An unconventional News Portal.

ಭ್ರಷ್ಟಾಚಾರ
    ...
    panama-paper-india-final
    ದೇಶ

    ‘ಕಪ್ಪು ಹಣ’ದ ವಿರುದ್ಧ ಪ್ರಧಾನಿ ಮೋದಿ ಹೋರಾಟ: ಪಾಕ್‌ನಲ್ಲಿ ಶಿಕ್ಷೆ; ಭಾರತದಲ್ಲಿ…?

    ಮಳೆ ನಿಂತ ಮೇಲೂ ಹನಿಗಳು ಉದುರುವುದು ಇನ್ನೂ ನಿಂತಿಲ್ಲ. ‘ಪನಾಮ ಪೇಪರ್ಸ್‌’ ಹೆಸರಿನಲ್ಲಿ ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಂಡ ದಾಖಲೆಗಳು ಪಾಕಿಸ್ತಾನದ ಪ್ರಧಾನಿಯ ಹುದ್ದೆಯನ್ನೇ ಈಗ ಬಲಿ ತೆಗೆದುಕೊಂಡಿವೆ. ಪಾಕ್‌ ಆಡಳಿತ ಪಕ್ಷದ ಚುಕ್ಕಾಣಿ ಹಿಡಿದಿದ್ದ ನವಾಝ್‌ ಷರೀಫ್‌ ಅವರನ್ನು ಹುದ್ದೆಯಿಂದ ಅಲ್ಲಿನ ಸುಪ್ರಿಂ ಕೋರ್ಟ್‌ ಕೆಳಗಿಳಿಸಿದೆ. ನವಾಝ್‌ ಷರೀಪ್‌ ಅವರ ರೀತಿಯಲ್ಲಿಯೇ ಭಾರತದ ಪ್ರಭಾವಿಗಳ ಹೆಸರುಗಳನ್ನೂ ಈ ‘ಪನಾಮ ಪೇಪರ್ಸ್‌’ ಒಳಗೊಂಡಿದ್ದವು. ನೆರೆಯ ದೇಶದಲ್ಲಿಆ ಕುರಿತು ತನಿಖೆ ನಡೆದು ತೀರ್ಪು ಹೊರಬಿದ್ದಿದೆ. ಆದರೆ..

    July 29, 2017
    ...
    PARAPPANA AGRAHARA
    ರಾಜ್ಯ

    ಶಶಿಕಲಾ, ತೆಲಗಿ ಆಚೆಗೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ ರೂಪ ಪತ್ರ

    ರಾಜ್ಯದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆಂತರಿಕ ಪರಿಸ್ಥಿತಿಯ ಕುರಿತು ಡಿಐಜಿ ರೂಪಾ ತಮ್ಮ ಮೇಲಾಧಿಕಾರಿಗೆ ಬರೆದ ಪತ್ರ ಈಗ ಚರ್ಚೆಗೆ ಗ್ರಾಸವಾಗಿದೆ. ಪತ್ರದಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ನಕಲಿ ಛಾಪಾ ಕಾಗದ ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕರೀಂ ಲಾಲ್ ತೆಲಗಿ ಹೆಸರೂ ಇರುವುದರಿಂದ ಸುದ್ದಿಗೆ ರಾಷ್ಟ್ರೀಯ ಆಯಾಮಯೂ ದೊರಕಿದೆ. ಒಟ್ಟು ನಾಲ್ಕು ಪುಟಗಳ ಪತ್ರದ ಜತೆಗೆ 6 ಪುಟಗಳ ಜೈಲಿನ ವೈದ್ಯಾಧಿಕಾರಿಗಳ ಪತ್ರವನ್ನೂ ಮೇಲಾಧಿಕಾರಿಗೆ ಸಲ್ಲಿಸಿದ್ದಾರೆ ಡಿಐಜಿ ರೂಪಾ. ವಿಶೇಷ ಅಂದರೆ ಪತ್ರದಲ್ಲಿ..

