An unconventional News Portal.

ಮೈಸೂರು
    ...
    gauiri-naxal-saketh-final
    GAURI LANKESH FILES

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ನಕ್ಸಲೀಯರ ಸುತ್ತ ಅನುಮಾನದ ಹುತ್ತ ಬೆಳೀತಾ ಇರೋದು ಯಾಕೆ?

    ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ. ಗೌರಿ ದೇಹ ಬೆಂಗಳೂರಿನ ಚಾಮರಾಜಪೇಟೆಯ ಸ್ಮಶಾನದಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವ ಹೊತ್ತಿಗೇ, ಹತ್ಯೆ ಸುತ್ತ ಹಲವು ಅನುಮಾನಗಳ ಮುಳ್ಳು ನೆಟ್ಟಿದೆ. ಒಂದು ಕಡೆ ಗೌರಿ ಲಂಕೇಶ್ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ರಾಷ್ಟ್ರ ಮಟ್ಟದ ಬೃಹತ್ ಹೋರಾಟದ ರೂಪುರೇಷೆ ಸಿದ್ಧವಾಗುತ್ತಿದೆ. ಮತ್ತೊಂದು ಕಡೆ, ರಾಜ್ಯ ಸರಕಾರ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ‘ವಿಶೇಷ ತನಿಖಾ ತಂಡ'(ಎಸ್‌ಐಟಿ) ವನ್ನು ರಚಿಸಿದೆ. ಎಸ್‌ಐಟಿ ತನಿಖೆಯ ಜಾಡನ್ನು ನಿರ್ಧಾರ ಮಾಡಬೇಕಿದೆ…

    September 7, 2017
    ...
    siddaramayya-atheist-debate
    ರಾಜ್ಯ

    ‘ನಾಸ್ತಿಕವಾದದಿಂದ ಆಸ್ತಿಕತೆ ಕಡೆಗೆ’: ಮೌಢ್ಯ ನಿಷೇಧ, ಲಿಂಬೆ ಹಣ್ಣು ಮತ್ತು ಸಿಎಂ ಸಿದ್ದರಾಮಯ್ಯ!

    ಅದು 1996ರ ಸಮಯ. ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಅಧಿಕೃತ ನಿವಾಸದಲ್ಲಿ ಪೂಜೆ, ಹೋಮವನ್ನು ಕುಟುಂಬದ ಸದಸ್ಯರು ಆಯೋಜನೆ ಮಾಡಿದ್ದರು. ಅತ್ತ ಪೂಜೆ ನಡೆಯುತ್ತಿದ್ದರೆ, ಸಿದ್ದರಾಮಯ್ಯ ವಿಧಾನಸೌಧದ ಕೊಠಡಿಯಲ್ಲಿ ಕುಳಿತಿದ್ದರು. ಅವರನ್ನು ಹತ್ತಿರದಿಂದ ಬಲ್ಲ ಪತ್ರಕರ್ತರೊಬ್ಬರು, “ಯಾಕೆ ಮನೆಗೆ ಹೋಗಲ್ವಾ?,” ಎಂದು ಕೇಳಿದರು. “ನಂಗೆ ಪೂಜೆ ಪುನಸ್ಕಾರ ಎಲ್ಲಾ ಆಗಿ ಬರೋಲ್ಲರಿ. ಅವರೇನೋ ಮಾಡಿಕೊಳ್ತಿದಾರೆ. ನಾನು ಅದಕ್ಕೆ ಇಲ್ಲೇ ಇದೀನಿ,” ಎಂದು ಉತ್ತರ ನೀಡಿದ್ದರು ಸಿದ್ದರಾಮಯ್ಯ. ಅದಾಗಿ ಇಪ್ಪತ್ತು ವರ್ಷಗಳ ಕಳೆದಿವೆ. ಇವತ್ತು ಸಿದ್ದರಾಮಯ್ಯ ಅದೇ ವಿಧಾನಸೌಧದ..

    April 22, 2017
    ...
    shrinivas-prasad-bjp-2
    ರಾಜ್ಯ

    ‘ಬದನವಾಳು’ವಿನಿಂದ ಬಿಜೆಪಿವರೆಗೆ: ಕುತೂಹಲ ಮೂಡಿಸಿರುವ ದಲಿತ ಹೋರಾಟಗಾರನ ‘ಲಿಂಗಾಯತ ಸಮೀಕರಣ’!

    ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದ ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಸೋಮವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಶ್ರೀನಿವಾಸ್ ಪ್ರಸಾದ್ ಹಾಗೂ ಅವರ ಬೆಂಬಲಿಗರನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ. ಮುಂದೆ ನಡೆಯಲಿರುವ ನಂಜನಗೂಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ರಾಜಕೀಯ ನಡೆಯಂತೆ ಭಾಸವಾದರೂ, ಆಳದಲ್ಲಿ ಹಳೇ ಮೈಸೂರು ಭಾಗದ ಹೊಸ..

