An unconventional News Portal.

ಯೋಗಿ ಆದಿತ್ಯನಾಥ್
    ...
    india-dev-index
    ದೇಶ

    ‘ಬರೀ ಓಳು’: ದೇಶದ ಅಭಿವೃದ್ಧಿಗೆ ಬಿಜೆಪಿ ರಾಜ್ಯಗಳ ಮಾನದಂಡ; ಎಷ್ಟು ಸತ್ಯ? ಎಷ್ಟು ಸುಳ್ಳು?

    ದೇಶದ ಅಭಿವೃದ್ಧಿ ವಿಚಾರ ಬಂದಾಗ ರಾಜ್ಯಗಳನ್ನೇ ಮಾನದಂಡವಾಗಿ ತೆಗೆದುಕೊಳ್ಳುವ ಪರಿಪಾಠ ಆರಂಭವಾಗಿದ್ದು 2000ನೇ ಇಸವಿಯ ಈಚೆಗೆ. ಅದಕ್ಕೆ ಕಾರಣ, ‘ಗುಜರಾತ್ ಅಭಿವೃದ್ಧಿ ಮಾದರಿ’. ಇವತ್ತು ಪ್ರಧಾನಿ ಸ್ಥಾನದಲ್ಲಿರುವ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ, ಹೀಗೊಂದು ಮಾದರಿಯ ಮಾನದಂಡವನ್ನು ದೇಶಾದ್ಯಂತ ಹರಿಯ ಬಿಡಲಾಗಿತ್ತು. ಕಳೆದ ಕೆಲವು ದಿನಗಳ ಅಂತರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಲು, ಎಡಪಕ್ಷಗಳನ್ನು ಟೀಕಿಸಲು ಅವು ಆಡಳಿತದಲ್ಲಿರುವ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಭಿವೃದ್ಧಿಯನ್ನು ವಿಮರ್ಶೆಗೆ ಒಳಪಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇಂತಹ ಟೀಕೆಗಳ ಹಿಂದೆ ರಾಜಕೀಯ..

    November 9, 2017
    ...
    ದೇಶ

    ಗೋರಖಪುರದಲ್ಲಿ ಮಕ್ಕಳ ಸರಣಿ ಸಾವು; ಜೀವಕ್ಕಿಂತ ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಮುಖ್ಯ ಎಂದ ಆದಿತ್ಯನಾಥ್ ಸರಕಾರ!

    ಕಳೆದ 48 ಗಂಟೆಗಳಲ್ಲಿ 30 ಮಕ್ಕಳ ಸಾವು. ಕಳೆದ 9 ದಿನಗಳ ಅಂತರದಲ್ಲಿ ಕೊನೆಯುಸಿರೆಳೆದ ಒಟ್ಟು ಮಕ್ಕಳ ಸಂಖ್ಯೆ 60… ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರ ಗೋರಖಪುರದ ಬಾಬಾ ರಾಘವ ದಾಸ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ವೈಫಲ್ಯದಿಂದ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಆಮ್ಲಜನಕ ಪೂರೈಕೆ ವ್ಯತ್ಯಯದಿಂದ ಈ ಸಾವುಗಳು ಸಂಭವಿಸಿವೆ ಎಂದು ವರದಿಗಳು ಹೇಳುತ್ತಿವೆ. ಆಸ್ಪತ್ರೆಗೆ ಆಮ್ಲಜನಕ ಪೂರೈಸಲು ಖಾಸಗಿ ಕಂಪನಿ ‘ಪುಷ್ಪಾ ಸೇಲ್ಸ್ ಪ್ರೈವೆಟ್ ಲಿಮಿಟೆಡ್’ಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಕಳೆದ 6 ತಿಂಗಳಿನಿಂದ..

