An unconventional News Portal.

ಭಾರತ
  ...

  ‘ಮಕ್ಕಳ್ ನೀದಿ ಮಯ್ಯಂ’ ಸ್ಥಾಪಿಸಿದ ಕಮಲ್ ಹಾಸನ್, ಪ್ರಶಸ್ತಿಗಳಿಂದ ಮುಕ್ತಿ ಕೊಡಿ ಅಂದಿದ್ದರು!

  60ರ ದಶಕದಲ್ಲಿ ಹುಟ್ಟಿಕೊಂಡ ಹಿಂದಿ ಭಾಷೆ ವಿರೋಧಿ ಹೋರಾಟದ ಕಾರಣಕ್ಕೆ, ತಮಿಳುನಾಡು ಎಂದರೆ ಕಣ್ಮುಂದೆ ಬರುವುದೇ ಅವರ ಭಾಷೆ ಮತ್ತು ಪ್ರಾದೇಶಿಕ ಸ್ವಾಭಿಮಾನ. ಕರ್ನಾಟಕದಲ್ಲಿ ಕಾಣಸಿಗದ, ಚಿತ್ರರಂಗದ ಜನಪ್ರಿಯತೆ ರಾಜಕೀಯ ಅಧಿಕಾರವಾಗಿ ಬದಲಾಗುವ ಅನನ್ಯ ಪರಂಪರೆಯೂ ಗೊತ್ತಿರುವಂತಹದ್ದೇ. ನಟನೊಬ್ಬ ಮುಖ್ಯಮಂತ್ರಿ ಪದವಿಗೆ ಏರಿದ ಉದಾಹರಣೆಗಳೂ ಇಲ್ಲಿ ಸಿಗುತ್ತವೆ.  ಎಂಜಿಆರ್, ಕರುಣಾನಿಧಿ, ಜಯಲಲಿತಾ ತರಹದ ಜನಪ್ರಿಯ ನಟ ನಟಿಯರುವ ಇಲ್ಲಿ ಜನಾಧಿಕಾರದ ಉನ್ನತ ಹುದ್ದೆಗೇರಿದ್ದಾರೆ. ಇದೀಗ ಹೀಗೊಂದು ಪಟ್ಟಿಯಲ್ಲಿ ಸ್ಥಾನಪಡೆದುಕೊಳ್ಳಲು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ ನಟ ಕಮಲ್ ಹಾಸನ್.   […]

  February 22, 2018
  ...

  ತೈಲಬೆಲೆ ಏರಿಕೆ ಸಾಧ್ಯತೆ; ಮತ್ತೊಂದು ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿಯಾಗಲಿದೆಯಾ ದೇಶ?

  ತೈಲ ಬೆಲೆಯ ಹೆಚ್ಚಳ ರಾಷ್ಟ್ರದ ಆರ್ಥಿಕತೆಯ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಬಹುದು? ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಅಂದಾಜಿಸಿರುವ ಪ್ರಕಾರ 2018-19ರಲ್ಲಿ ಕಚ್ಚಾ ತೈಲದ ಬೆಲೆಯು ಶೇ. 12ರಷ್ಟು ಏರಿಕೆಯಾಗಲಿದೆ. ಒಂದು ಬ್ಯಾರಲ್ ಕಚ್ಚಾತೈಲದ ಬೆಲೆಯು  ಸಧ್ಯದ ಬೆಲೆಗಿಂತ ಸುಮಾರು 650 ರೂಗಳಷ್ಟು ಏರಿಕೆ ಕಾಣಲಿದೆ. ಈ ಅಂತರರಾಷ್ರ್ಟೀಯ ವಿದ್ಯಮಾನ ಖಂಡಿತವಾಗಿಯೂ ದೇಶದ ಆರ್ಥಿಕತೆಯ ಮೇಲೆ ತೀವ್ರತರದ ಪರಿಣಾಮವನ್ನು ಬೀರಲಿದೆ. ಕಚ್ಚಾ ತೈಲದ ಬೆಲೆ 10 ಡಾಲರ್‌ನಷ್ಟು ಏರಿಕೆಯಾದರೆ ದೇಶದ ಜಿಡಿಪಿ ದರವು ಶೇ.0.2ರಿಂದ ಶೇ.0.3ರಷ್ಟು ಕುಸಿಯಬಹುದು ಎಂದು […]

  January 31, 2018
  ...

