An unconventional News Portal.

ಮಾನವ ಹಕ್ಕುಗಳು

ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೇರಿ ಒಂದು ವರ್ಷ: ವಿಶ್ವದ ದೊಡ್ಡಣ್ಣನ ಸರಕಾರವೇ ಸ್ಥಗಿತ!

ಇದು ಅಮೆರಿಕಾದಲ್ಲಿ ನಡೆದ ಕುತೂಹಲಕಾರಿ ಬೆಳವಣಿಗೆ. 45ನೇ ಅಧ್ಯಕ್ಷರನ್ನಾಗಿ ಉದ್ಯಮಿ ಟ್ರಂಪ್‌ರನ್ನು ಆಯ್ಕೆ ಮಾಡಿಕೊಂಡ ಇಲ್ಲಿನ ಜನ, ವರ್ಷ ಕಳೆಯುವ ಮುನ್ನವೇ ಸರಕಾರವೇ ಸ್ಥಗಿತಗೊಂಡ ಘಟನೆಗೆ ಸಾಕ್ಷಿಯಾಗಿದ್ದಾರೆ.

    ...
    ಸುದ್ದಿ ಸಾರ

    ಮತ್ತೊಬ್ಬ ಮಾನವಹಕ್ಕು ಹೋರಾಟಗಾರನನ್ನು ಜೈಲಿಗಟ್ಟಿದ ಚೈನಾ ಕಮ್ಯುನಿಸ್ಟ್ ಸರಕಾರ

    ಆನ್‌ಲೈನ್‌ನಲ್ಲಿ ‘ಸೂಪರ್ ವಲ್ಗರ್ ಬುಚ್ಚರ್’ ಎಂಬ ಹೆಸರಿಂದ ಸರ್ಕಾರದ ನೀತಿಗಳನ್ನು ಪ್ರಶ್ನಿಸಿ, ಸೂಕ್ಷ್ಮ ಬರಹಗಳ ಮುಖಾಂತರ ಹೆಸರು ಗಳಿಸಿದ್ದ ಮಾನವಹಕ್ಕುಗಳ ಹೋರಾಟಗಾರ ವು-ಗನ್‌ಗೆ ಚೈನಾ ಸರಕಾರ ಮಂಗಳವಾರ ಎಂಟು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ವೂ-ಗನ್ ತಮ್ಮ ಬ್ಲಾಗ್‌ನಲ್ಲಿ ಬರೆಯುವುದರ ಜೊತೆಗೆ ಬೀದಿಗಳಲ್ಲಿ ವಿನೂತನ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಟೈಆನ್ಜಿನ್ ದ್ವಿಸದಸ್ಯತ್ವ ಪೀಠವು ಇವರಿಗೆ ಸರಕಾರದ ನಡೆಗಳನ್ನು ಪ್ರಶ್ನಿಸಿದ ಆರೋಪದ ಮೇಲೆ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಮುಂಚೆಯೇ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟಿಸಿದ್ದಕ್ಕಾಗಿ ಪೂರ್ವ..

    December 27, 2017
    ...
    PRISON STORIES

    ಕಂಬಿ ಹಿಂದಿನ ಕತೆ- 4: ಮಾಟಮಂತ್ರದ ಅನುಮಾನ; ಕಾರಾಗೃಹದಲ್ಲಿ ದಲಿತ ಕುಟುಂಬದ ಬದುಕಿನ ಪಯಣ!

    ಅವರದ್ದು ಬಡ ರೈತ ಕುಟುಂಬ. ಜಾತಿ ಹಿನ್ನೆಲೆ ದಲಿತ. ಒಂದೆರಡು ಏಕರೆ ಒಣ ತುಂಡು ಭೂಮಿ ಇದೆ. ಹಾಸನ ಬಾಗದವರು. ಅವರದು ಎರಡು ಹೆಣ್ಣು ಮಕ್ಕಳು ಹಾಗೂ ಮೂರು ಜನ ಗಂಡು ಮಕ್ಕಳ ಕುಟುಂಬ. ಅವರಲ್ಲಿ ಎಲ್ಲರಿಗಿಂತ ಕೊನೆಯ ಮಗ ಮಾತ್ರ ಪಿಯುಸಿವರೆಗೆ ಕಲಿತವ. ಕೂಲಿನಾಲಿಯೇ ಪ್ರಧಾನ ಆದಾಯ. ಒಣ ಭೂಮಿಯಲ್ಲಿ ಕಷ್ಟಪಟ್ಟು ಗೇಯ್ದರೂ ಎಲ್ಲರ ಹೊಟ್ಟೆ ತುಂಬುವುದಿಲ್ಲ. ಇನ್ನು ಹಬ್ಬ, ಹರಿದಿನ, ಜಾತ್ರೆ, ಮದುವೆ, ಬಟ್ಟೆಬರೆ, ರೋಗ ರುಜಿನಗಳ ಕಡೆ ಗಮನ ಕೊಡಬೇಕೆಂದರೆ ಇಕ್ಕಟ್ಟು ಹಾಗೂ..

