಸಿಯನ್ನು ಕೇಂದ್ರವಾಗಿಟ್ಟುಕೊಂಡು..

    March 6, 2017

Top