  ಬೆಂಗಳೂರು ಚಳಿಯನ್ನೂ ಮೀರಿ ಹೆಚ್ಚುತ್ತಿದೆ ಜಾಗತಿಕ ತಾಪಮಾನ; ಕಾರಣ ಹಸಿರು ಮನೆ ಪರಿಣಾಮ

  ಭೂಮಿಯ ದೀರ್ಘಕಾಲೀನ ತಾಪಮಾನ ಏರಿಕೆ ಮುಂದುವರಿದಿದೆ. 2017  ಅತಿಹೆಚ್ಚು ತಾಪಮಾನ ಹೊಂದಿರುವ ವರ್ಷಗಳ ಸಾಲಿನಲ್ಲಿ ಭಾರತವೂ ಸ್ಥಾನ ಪಡೆದಿದೆ. ನಾಸಾ ಮತ್ತು ನ್ಯಾಷನಲ್ ಒಷಿನೊಗ್ರಾಫಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್(ಎನ್ಒಎಎ) ಇತ್ತೀಚೆಗೆ ಬಿಡುಗಡೆಗೊಳಿಸಿರುವ ವರದಿ ಈ ಅಂಶವನ್ನು ಬಹಿರಂಗಪಡಿಸಿವೆ. ನಾಸಾ ವಿಜ್ಞಾನಿಗಳ ವಿಶ್ಲೇಷಣೆ ಪ್ರಕಾರ, 2017 ದಾಖಲೆಯ ಎರಡನೇ ಅತಿ ಬಿಸಿಯಾದ ವರ್ಷವಾಗಿದ್ದು, ಭೂಮಿ ಮತ್ತು ಸಮುದ್ರ ಮೇಲ್ಮೈಗಳ ಈಗಿನ ತಾಪಮಾನವು 1.51 ಡಿಗ್ರಿ ಫ್ಯಾರನ್‌ಹೀಟ್ (0.90 ಡಿಗ್ರಿ ಸೆಲ್ಷಿಯಸ್) ತಲುಪಿದೆ. 2016 ಅತೀ ಹೆಚ್ಚು ತಾಪಮಾನವನ್ನು ಹೊಂದಿದ್ದ […]

  January 24, 2018
  ...

  ಕರ್ನಾಟಕಕ್ಕೊಂದು ಹೊಸ ನಾಡಧ್ವಜ; ಚುನಾವಣೆ ಒಳಗೆ ವಾದ- ವಿವಾಗಳು ಮುಗಿಯುವುದೇ ಅನುಮಾನ

  ನಾಡಧ್ವಜದ ಬಗ್ಗೆ ಚರ್ಚೆಗಳ ನಡೆಯುತ್ತಿರುವ ಹೊತ್ತಿನಲ್ಲಿಯೇ ರಾಜ್ಯ ಸರಕಾರ ನೇಮಿಸಿದ್ದ ಸಮಿತಿಯು ಹೊಸದೊಂದು ರಾಜ್ಯಧ್ವಜವನ್ನು ರೂಪಿಸಿ, ಕಾನೂನು ಮಾನ್ಯತೆ ಪಡೆಯುವತ್ತ ಹೆಜ್ಜೆ ಹಾಕಿದೆ. ಇದೊಂದು ರಾಜಕೀಯ ಹುನ್ನಾರ, ಚುನಾವಣೆಯ ಗಿಮಿಕ್‌ ಎಂಬ ವಾದವೂ ಕೇಳಿಬರುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡಕ್ಕೆ ಸ್ವಂತ ಬಾವುಟವನ್ನು ನೀಡುವತ್ತ ಹೆಜ್ಜೆ ಇಟ್ಟಿದ್ದಾರೆ. ಈ ಮೂಲಕ ಕೆಲವೇ ದಿನಗಳಲ್ಲಿ ಕರ್ನಾಟಕದ ನಾಡಧ್ವಜ ಅಧಿಕೃತವಾಗಿ ಹಾರಬಲ್ಲ ನಿರೀಕ್ಷೆಗಳಿವೆ.  1. ‘ರಾಜ್ಯಧ್ವಜ’, ಹಾಗೆಂದರೇನು? ಭಾರತ ದೇಶ ಒಂದು ಒಕ್ಕೂಟ ವ್ಯವಸ್ಥೆ. ಹಲವಾರು ನೆಲೆಗಟ್ಟಿನ, ಭಿನ್ನ ಸಂಸ್ಕೃತಿಯನ್ನು ಹೊಂದಿರುವ ರಾಜ್ಯಗಳೆಲ್ಲವೂ […]