    December 19, 2017
    ...
    ಫೋಕಸ್

    ‘ಬೌದ್ಧ ದೇಶದ ಅಲ್ಪಸಂಖ್ಯಾತರು’: ರೋಹಿಂಗ್ಯಾ ಮುಸ್ಲಿಂರು, ಧರ್ಮ ಮತ್ತು ಮಿತಿ ಮೀರಿದ ದಾಳಿಗಳು…

    1920-40ರಲ್ಲಿ ದೇಶಗಳ ನಡುವೆ ಯುದ್ಧಗಳು ನಡೆದು ಮಹಾಸಮರಗಳು ನಡೆದು ಹೋಗಿದ್ದವು. ಆದರೆ ಇವತ್ತು ದೇಶಗಳ ಗಡಿಯನ್ನು ಮೀರಿ ಮನುಷ್ಯನ ನಡುವೆ ನಡೆಯುತ್ತಿರುವ ಯುದ್ಧಗಳು ಧಾರ್ಮಿಕ ನೆಲೆಗೆ ಅಪ್ಪಿಕೊಳ್ಳುತ್ತಿವೆ. ಸದ್ಯ ವಿಶ್ವದಲ್ಲಿ ನಡೆಯುತ್ತಿರುವುದು ಜನಾಂಗಗಳ ನಡುವಿನ ಯುದ್ಧ. ಅದು ಹಿಂದೂ ವರ್ಸಸ್ ಮುಸ್ಲಿಂ ಇರಬಹುದು, ಮುಸ್ಲಿಂ ವರ್ಸಸ್ ಕ್ರಿಶ್ಚಿಯನ್ ಇರಬಹುದು ಅಥವಾ ನಮ್ಮದೇ ಪಕ್ಕದ ದೇಶ ಮಯನ್ಮಾರ್‌ನಲ್ಲಿ ನಡೆಯುತ್ತಿರುವ ಬೌದ್ಧಿಸ್ಟ್ ವರ್ಸಸ್ ರೊಹಿಂಗ್ಯಾ ಇರಬಹುದು. ನಿಲ್ಲದ ರೊಹಿಂಗ್ಯಾ ಮುಸ್ಲಿಮರ ಮೇಲಿನ ದಾಳಿ… ಮಯನ್ಮಾರ್ ಭೇಟಿ ವೇಳೆ ರೋಹಿಂಗ್ಯಾ ವಿಷಯ ಪ್ರಸ್ತಾಪಿಸಲಿರುವ..

    September 4, 2017
    ...
    ಸುದ್ದಿ ಸಾರ

    ಭಾರತೀಯ ಸೇನೆ ವಿರುದ್ಧ ಸಿಬಿಐ ತನಿಖೆ: ಮಣಿಪುರಿಗಳ ಮನವಿಗೆ ಸ್ಪಂದಿಸಿದ ಸುಪ್ರಿಂ ಕೋರ್ಟ್

    ಮಣಿಪುರದಲ್ಲಿ ಭಾರತೀಯ ಸೇನೆಯಿಂದ ನಡೆದ ಕಾನೂನುಬಾಹಿರ ಹತ್ಯೆಗಳ ಕುರಿತು ಸುಪ್ರಿಂ ಕೋರ್ಟ್‌ ಸಿಬಿಐ ತನಿಖೆಗೆ ಶುಕ್ರವಾರ ಆದೇಶ ನೀಡಿದೆ. ನ್ಯಾ. ಎಂ. ಬಿ. ಲಾಕೂರ್ ಹಾಗೂ ನ್ಯಾ. ಯು. ಯು. ಲಲಿತ್ ಅವರಿದ್ದ ಪೀಠದ ಮುಂದೆ ಸೇನೆಯಿಂದ ನಡೆದ ನಕಲಿ ಎನ್‌ಕೌಂಟರ್‌ಗಳ ಕುರಿತು ತನಿಖೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಪೊಲೀಸರಿಂದ ನಡೆದ ಕಾನೂನು ಬಾಹಿರ ಹತ್ಯೆಗಳ ಕುರಿತು ಸಿಬಿಐ ತನಿಖೆಗೆ ಆದೇಶ..

