An unconventional News Portal.

ಮಂಡ್ಯ

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ

  ...
  GAURI LANKESH FILES

  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ನಕ್ಸಲೀಯರ ಸುತ್ತ ಅನುಮಾನದ ಹುತ್ತ ಬೆಳೀತಾ ಇರೋದು ಯಾಕೆ?

  ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ. ಗೌರಿ ದೇಹ ಬೆಂಗಳೂರಿನ ಚಾಮರಾಜಪೇಟೆಯ ಸ್ಮಶಾನದಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವ ಹೊತ್ತಿಗೇ, ಹತ್ಯೆ ಸುತ್ತ ಹಲವು ಅನುಮಾನಗಳ ಮುಳ್ಳು ನೆಟ್ಟಿದೆ. ಒಂದು ಕಡೆ ಗೌರಿ ಲಂಕೇಶ್ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ರಾಷ್ಟ್ರ ಮಟ್ಟದ ಬೃಹತ್ ಹೋರಾಟದ ರೂಪುರೇಷೆ ಸಿದ್ಧವಾಗುತ್ತಿದೆ. ಮತ್ತೊಂದು ಕಡೆ, ರಾಜ್ಯ ಸರಕಾರ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ‘ವಿಶೇಷ ತನಿಖಾ ತಂಡ'(ಎಸ್‌ಐಟಿ) ವನ್ನು ರಚಿಸಿದೆ. ಎಸ್‌ಐಟಿ ತನಿಖೆಯ ಜಾಡನ್ನು ನಿರ್ಧಾರ ಮಾಡಬೇಕಿದೆ…

  September 7, 2017
  ...
  ರಾಜ್ಯ

  ಸಕ್ಕರೆ ನಾಡಿನ ಕಹಿ ಕತೆಗಳು: ವಿಷದ ಬಾಟ್ಲಿಯನ್ನು ‘ಅಲ್ಲಾಡಿಸುತ್ತ’ ಇರುವವರು ಕಬ್ಬು ಬೆಳೆಗಾರರು

  ದಕ್ಷಿಣ ಭಾರತದಲ್ಲಿ ಲಭ್ಯ ಇರುವ ಫಲವತ್ತಾದ ಭೂಮಿ ಮತ್ತು ಮಳೆ ನೀರಿನಿಂದಾಗಿ ಸುಮಾರು 10 ಸಾವಿರ ವರ್ಷಗಳ ಹಿಂದಿನಿಂದ ಕೃಷಿ ಭೂಮಿಯಲ್ಲಿ ರೈತರು ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಮಹಾತ್ಮಗಾಂಧಿ ಕೂಡ ತಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿ ರೈತರನ್ನು ಕೇಂದ್ರ ಸ್ಥಾನದಲ್ಲಿ ಇರಿಸಿದ್ದರು. ಅವರ ‘ಹಿಂದ್ ಸ್ವರಾಜ್’ ಪುಸ್ತಕದಲ್ಲಿ, ಸಾಂಪ್ರದಾಯಿಕ ಕೃಷಿ ಪದ್ಧತಿಯ ಪರವಾಗಿ ವಾದ ಮಂಡಿಸಿದ್ದರು. 1947ರಲ್ಲಿ ದೇಶ ಸ್ವತಂತ್ರಗೊಂಡ ನಂತರ 1960ರಲ್ಲಿ ಹೆಚ್ಚುತ್ತಿದ್ದ ಜನಸಂಖ್ಯೆಗೆ ಆಹಾರದ ಉತ್ಪಾದನೆಯ ಸಲುವಾಗಿ ‘ಹಸಿರು ಕ್ರಾಂತಿ’ಯನ್ನು ಜಾರಿಗೆ ತರಲಾಯಿತು. ಕೃಷಿಯಲ್ಲಿ ಮೊದಲ..