  January 22, 2018
  ...

  ‘ಮೊದಲು ಅಮೆರಿಕ’ ನೀತಿಗೆ ಜೋತು ಬಿದ್ದ ಟ್ರಂಪ್; ಮಧ್ಯಮ ವರ್ಗದ ಅನಿವಾಸಿ ಭಾರತೀಯರದಲ್ಲಿ ಶುರುವಾಗಿದೆ ನಡುಕ

  ಇದು ಸುಮಾರು ಒಂದು ವರ್ಷದ ಹಿಂದಿನ ಮಾತು. 2016 ಅಂತ್ಯ ಹಾಗೂ 2017ರ ಆರಂಭದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಎನ್ನುವ ಅಮೆರಿಕದ ಉದ್ಯಮಿಯ ಹೆಸರು ವಿಶ್ವವನ್ನು ನಿಧಾನವಾಗಿ ಆವರಿಸಲು ಆರಂಭಿಸಿತ್ತು. ಸಪ್ತಸಾಗರಗಳಾಚೆ ಚುನಾವಣೆಗೆ ನಿಂತಿದ್ದ ಡೊನಾಲ್ಡ್ ಟ್ರಂಪ್ ಭಾರತದಲ್ಲಿ ದೊಡ್ಡ ಸದ್ದು ಮಾಡಿದ್ದರು. ಅದಕ್ಕೆ ಕಾರಣವೂ ಇತ್ತು. ‘ನಾನು ಹಿಂದೂ ಧರ್ಮದ ದೊಡ್ಡ ಅಭಿಮಾನಿ’ ಮತ್ತು ‘ನಾನು ಭಾರತದ ದೊಡ್ಡ ಅಭಿಮಾನಿ’ ಎನ್ನುವ ಮಾತುಗಳು ಟ್ರಂಪ್ ಬಾಯಿಯಿಂದ ಹೊರಬೀಳುತ್ತಿದ್ದಂತೆ ಭಾರತದ ಮದ್ಯಮ ವರ್ಗ ಕುಣಿದು ಕುಪ್ಪಳಿಸಿತ್ತು. ಆದರೆ ಈಗ, ಟ್ರಂಪ್ ಹೆಸರು ಕೇಳುತ್ತಲೇ ಅದೇ ವರ್ಗ […]

  January 5, 2018
  ...

