An unconventional News Portal.

ಯುದ್ಧ
    ...
    india-china
    ದೇಶ

    ಭಾರತ- ಚೈನಾ ನಡುವೆ ಯುದ್ಧದ ಕಾರ್ಮೊಡ; ಬೆನ್ನಲ್ಲೇ ಶಾಂತಿ ಮಂತ್ರ: ಇದು ಬಿಲಿಯನ್ ಡಾಲರ್ ವಾಣಿಜ್ಯ ಸಂಬಂಧದ ಕತೆ!

    ಭಾರತ- ಚೈನಾ ನಡುವಿನ ಗಡಿ ವಿವಾದದ ‘ಶಾಂತಿಯುತ ಉಪಸಂಹಾರ’ಕ್ಕೆ ಕೇಂದ್ರ ಸರಕಾರ ನಡೆಸುತ್ತಿರುವ ಪ್ರಯತ್ನದ ಹಿಂದಿರುವುದು ವಾಣಿಜ್ಯ ಉದ್ದೇಶಗಳು. ಕಳೆದ ವಾರ ರಾಜ್ಯಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, “ಡೋಕ್ ಲಾ ಗಡಿಯಲ್ಲಿ ಸೃಷ್ಟಿಯಾಗಿರುವ ಸಂಘರ್ಷಕ್ಕೆ ಉಬಯ ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ. ಇದಾದ ಮರುದಿನವೇ ಚೈನಾ ಗಡಿಯಿಂದ ಭಾರತೀಯ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ತಾಕೀತು ಮಾಡಿತ್ತು. ಕಳೆದ ಕೆಲವು ತಿಂಗಳಿನಿಂದ ಉಬಯ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದೆ. ಗಡಿ..

    August 7, 2017
    ...
    war-is-terror
    ದೇಶ

    ‘ಕಾಸ್ಟ್ ಆಫ್ ವಾರ್’: ಯುದ್ಧ ಎಂದರೆ ಬರೀ ಮದ್ದು ಗುಂಡುಗಳ ಕಾದಾಟ ಅಲ್ಲವೋ ಅಣ್ಣಾ!

    ಯುದ್ಧ ಎಂದರೆ; ಉನ್ಮಾದ, ರಣೋತ್ಸಾಹ, ವಿಜಯ, ಬಲಪ್ರದರ್ಶನ, ಬಲಿದಾನ… ಯುದ್ಧ ಎಂದರೆ; ಸಾವು- ನೋವು, ರಕ್ತಪಾತ, ಅಶಾಂತಿ, ಅನಗತ್ಯ ಕಾದಾಟ… ಅಷ್ಟೇ ಅಲ್ಲ, ಯುದ್ಧ ಎಂದರೆ ಅಪಾರ ಪ್ರಮಾಣದ ಹಣದ ಹೂಡಿಕೆ, ವೆಚ್ಚ ಮತ್ತು ಆರ್ಥಿಕತೆ ಮೇಲೆ ಭಾರಿ ಪರಿಣಾಮ ಕೂಡ. ಆಧುನಿಕ ಪ್ರಪಂಚದಲ್ಲಿ ಬಹುತೇಕ ದೇಶಗಳು ಒಂದಿಲ್ಲೊಂದು ಕಾರಣಕ್ಕೆ ಯುದ್ಧವನ್ನು ಮಾಡಿವೆ, ಯುದ್ಧದ ಅನುಭವಗಳನ್ನು ಪಡೆದುಕೊಂಡಿವೆ. ಭಾರತ ಕೂಡ ಸ್ವಾತಂತ್ರ್ಯ ನಂತರ ನೆರೆಯ ದೇಶಗಳ ನಡುವೆ ಐದು  ಪ್ರಮುಖ ಯುದ್ಧಗಳನ್ನು ಮಾಡಿದೆ. ಇವುಗಳ ವೆಚ್ಚ ಕಾಲಕಾಲಕ್ಕೆ ಹೆಚ್ಚಾಗುತ್ತಲೇ ಬಂದಿದೆ…