  April 5, 2017
  ...
  ಕಾವೇರಿ ವಿವಾದ

  ಕಾವೇರಿ ಕಣದಿಂದ ಜಿ. ಮಾದೇಗೌಡ ಮಾಯ: ಪುತ್ರ ವ್ಯಾಮೋಹಕ್ಕೆ ಬಲಿಯಾದ್ರಾ ‘ಮಂಡ್ಯದ ಗಾಂಧಿ’?

  ಜಿ. ಮಾದೇಗೌಡ ಎಂಬ ಹೆಸರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ, ಕರ್ನಾಟಕ ರಾಜಕೀಯದಲ್ಲಿ ಚಿರಪರಿಚಿತ ಹೆಸರು. ಕಾವೇರಿ ವಿಚಾರ ಬಂದರೆ ಮಂಡ್ಯದ ಬೀದಿಗಳಲ್ಲಿ ಪ್ರತ್ಯಕ್ಷವಾಗುವ ‘ಮಂಡ್ಯದ ಗಾಂಧಿ’, ನೇರ, ನಿಷ್ಟುರ ಪಾರದರ್ಶಕ ಹೋರಾಟಗಾರ ಎಂಬ ಬಿರುದುಗಳ ಭಾರ ಹೊತ್ತವರು ಇವರು. ನಿಜವಾಗಿಯೂ ಮಾದೇಗೌಡ ಪಾರದರ್ಶಕರೇ? ಗಾಂಧಿ ತತ್ವ ಪಾಲಿಸುವವರೇ? ಈ ವಿಚಾರಗಳ ಬೆನ್ನತ್ತಿ ಹೋದರೆ ಸ್ವಂತಕ್ಕಾಗಿ ಈ ‘ಗಾಂಧಿ’ ಮಾಡಿಕೊಂಡಿದ್ದೇನು? ಎಂಬ ಮಾಹಿತಿಗಳು ಸಿಗುತ್ತವೆ. ಕಾವೇರಿ ವಿಚಾರದಲ್ಲಿ ಮಂಡ್ಯದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಮಾದೇಗೌಡರು ಏಕಾಏಕಿ ತಮ್ಮ ಧರಣಿ ನಿಲ್ಲಿಸಲು ಕಾರಣ ಪುತ್ರ..

  October 6, 2016
  ...
  ರಾಜ್ಯ

  ‘LOVE in ಮಂಡ್ಯ’: ಕೈಕೊಟ್ಟ ಹುಡುಗಿಯ ಮೇಲೆ ಕೇಸು ದಾಖಲಿಸಿ ಕಾಯುತ್ತಿರುವ ಪ್ರೇಮಿ!

  ಇದೊಂದು ಅಪರೂಪದಲ್ಲಿ ಅಪರೂಪದ ಪ್ರೇಮ ಪ್ರಕರಣದ ಕತೆ. ಐದು ವರ್ಷಗಳ ಕಾಲ ಪ್ರೇಮಿಸಿ, ಇನ್ನೇನು ಮದುವೆಯಾಗಬೇಕು ಎಂಬ ಸಮಯದಲ್ಲಿ ಹುಡುಗಿ ಉಲ್ಟಾ ಹೊಡೆದಳು. ಸದ್ಯ ಆಕೆಯ ಮೇಲೆ ವಂಚನೆ, ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣಗಳ ಅಡಿಯಲ್ಲಿ ದೂರು ದಾಖಲಿಸಿರುವ ಪ್ರೇಮಿ, ಆಕೆಯ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದಾನೆ. ಪ್ರಕರಣ ನಡೆದಿರುವುದು ಮಂಡ್ಯದಲ್ಲಿ. ಕಾವೇರಿ ವಿವಾದ ಕಾವು ಪಡೆದುಕೊಳ್ಳುವುದಕ್ಕೆ ಕೆಲವು ದಿನಗಳ ಹಿಂದಷ್ಟೆ ಮಂಡ್ಯ ಜಿಲ್ಲಾ ಪೊಲೀಸರಿಗೆ ಹೀಗೊಂದು ವಿಚಿತ್ರ ದೂರು ಬಂದಿತ್ತು. “ಆಕೆ ಐದು ವರ್ಷಗಳ..