    July 13, 2017
    ...
    justice-karnan-1
    ದೇಶ

    ನ್ಯಾ. ಕರ್ಣನ್‌ಗೆ ಶಿಕ್ಷೆಯ ತಾಪ: ಮರೆಗೆ ಸರಿದ ನ್ಯಾಯಾಧೀಶರ ಮೇಲಿನ ಭ್ರಷ್ಟಾಚಾರ ಆರೋಪ

    ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಕರ್ಣನ್ ಅವರಿಗೆ ಸುಪ್ರಿಂ ಕೋರ್ಟ್‌ ಮಂಗಳವಾರ ಆರು ತಿಂಗಳ ಶಿಕ್ಷೆ ವಿಧಿಸಿದೆ. ದೇಶದ ನ್ಯಾಯಾಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ತವ್ಯದಲ್ಲಿದ್ದ ನ್ಯಾಯಾಧೀಶರೊಬ್ಬರಿಗೆ ಶಿಕ್ಷೆ ವಿಧಿಸಿದ ಪ್ರಕರಣ ಇದಾಗಿದೆ. ಕಳೆದ ಕೆಲವು ತಿಂಗಳುಗಳ ಕಾಲ ನಡೆದ ನ್ಯಾಯಾಂಗದ ಈ ತಿಕ್ಕಾಟಕ್ಕೆ ತಾರ್ಕಿಕ ಅಂತ್ಯ ಎಂಬಂತೆ ಸುಪ್ರಿಂ ಕೋರ್ಟ್‌ ನ್ಯಾ. ಕರ್ಣನ್‌ ಬಂಧಿಸುವಂತೆ ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದೆ. ಆದರೆ ನ್ಯಾ. ಕರ್ಣನ್ ಕಲ್ಕತ್ತಾದಿಂದ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ…

    May 9, 2017
    ...
    adhar-security-failed-1
    ದೇಶ

    ಆಧಾರ್ ಆಯೋಮಯ: ಅಭಿವ್ಯಕ್ತಿ ಸ್ವಾತಂತ್ರ್ಯ ಪಕ್ಕಕ್ಕಿಡಿ; ‘ವೈಯಕ್ತಿಕ ಸ್ವಾತಂತ್ರ್ಯ’ದ ಕತೆ ಹೇಳಿ!

    “ಬೆರಳಚ್ಚು ಮತ್ತು ಕಣ್ಣಿನ ಐರಿಸ್ ನನ್ನದು. ಅವು ನನ್ನ ದೇಹದ ಅಂಗಗಳು. ಅವುಗಳ ಮೇಲೆ ಸರಕಾರ ಹಕ್ಕು ಸಾಧಿಸುವಂತಿಲ್ಲ” ಹೀಗೊಂದು ವಾದವನ್ನು ಇತ್ತೀಚೆಗೆ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮುಂದಿಟ್ಟಿದ್ದರು. ಆದಾಯ ತೆರಿಗೆ ಸಲ್ಲಿಸುವಾಗ ವಿವಾದಾತ್ಮಕ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು ಎಂಬ ಸರಕಾರದ ನಿರ್ಧಾರವನ್ನು ವಿರೋಧಿಸಿ ಶ್ಯಾಮ್ ದಿವಾನ್ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸುತ್ತಿದ್ದರು. ಈ ವೇಳೆ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, “ನಿಮ್ಮ ದೇಹದ ಮೇಲೆ ನಿಮಗೆ ಹಕ್ಕಿರಬಹುದು. ಮನುಷ್ಯ ದೇಹದ ಭಾಗಗಳ ವ್ಯಾಪಾರಕ್ಕೆ ಕಡಿವಾಣ ಹಾಕುವ ಸರಕಾರ,..