    July 8, 2017
    ...
    1mqq6j
    ವಿದೇಶ

    ಕ್ಷಮಿಸಿ; ಇದು ಮಾನವೀಯತೆಯ ಸಾವು: ಹಿಟ್ಲರ್, ಭೋಪಾಲ್ ದುರಂತಗಳನ್ನು ನೆನಪಿಸಿದ ‘ರಾಸಾಯನಿಕ ದಾಳಿ’

    ಸಿರಿಯಾದಲ್ಲಿ ಸರಕಾರ, ಜನ, ಐಸಿಲ್ (ಹಿಂದಿನ ಐಸಿಸ್) ಬಂಡುಕೋರರ ನಡುವೆ ನಡೆಯುತ್ತಿರುವ 6 ವರ್ಷಗಳ ಕಾದಾಟ ಈಗ ಆತಂಕಕಾರಿ ತಿರುವನ್ನು ತೆಗೆದುಕೊಂಡಿದೆ.  ಪರಿಣಾಮ; ಭಯಾನಕ. ರಾಸಾಯನಿಕ ದಾಳಿಗೆ ನೂರಾರು ಜನ ಸಾವನ್ನಪ್ಪಿದ್ದು ಅರ್ಧ ಸಹಸ್ರಕ್ಕಿಂತ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಡಾಲ್ಫ್ ಹಿಟ್ಲರನ ವಿಷಾನಿಲ ಚೇಂಬರ್ ಗಳು, ಭೋಪಾಲ್ ಅನಿಲ ದುರಂತಗಳನ್ನು ಕಿವಿಯಾರೆ ಕೇಳಿ, ಪುಸ್ತಕಗಳಲ್ಲಿ ಓದಿದ್ದ ಹೊಸ ತಲೆಮಾರು, ರಾಸಾಯನಿಕ ದಾಳಿಗಳ ಬೀಭತ್ಸತೆಯನ್ನು ಪ್ರತ್ಯಕ್ಷ ಕಂಡು ಬೆಚ್ಚಿಬಿದ್ದಿದೆ; ಉಸಿರಾಡಲಾಗದೇ ವಿಲ ವಿಲ ಒದ್ದಾಡುವ ಜೀವಗಳನ್ನು ಕಂಡು ವಿಶ್ವವೇ ಪತರಗುಟ್ಟಿ ಹೋಗಿದೆ…

    April 6, 2017
    ...
    russia-plane-missing-1
    COVER STORY

    ಕಪ್ಪು ಸಮುದ್ರದಲ್ಲಿ ರಷ್ಯಾ ವಿಮಾನ ಪತನ: ಕ್ರಿಸ್ಮಸ್ ಆಚರಣೆಗೆ ಹೊರಟವರ 92 ಜನ ದುರಂತ ಅಂತ್ಯ

    ಎಲ್ಲವೂ ಅಂದುಕೊಂಡಂತೆ ನಡೆದು ಹೋಗಿದ್ದರೆ, ಇಷ್ಟೊತ್ತಿಗೆ 8 ಮಂದಿ ವಿಮಾನ ಸಿಬ್ಬಂದಿಗಳೂ ಸೇರಿದಂತೆ 84 ಪ್ರಯಾಣಿಕರು ರಷ್ಯಾದಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿರುತ್ತಿದ್ದರು; ಆದರೆ ವಿಧಿಯಾಟ ಬೇರೆಯದೇ ಇತ್ತು. ಸದ್ಯ ಈವರೆಗಿನ ಪ್ರಾಥಮಿಕ ಮಾಹಿತಿ ಪ್ರಕಾರ, ಶನಿವಾರ ಸೋಚಿ ವಿಮಾನ ನಿಲ್ದಾಣದಿಂದ ಹೊರಟಿದ್ದ ಟ್ವಿಪಲೇವ್ ನಾಗರೀಕ ವಿಮಾನ ಕಪ್ಪು ಸಮುದ್ರದಲ್ಲಿ ಪತನವಾಗಿದೆ. ಅದರಲ್ಲಿದ್ದ ಎಲ್ಲಾ 92 ಜನ ಸಾವನ್ನಪ್ಪಿದ್ದಾರೆ. ವಿಮಾನ ಪತನದ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನಿಖೆಗೆ ಆದೇಶಿದ್ದಾರೆ. ದುರಂತ ಅಂತ್ಯ ಕಂಡಿರುವ ವಿಮಾನದಲ್ಲಿ ‘ಅಲೆಗ್ಝಾಂಡರ್ ಎನ್ಸೇಂಬಲ್’..