    January 2, 2017
    ...
    note-ban
    ದೇಶ

    ‘ಅನಾಣ್ಯೀಕರಣ’: ಹೊಸ ಸುತ್ತಿನ ‘ನೋಟಿನ ನಾಟಕ’ ತೆರೆಗೆ ಬರಲು 24 ಗಂಟೆಗಳಷ್ಟೆ ಬಾಕಿ!

    ಅನಾಣ್ಯೀಕರಣದ ಸಂಕಷ್ಟಗಳ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡ 50 ದಿನ ಮುಗಿಯಲು ಇನ್ನು 24 ಗಂಟೆಗಳಷ್ಟೆ ಬಾಕಿ ಉಳಿದಿವೆ. ಅನಾಣ್ಯೀಕರಣ ಘೋಷಣೆಯಾಗಿ ಈ 50 ದಿನಗಳಲ್ಲಿ ಚಲಾವಣೆಗೆ ಬಂದ ಹೊಸದಾಗಿ ಮುದ್ರಿತ ನೋಟುಗಳ ಸಂಖ್ಯೆ ತೀರಾ ಅಲ್ಪ ಪ್ರಮಾಣದ್ದು. ಇದರ ಬೆನ್ನಿಗೇ ನೋಟು ಮುದ್ರಣದ ಪ್ರಮಾಣ ಇಳಿಕೆಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಸಮಸ್ಯೆ ಮತ್ತಷ್ಟು ಬಿಗುಡಾಯಿಸುವ ಸಾಧ್ಯತೆಗಳಿವೆ. ಅನಾಣ್ಯೀಕರಣ ಘೋಷಣೆಯಾದ ನಂತರ ಓವರ್ ಟೈಮ್ ಕೆಲಸ ಮಾಡುತ್ತಿದ್ದ ಸಾಲ್ದಾನಿ ನೋಟು ಮುದ್ರಣ ಘಟಕದ ಸಿಬ್ಬಂದಿಗಳು ನಮ್ಮಿಂದ ಇನ್ನು ಕೆಲಸ..

    December 29, 2016
    ...
    mahadevappa-and-sunil-bose
    ರಾಜ್ಯ

    ‘ದಿ ಸ್ಟೋರಿ ಆಫ್ ಸುನೀಲ್ ಬೋಸ್’: ಅಪ್ಪ ಸಚಿವ ಮಹದೇವಪ್ಪ; ಮಗ ‘ಗುದ್ದಲಿ ಪೂಜೆ’ ಸರದಾರ!

    ಹೆಸರು ಸುನೀಲ್ ಬೋಸ್; ಮೈಸೂರು ಸುತ್ತ ಮುತ್ತ ಈತನನ್ನು ‘ಚಿಕ್ಕವರು’ ಎಂದು ಕರೆಯುವುದು ರೂಢಿ. ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವ, ಕಾಂಗ್ರೆಸ್ ಪಕ್ಷದ ‘ಆರ್ಥಿಕ ಶಕ್ತಿ’ ಡಾ. ಎಚ್.ಸಿ ಮಹದೇವಪ್ಪ ಕುಲಪುತ್ರ. ಸದ್ಯ ಮಾಜಿ ಕಂದಾಯ ಮಂತ್ರಿ ಶ್ರೀನಿವಾಸ್ ಪ್ರಸಾದ್ ರಾಜಿನಾಮೆಯಿಂದ ತೆರವಾಗಿರುವ ನಂಜನಗೂಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುನೀಲ್ ಬೋಸ್ ಓಡಾಡುತ್ತಿದ್ದಾರೆ. ಅಪ್ಪ, ಮಗ ಇಬ್ಬರೂ ನಂಜನಗೂಡಿನಲ್ಲಿಯೇ ಬೀಡು ಬಿಟ್ಟು ಈಗಾಗಲೇ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ. ಹೀಗೆ ಧುತ್ತೆಂದು ಪ್ರತ್ಯಕ್ಷ ಆಗಿರುವ ಸುನೀಲ್ ಬೋಸ್ ಯಾರು? ಅವರ..

