An unconventional News Portal.

ಮಿಲಿಟರಿ
    ...
    gideon-1
    ಪತ್ರಿಕೆ

    ಆಕ್ರಮಿಸಿಕೊಂಡ ದೇಶದೊಳಗೆ ಸತ್ಯ ಹೇಳುತ್ತಿರುವ ಪತ್ರಕರ್ತ; ಇಸ್ರೇಲಿನ ಗಿಡಾನ್ ಲೆವಿ!

    ‘ಕಳೆದ ಮೂರು ದಶಕಗಳಿಂದ ಬರಹಗಾರ, ಪತ್ರಕರ್ತ ಗಿಡಾನ್ ಲೆವಿ ತಮ್ಮ ಕ್ಷೀಣದನಿಯಲ್ಲಿ ಭಯೋತ್ಪಾದಕರು ಆವರಿಸಿಕೊಂಡ ಪ್ರದೇಶದ ಕತೆಯನ್ನು ತಮ್ಮ ಓದುಗರಿಗೆ ಹೇಳಿಕೊಂಡು ಬರುತ್ತಿದ್ದಾರೆ…’; ಎಂದು ಬರೆಯುತ್ತಾನೆ ಇನ್ನೊಬ್ಬ ಪತ್ರಕರ್ತ ಜಾನ್ ಹರಿ. ಇಸ್ರೇಲ್ ದೇಶದ ಭಿನ್ನ ದನಿಯಾಗಿ ಗುರುತಿಸಿಕೊಂಡಿರುವ ಪತ್ರಕರ್ತ ಗಿಡಾನ್, ‘ದಿ ಇಂಡಿಪಂಡೆಂಟ್’ ಪತ್ರಿಕೆಗೆ 2010ರಲ್ಲಿ ನೀಡಿದ ಸಂದರ್ಶನಕ್ಕೆ ಬರೆದ ಮುನ್ನುಡಿಯಲ್ಲಿರುವ ವಾಕ್ಯಗಳಿವು. ಒಬ್ಬ ಪತ್ರಕರ್ತ ಇನ್ನೊಬ್ಬ ಪತ್ರಕರ್ತನ ಬಗ್ಗೆ ಬರೆಯಬೇಕಾದ ಅನಿವಾರ್ಯತೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಗಿಡಾನ್ ಲೆವಿ ತರಹರ ವ್ಯಕ್ತಿ ಪರಿಚಯಗಳನ್ನು ಮಾಡಿಸುವ..

    July 5, 2017
    ...
    crpf-vs-naxal-final
    ದೇಶ

    ತ್ಯಾಗ; ಕ್ರೌರ್ಯದ ಮೇಲಾಟದಲ್ಲಿ ತೆರೆಮರೆಗೆ ಸರಿದ ಆದಿವಾಸಿಗಳ ನೈಜ ಚಿತ್ರಣ ಇದು!

    ದೇಶದಲ್ಲಿ ದಶಕಗಳ ಕಾಲ ಜೀವಂತವಾಗಿರುವ ‘ಸರಕಾರ ಮತ್ತು ಮಾವೋವಾದಿ’ಗಳ ನಡುವಿನ ಆಂತರಿಕ ಸಂಘರ್ಷಕ್ಕೆ ಮತ್ತೊಮ್ಮೆ ನೆತ್ತರು ಹರಿದಿದೆ. ಸೋಮವಾರ ನಡೆದ ಗೆರಿಲ್ಲಾ ದಾಳಿಯಲ್ಲಿ 24 ಮಂಡಿ ಸಿಆರ್‌ಪಿಎಫ್ ಸೈನಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ಕಳೆದ ಒಂದು ದಶಕದ ಅಂತರದಲ್ಲಿ ಈ ಭಾಗದಲ್ಲಿ ನಡೆಯುತ್ತಿರುವ ಸಾವು ನೋವಿನ ಪಟ್ಟಿಗೆ ಹೊಸ ಸೇರ್ಪಡೆಯಾದಂತಾಗಿದೆ. ವರದಿಗಳ ಪ್ರಕಾರ, 1996ರಿಂದ 2016ರ ನಡುವೆ ಭಾರತದಲ್ಲಿ ಮಾವೋವಾದಿ ಮತ್ತು ಪೊಲೀಸರು, ಅರೆಸೇನಾಪಡೆಗಳ ನಡುವಿನ ಸಂಘರ್ಷದಲ್ಲಿ ಸಾವನ್ನಪ್ಪಿರುವ ನಾಗರಿಕರು, ಆದಿವಾಸಿಗಳ ಸಂಖ್ಯೆಯೇ ಸುಮಾರು 8 ಸಾವಿರ. ಜತೆಗೆ, ಸುಮಾರು..