  October 1, 2016
  ...
  ಕಾವೇರಿ ವಿವಾದ

  ಕಾವೇರಿ ವಿಚಾರದಲ್ಲಿ ಬದಲಾಗದ ‘ಸುಪ್ರಿಂ ನ್ಯಾಯ’: 6,000 ಕ್ಯೂಸೆಕ್ಸ್ ನೀರು ಹರಿಸಲು ಸೂಚನೆ

  ಮೇಲಿಂದ ಮೇಲೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡುತ್ತಿರುವ ಸುಪ್ರಿಂ ಕೋರ್ಟ್, ಮಂಗಳವಾರದ ತನ್ನ ತೀರ್ಪಿನಲ್ಲಿಯೂ 6, 000 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಿದೆ. ಇಂದಿನಿಂದ ಮೂರು ದಿನಗಳ ಕಾಲಾವಧಿಯಲ್ಲಿ 6,000 ಕ್ಯೂಸೆಕ್ಸ್ ತಮಿಳುನಾಡಿಗೆ ನೀರು ಬಿಡಲು ಕರ್ನಾಟಕಕ್ಕೆ ಹೇಳಿದೆ. ಇದರ ನಡುವೆ ಕೇಂದ್ರ ಸರಕಾರ ವಿವಾದಕ್ಕೆ ಅಂತ್ಯಹಾಡಲು ಮಧ್ಯಪ್ರವೇಶಿಸುವುದಾಗಿ ಸುಪ್ರಿಂ ಕೋರ್ಟಿಗೆ ತಿಳಿಸಿದೆ. ಸೆ. 23ರಂದು ವಿಶೇಷ ಅಧಿವೇಶನ ಕರೆದು ಶಾಸಕಾಂಗದ ಅಧಿಕಾರವನ್ನು ಬಳಸಿದ್ದ ರಾಜ್ಯದ ನಡೆಯ ಬೆನ್ನಲ್ಲೇ ಸುಪ್ರಿಂ ಕೋರ್ಟ್ ತೀರ್ಮಾನ ಹೊರಬಿದ್ದಿದೆ…

  September 27, 2016
  ...
  ಕಾವೇರಿ ವಿವಾದ

  ‘ಕಾವೇರಿ ಕಣಿವೆಯಿಂದ’: ಬರಡು ಬೀಳುತ್ತಿರುವ ಕೃಷಿ ಭೂಮಿ ಮತ್ತು ಭವಿಷ್ಯದ ಬಿಕ್ಕಟ್ಟು!

  “ಹನ್ನೊಂದನೇ ದಿನ ಸೋಮವಾರ ಬಿತ್ತು. ಹಂಗಾಗಿ ಮಂಗಳವಾರ ಇಟ್ಕೊಳಿ ಅಂದ್ರು. ಸುಮಾರ್ 60 ಸಾವ್ರ ಖರ್ಚಾಗುತ್ತಿದೆ. ಎಲ್ಲಾ ಮುಗಿದ ಮೇಲೆ ಸಾಲ ವಾಪಾಸ್ ಕೊಡ್ತೀರೋ ಇಲ್ವೋ ಅನ್ನೋ ಬೈಗುಳನೂ ಕೇಳಬೇಕು,” ಎಂದು ತುಂಬಿದ ಕಣ್ಣುಗಳಲ್ಲಿ ನೋವಿನ ಕತೆಯನ್ನು ಶುರುಮಾಡಿದರು ಗಾಯತ್ರಿ. ಮಂಡ್ಯ ಜಿಲ್ಲೆಯ ಹೆಮ್ಮಿಗೆ ಗ್ರಾಮದ ದಲಿತ ಕಾಲೋನಿಯ ಅಂಚಿನಲ್ಲಿರುವ ಮನೆಯ ಮುಂದೆ ಅವರು ಕುಳಿತಿದ್ದರು. ಕಾವೇರಿ ವಿಚಾರದಲ್ಲಿ ವಿಶೇಷ ಅಧಿವೇಶನದ ನಿರ್ಣಯ ಹೊರಬಿದ್ದ ದಿನ ಅವರ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ವಿಚಾರ ಬಂದಾಗಲೆಲ್ಲಾ ಮಂಡ್ಯ..