  ‘ಇದು ನಾಣ್ಯ, ಆದರೆ ನಾಣ್ಯವಲ್ಲ’: ನಿಗೂಢ ಕರೆನ್ಸಿಗೆ ಕೈ ಚಾಚುವ ಮುನ್ನ ‘ಬಿಟ್ ಕಾಯಿನ್’ ಪರಿಚಯ

  ಒಂದು ದೇಶ; ಅದಕ್ಕೊಂದು ಸರಕಾರ; ಆ ಸರಕಾರ ಜಾರಿಗೆ ತಂದ ಅಧಿಕೃತ ಕರೆನ್ಸಿ. ಅವುಗಳಲ್ಲೇ ಆ ದೇಶ ನಡೆಯಬೇಕು’ ಅದೊಂದು ವ್ಯವಸ್ಥೆ. ಈ ಕರೆನ್ಸಿ ವ್ಯವಸ್ಥೆಯನ್ನು ಆಧರಿಸಿ ದೇಶಗಳಲ್ಲಿ ತೆರಿಗೆ, ದಂಡ, ವ್ಯವಹಾರಗಳ ಮೇಲೆ ನಿಯಂತ್ರಣ ಹೀಗೆ ನಿಯಮ ನಿಬಂಧನೆಗಳನ್ನು ರೂಪಿಸಲಾಗುತ್ತದೆ. ಇದೇ ದೇಶದ ಒಂದಷ್ಟು ಜನ ಸೇರಿಕೊಂಡು ಸರಕಾರಕ್ಕೆ ಪರ್ಯಾಯವಾಗಿ ತಮ್ಮಲ್ಲೇ ಹೊಸ ಕರೆನ್ಸಿ ವ್ಯವಸ್ಥೆ ಹುಟ್ಟುಹಾಕಿದರೆ ಪರಿಸ್ಥಿತಿ ಏನಾಗಬಹುದು? ಸುಮ್ಮನೆ ಊಹಿಸಿಕೊಳ್ಳಿ. ಸದ್ಯ ನಡೆದಿರುವುದೂ ಅದೇ. ಇದರ ಹೆಸರು ‘ಬಿಟ್ ಕಾಯಿನ್’! ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ, ‘ಭವಿಷ್ಯದ ಅಧಿಕೃತ ಕರೆನ್ಸಿ’ ಎನಿಸಿರುವ ಬಿಟ್ ಕಾಯಿನ್‌ಗಳದ್ದೇ ಮಾತು. ಎಲ್ಲಾ […]

  January 5, 2018
  ...

  ‘ರಗ್ಬಿ ತರಬೇತಿ’ಗಾಗಿ ವಿದೇಶಕ್ಕೆ ಹೋದ ಮಕ್ಕಳು: ಕರ್ನಾಟಕದಲ್ಲಿ ಮಾನವ ಕಳ್ಳಸಾಗಣೆಯ ಬೇರುಗಳು

  ವರ್ಷದ ಕೊನೆಯಲ್ಲಿ ಉತ್ತರ ಭಾರತದಿಂದ ಮಕ್ಕಳ ಕಳ್ಳಸಾಗಣೆ ಜಾಲದ ಕುರಿತು ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಭಾರತದಿಂದ 25 ಮಕ್ಕಳನ್ನು ಕ್ರೀಡಾಕೂಟದ ನೆಪದಲ್ಲಿ ಫ್ರಾನ್ಸ್‌ಗೆ ಕರೆಸಿಕೊಂಡು, ಅಲ್ಲಿ ಮಾರಾಟಕ್ಕಿಟ್ಟ ತಂಡವನ್ನು ಪತ್ತೆಹಚ್ಚಲಾಗಿದೆ. ಫ್ರಾನ್ಸ್ ದೇಶದ  ಪೊಲೀಸ್ ಇಂಟರ್ ಪೋಲ್‌ನಿಂದ ಮಾಹಿತಿ ಪಡೆದ ಸಿಬಿಐ ಭಾರತದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದೆ.  ಲಲಿತ್ ಡೇವಿಡ್ ಡೀನ್, ಸಂಜೀವ್ ರಾಜ್ ಮತ್ತು ವರುಣ್ ಚೌಧರಿ ವಶದಲ್ಲಿರುವ ಆರೋಪಿಗಳು. ಇವರುಗಳು ದೆಹಲಿ, ಫರೀಯಾಬಾದ್ ಮೂಲದವರು ಎನ್ನಲಾಗಿದೆ. ಆರೋಪಿಗಳ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳಲ್ಲಿ ಮಾನವ ಕಳ್ಳಸಾಗಾಣಿಕೆಗೆ […]

  December 30, 2017
  ...

  ಸರ್ವಾಧಿಕಾರಿ ಅತ್ತೆಯ ಮುದ್ದಿನ ಸೊಸೆ: ಸೋನಿಯಾ ಗಾಂಧಿ ಬಗೆಗಿನ ಕೆಲವು ಅಪರೂಪದ ಸಂಗತಿಗಳು!