    May 4, 2017
    ...
    janashri-vajipeyi-reddy-final
    ಟಿವಿ

    ಗಣಿ ಧಣಿಯ ಜನಮನದಲ್ಲಿ ‘ಬ್ಲಾಕ್ ಮೇಲ್’ ಅಬ್ಬರ: ಜನಶ್ರೀ ಸಿಇಓ ಬಂಧನದ ಸುತ್ತ…

    ಕನ್ನಡದ ಸುದ್ದಿ ವಾಹಿನಿಗಳ ಪಾಲಿಗೆ ಇದೊಂದು ಬಾಕಿ ಇತ್ತು. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಕೆಲವು ಪತ್ರಕರ್ತರ ಹಾಗೂ ವಾಹಿನಿಗಳ ‘ಬ್ಲಾಕ್‌ ಮೇಲ್‌’ ದಂಧೆಗೆ ಈ ಅಧಿಕೃತ ಮುದ್ರೆ ಬಿದ್ದಿದೆ. ಜನಶ್ರೀ ಸುದ್ದಿವಾಹಿನಿಯ ಸಿಇಓ ಲಕ್ಷ್ಮೀಪ್ರಸಾದ್ ವಾಜಪೇಯಿ ಬಂಧನವಾಗಿದೆ. ಕೋರಮಂಗಲ ಪೊಲೀಸರು ಆತ ಸೇರಿದಂತೆ ಇಬ್ಬರನ್ನು ಶುಕ್ರವಾರ ರಾತ್ರಿ ಚಾನಲ್‌ ಕಚೇರಿಯಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ದಿನದಿಂದ ದಿನಕ್ಕೆ ನೈತಿಕವಾಗಿ ಅಧಃಪತನಗೊಳ್ಳುತ್ತಿರುವ ಸುದ್ದಿ ವಾಹಿನಿಗಳ ಅಂತರಾಳದ ದರ್ಶನವಾದಂತಾಗಿದೆ. ಏನಿದು ಬೆಳವಣಿಗೆ?:  ಜನಶ್ರೀ ವಾಹಿನಿ ಅತ್ಯಂತ ಕೆಟ್ಟ..

    April 15, 2017
    ...
    corruption-india-2
    ಸುದ್ದಿ ಸಾರ

    ಏಷಿಯಾ ಖಂಡದ ದೇಶಗಳ ಪೈಕಿ ಭ್ರಷ್ಟಾಚಾರದಲ್ಲಿ ಭಾರತವೇ ನಂ. 1!

    ಏಷಿಯಾ ಖಂಡದ ದೇಶಗಳ ಪೈಕಿ ‘ಭ್ರಷ್ಟಾಚಾರದ ದರ’ ಅತ್ಯಂತ ಹೆಚ್ಚಿರುವುದು ಭಾರತದಲ್ಲಿ ಎನ್ನುತ್ತಿದೆ ‘ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್’ ಮಂಗಳವಾರ ಬ್ಯಾಂಕಾಕ್‌ನಲ್ಲಿ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿ. ಕೆಲವು ಆತಂಕಕಾರಿ ಮಾಹಿತಿ ಒಳಗೊಂಡಿರುವ ಸಮೀಕ್ಷಾ ವರದಿಯಲ್ಲಿ, ಪ್ರತಿ ಮೂವರು ಭಾರತೀಯರಲ್ಲಿ ಇಬ್ಬರು ಅನಿವಾರ್ಯವಾಗಿ ಲಂಚ ನೀಡಬೇಕಾದ ಪರಿಸ್ಥಿತಿ ಇದೆ ಎಂಬುದು ಬಯಲಾಗಿದೆ. ಭಾರತದಲ್ಲಿ ಶೇ. 69ರಷ್ಟು ಜನ ಲಂಚ ನೀಡುತ್ತಿದ್ದರೆ, ನಂತರ ಸ್ಥಾನದಲ್ಲಿ ವಿಯಟ್ನಾಂನಲ್ಲಿ ಶೇ. 65ರಷ್ಟು ಮಂದಿ ಕಳೆದ 12 ತಿಂಗಳ ಅಂತರದಲ್ಲಿ ಲಂಚ ನೀಡಿದ್ದಾರೆ. ನೆರೆಯ ಪಾಕಿಸ್ತಾನದಲ್ಲಿ..

    March 7, 2017
    ...
    Yeddyuappa-BJP-1
    ರಾಜ್ಯ

    ಅಯೋಗ್ಯರ ಸಂತೆಯಲ್ಲಿ ‘ಡೈರಿ- ಸಿಡಿ’ ರಾಜಕೀಯ: ಇದಕ್ಕಿಂತ ಹೆಚ್ಚಿಗೆ ಇನ್ನೇನು ನಿರೀಕ್ಷಿಸಲು ಸಾಧ್ಯ?

    ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ‘ಡೈರಿ ಬಾಂಬ್’ ಹಾಕಿದ ಬೆನ್ನಲ್ಲೇ ಸೋಮವಾರ ಕಾಂಗ್ರೆಸ್ ‘ಸಿಡಿ ಬಾಂಬ್’ ಸ್ಫೋಟಿಸಿದೆ. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ ಕುಮಾರ್ ಸಮಾರಂಭವೊಂದರ ವೇದಿಕೆಯಲ್ಲಿ ‘ಡೈರಿ ವಿಚಾರ’ದಲ್ಲಿ ನಡೆಸಿದ ಮಾತುಕತೆಯನ್ನು ಕಾಂಗ್ರೆಸ್ ವಕ್ತಾರರು ಮಾಧ್ಯಮಗಳಿಗೆ ಬಿಡಗಡೆ ಮಾಡಿದ್ದಾರೆ. ಈ ಮೂಲಕ ರಾಜಕೀಯ ಪಾಳೆಯದಲ್ಲಿ ಹೇಗೆಲ್ಲಾ ತಂತ್ರಗಾರಿಕೆಗಳು ನಡೆಯುತ್ತವೆ ಎಂಬ ವಿಚಾರ ಜನರಿಗೆ ಇನ್ನಷ್ಟು ಸ್ಪಷ್ಟವಾಗಿದೆ. ಮುಂದಿನ ಚುನಾವಣೆಯ ಹಣಾಹಣಿಗಳಿಗೆ ಮತ್ತು ನಡೆಯಬಹುದಾದ ಕಾದಾಟಗಳಿಗೆ ಮುನ್ಸೂಚನೆಯಂತೆ ಕಾಣುತ್ತಿರುವ ಸದ್ಯದ ರಾಜ್ಯ ರಾಜಕೀಯ ಬೆಳವಣಿಗೆಗಳು..

    February 13, 2017
    ...
    rana-wala-1
    ರಾಜ್ಯ

    ‘ರಾಜಭವನ ಕರ್ಮಕಾಂಡ’: ಗುಜರಾತಿ ‘ಭ್ರಷ್ಟ ಅಧಿಕಾರಿ’ಗೆ ಮಣೆ ಹಾಕಿದ ವಾಜೂಬಾಯಿ ವಾಲಾ

    ಭ್ರಷ್ಟಾಚಾರದ ಆರೋಪ ಹೊತ್ತಿರುವ, ಸಿಬಿಐ ತನಿಖೆಯಲ್ಲಿ ಕ್ರಮಕ್ಕೆ ಶಿಫಾರಸುಗೊಂಡಿರುವ ಅಧಿಕಾರಿಯೊಬ್ಬರಿಗೆ ರಾಜ್ಯಪಾಲ ವಾಜೂಬಾಯಿ ವಾಲಾ ಮಣೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಡಾ. ಅಜಿತ್ ಸಿಂಗ್ ರಾಣಾ ಎಂಬ ಗುಜರಾತ್ ಮೂಲದ ಅಧಿಕಾರಿಯನ್ನು ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಕರ್ನಾಟಕದ ರಾಜಭವನದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈತನ ಹಿನ್ನೆಲೆಯನ್ನು ಹುಡುಕಿಕೊಂಡು ಹೋದರೆ, ಹಿಂದೆ ಸೇವೆ ಸಲ್ಲಿಸುತ್ತಿದ್ದ ‘ರಾಷ್ಟ್ರೀಯ ಶಿಕ್ಷಕರ ಶೈಕ್ಷಣಿಕ ಪರಿಷತ್’ (ಎನ್‌ಸಿಟಿಇ)ಯಲ್ಲಿ ಭ್ರಷ್ಟಾಚಾರದ ಆರೋಪವನ್ನು ಹೊತ್ತುಕೊಂಡಿರುವುದು ಬೆಳಕಿಗೆ ಬಂದಿದೆ. ಮೇಲಾಗಿ, ಸಿಬಿಐ ತನಿಖೆಯೂ ನಡೆದಿದ್ದು, ಕ್ರಮ ಕೈಗೊಳ್ಳುವಂತೆ ತನಿಖಾ ಸಂಸ್ಥೆ..