  September 26, 2016
  ...
  ಸುದ್ದಿ ಸಾರ

  ಹೋರಾಟ ಸ್ಥಗಿತಗೊಳಿಸಿದ ಮಾದೇಗೌಡ; ಸಿಂಗಾಪುರಕ್ಕೆ ಜಯಲಲಿತಾ? ‘ಕಾವೇರಿ’ ದಿನದ ಬೆಳವಣಿಗೆಗಳು

  ದಿನದ ಪ್ರಮುಖ ಬೆಳವಣಿಗೆಯಲ್ಲಿ ಕಳೆದ 19 ದಿನಗಳಿಂದ ಸತತ ಪ್ರತಿಭಟನೆ ನಡೆಸುತ್ತಿದ್ದ ಮಾದೇಗೌಡರು ತಮ್ಮ ಹೋರಾಟ ನಿಲ್ಲಿಸಿದ್ದಾರೆ. ಇನ್ನೊಂದು ಕಡೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಮಾದೇಗೌಡ-ಸಿದ್ಧರಾಮಯ್ಯ ಫೋನ್ ಚರ್ಚೆ ಶನಿವಾರ ಬೆಳಿಗ್ಗೆ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಾಸಕ ಚೆಲುವರಾಯ ಸ್ವಾಮಿ ಮೊಬೈಲಿನಿಂದ ಕರೆ ಮಾಡಿದ್ದರು. “ನಾವು ನೀರು ಬಿಡುವುದಿಲ್ಲ ಪ್ರತಿಭಟನೆ ನಿಲ್ಲಿಸಿ,” ಎಂದು ಕೇಳಿಕೊಂಡರು. “ಆದರೆ ನಮಗೆ ಬೇಕಾಗಿದ್ದು ಪರಿಹಾರ. ಬಂದ್ ವೇಳೆ ಬಂಧಿಸಲಾಗಿರುವ ರೈತರು,..

  September 25, 2016
  ...
  ಕಾವೇರಿ ವಿವಾದ

  ‘ಕಾವೇರಿ ಕಣಿವೆಯಿಂದ’: 19 ದಿನಗಳ ಹೋರಾಟ; ಸ್ಥಗಿತ ಮತ್ತು ತಳಮಟ್ಟದ ವಾಸ್ತವಗಳು!

  ಎಂದಿನಂತೆಯೇ ಆರಂಭವಾಗುವ ದಿನಚರಿ, ಹಗಲು ಹೊತ್ತಿನಲ್ಲಿ ನಾನಾ ಬ್ಯಾನರ್ ಅಡಿಯಲ್ಲಿ ನಡೆಯುವ ಕಾವೇರಿಯ ಹೋರಾಟಗಳು, ರುಧ್ರಭೂಮಿಯಂತಾಗಿರುವ ನಗರದ ಪ್ರಮುಖ ವೃತ್ತ, ಹಳ್ಳಿಗಳಿಗೆ ಕಾಲಿಟ್ಟರೆ ನೀರಿಲ್ಲದೆ ಒಣಗಿ ನಿಂತಿರುವ ಜಮೀನುಗಳು; ನಾಲೆಗಳು. ಪ್ರತಿ ರೈತನ ಒಡಲೊಳಗೆ ಹುದುಗಿರುವ ಭವಿಷ್ಯದ ಕುರಿತಾದ ಭಯ ಮತ್ತು ಢಾಳಾಗಿ ಕಾಣುವ ‘ಕಾವೇರಿದ ರಾಜಕಾರಣ’ದ ಛಾಯೆ… ಇದು ಕಾವೇರಿ ಕೊಳ್ಳದ ಪ್ರಮುಖ ಜಿಲ್ಲೆ ಮಂಡ್ಯದಲ್ಲಿ ಶನಿವಾರ ‘ಸಮಚಾರ’ದ ಸುತ್ತಾಟದಲ್ಲಿ ಕಂಡು ಬಂದ ಚದುರಿದ ಚಿತ್ರಗಳು. “ಈ ವರ್ಷವಂತೂ ಬಿಡಿ ಮುಗಿದು ಹೋಯಿತು. ಮುಂದಿನ ಜೂನ್, ಜುಲೈ (2017)ರ ಹೊತ್ತಿಗೆ..

