An unconventional News Portal.

ಮಾಯಾವತಿ
    ...
    uttar-pradesh-election-1
    ವಿಚಾರ

    ‘ಮಾಡು ಇಲ್ಲವೇ ಮಡಿ’: ಉತ್ತರಪ್ರದೇಶದ ‘ದಿಕ್ಸೂಚಿ ಚುನಾವಣೆ’ಯಲ್ಲಿ ಯಾರು ಗೆದ್ದರೆ ಏನೇನು?

    ಉತ್ತರಪ್ರದೇಶದ ಶಾಸನ ಸಭಾ ಚುನಾವಣೆಗಳ ಫಲಿತಾಂಶವು ಭಾರತದ ರಾಜಕಾರಣದ ಭವಿಷ್ಯದ ಮೇಲೆ ನಿರ್ಣಾಯಕ ಪ್ರಭಾವನ್ನು ಬೀರಲಿದೆ. ಪ್ರತಿ ಆರು ಭಾರತೀಯರಲ್ಲಿ ಒಬ್ಬರು ಉತ್ತರ ಪ್ರದೇಶದಲ್ಲಿ ವಾಸಿಸುತ್ತಾರೆ ಎಂಬುದೂ ಮತ್ತು ಅದು ಪ್ರತ್ಯೇಕ ರಾಷ್ಟ್ರವಾಗಿದ್ದಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಐದನೇ ರಾಷ್ಟ್ರವಾಗಿರುತ್ತಿತ್ತೆಂಬುದೇ ಅದರ ಮಹತ್ವವನ್ನು ಹೇಳುತ್ತದೆ. ಆದರೆ ಇತಿಹಾಸದಲ್ಲಿ ಒಮ್ಮೊಮ್ಮೆ ಉತ್ತರ ಪ್ರದೇಶದ ಚುನಾವಣೆಗಳಿಗೆ ಅದರ ಬೃಹತ್ ಗಾತ್ರಕ್ಕೂ ಮಿಗಿಲಾದ ಮಹತ್ವವಿರುವ ಗಳಿಗೆಯು ಬರುತ್ತದೆ. ಈ ಚುನಾವಣೆಯ ನಡೆಯುತ್ತಿರುವ ಸಂದರ್ಭ ಮತ್ತು ಸಮಯದ ಕಾರಣದಿಂದ ಅಂತಹ..

    February 20, 2017
    ...
    mayawati
    ಸುದ್ದಿ ಸಾರ

    ಯುಪಿಯಲ್ಲಿ ಆರಂಭಗೊಂಡ ಮತದಾನ; ನಿರೀಕ್ಷಿಸಬಹುದಾ ‘ಬೆಹೆನ್‌ಜೀ’ ಆಗಮನ?

    ದೇಶದ ಬಹುದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಮತದಾನ ಆರಂಭವಾಗಿದೆ. ಮುಂದಿನ ಒಂದು ತಿಂಗಳ ಕಾಲ ಒಟ್ಟು 7 ಹಂತಗಳಲ್ಲಿ ರಾಜ್ಯದ 403 ವಿಧಾನಸಭಾ ಕ್ಷೇತ್ರಗಳಲ್ಲಿ ಜನ ಮತ ಚಲಾಯಿಸಲಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಅಲೆಯಲ್ಲಿ ಕೇಂದ್ರದ ಗದ್ದುಗೆ ಏರಿದ ಬಿಜೆಪಿ ಪಕ್ಷದ ಈವರೆಗಿನ ಆಡಳಿತ ಮತ್ತು ದೇಶದ ಆರ್ಥಿಕತೆಯಲ್ಲಿ ಸಂಚಲನ ಮೂಡಿಸಿದ ಅನಾಣ್ಯೀಕರಣ ಪ್ರಕ್ರಿಯೆ ಘೋಷಣೆಗೆ ಜನರ ನೀಡುವ ‘ಮಧ್ಯಾಂತರ ತೀರ್ಪು’ ಇದು ಎಂದು ರಾಯ್‌ಟರ್ ಸುದ್ದಿ ಸಂಸ್ಥೆ ವಿಶ್ಲೇಷಿಸಿದೆ. ಸದ್ಯ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ..

    February 11, 2017
    ...
    uttar-pradesh-1
    ದೇಶ

    ‘ಯಾದವೀ ಕಲಹ’: ಉತ್ತರ ಪ್ರದೇಶದಲ್ಲಿ ಮುಖಕ್ಕಿಂತ ಚಿನ್ಹೆಗೆ ಯಾಕಿಷ್ಟು ಬೆಲೆ?

