An unconventional News Portal.

ಮಳೆ
    ...
    vardah-cyclone-pti
    ದೇಶ

    ಕರ್ನಾಟಕವನ್ನೂ ಹಾದು ಹೋಗಲಿರುವ ವಾರ್ದಾ ಚಂಡಮಾರುತ: 10 ಪ್ರಮುಖ ಬೆಳವಣಿಗೆಗಳು

    ತಮಿಳುನಾಡು ರಾಜಧಾನಿ ಚೆನ್ನೈನಿಂದ 15 ಕಿ. ಮೀ ದೂರದಲ್ಲಿ ಅಪ್ಪಳಿಸಿರುವ ವಾರ್ದಾ ಚಂಡಮಾರುತಕ್ಕೆ ಈವರೆಗೆ 10 ಜನರ ಬಲಿಯಾಗಿದೆ. ಸೋಮವಾರ ಗಂಟೆಗೆ 90- 100 ಕಿ. ಮೀ ವೇಗದಲ್ಲಿ ಬೀಸುತ್ತಿದ್ದ ಚಂಡಮಾರುತದ ಬಿರುಗಾಳಿಯ ವೇಗ 120- 130 ಕಿ. ಮೀ ಪ್ರತಿ ಗಂಟೆಗೆ ಹೆಚ್ಚಿದೆ. ಆದರೆ ಮಾರುತಗಳ ತೀವ್ರತೆ ತಗ್ಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಜತೆಗೆ ಭಾರಿ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು, ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಚಂಡಮಾರುತ ಹಾದು..

    December 13, 2016
    ...
    vardha-3
    ಸುದ್ದಿ ಸಾರ

    ಮುಂದುವರಿದ ‘ವಾರ್ದಾ’ ಅಬ್ಬರ: ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಮಳೆಗೆ 2 ಬಲಿ

    ಜೋರಾಗಿ ಬೀಸುತ್ತಿರುವ ಬಿರುಗಾಳಿ ಮತ್ತು ಭಾರಿ ಮಳೆಯನ್ನು ಹೊತ್ತು ತಂದಿರುವ ವಾರ್ದಾ ಚಂಡಮಾರುತಕ್ಕೆ ತಮಿಳುನಾಡು ಮತ್ತು ಆಂಧ್ರದ ವಾತಾವರಣವೇ ಬದಲಾಗಿ ಹೋಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸೋಮವಾರ ಸಂಜೆ ವೇಳೆಗೆ ತುಂತುರು ಮಳೆಯಾಗುತ್ತಿದೆ. ತಮಿಳುನಾಡಿನ ಉತ್ತರ ಭಾಗದಲ್ಲಿ ಭಾರಿ ಮಳೆ ಮತ್ತು ಗಾಳಿಗೆ ಇಬ್ಬರು ಬಲಿಯಾಗಿದ್ದು, ಸರಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಸೇನಾ ಪಡೆಗಳು ಹಾಗೂ ರಾಷ್ಟ್ರೀಯ ವಿಕೋಪ ನಿಯಂತ್ರಣ ಪಡೆಗಳು ಸ್ಥಳದಲ್ಲಿದ್ದು, ಜನರ ಸ್ಥಳಾಂತರಕ್ಕೆ ನೆರವಾಗುತ್ತಿವೆ. ತಮಿಳುನಾಡು ಸರಕಾರದ..

    December 12, 2016
    ...
    nada-syclone-tn-1
    ಸುದ್ದಿ ಸಾರ

    ನಾಡಿಗೆ ಕಾಲಿಟ್ಟ ‘ನಾಡಾ’ ಚಂಡಮಾರುತ: ಸಿಲಿಕಾನ್ ಸಿಟಿಯಲ್ಲೂ ಮಳೆಯ ಸಿಂಚನ

    ದಿನದ ಆರಂಭದಲ್ಲಿಯೇ ಮಳೆಯ ಸಿಂಚನ, ತಂಪಾದ ವಾತಾವರಣ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ, ತಮಿಳುನಾಡು ಮತ್ತುಆಂಧ್ರದಲ್ಲಿ ಭಾರಿ ಮಳೆಯ ಸಾದ್ಯತೆ, ಬೆಂಗಳೂರಿಗೂ ತಟ್ಟಲಿರುವ ಹವಾಮಾನ ಬದಲಾವಣೆಯ ಪರಿಣಾಮಗಳು. ಇದು ಶುಕ್ರವಾರ ಮುಂಜಾನೆಯ ವೆದರ್ ರಿಪೋರ್ಟ್. ಗುರುವಾರ ರಾತ್ರಿ ವೇಳೆಗೆ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನ ಕೆಲವೆಡೆ ತುಂತುರು ಮಳೆ ಬಿದ್ದಿತ್ತು. ಚಳಿಯ ವಾತಾವರಣದಲ್ಲಿ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ‘ನಾಡಾ ಚಂಡಮಾರುತ’. ಶುಕ್ರವಾರ ನಸುಕಿನಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ನಾಗಪಟ್ನಂ ಬಂದರಿನ ಸಮೀಪ ನಾಡಾ ಹೆಸರಿನ ಚಂಡಮಾರುತ..