  September 25, 2016
  ...
  ಫೋಕಸ್

  ‘ನನ್ನ ಮೊದಲ ಕರ್ಫ್ಯೂ’: ಬಿಕೋ ಎಂದ ಬೆಂಗಳೂರನ್ನು ನೋಡಿದ್ದು ಇದೇ ಮೊದಲು!

  ರವಿಕುಮಾರ್, ಶಿವಮೊಗ್ಗ ಬೆಂಗಳೂರಿಗೆ ಬಂದು ಒಂದು ದಶಕದ ನಂತರ ‘ಕರ್ಫ್ಯೂ’ ಎಂದರೆ ಹೇಗಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗುತ್ತಿದ್ದೇನೆ. ನಾನು ಬೆಂಗಳೂರಿಗೆ ಬಂದ ದಿನದಿಂದಲೂ ಹೆಚ್ಚು ಒಡನಾಟ ಒಟ್ಟುಕೊಂಡ ಏರಿಯಾಗಳೀಗ ಹೊತ್ತಿ ಉರಿಯುತ್ತಿವೆ. ಅಲ್ಲೆಲ್ಲಾ ‘ಕಂಡಲ್ಲಿ ಗುಂಡು’ ಜಾರಿಯಾಗಿದೆ. ಲಗ್ಗೆರೆಯ ರಿಂಗ್ ರೋಡಿನಲ್ಲಿ ಮೊದಲ ಬಾರಿಗೆ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಚಿತ್ರಣ ಕಾಣಿಸುತ್ತಿದೆ. ರಸ್ತೆಯ ಡಿವೈಡರ್ ಮೇಲೆ ನೀಟಾಗಿ ಜೋಡಿಸಿಟ್ಟಿದ್ದ ಹೂವಿನ ಕುಂಡಗಳು ಮಧ್ಯೆದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸುಟ್ಟು ಕರಕಲಾದ ಬಸ್ಗಳು, ಅಗ್ನಿ ಶಾಮಕ ದಳದ ವಾಹನಗಳು ಪಳಯುಳಿಕೆಗಳಂತೆ ಇನ್ನೂ ಅಲ್ಲಿಯೇ ನಿಂತಿವೆ. ಅಂಗಡಿ..

  September 13, 2016
  ...
  ಸುದ್ದಿ ಸಾರ

  ‘ಕಾವೇರಿ ಕವರೇಜ್’; ದಿನದ ಪ್ರಮುಖ 10 ಬೆಳವಣಿಗೆಗಳು!

  ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬೆನ್ನಿಗೆ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಮುಖ್ಯವಾಗಿ ಮಂಡ್ಯ, ಹಾಸನ ಮತ್ತು ಮೈಸೂರಿನಲ್ಲಿ ಪ್ರತಿಭಟನೆಗಳು ಜೋರಾಗಿದ್ದು ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿ ಜನ ಬೀದಿಗಿಳಿದಿದ್ದು, ಹೆದ್ದಾರಿಗಳನ್ನು ತಡೆದಿರುವ ಹಿನ್ನಲೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ವಪಕ್ಷ ಸಭೆ ಕರೆದಿದ್ದು ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಮಂಗಳವಾರ ನಡೆದ ಪ್ರಮುಖ 10 ಬೆಳವಣಿಗೆಗಳು ಇಲ್ಲಿವೆ, ಕರ್ನಾಟಕದ ಹಾಸನ,..

  September 6, 2016
 • 1
 • 2

FOOT PRINT

Top