    July 14, 2017
    ...
    ಪತ್ರಿಕೆ

    ಆಕ್ರಮಿಸಿಕೊಂಡ ದೇಶದೊಳಗೆ ಸತ್ಯ ಹೇಳುತ್ತಿರುವ ಪತ್ರಕರ್ತ; ಇಸ್ರೇಲಿನ ಗಿಡಾನ್ ಲೆವಿ!

    ‘ಕಳೆದ ಮೂರು ದಶಕಗಳಿಂದ ಬರಹಗಾರ, ಪತ್ರಕರ್ತ ಗಿಡಾನ್ ಲೆವಿ ತಮ್ಮ ಕ್ಷೀಣದನಿಯಲ್ಲಿ ಭಯೋತ್ಪಾದಕರು ಆವರಿಸಿಕೊಂಡ ಪ್ರದೇಶದ ಕತೆಯನ್ನು ತಮ್ಮ ಓದುಗರಿಗೆ ಹೇಳಿಕೊಂಡು ಬರುತ್ತಿದ್ದಾರೆ…’; ಎಂದು ಬರೆಯುತ್ತಾನೆ ಇನ್ನೊಬ್ಬ ಪತ್ರಕರ್ತ ಜಾನ್ ಹರಿ. ಇಸ್ರೇಲ್ ದೇಶದ ಭಿನ್ನ ದನಿಯಾಗಿ ಗುರುತಿಸಿಕೊಂಡಿರುವ ಪತ್ರಕರ್ತ ಗಿಡಾನ್, ‘ದಿ ಇಂಡಿಪಂಡೆಂಟ್’ ಪತ್ರಿಕೆಗೆ 2010ರಲ್ಲಿ ನೀಡಿದ ಸಂದರ್ಶನಕ್ಕೆ ಬರೆದ ಮುನ್ನುಡಿಯಲ್ಲಿರುವ ವಾಕ್ಯಗಳಿವು. ಒಬ್ಬ ಪತ್ರಕರ್ತ ಇನ್ನೊಬ್ಬ ಪತ್ರಕರ್ತನ ಬಗ್ಗೆ ಬರೆಯಬೇಕಾದ ಅನಿವಾರ್ಯತೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಗಿಡಾನ್ ಲೆವಿ ತರಹರ ವ್ಯಕ್ತಿ ಪರಿಚಯಗಳನ್ನು ಮಾಡಿಸುವ..

    July 5, 2017
    ...
    ಫೋಕಸ್

    ಕೇಂಬ್ರಿಡ್ಜ್ ರಿಟರ್ನ್ ಮಿಸ್ ಭಾಟಿಯಾ ಮತ್ತು ಸಂಘರ್ಷದ ನಾಡಿನ ಕೊಲೆ ಬೆದರಿಕೆಗಳು

    ಸದ್ಯ ದೇಶದ ರಾಜಧಾನಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ದಾರೆ. ಹಕ್ಕುಗಳಿಗಾಗಿ ಹೋರಾಟ ನಡೆಸಿಕೊಂಡು ಬರುವ ಸಂಪ್ರದಾಯ ಭಾರತಕ್ಕೆ ಹೊಸತಲ್ಲ. ಹಾಗಂತ ಹೋರಾಟ ಎಂಬುದು ಸುಂದರ ಗುಲಾಬಿಗಳನ್ನು ಹೊಂದಿರುವ ತೋಟವೇನೂ ಅಲ್ಲ. ಅದರಲ್ಲೂ, ಬಸ್ತಾರ್‌ನಂತಹ ಸೇನಾಪಡೆ ಮತ್ತು ನಕ್ಸಲೀಯರ ನಡುವೆ ನಿರಂತರ ಕಾಳಗಕ್ಕೆ ಸಾಕ್ಷಿಯಾಗಿರುವ ಪ್ರದೇಶದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಇನ್ನೂ ಕಷ್ಟ. ಅಂತಹದೊಂದು ಕಷ್ಟವನ್ನು ಮೈಮೇಲೆ ಎಳೆದುಕೊಂಡವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪಡೆದುಕೊಂಡು ಬಂದಿರುವ ಮಿಸ್. ಭಾಟಿಯಾ. ಆದಿವಾಸಿಗಳಿರುವ ಛತ್ತೀಸ್‌ಗಢ ರಾಜ್ಯದ ಪರ್ಪಾ ಗ್ರಾಮದಲ್ಲಿ ಭಾಟಿಯಾ..