    April 25, 2017
    ...
    indian-army-1
    ದೇಶ

    ದೇಶಪ್ರೇಮಿಗಳ ‘ಸೇನಾಭಿಮಾನ’: ಪ್ರತಿ ಭಾರತೀಯನೂ ಮಿಲಿಟರಿಯನ್ನೇಕೆ ಪ್ರೀತಿಸಲೇ ಬೇಕು?

    ‘ನಾವು ಮನೆಯಲ್ಲಿ ಅರಾಮಾಗಿ ಹೆಂಡತಿ ಮಕ್ಕಳ ಜತೆಯಲ್ಲಿ ಊಟ ತಿಂಡಿ ಮಾಡಿಕೊಂಡು ಮಲಗಿರುವಾಗ, ಗಡಿಯಲ್ಲಿ ಜೀವವನ್ನು ಪಣಕ್ಕಿಟ್ಟು ದೇಶವನ್ನು ಕಾಯುವವರು ಸೈನಿಕರು…’, ‘ಸೈನಿಕರು ಎಂದರೆ ಒಣ ರೊಟ್ಟಿ ತಿಂದುಕೊಂಡು, ಮೂರೊತ್ತು ಸರಿಯಾದ ಊಟವೂ ಇಲ್ಲದೆ ನಮ್ಮನ್ನು ಕಾಯುವ ಯೋಧರು…’, ‘ಸೇನೆಯ ವಿಚಾರಕ್ಕೆ ಬಂದರೆ ಎಲ್ಲವೂ ನಗಣ್ಯ…’, ‘ನೀವು ದೇಶವನ್ನು ಇಷ್ಟಪಡುವವರೇ ಆಗಿದ್ದರೆ, ಸೇನೆಯನ್ನೂ ಇಷ್ಟಪಡಬೇಕು…’ ಈ ಮೇಲಿನ ವಾಕ್ಯಗಳು, ಪದಪುಂಜಗಳು ಭಾರತದ ಪ್ರಸ್ತುತ ಸಮಯದಲ್ಲಿ ಭಾವನಾತ್ಮಕವಾಗಿ ಬಳಕೆಯಾಗುತ್ತಿವೆ. ಆದರೆ ಇಂತಹ ವಾದಗಳು ಭಾರತಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮತ್ತು, ಭಾವನೆಗಳ..

    April 18, 2017
    ...
    Missile Israel Syria
    ವಿದೇಶ

    ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ಮೊದಲ ಸವಾಲ್; ಸಿರಿಯಾ ಮಿಸೈಲ್ ಹೊಡೆದುರುಳಿಸಿದ ಇಸ್ರೇಲ್

    ಹಲವು ದೇಶಗಳಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನವೊಂದು ಮೊದಲ ಬಾರಿಗೆ ಅಗ್ನಿ ಪರೀಕ್ಷೆ ಎದುರಿಸಿ ಉತ್ತೀರ್ಣವಾದ ನಿದರ್ಶನವಿದು. ಇಸ್ರೇಲ್ ತನ್ನ ಅತ್ಯಾಧುನಿಕ ‘ಕ್ಷಿಪಣಿ ನಿರೋಧಕ ವ್ಯವಸ್ಥೆ’ಯ ಮೂಲಕ ಸಿರಿಯಾ ಮಿಸೈಲನ್ನು ಹೊಡೆದುರುಳಿಸಿ ಸದ್ದು ಮಾಡಿದೆ. ಹಾಗೆ ನೋಡಿದರೆ ರಷ್ಯಾ, ಚೀನಾ, ಅಮೆರಿಕಾ, ಇಸ್ರೇಲ್, ಫ್ರಾನ್ಸ್ ಮೊದಲಾದ ಮುಂದುವರಿದ ಮಿಲಿಟರಿ ದೇಶಗಳ ಬಳಿ ಈ ತಂತ್ರಜ್ಞಾನವಿದೆ. ಇತ್ತೀಚೆಗೆ ಭಾರತವೂ ಪಾಕಿಸ್ತಾನದ ಸಾಂಭಾವ್ಯ ಮಿಸೈಲ್ ದಾಳಿಯನ್ನು ಎದುರಿಸಲು ಇಸ್ರೇಲಿನಿಂದ ಇದೇ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಹೊಂದಲು ಮುಂದಾಗಿದೆ.  ಉತ್ತರ ಕೊರಿಯಾದ ದಾಳಿಯಿಂದ..