    February 10, 2017
    ...
    binod-bhagath-1
    ಸಮಾಚಾರ +

    ಪ್ರತ್ಯೇಕ ಜಾರ್ಖಂಡ್ ರಾಜ್ಯಕ್ಕಾಗಿ ಹೋರಾಡಿದ ವಿದ್ಯಾರ್ಥಿ ನಾಯಕ ಈಗ ತರಕಾರಿ ವ್ಯಾಪಾರಿ

    ಪ್ರತ್ಯೇಕ ರಾಜ್ಯ ರಚನೆಯ ಹೋರಾಟ ಒಂದು ಸುದೀರ್ಘ ಪ್ರಕ್ರಿಯೆ. ಪ್ರಾದೇಶಿಕ ಅಭಿವೃದ್ಧಿ ಆಶಯಕ್ಕೆ ಕಟ್ಟುಬಿದ್ದು ಜನ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಹಾಗೆ, ಪ್ರತ್ಯೇಕತೆಯ ಕೂಗನ್ನ ಮುನ್ನಡೆಸಿ ಹೊಸ ರಾಜ್ಯಗಳ ಉದಯಕ್ಕೆ ಕೊಡುಗೆ ನೀಡುವ ಚಳಿವಳಿಕಾರರು, ಕೊನೆಗೆ ಉನ್ನತ ಸ್ಥಾನಮಾನಗಳನ್ನ ಪಡೆದ ಉದಾಹರಣೆಗಳಿವೆ. ಆದರೆ, ಜಾರ್ಖಂಡ್ ರಾಜ್ಯದ ರಚನೆಗಾಗಿ ನಮ್ಮ ಜೀವನವನ್ನೇ ಮೀಸಲಿಟ್ಟು ಹೋರಾಡಿದ ನಾಯಕನೊಬ್ಬ ಇದೀಗ ಬೀದಿಬದಿಯ ತರಕಾರಿ ವ್ಯಾಪಾರಿ ಅಂದ್ರೆ, ನೀವು ನಂಬಬೇಕು. ಬಿಹಾರದ ರಾಜ್ಯದಿಂದ ಪ್ರತ್ಯೇಕವಾಗಿ ಜಾರ್ಖಂಡ್ ರಾಜ್ಯ ಉದಯಿಸಿ 17 ವಸಂತಗಳೇ ಕಳೆದಿವೆ. ವಿಚಿತ್ರ..

    February 9, 2017
    ...
    dg-final-list
    ರಾಜ್ಯ

    ಮಾಸಾಂತ್ಯದ ‘ಪಟ್ಟಾಭಿಷೇಕ’: ದತ್ತಾ ನೇಮಕಾತಿಗೆ ಇಲಾಖೆಯೊಳಗೇ ಅಸಮಾಧಾನ

    ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ನಿರೀಕ್ಷಕ (ಡಿಜಿ- ಐಜಿ) ಹುದ್ದೆಗೆ ಅಧಿಕಾರಿಗಳ ಹೆಸರು ಶಿಫಾರಸು ಆಗುತ್ತಿದ್ದಂತೆ ಕೊನೆಯ ಹಂತದ ಕಸರತ್ತುಗಳಿಗೆ ಇಲಾಖೆಯೊಳಗೆ ಚಾಲನೆ ಸಿಕ್ಕಿದೆ. ಗಣಿ ಹಗರಣದ ತನಿಖೆ ತನಿಖೆ ಸಮಯದಲ್ಲಿ ಲೋಕಾಯುಕ್ತದಲ್ಲಿ ಎಡಿಜಿಪಿ ಆಗಿದ್ದ, ಹಾಲಿ ಕೇಂದ್ರ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ಆಗಿರುವ ರೂಪಕ್ ಕುಮಾರ್ ದತ್ತಾ ರಾಜ್ಯ ಸೇವೆಗೆ ವಾಪಾಸಾಗದಂತೆ ತಡೆಯುವ ನಿಟ್ಟಿನಲ್ಲಿ ಇಲಾಖೆಯೊಳಗಿನ ಒಂದು ಬಣ ಕಸರತ್ತು ನಡೆಸುತ್ತಿದೆ. ಅದಕ್ಕೆ ಇರುವ ಪ್ರಮುಖ ಕಾರಣಗಳು, ಹಿಂದೆ ಲೋಕಾಯುಕ್ತದಲ್ಲಿದ್ದ ಸಮಯದಲ್ಲಿ ದತ್ತಾ, ಪೊಲೀಸ್..

    January 24, 2017

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top