    February 28, 2017
    ...
    ರಾಜ್ಯ

    ‘ಎಬಿವಿಪಿ’ ನಿದ್ದೆಗೆಡಿಸಿದ ‘ಅಮ್ನೆಸ್ಟಿ ಇಂಟರ್ನ್ಯಾಷನಲ್’: ವಿವಾದಕ್ಕೆ ಮೂಲ ಕಾರಣ ‘ವರದಿ’ನಾ?

    ಅಮ್ನೆಸ್ಟಿ ಇಂಟರ್ನ್ಯಾಷನಲ್ ವಿರುದ್ಧ ಶುಕ್ರವಾರವೂ ಎಬಿವಿಪಿ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಇಂದಿರಾನಗರದ ಅಮ್ನೆಸ್ಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಮಾನವ ಹಕ್ಕು ಸಂಘಟನೆ ಅಮ್ನೆಸ್ಟಿ ವಿರುದ್ಧ ಎಬಿವಿಪಿ ಉಗ್ರ ಪ್ರತಿಭಟನೆಗೆ ಇಳಿದಿದ್ದರ ಹಿನ್ನಲೆ ಬೇರೆಯೇ ಇದೆ.ಬೆಂಗಳೂರಿನ ಥಿಯಾಲಜಿಕಲ್ ಕಾಲೇಜಿನಲ್ಲಿ ಕಾಶ್ಮೀರದ ಕುರಿತು ಕಾರ್ಯಕ್ರಮದಲ್ಲಿ ದೇಶದ್ರೋಹಿ ಘೋಷಣೆಯನ್ನು ಕೂಗಲಾಗಿದೆ ಎಂಬ ಆರೋಪದ ಮೂಲಕ, ಅಖಿಲ ಭಾರತೀಯ ವಿದ್ಯಾರ್ಥಿ..

    August 19, 2016
    ...
    ರಾಜ್ಯ

    ಹುಷಾರ್… ಪುತ್ರನ ವಿರುದ್ಧ ದೂರು ನೀಡೋಕೆ ಬಂದರೆ, ಜೈಲಿಗೆ ಅಟ್ತಾರೆ ಡಿಜಿಪಿ ಓಂಪ್ರಕಾಶ್!

    ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಮೇಲೆ ಪುತ್ರ ವ್ಯಾಮೋಹಕ್ಕೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಶನಿವಾರ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಚಿಕ್ಕಮಗಳೂರು ಮೂಲದ ಯುವತಿಯನ್ನು ಭಾನುವಾರ ಸಂಜೆ ವೇಳೆಗೆ ರಾಜಾಜಿನಗರದ ಮನೆಯಲ್ಲಿ ಬಂಧಿಸಲಾಗಿದೆ. ಆಕೆಯ ವಿರುದ್ಧ ಶನಿವಾರ ಕನಕಪುರ ನಗರ ಠಾಣೆಯಲ್ಲಿ ದಾಖಲಾದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಕಾರ್ಯಚರಣೆಯನ್ನು ನಡೆಸಲಾಗಿದೆ. ಈ ಮೂಲಕ, ಡಿಜಿಪಿ ಪುತ್ರ ಕಾರ್ತಿಕೇಶ ಹಾಗೂ ಆತನ ಸ್ನೇಹಿತ ಎಂದು ಗುರುತಿಸುತ್ತಿರುವ ರವಿಶಂಕರ್ ಎಂಬಾತನ ವಿರುದ್ಧ ದೂರು..