    August 12, 2017
    ...
    up-yogi-dalith-final
    ದೇಶ

    ಯುಪಿಯಲ್ಲಿ ಏನಾಗುತ್ತಿದೆ?: ಯೋಗಿ ಅಭಿವೃದ್ಧಿ ಮಂತ್ರ; ತಳಮಟ್ಟದಲ್ಲಿ ಜಾತಿ ಸಂಘರ್ಷ

    ಪಶ್ಚಿಮ ಉತ್ತರ ಪ್ರದೇಶಕ್ಕೆ ಬಂದರೆ ಮರದ ಕರಕುಶಲ ವಸ್ತುಗಳಿಗೆ ಹೆಸರಾಗಿದ್ದ ಜಿಲ್ಲೆ ಶಹನ್ಪುರ. ಸದ್ಯ ಇಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಮೇಲ್ವರ್ಗದ ಸಮುದಾಯ ಠಾಕೂರ್ ಹಾಗೂ ದಲಿತರ ನಡುವೆ ಹುಟ್ಟಿಕೊಂಡ ಸಂಘರ್ಷ ಹೊಸ ದಿಕ್ಕಿಗೆ ಹೊರಳಿದೆ. ಯಾವ ಹೊತ್ತಿಗೂ ಇಲ್ಲಿ ಮತ್ತೆ ಗಲಭೆ ಹುಟ್ಟಿಕೊಳ್ಳಬಹುದು; ಪರಿಸ್ಥಿತಿ ಹಾಗಿದೆ.  ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಂಘರ್ಷ ತಣ್ಣಗಾಗಿ ಬುಧವಾರ ಮತ್ತೆ ಸ್ಪೋಟಿಸಿದೆ. ಗುರುವಾರ ಮುಂಜಾನೆ ವ್ಯಕ್ತಿಯೊಬ್ಬರನ್ನು ಬೈಕಿನಲ್ಲಿ ಬಂದ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಸಾವಿನ ವಿರುದ್ಧ..

    May 25, 2017
    ...
    yogi-adithyanath-with-cow
    ದೇಶ

    ಕಸಾಯಿಖಾನೆಗಳಲ್ಲಿ ‘ಢಣ ಢಣ’: ಯುಪಿಯಿಂದ ರಫ್ತಾಗುತ್ತಿದ್ದ ಮಾಂಸದ ಕತೆ ಏನು?

    ದೇಶದ ಮಾಂಸ ಉತ್ಪಾದನಾ ಕ್ಷೇತ್ರದಲ್ಲಿ ಅನಭಿಷಿಕ್ತ ದೊರೆಯಂತೆ ಮೆರೆಯುತ್ತಾ ಬಂದ ರಾಜ್ಯ ಉತ್ತರ ಪ್ರದೇಶ. ಇಂಥದೊಂದು ರಾಜ್ಯಕ್ಕೆ ಮಾಂಸಾಹಾರ ವಿರೋಧಿ ಆಲೋಚನೆಗಳನ್ನು ಬೆಳೆಸಿಕೊಂಡವರು ಮುಖ್ಯಮಂತ್ರಿಯಾದರೆ ಏನಾಗಬಹುದು? ಕಳೆದ 24 ಗಂಟೆಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮುಂದೇನಾಗಬಹುದು ಎಂಬುದನ್ನು ಈಗ ಸಾರಿ ಹೇಳುತ್ತಿವೆ.   ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಕಾನೂನು ಬಾಹಿರ ಕಸಾಯಿಖಾನೆಗಳಿಗೆ ಬೀಗ ಜಡಿಯುವುದಾಗಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಚುನಾವಣೆಯ ಫಲಿತಾಂಶದ ಮರುದಿನ ಅಂದರೆ ಮಾರ್ಚ್ 12ರಂದು ರಾಜ್ಯಕ್ಕೆ ಅಮಿತ್ ಶಾ ಬರುವ ದಿನ..

    March 21, 2017
    ...
    yogi-adithyanath-1
    ದೇಶ

    Mockery Of Democracy: ಇದ್ದಲ್ಲೇ ಎದ್ದು ನಿಂತ ‘ದೇವಸ್ಥಾನದ ಅರ್ಚಕ’ ಯೋಗಿ!

    ‘ಯೋಗ’ ಎಂಬುದು ನಾಮಪದ. ಹೊಂದಿಕೆ, ಕೂಡುವುದು, ಇಂದ್ರಿಯ ನಿಗ್ರಹ, ಪ್ರಾಪ್ತಿ, ಧ್ಯಾನ, ಅದೃಷ್ಟ ಹೀಗೆ ಹಲವು ಅರ್ಥಗಳು ಈ ಪದಕ್ಕೆ ಕನ್ನಡದಲ್ಲಿವೆ. ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿರುವ ಆದಿತ್ಯನಾಥ್ ಅವರಿಗೆ ‘ಯೋಗ’ ಒಲಿದಿದೆ ಎಂಬ ವ್ಯಾಖ್ಯಾನಗಳು ಕಳೆದ ಎರಡು ದಿನಗಳ ಅಂತರದಲ್ಲಿ ಕರ್ನಾಟಕದ ಮಾಧ್ಯಮಗಳ ಮೂಲಕ ಸಾರಿ ಸಾರಿ ಹೇಳಲಾಗುತ್ತಿದೆ. ಅವುಗಳ ಪ್ರಕಾರ, ಉತ್ತರ ಪ್ರದೇಶದ ಗೋರಖ್‌ಪುರ್ ಜಿಲ್ಲೆಯ ಸಂಸದರಾಗಿರುವ ಆದಿತ್ಯನಾಥರಿಗೆ ಒಲಿದಿರುವುದು ‘ಯೋಗ’! ವಾಸ್ತವದಲ್ಲಿ ಆ ರಾಜ್ಯದ ಯಾವುದೇ..

    March 20, 2017

Top