    ಇದು ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶ. ಇವತ್ತಿಂದ ಸರಿಯಾಗಿ 25ನೇ ದಿನಕ್ಕೆ ಇಲ್ಲಿನ ವಿಧಾನಸಭೆಗಾಗಿ ದೊಡ್ಡ ಸಂಗ್ರಾಮವೊಂದು ನಡೆದು ಹೋಗಿರುತ್ತದೆ. ಇಲ್ಲಿರುವ 403 ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸುಮಾರು 13 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. ಅವರಲ್ಲಿ ಶೇ. 67. 68ರಷ್ಟು ಸಾಕ್ಷರರಿದ್ದು, ನಾನಾ ಪಕ್ಷಗಳ ಅಭ್ಯರ್ಥಿಗಳನ್ನು ಅಳೆದು, ತೂಗಿ, ಓಟಾಕಿ ವಿಧಾನಸಭೆಗೆ ಕಳುಹಿಸಿಕೊಡಲಿದ್ದಾರೆ. ಹಾಗೆ ನೋಡಿದರೆ, ಇಲ್ಲಿನ ನಾನಾ ಪಕ್ಷಗಳ ಚುನಾವಣಾ ಪ್ರಚಾರದ ಮಾಹಿತಿ ದೇಶದ ಸುದ್ದಿಕೇಂದ್ರವನ್ನು ಇಷ್ಟೊತ್ತಿಗಾಗಲೇ ಆವರಿಸಿಕೊಳ್ಳಬೇಕಿತ್ತು. ಕೇಂದ್ರದಲ್ಲಿ ಅಧಿಕಾರ..

    January 17, 2017
    ...
    mulayam_akhilesh-copy
    ಸುದ್ದಿ ಸಾರ

    ‘ಅಪ್ಪ v/s ಮಗ’: ಉತ್ತರ ಪ್ರದೇಶದ ‘ಯಾದವೀ ಕಲಹ’ಕ್ಕೆ ಸಿನಿಮೀಯ ಟ್ವಿಸ್ಟ್

    ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ ‘ಸಮಾಜವಾದಿ ಕೌಟುಂಬಿಕ ಸಂಘರ್ಷ’ ಸಿನಿಮೀಯ ತಿರುವುದು ತೆಗೆದುಕೊಂಡಿದೆ. ಶುಕ್ರವಾರ ರಾತ್ರಿ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್, ಸ್ವಂತ ಮಗ ಹಾಗೂ ರಾಜ್ಯದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಸಹೋದರ ಸಂಬಂಧಿ ರಾಮ್ ಗೋಪಾಲ್ ಯಾದವ್ರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟಿಸಿದ್ದಾರೆ. ರಾಜ್ಯದಲ್ಲಿ ಚುನಾವಣೆಗೆ 6 ತಿಂಗಳಿಗೂ ಕಡಿಮೆ ಅವಧಿ ಇದೆ ಎನ್ನುವಾಗ ಆಡಳಿತರೂಢ..

    December 31, 2016
    ...
    up-election
    ದೇಶ

    ಹನಿಟ್ರ್ಯಾಪ್; ಪಕ್ಷಾಂತರ ಮತ್ತು ಕೌಟುಂಬಿಕ ಕಲಹ: ಇದು ಉತ್ತರ ಪ್ರದೇಶ ಚುನಾವಣಾ ಪ್ರಹಸನದ ‘ಅಂಕ ಒಂದು’!

