An unconventional News Portal.

ರಾಜಕೀಯ ಪಕ್ಷ
    ...

    ಸುಪ್ರಿಂ ಕೋರ್ಟ್ ಮೌಖಿಕ ಪ್ರಶ್ನೆ: ಅಪರಾಧ ಹಿನ್ನೆಲೆಯ ವ್ಯಕ್ತಿ ರಾಜಕೀಯ ಪಕ್ಷದ ಅಧ್ಯಕ್ಷನಾಗಲು ಹೇಗೆ ಸಾಧ್ಯ?

    “ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾದ ವ್ಯಕ್ತಿ ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಲು ಹೇಗೆ ಸಾಧ್ಯ?” ಎಂದು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಪ್ರಶ್ನಿಸಿದ್ದಾರೆ. ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ, ರಾಜಕೀಯ ಪಕ್ಷಗಳ ಈ ವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗ ಮುಂದಾಗಬೇಕು ಎಂದು ಸೋಮವಾರ ಮೌಖಿಕವಾಗಿ ತಿಳಿಸಿದೆ. “ಅಪರಾಧ ಹಿನ್ನೆಲೆಯ ವ್ಯಕ್ತಿ ರಾಜಕೀಯ ಪಕ್ಷವೊಂದರ ಮುಖ್ಯಸ್ಥನಾಗಿದ್ದುಕೊಂಡು ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಸ್ಪರ್ಧಿಸಬೇಕೆಂಬುದನ್ನು […]

    February 12, 2018
    ...

    ‘ಬಜೆಟ್ ವಿಶ್ಲೇಷಣೆ’: ಜೇಟ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ‘ಸಾರಕ್ಕಿಂತ ಅಬ್ಬರವೇ ಜಾಸ್ತಿ’

    (ಈ ಬಾರಿ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಕುರಿತು ಏಕತಾನತೆಯ ವರದಿಗಳನ್ನು ಮಾಧ್ಯಮಗಳು ಮುಂದಿಟ್ಟಿವೆ. ಜನಪ್ರಿಯತೆಗೆ ಒತ್ತು ನೀಡದೆ ದೂರದೃಷ್ಟಿಯನ್ನು ಪ್ರದರ್ಶಿಸಿದ ‘ಪ್ರಗತಿಪರ’ ಬಜೆಟ್ ಇದು ಎಂದು ಅವು ಹಾಡಿ ಹೊಗಳಿದೆ. ಜೇಟ್ಲಿ ಮಂಡಿಸಿದ ಮುಂಗಡ ಪತ್ರದ ಕುರಿತು ಆರ್ಥಿಕ ವಿಶ್ಲೇಷಣೆಗಳಿಗೆ ಹೆಸರಾದ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ (EPW) ನಿಖರ ಒಳನೋಟಗಳನ್ನು ಒಳಗೊಂಡ ಸಂಪಾದಕೀಯವನ್ನು ಬರೆದಿದೆ. ಅದು ನಾಳೆ-ಶನಿವಾರ- ಪ್ರಕಟವಾಗಲಿದೆ. ಅದರ ಕನ್ನಡಾನುವಾದ ಇಲ್ಲಿದೆ) ಕನ್ನಡಕ್ಕೆ: ಶಿವಸುಂದರ್    ಕೇಂದ್ರ ಸರ್ಕಾರದ 2017-18ನೇ ಸಾಲಿನ ಬಜೆಟ್ಟನ್ನು ನಿರೀಕ್ಷಿಯಂತೆಯೇ ಬಹಳಷ್ಟು ಮಾಧ್ಯಮಗಳು […]

    February 3, 2017
    ...

    ರಾಜಕೀಯ ಪಕ್ಷಗಳ ದೇಣಿಗೆಗೆ ಕಡಿವಾಣ: ‘ರಂಗೋಲಿ ಕೆಳಗೆ ತೂರುವವರಿಗೆ’ ಇಲ್ಲಿದೆ ಅವಕಾಶ!

    ರಾಜಕೀಯ ಪಕ್ಷಗಳಿಗೆ ಹರಿದು ಬರುವ ದೇಣಿಗೆಗೆ ಕಡಿವಾಣ ಹಾಕುವ ಸಂಬಂಧ ಈ ಬಾರಿಯ ಬಜೆಟ್ ಮಂಡನೆ ವೇಳೆ ಕೇಂದ್ರ ಸರಕಾರ ಕ್ರಮಗಳನ್ನು ಘೋಷಣೆ ಮಾಡಿದೆ. ಈ ಹಿಂದೆ 20 ಸಾವಿರದವರೆಗೆ ನಗದು ರೂಪದಲ್ಲಿ ಅನಾಮದೇಯ ವ್ಯಕ್ತಿಗಳಿಂದ ಪಕ್ಷಗಳು ‘ದೇಣಿಗೆ’ ಪಡೆಯುವ ಅವಕಾಶ ಇತ್ತು. ಇದಕ್ಕೆ ಚುನಾವಣಾ ಆಯೋಗ ಮತ್ತು ಸರಕಾರೇತರ ಸಂಸ್ಥೆಗಳು ವಿರೋಧವನ್ನು ವ್ಯಕ್ತಪಡಿಸಿದ್ದವು. ಕೇಂದ್ರ ಸರಕಾರ 2017-18ರ ಬಜೆಟ್ ಮಂಡನೆ ವೇಳೆ, ಅನಾಮದೇಯ ವ್ಯಕ್ತಿಗಳಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುವ ಮಿತಿಯನ್ನು 2 ಸಾವಿರ ರೂಪಾಯಿಗೆ ಇಳಿಸಿದೆ. […]

    February 2, 2017

Top