    May 1, 2016
    ...
    ರಾಜ್ಯ

    ಯಾರು ಈ ರಾಜಲಕ್ಷ್ಮಿ? ಡಿಜಿಪಿ ಜತೆ ಆಕೆಗಿದ್ದ ಸಂಬಂಧವೇನು?

    ಡಿಜಿಪಿ ಪುತ್ರನ ವಿರುದ್ಧ ಕಿರುಕುಳ ಆರೋಪದ ಮೇಲೆ ದೂರು ನೀಡಲು ಬಂದ ರಾಜಲಕ್ಷ್ಮಿಗೂ ಡಿಜಿಪಿ ಓಂಪ್ರಕಾಶ್ ಅವರಿಗೂ ಹಿಂದೆಯೇ ಪರಿಚಯವಿತ್ತು ಎಂಬುದಕ್ಕೆ ದಾಖಲೆಯೊಂದು ಇದೀಗ ಲಭ್ಯವಾಗಿದೆ. ‘ಸಮಾಚಾರ’ಕ್ಕೆ ಸಿಕ್ಕಿರುವ ಮೊಬೈಲ್ ಮೆಸೇಜ್ ಒಂದು ಇದನ್ನು ಸಾಭೀತು ಪಡಿಸುತ್ತಿದೆ. 2015ರ ಡಿಸೆಂಬರ್ 7ರಂದು ಡಿಜಿಪಿ ಅವರ ಮೊಬೈಲ್ ನಂಬರ್ನಿಂದ, ರಾಜಲಕ್ಷ್ಮಿ ಕುಟುಂಬದ ಸದಸ್ಯರೊಬ್ಬರಿಗೆ ಫಾರ್ವರ್ಡ್ ಮಾಡಿರುವ ಮೆಸೇಜ್ ಇದು. ಇದನ್ನು ರಾಜಲಕ್ಷ್ಮಿ ಡಿಜಿಪಿ ಓಂಪ್ರಕಾಶ್ ಅವರಿಗೆ ಕಳುಹಿಸಿದ್ದರು ಎಂಬುದನ್ನು ಮೂಲಗಳು ಸ್ಪಷ್ಟಪಡಿಸಿವೆ. ‘ಯಾರತ್ರ ಏನು ಹೇಳಿದರೂ ಅಷ್ಟೆ, ನಿನ್ನ ನಿನ್ನ ಮಗನ್ನ ಬಿಡಲ್ಲ…

    May 1, 2016
    ...
    ರಾಜ್ಯ

    ‘ಅಕ್ಕನ ಮೇಲೆ ಪೊಲೀಸ್ ದೌರ್ಜನ್ಯ’: ಡಿಜಿಪಿ ಪುತ್ರನಿಂದ ಕಿರುಕುಳ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್!

    “ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನನ್ನ ಅಕ್ಕನ ಮನೆಗೆ ಪೊಲೀಸರನ್ನು ಕಳುಹಿಸಿ, ಬಂಧಿಸುವ ಪ್ರಯತ್ನ ನಡೆಸಿದ್ದಾರೆ…” ಹೀಗೊಂದು ಗಂಭೀರ ಆರೋಪವನ್ನು ಮಾಡಿದ್ದು, ಶನಿವಾರ ಡಿಜಿಪಿ ಮನೆ ಎದುರು ಪ್ರತಿಭಟನೆ ನಡೆಸಿದ ಯುವತಿಯ ಸಹೋದರಿ. ‘ಸಮಾಚಾರ’ಕ್ಕೆ ಕೆಲವು ಕ್ಷಣಗಳ ಹಿಂದೆಯಷ್ಟೆ ದೂರವಾಣಿ ಮೂಲಕ ಮಾತನಾಡುತ್ತಿದ್ದ ಅವರ ದನಿ ಆತಂಕಗೊಂಡಂತಿತ್ತು. “ಹತ್ತು ನಿಮಿಷದ ಮುಂದೆ, ರಾಜಾಜಿನಗರದಲ್ಲಿರುವ ನನ್ನ ಅಕ್ಕ ಕರೆ ಮಾಡಿದ್ದಳು. ಮನೆಗೆ ಪೊಲೀಸರು ಬಂದಿದ್ದಾರೆ. ನಾನು ಮನೆಯ ಬಾಗಿಲು ತೆಗೆಯಲಿಲ್ಲ. ಈ..

    May 1, 2016
  • 1
  • 2

FOOT PRINT

Top