    March 18, 2017
    ...
    isreal-soldier-azaria
    ವಿದೇಶ

    ಐತಿಹಾಸಿಕ ಬೆಳವಣಿಗೆ: ಪ್ಯಾಲೆಸ್ತೀನ್ ‘ಭಯೋತ್ಪಾದಕ’ನನ್ನು ಕೊಂದ ಇಸ್ರೇಲ್ ಸೈನಿಕನಿಗೆ ಜೈಲು ಶಿಕ್ಷೆ

    ಆತನಿಗಿನ್ನೂ 20 ಹರೆಯ. 20 ವರ್ಷಗಳ ಜೈಲು ಶಿಕ್ಷೆಗೆ ತಯಾರಾಗಬೇಕಾಗಿದೆ. ಇದಕ್ಕೆ ಕಾರಣ ಆತ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದಿದ್ದು. ಇಷ್ಟೇ ಆಗಿದ್ದರೆ ಈ ಸುದ್ದಿ ಅಂತರಾಷ್ಟ್ರೀಯ ಸುದ್ದಿಯೇ ಆಗುತ್ತಿರಲಿಲ್ಲ. ಆದರೆ ಕೊಂದಾತ ಮತ್ಯಾರೂ ಅಲ್ಲ; ಆತನೊಬ್ಬ ಇಸ್ರೇಲ್ ಸೈನಿಕ. ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಇಸ್ರೇಲಿನ ಸೈನಿಕ ಜೈಲು ಶಿಕ್ಷೆಗೆ ಗುರಿಯಾಗುತ್ತಿರುವ ಅಪರೂಪದ ಪ್ರಕರಣ ಇದು. ಅದೂ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದ ಕಾರಣಕ್ಕೆ ಎಂಬುದು ಮತ್ತೊಂದು ವಿಶೇಷ. ಇಸ್ರೇಲ್ ರಾಜಧಾನಿ ಟೆಲ್ ಅವಿವ್..

    January 5, 2017
    ...
    ನೋಟು ಬದಲಾವಣೆ ವಿರೋಧಿ ಹೋರಾಟದ ಮುಂಚೂಣಿಯಲ್ಲಿ ಮಮತಾ ಬ್ಯಾನರ್ಜಿ.
    ದೇಶ

    ಪಶ್ಚಿಮ ಬಂಗಾಳದಲ್ಲಿ ಸೇನೆ ಜಮಾವಣೆ: ಮೋದಿ ಮೇಲೆ ಮಮತಾ ದೀದಿಗೆ ಯಾಕಿಷ್ಟು ಕೋಪ?

    ನೋಟು ಬದಲಾವಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಆರಂಭವಾಗಿರುವ ರಾಜಕೀಯ ಕದನ ಹೊಸ ತಿರುವು ಪಡೆದುಕೊಂಡಿದೆ. ಕಳೆದ 24 ಗಂಟೆಗಳಿಂದ ಪಶ್ಚಿಮ ಬಂಗಾಳದ ಸೆಕ್ರೆಟರಿಯೇಟ್ ಬಿಲ್ಡಿಂಗ್ ಒಳಗಡೆ, ಭಾರತೀಯ ಸೇನೆಯ ಜಮಾವಣೆ ವಿರುದ್ಧ ಮಮತಾ ಧರಣಿ ಆರಂಭಿಸಿದ್ದಾರೆ. ಬಂಗಾಳ ಸರಕಾರದ ವಿರುದ್ಧ ಕೇಂದ್ರ ಸರಕಾರ ಮಿಲಿಟರಿ ಪಡೆಗಳನ್ನು ಬಳಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ‘ಇದೊಂದು ಮಿಲಿಟರಿ ಕ್ಷಿಪ್ರನಡೆ’ ಎಂದವರು ದೂರಿದ್ದಾರೆ. ಶುಕ್ರವಾರ ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ..

    December 2, 2016
    ...
    Indian Army soldier
    ದೇಶ

    ಜಮ್ಮು- ಕಾಶ್ಮೀರದಲ್ಲೇಕೆ ಪದೇ ಪದೇ ಸೇನಾ ನೆಲೆಗಳ ಮೇಲೆ ದಾಳಿ ನಡೆಯುತ್ತಿದೆ?