    December 26, 2016
    ...
    diddalli
    ರಾಜ್ಯ

    ಭೂಮಿ, ವಸತಿ ಹಕ್ಕು ವಂಚಿತರ ನಡಿಗೆ ‘ದಿಡ್ಡಳ್ಳಿ’ ಕಡೆಗೆ; ಕೊಡಗಿನಲ್ಲಿಂದು ಸಿದ್ದು ಸರಕಾರಕ್ಕೆ ಛೀಮಾರಿ

    ದಿಡ್ಡಳ್ಳಿಗೆ ನಡೆಯೋಣ… ಹೀಗಂತ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ಹೋರಾಟಗಾರರು ಮತ್ತು ಸಮಾನ ಮನಸ್ಕರು ಇವತ್ತು ಮಂಜಿನ ನಾಡು ಕೊಡಗಿನ ದಿಡ್ಡಳ್ಳಿಯ ಸೇರಿದ್ದಾರೆ. ಕಳೆದ ಡಿಸೆಂಬರ್ 7ರ ಮುಂಜಾನೆ ಇಲ್ಲಿನ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯಲ್ಲಿದ್ದ 577 ಕುಟುಂಬಗಳನ್ನು ಅರಣ್ಯ ಇಲಾಖೆ ಬೀದಿಪಾಲು ಮಾಡಿತ್ತು. ಕಳೆದ 6 ತಿಂಗಳಿನಿಂದ ಈ ಕುಟುಂಬಗಳು ಇಲ್ಲಿನ ಸರಕಾರಿ ಭೂಮಿಯಲ್ಲಿ ಕಟ್ಟಿಕೊಂಡಿದ್ದ ಮನೆಯನ್ನು ಕೆಡವಿ, ಲಾಠಿ ಬೀಸಿ ಅವರನ್ನೆಲ್ಲಾ ಅಲ್ಲಿಂದ ಓಡಿಸಲಾಗಿತ್ತು. ಇದೀಗ ಈ ವಸತಿ ವಂಚಿತರಿಗೆ ಮೂಲಭೂತ..

    December 18, 2016
    ...
    jayalalitha-died-1
    ದೇಶ

    ‘ಅಮ್ಮ’ ಇನ್ನಿಲ್ಲ…: ಮೈಸೂರಿನ ‘ಚಂದನದ ಗೊಂಬೆ’ಯ ಹೆಜ್ಜೆಗಳು ಚೆನ್ನೈ ಅಪೋಲೋದಲ್ಲಿ ಅಂತ್ಯ

    ಮೈಸೂರಿನಲ್ಲಿ ಹುಟ್ಟಿ, ಕನ್ನಡ ಚಿತ್ರರಂಗದಲ್ಲಿ ‘ಚಂದನದ ಗೊಂಬೆ’ಯಾಗಿ, ನಂತರ ಪಕ್ಕದ ತಮಿಳುನಾಡಿಗೆ ಕಾಲಿಟ್ಟು, ಮೇರು ನಟರ ಜತೆ ಹೆಜ್ಜೆ ಹಾಕುವ ಮೂಲಕ ಜನಪ್ರಿಯತೆ ಕಂಡಿದ್ದ ನಟಿ, ರಾಜಕೀಯಕ್ಕೂ ಕಾಲಿಡುವ ಮೂಲಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿ ಪಕ್ಷದ ಕಾರ್ಯಕರ್ತರ ಪಾಲಿಗೆ ‘ಪ್ರೀತಿಯ ಅಮ್ಮ’ ಅಂತ ಕರೆಸಿಕೊಂಡಿದ್ದ ಜಯಲಲಿತಾ ಜಯರಾಮನ್ ಜೀವನ ಪಯಣದ ಹಾದಿ ಕೊನೆಯಾಗಿದೆ. ತಮಿಳುನಾಡು ರಾಜಧಾನಿ ಚೆನ್ನೈನ ಪಂಚತಾರಾ ಆಸ್ಪತ್ರೆಯಲ್ಲಿ ಸೆಲ್ವಿ. ಜೆ. ಜಯಲಲಿತಾ ಸೋಮವಾರ ರಾತ್ರಿ 11. 30ಕ್ಕೆ ಅಸುನೀಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕಳೆದ 74 ದಿನಗಳ ಕಾಲ..

    December 6, 2016
    ...
    Mysore Bomb blast NIA visit
    ರಾಜ್ಯ

    ಶೌಚಾಲಯದಲ್ಲಿ ಕುಕ್ಕರ್ ಬಾಂಬ್: ಸ್ಫೋಟದ ಹಿಂದಿದೆಯಾ ‘ರಾಷ್ಟ್ರೀಯ’ ಆಯಾಮ?