    ದೇಶದಲ್ಲಿಯೇ ಅತಿ ಹೆಚ್ಚು ವಿಧಾನಸಭಾ ಹಾಗೂ ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ, ಉತ್ತರ ಪ್ರದೇಶದಲ್ಲಿ ಚುನಾವಣಾ ಪೂರ್ವ ಚಟುವಟಿಕೆಗಳು ಗರಿಗೆದರಿವೆ. 2017ರ ಮಾರ್ಚಿನಲ್ಲಿ ನಡೆಯಲಿರುವ ಇಲ್ಲಿನ ವಿಧಾನಸಭಾ ಚುನಾವಣೆಯ ಕಾವು ನಿಧಾನವಾಗಿ ಏರಲಾರಂಭಿಸಿದೆ. ಉತ್ತರ ಪ್ರದೇಶದ ಗೆದ್ದುಗೆಗೂ, ದೇಶದ ಚುಕ್ಕಾಣಿಗೂ ಹತ್ತಿರ ಸಂಬಂಧವೊಂದು ಇದೆ ಎಂಬ ನಂಬಿಕೆ ಸಹಜವಾಗಿಯೇ, ದೊಡ್ಡ ರಾಜ್ಯದ ಆಡಳಿತದ ಕುರ್ಚಿಗಾಗಿ ನಡೆಯುತ್ತಿರುವ ಕಸರತ್ತುಗಳಿಗೆ ರಂಗು ತುಂಬಿದೆ. ಗುರುವಾರ ನಡೆದ ಪ್ರಮುಖ ಬೆಳವಣಿಗೆಯಲ್ಲಿ ಕಾಂಗ್ರಸ್ ಪಕ್ಷದ ಹಿರಿಯ ನಾಯಕಿ ರೀಟಾ ಬಹುಗುಣ ಜೋಶಿ ಕಾಂಗ್ರೆಸ್ ಪಾಳೆಯ ತೊರೆದು ಬಿಜೆಪಿಯ..

    October 21, 2016
    ...
    up-samajavadi
    ದೇಶ

    ದೇಶದ ಅತೀ ದೊಡ್ಡ ರಾಜ್ಯದಲ್ಲಿ ಭಾರಿ ಹೈ ಡ್ರಾಮಾ: ಮಗನನ್ನು ಪಟ್ಟದಿಂದ ಕಿತ್ತು ಹಾಕಿದ ಮುಲಾಯಂ!

    ಉತ್ತರ ಪ್ರದೇಶ ರಾಜಕಾರಣದಲ್ಲಿ ನಡೆದ ಹೈ ಡ್ರಾಮಾವೊಂದರಲ್ಲಿ ಪ್ರಮುಖ ಪಲ್ಲಟವೊಂದು ಘಟಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ಅಖಿಲೇಶ್ ಯಾದವ್ರನ್ನು, ತಂದೆ ಮುಲಾಯಂ ಸಿಂಗ್ ಗುರುವಾರ ಏಕಾಏಕಿ ಕಿತ್ತೊಗೆದಿದ್ದಾರೆ. 2017ರ ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ವಿಶಾಲ ರಾಜ್ಯದ ಈ ರಾಜಕೀಯ ಬೆಳವಣಿಗೆ ಸಹಜವಾಗಿಯೇ ಕುತೂಹಲ ಮೂಡಿಸಿದೆ. ‘ಸಿಟ್ಟಿನಲ್ಲಿ’ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್, ಮಗ ಅಖಿಲೇಶ್ ಯಾದವ್ರನ್ನು ಕಿತ್ತೊಗೆದಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಅವರ ಜಾಗಕ್ಕೆ ಅಖಿಲೇಶ್ ಚಿಕ್ಕಪ್ಪ ಶಿವಪಾಲ್..

    September 16, 2016
    ...
    Mayavati BJP
    ಸುದ್ದಿ ಸಾರ

    ಮಾಯಾವತಿ ಅವಮಾನಿಸಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕ ದಯಾಶಂಕರ್ ಬಂಧನ

    ಬಿಎಸ್ಪಿ ನಾಯಕಿ ಮಾಯಾವತಿ ‘ವೇಶ್ಯೆಗಿಂತ ಕೀಳು’ ಎಂದು ಹೇಳಿ ವಿವಾದ ಹುಟ್ಟು ಹಾಕಿದ್ದ ಉತ್ತರ ಪ್ರದೇಶ ಬಿಜೆಪಿ ಮಾಜಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ರನ್ನು ಬಂಧಿಸಲಾಗಿದೆ. ಮಾನಹಾನಿಕರ ಹೇಳಿಕೆ ಸಂಬಂಧ ಅವರ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರಂಟ್ ಜಾರಿಯಾಗಿತ್ತು. ಈ ಕುರಿತು ಹೇಳಿಕೆ ನೀಡಿರುವ ಉತ್ತರ ಪ್ರದೇಶದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಯಾದವ್, ‘ಯುಪಿ’ಯ ವಿಶೇಷ ಕಾರ್ಯ ಪಡೆ ಮತ್ತು ಬಿಹಾರ ಪೊಲೀಸರು ಜಂಟಿ ಕಾರ್ಯಚರಣೆಯಲ್ಲಿ, ಬಿಹಾರದ ಬಕ್ಸಾರಿನ ಚಿನಿ ಮಿಲ್ ಪ್ರದೇಶದಿಂದ..

    July 29, 2016

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top