    December 25, 2016
    ...
    Agni 5
    ಸುದ್ದಿ ಸಾರ

    ಅಗ್ನಿ-5: ಚೀನಾ ನೆಲ ಮುಟ್ಟಲಿರುವ ಕ್ಷಿಪಣಿಯ ಅಂತಿಮ ಪರೀಕ್ಷೆಗೆ ಭರದ ಸಿದ್ಧತೆ

    ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಸಾಮಾರ್ಥ್ಯದ ಅಗ್ನಿ-5 ಖಂಡಾಂತರ ಕ್ಷಿಪಣಿಯ ಅಂತಿಮ ಪರೀಕ್ಷೆಗೆ ಭಾರತ ಸಿದ್ಧವಾಗಿದೆ. ಒಡಿಶಾದ ವೀಲರ್ ದ್ವೀಪದಿಂದ ಬರೋಬ್ಬರಿ ಎರಡು ವರ್ಷಗಳ ನಂತರ ಮತ್ತೊಮ್ಮೆ ಅಗ್ನಿ-5 ಆಕಾಶಕ್ಕೆ ಚಿಮ್ಮಲಿದೆ. ಒಂದೊಮ್ಮೆ ಈ ಅಂತಿಮ ಪರೀಕ್ಷೆ ಯಶಸ್ವಿಯಾದಲ್ಲಿ ಅಗ್ನಿ-5 ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ. ರಕ್ಷಣಾ ಇಲಾಖೆಯ ಸಂಶೋಧನಾ ಸಂಸ್ಥೆ ಡಿಆರ್’ಡಿಒ ಮೂಲಗಳ ಪ್ರಕಾರ ಡಿಸೆಂಬರ್ ಅಂತ್ಯದಲ್ಲಿ ಇಲ್ಲವೇ ಜನವರಿ ಆದಿಯಲ್ಲಿ ಅಗ್ನಿ ಕ್ಷಿಪಣಿಯ ಅಂತಿಮ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ. “ಕಳೆದ ಜನವರಿ 2015ರಲ್ಲಿ ಉಡಾವಣೆ ಮಾಡಿದಾಗ..

    December 14, 2016
    ...
    Indian Army soldier
    ದೇಶ

    ಜಮ್ಮು- ಕಾಶ್ಮೀರದಲ್ಲೇಕೆ ಪದೇ ಪದೇ ಸೇನಾ ನೆಲೆಗಳ ಮೇಲೆ ದಾಳಿ ನಡೆಯುತ್ತಿದೆ?

    ಭಾರತೀಯ ಸೇನಾ ನೆಲೆಯ ಮೇಲೆ ಮಂಗಳವಾರ ಮುಂಜಾನೆ ಮತ್ತೊಂದು ದಾಳಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ನಾಗ್ರೋಟಾದಲ್ಲಿರುವ ಸೇನಾ ಘಟಕದ ಮೇಲೆ ನಡೆದ ಈ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ; ಇಬ್ಬರು ಗಾಯಗೊಂಡಿದ್ದಾರೆ.  ಸದ್ಯ ಸೇನೆ ಮತ್ತು ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ಮುಂದುವರಿದಿದೆ. ಸೇನಾ ನೆಲೆಯಲ್ಲಿ 2-3 ಉಗ್ರರು ಅಡಗಿಕೊಂಡಿರಬಹುದು ಎಂದು ವರದಿಗಳು ಹೇಳುತ್ತಿದೆ. 2016ರಿಂದೀಚೆಗೆ ಸುರಕ್ಷತಾ ಪಡೆಗಳ ಮೇಲೆ ನಡೆಯುತ್ತಿರುವ 6ನೇ ಭಯೋತ್ಪಾದಕ ಕೃತ್ಯ ಇದಾಗಿದೆ. ಸಂಘರ್ಷದ ನಾಡು ಜಮ್ಮು ಮತ್ತು ಕಾಶ್ಮೀರ: ಭಾರತ..