    December 2, 2016
    ...
    North Flood
    ಸುದ್ದಿ ಸಾರ

    21ದಿನದ ಮಳೆಗೆ 150ಕ್ಕೂ ಹೆಚ್ಚು ಸಾವು; ಮೇಘಧಾರೆಗೆ ಉತ್ತರ ತತ್ತರ; ನಮ್ಮಲ್ಲಿ ನಿರುತ್ತರ!

    ಉತ್ತರ ಭಾರತ ಜಲಾವೃತವಾಗಿದೆ. ಮೂರು ವಾರಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಅಸ್ಸಾಂ ಮತ್ತು ಬಿಹಾರ ಕೊಚ್ಚಿ ಹೋಗಿದೆ. ಈವರೆಗೆ 150ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು ಪರಿಸ್ಥಿತಿ ಕೈಮೀರುತ್ತಿದೆ. ಉತ್ತರ ಭಾರತ ಸುತ್ತ ಮುತ್ತ ಮೂರು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.  ಒಟ್ಟಾರೆ ಈ ವರೆಗೆ ಮಳೆ ಸಂಬಂಧಿತ ಅವಘಡಗಳಿಂದ 152 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರವಾಹದಿಂದಾಗಿ ಲಕ್ಷಾಂತರ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ನಡುಗಡ್ಡೆಯಾದ ಅಸ್ಸಾಂ ಈಶಾನ್ಯ ರಾಜ್ಯ ಅಸ್ಸಾಂ..

    August 2, 2016
    ...
    Bangalore Flood_EPS 4
    ಫೋಕಸ್

    ಬೆಂಗಳೂರಿನಲ್ಲಿ ಮಳೆ: ‘ನೀತಿಗೆಟ್ಟ’ವರಿಗೆ ಹೀಗೊಂದು ಪರ್ಯಾಯ ಇದೆ ಎಂದು ಹೇಳುವವರು ಯಾರು?

    ಮಳೆ, ಪ್ರವಾಹ, ಟ್ರಾಫಿಕ್ ಜಾಂ… ಕೆರೆ ಕಟ್ಟೆ ಒಡೆದು ರಸ್ತೆಗೆ ನುಗ್ಗಿದ ನೀರು, ಮೀನು ಹಿಡಿದ ಜನ… ಹೀಗೆ ಶುಕ್ರವಾರ ದಿನ ಪೂರ್ತಿ ಬೆಂಗಳೂರಿನಲ್ಲಿ ಮಳೆಯದ್ದೇ ಸದ್ದು. ನಗರದಲ್ಲಿ ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ ಮಳೆಯ ಪ್ರಮಾಣ ಮಾತ್ರ ಚಿಲ್ಲರೆ 2. 47 ಸೆಂಟಿ ಮೀಟರ್ ಎಂಬುದು ಸೋಜಿಗದ ವಿಚಾರ. ಇಷ್ಟು ಸಣ್ಣ ಮಳೆಗೆ ಬೆಂಗಳೂರು ಹೀಗಾಗಿದ್ದೇಕೆ? ಕಾರಣ ಅವೈಜ್ಞಾನಿಕ ‘ನಗರ ಯೋಜನೆ’ ನೀತಿಗಳನ್ನು ಬಿಟ್ಟು ಬೇರೇನೂ ಅಲ್ಲ. ಹಾಗೆ ನೋಡಿದರೆ “ಬೆಂಗಳೂರು ಗುಡ್ಡ ಪ್ರದೇಶದಲ್ಲಿದೆ. ಇಲ್ಲಿ ನೀರು..

    July 29, 2016
    ...
    Rain
    ಸುದ್ದಿ ಸಾರ

    ಕುಂಭದ್ರೋಣ ಮಳೆಗೆ 100 ಕ್ಕೂ ಹೆಚ್ಚು ಬಲಿ

    ಉತ್ತರ ಭಾರತ ಸುತ್ತ ಮುತ್ತ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆ 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ನೆರೆಯ ರಾಷ್ಟ್ರ ನೇಪಾಳದಲ್ಲಿ ಪ್ರವಾಹದಿಂದಾಗಿ ಹೆಚ್ಚಿನ ಸಾವು ನೋವು ಸಂಭವಿಸಿದ್ದರೆ, ಬಿಹಾರ ಮತ್ತು ಅಸ್ಸಾಂನಲ್ಲಿಯೂ ಜನ ಮಳೆಯಿಂದಾಗಿ ತತ್ತರಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಕಳೆದೊಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ಹಲವು ಪ್ರದೇಶಗಳು ಜಲಾವೃತವಾಗಿವೆ. ಬ್ರಹ್ಮಪುತ್ರ ಸೇರಿದಂತೆ ನದಿಗಳೂ ತುಂಬಿ ಹರಿಯುತ್ತಿದ್ದು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಜನ-ಜಾನುವಾರುಗಳ ಜೀವ ಹಾನಿ ಒಂದೆಡೆಯಾದರೆ, ಲೆಕ್ಕವಿಲ್ಲದಷ್ಟು ಬೆಳೆ ಹಾನಿ, ಆಸ್ತಿ ಹಾನಿ..

    July 29, 2016

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top