    ಭಾರತೀಯ ಸೇನಾ ನೆಲೆಯ ಮೇಲೆ ಮಂಗಳವಾರ ಮುಂಜಾನೆ ಮತ್ತೊಂದು ದಾಳಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ನಾಗ್ರೋಟಾದಲ್ಲಿರುವ ಸೇನಾ ಘಟಕದ ಮೇಲೆ ನಡೆದ ಈ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ; ಇಬ್ಬರು ಗಾಯಗೊಂಡಿದ್ದಾರೆ.  ಸದ್ಯ ಸೇನೆ ಮತ್ತು ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ಮುಂದುವರಿದಿದೆ. ಸೇನಾ ನೆಲೆಯಲ್ಲಿ 2-3 ಉಗ್ರರು ಅಡಗಿಕೊಂಡಿರಬಹುದು ಎಂದು ವರದಿಗಳು ಹೇಳುತ್ತಿದೆ. 2016ರಿಂದೀಚೆಗೆ ಸುರಕ್ಷತಾ ಪಡೆಗಳ ಮೇಲೆ ನಡೆಯುತ್ತಿರುವ 6ನೇ ಭಯೋತ್ಪಾದಕ ಕೃತ್ಯ ಇದಾಗಿದೆ. ಸಂಘರ್ಷದ ನಾಡು ಜಮ್ಮು ಮತ್ತು ಕಾಶ್ಮೀರ: ಭಾರತ..

    November 29, 2016
    ...
    child
    ಸುದ್ದಿ ಸಾರ

    ಉರಿಯುತ್ತಿದ್ದ ಕಟ್ಟಡದಿಂದ ಮಕ್ಕಳನ್ನು ಎಸೆದು ರಕ್ಷಣೆ ಮಾಡಿದ ತಾಯಿ

    ಉರಿಯುತ್ತಿದ್ದ ಕಟ್ಟಡದಿಂದ ತನ್ನ ಮಕ್ಕಳನ್ನು ರಕ್ಷಣೆ ಮಾಡಲು ತಾಯಿಯೊಬ್ಬರು ನಾಲ್ಕನೆ ಮಹಡಿಯಿಂದ ಮಕ್ಕಳನ್ನು ಎಸೆದಿದ್ದಾರೆ. ದಕ್ಷಿಣ ಕೊರಿಯಾದ ಪ್ಯಾಂಕ್ಟೇಕ್ ಕೌಂಟಿಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಪ್ಯಾಂಗ್ಟೆಕ್ನಲ್ಲರುವ ಅಮೆರಿಕಾದ ಓಸನ್ ಏರ್ ಬೇಸ್ ಬಳಿ ಇರುವ ಕಟ್ಟಡದಲ್ಲಿ ಕಳೆದ ಶುಕ್ರವಾರ ಅಗ್ನಿಅವಘಡ ಸಂಭವಿಸಿತ್ತು, ಈ ಸಂದರ್ಭದಲ್ಲಿ ಕಟ್ಟಡದೊಳಗೆ ಪ್ರೀಷಿಯಸ್ ಎನ್ ಯೋಕಿ (30) ಮತ್ತು ಆಕೆಯ 7 ತಿಂಗಳ ಸಣ್ಣ ಮಗು ಜೊತೆಗೆ 3 ಹಾಗೂ 4 ವರ್ಷದ ಮಗು ಕಟ್ಟಡದೊಳಗೆ ಸಿಲುಕಿದ್ದರು. ರಕ್ಷಣೆಗಾಗಿ ಮೊರೆಯಿಡುತ್ತಿದ್ದ..

    May 5, 2016
    ...
    india-military-budget
    ದೇಶ

    ಸೇನೆಗಾಗಿ ಖರ್ಚು ಮಾಡುತ್ತಿರುವ ದೇಶಗಳ ಪೈಕಿ ಭಾರತ ಟಾಪ್ 15!

    ಜಗತ್ತಿನಾದ್ಯಂತ ಸೇನೆಗಾಗಿ ಖರ್ಚು ಮಾಡುತ್ತಿರುವ ದೇಶಗಳ ಪೈಕಿ ಭಾರತ ಟಾಪ್ 15ನೇ ಸ್ಥಾನಕ್ಕೇರಿದೆ. ‘ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್’ (SIPRI) ಬಿಡುಗಡೆ ಮಾಡಿರುವ ವಾರ್ಷಿಕ ವರದಿ ಪ್ರಕಾರ, ಜಗತ್ತಿನಾದ್ಯಂತ ಸೇನೆಗಾಗಿ ಅತೀ ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿರುವ ಮೊದಲ 15 ದೇಶಗಳ ಪೈಕಿ ಭಾರತದ ಪಾಲೇ ಶೇ. 3.1ರಷ್ಟಿದೆ. ಏಷಿಯಾ ಮತ್ತು ಆಸ್ಟ್ರೇಲಿಯಾ ಭೂಭಾಗದಲ್ಲಿ ಸೇನೆಗಾಗಿ ಮಾಡುತ್ತಿರುವ ಖರ್ಚಿನ ಪ್ರಮಾಣ 2015ರ ನಂತರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ, ಶೇ. 5.4ರಷ್ಟು ಹೆಚ್ಚಳ ಕಂಡು ಬಂದಿದೆ. 2015-..

    April 7, 2016

Top