    November 29, 2016
    ...
    surgical-strike-1
    ದೇಶ

    ಭಾರತ ಸೇನೆಯ ‘ಸರ್ಜಿಕಲ್’ ದಾಳಿ: ಚರ್ಚೆಗೆ ಗ್ರಾಸವಾದ ನಾನಾ ಆಯಾಮಗಳು!

    ಭಾರತೀಯ ಸೇನೆ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ‘ದಾಳಿಗೆ ಸಜ್ಜಾಗಿದ್ದ ಭಯೋತ್ಪಾದಕ’ ಶಿಬಿರಗಳ ಮೇಲೆ ‘ನಿರ್ದಿಷ್ಟ ದಾಳಿ’ ನಡೆಸಿರುವುದಾಗಿ ಹೇಳಿದ್ದು ಈಗ ನಾನಾ ಆಯಾಮಗಳ ಚರ್ಚೆಗೆ ಕಾರಣವಾಗಿದೆ. ಗುರುವಾರ ಬೆಳಗ್ಗೆಯಿಂದ ಭಾರತದ ಮಾಧ್ಯಮಗಳು ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿರುವ ಈ ಸುದ್ದಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಒಂದು ಕಡೆ ಕಾಶ್ಮೀರಾದ ಸೇನಾ ನೆಲೆ ‘ಉರಿ’ಯ ಮೇಲೆ ನಡೆದ ದಾಳಿಗೆ ಪ್ರತೀಕಾರದ ನಡೆ ಇದು ಎಂದು ಭಾರತದ ಮಾಧ್ಯಮಗಳು ವಿಶ್ಲೇಷಿಸುತ್ತಿದ್ದರೆ, ಅಂತರಾಷ್ಟ್ರೀಯ ಮಾಧ್ಯಮಗಳು ಇದೊಂದು ‘ಗಡಿ ನಿಯಂತ್ರಣ ರೇಖೆ’ಯಲ್ಲಿ ನಡೆದ..

    September 29, 2016
    ...
    PM Modi meets Pranab
    ದೇಶ

    ಉರಿ ದಾಳಿ ಸುತ್ತ: 36 ಗಂಟೆಗಳಲ್ಲಿ ಮಿಂಚಿನ ‘ಪಥ ಸಂಚಲನ!

    ಉರಿ ಸೇನಾ ನೆಲೆಯ ಮೇಲೆ ದಾಳಿ ಹಿನ್ನಲೆಯಲ್ಲಿ ದೆಹಲಿ ಮಟ್ಟದಲ್ಲಿ ಮಿಂಚಿನ ಬೆಳವಣಿಗೆಗಳು ನಡೆಯುತ್ತಿದ್ದು, ದೇಶದ ಜನ ಕುತೂಹಲದಿಂದ ನೋಡುತ್ತಿದ್ದಾರೆ. ಒಂದು ಹಂತದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದ ಮೇಲೆ ದಾಳಿ ನಡೆಯುವ ಮಾತುಗಳೂ ಚಾಲ್ತಿಯಲ್ಲಿರುವುದರಿಂದ ಭಾರತದ ಮುಂದಿನ ನಿರ್ಧಾರದತ್ತ ಇಡೀ ಜಗತ್ತಿನ ಚಿತ್ತ ನೆಟ್ಟಿದೆ. ಹಾಗೇನಾದರೂ ಆದಲ್ಲಿ ಎರಡೂ ರಾಷ್ಟ್ರಗಳ ನಡುವೆ ‘ಪರೋಕ್ಷ’ ಯುದ್ಧ ಆರಂಭವಾಗಲಿದ್ದು, ಜಾಗತಿಕ ಆತಂಕ ಸೃಷ್ಟಿಯಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಭಾನುವಾರ ಬೆಳಿಗ್ಗೆ ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ನಡೆದ ದಾಳಿಗೆ..

    September 20, 2016

Top