    ಮೈಸೂರು ನ್ಯಾಯಾಲಯ ಆವರಣದ ಶೌಚಾಲಯದಲ್ಲಿ ನಡೆದ ಸ್ಪೋಟ ಇದೀಗ ರಾಷ್ಟ್ರೀಯ ಆಯಾಮ ಪಡೆದುಕೊಂಡಿದೆ. ಆದರೆ ಈವರೆಗೆ ಯಾವುದೇ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲ. ಘಟನೆಯಲ್ಲಿ ಪಳಗಿದ ಸಂಘಟನೆಗಳ ಕೈವಾಡ ಇರುವುದನ್ನು ತನಿಖಾಧಿಕಾರಿಗಳು ಅಲ್ಲಗಳೆದಿದ್ದಾರೆ. ಮಂಗಳವಾರ ವಿವಿಧ ರಾಜ್ಯದ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಹೋಗಿದ್ದಾರೆ. ರಾಷ್ಟ್ರೀಯ ತನಿಖಾ ದಳವೂ ತನಿಖೆ ಬೆನ್ನಿಗೆ ಬಿದ್ದಿದ್ದು ಯಾರ ಕೃತ್ಯ ಎಂಬುದು ಮಾತ್ರ ಇಲ್ಲಿವರೆಗೆ ತಿಳಿದು ಬಂದಿಲ್ಲ. ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಕೋರ್ಟ್ ಆವರಣದಲ್ಲಿ ನಡೆಯುತ್ತಿರುವ ಸತತ ನಾಲ್ಕನೇ ಸ್ಫೋಟವಿದು…

    August 3, 2016
    ...
    the-broken-window-1
    ರಾಜ್ಯ

    ರಾಜ್ಯದ ಮೊದಲ ‘ಕುಕ್ಕರ್ ಬಾಂಬ್’ ಸ್ಪೋಟಕ್ಕೆ ಸಾಕ್ಷಿಯಾಯಿತಾ ಮೈಸೂರಿನ ನ್ಯಾಯಾಲಯ ಶೌಚಾಲಯ?

    ರಾಜ್ಯದ ಸುದ್ದಿಕೇಂದ್ರದಿಂದ ಮೈಸೂರು ಹಿಂದಕ್ಕೆ ಹೋಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದ ವೇಳೆಯಲ್ಲಿಯೇ, ಮೈಸೂರಿನ ಜಿಲ್ಲಾ ನ್ಯಾಯಾಲಯದ ಶೌಚಾಲಯದಲ್ಲಿ ಬಾಂಬ್ ಸ್ಫೋಟ ನಡೆದಿದೆ. ಮೇಲ್ನೋಟಕ್ಕೆ ಸಾಮಾನ್ಯ ಘಟನೆಯಂತೆ ಕಂಡರೂ, ಹಾಡು ಹಗಲು- ಸಂಜೆ ವೇಳೆಯಲ್ಲಿ ನ್ಯಾಯಾಲಯದ ಆವರಣದೊಳಗಿರುವ, ಸಾಮಾನ್ಯವಾಗಿ ಜನರ ಬಳಕೆಯಿಂದ ದೂರವಿದ್ದ, ಪಾಳು ಬಿದ್ದಂತಾಗಿದ್ದ ಶೌಚಾಲಯದಲ್ಲಿ ‘ಕುಕ್ಕರ್ ಬಾಂಬ್’ ಸ್ಫೋಟಿಸಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಇದಕ್ಕೆ ಕಾರಣ, ವಿಧಿ ವಿಜ್ಞಾನ ಪ್ರಯೋಗಾಲಯದ..

    August 2, 2016
    ...
    Rakesh siddaramayya
    ಸುದ್ದಿ ಸಾರ

    ಮಣ್ಣಲ್ಲಿ ಮಣ್ಣಾದ ರಾಕೇಶ್ ಸಿದ್ಧರಾಮಯ್ಯ

    39 ವರ್ಷಗಳ ತುಂಬು ಜೀವನ ಬಾಳಿದ ರಾಕೇಶ್ ಸಿದ್ಧರಾಮಯ್ಯ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಮೈಸೂರಿನ ಟಿ.ಕಾಟೂರಿನ ತೋಟದ ಮನೆಯಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮೈಸೂರಿನ ವರುಣಾ ಕ್ಷೇತ್ರ ಮತ್ತು ಸಿದ್ಧರಾಮಯ್ಯನವರ ಹುಟ್ಟೂರು ಸಿದ್ಧರಾಮನ ಹುಂಡಿಯಿಂದ ಬಂದ ಅಭಿಮಾನಿಗಳು ಹಾಗೂ ನಾಡಿನ ಅಪಾರ ಜನಸ್ತೋಮ ರಾಕೇಶ್ ಪಾರ್ಥಿವ ಶರೀರದ ಅಂತಿಮ ಯಾತ್ರೆಗೆ ಸಾಕ್ಷಿಯಾಯಿತು. ಮಠಾಧೀಶರು, ರಾಜಕಾರಣಿಗಳು, ಸಿನಿಮಾ ನಟರು ಅಂತಿಮ ನಮನ ಸಲ್ಲಿಸಿದರು. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುತ್ರ ರಾಕೇಶ್ ಅವರ ಮೃತದೇಹ ಬೆಲ್ಜಿಯಂನಿಂದ ಸೌದಿ ಮಾರ್ಗವಾಗಿ ಸೋಮವಾರ..

    August 1, 2016
  • 1
  • 2

Top