  “ಸಾಂವಿಧಾನಿಕ ಮೌಲ್ಯಗಳ ಮೇಲೆ ಆಕ್ರಮಣ ನಡೆಯುತ್ತಿದೆ, ಅದನ್ನು ಎದುರಿಸುವ ದೊಡ್ಡ ಸವಾಲು ನಮ್ಮೆದುರಿಗಿದೆ. ಇತ್ತೀಚೆಗೆ ಪಕ್ಷವು ಅನೇಕ ಚುನಾವಣೆಗಳಲ್ಲಿ ಸೋಲು ಕಂಡರೂ, ಎಂದಿಗೂ ತಲೆ ಬಾಗುವುದಿಲ್ಲ. ನೈತಿಕ ಸಂಘರ್ಷಕ್ಕೆ ಕಾಂಗ್ರೆಸ್ ಸದಾ ಸಿದ್ಧವಿದೆ,’’ ಎಂದರು 71 ವರ್ಷದ ಸೋನಿಯಾ ಗಾಂಧಿ. ಕಳೆದ 19 ವರ್ಷಗಳಿಂದ ದೇಶದ ಹಳೆಯ ಪಕ್ಷ ಕಾಂಗ್ರೆಸ್ ಮುನ್ನಡೆಸುತ್ತಿದ್ದ ಅವರು ಶನಿವಾರ ಹೊಣೆಗಾರಿಕೆಯಿಂದ ಮುಕ್ತರಾಗಿದ್ದಾರೆ. ಪಕ್ಷದ ಅಧ್ಯಕ್ಷೆಯಾಗಿ ಅವರು ಮಾಡಿದ ಕೊನೆಯ ಭಾಷಣದ ಗತ ಮತ್ತು ಭವಿಷ್ಯಗಳನ್ನು ಮೆಲುಕು ಹಾಕಿತು. ಅಲ್ಲಲ್ಲಿ ಭಾವನಾತ್ಮಕ ನೆನಪುಗಳೂ […]

  December 17, 2017
  ...

  ಮತದಾನೋತ್ತರ ಸಮೀಕ್ಷೆಗಳು: ಚುನಾವಣೆ ಫಲಿತಾಂಶದ ಭವಿಷ್ಯ ನಿರ್ಧರಿಸುವ ಇವು ನಡೆಯುವುದು ಹೀಗೆ…

  ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಚುನಾವಣೆಗಳು ಜನರ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬುದು ಚರ್ಚೆಯ ವಿಚಾರ. ಆದರೆ ಅದರ ಆಚೆಗೆ ಪ್ರತಿ ಚುನಾವಣೆಯೂ ತನ್ನದೇ ಆದ ರೋಚಕತೆಯನ್ನು ಒಳಗೊಂಡಿರುತ್ತವೆ. ಸದ್ಯ ನಡೆಯುತ್ತಿರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಕೆಯಿಂದ ಆರಂಭಗೊಂಡು ಮತದಾನದವರೆಗೆ ಪ್ರಕ್ರಿಯೆ ಜನರ ಗಮನ ಸೆಳೆಯುತ್ತಿವೆ. ಫಲಿತಾಂಶಕ್ಕೆ ಇನ್ನು ಮೂರು ದಿನ ಬಾಕಿ ಇದೆ. ಮತದಾನ ಮತ್ತು ಫಲಿತಾಂಶದ ನಡುವೆ ಚುನಾವಣೆಗಳ ರೋಚಕತೆಯನ್ನು ಹೆಚ್ಚಿಸಿರುವುದು ಮತದಾನೋತ್ತರ ಸಮೀಕ್ಷೆಗಳು. ಮತದಾನೋತ್ತರ ಸಮೀಕ್ಷೆಗಳು ಚುನಾವಣಾ […]

  December 15, 2017
  ...

  ‘ಟ್ರಿನಿಟಿ ಕಾಲೇಜಿನಿಂದ ಅಮೇಥಿಗೆ’: ಕಾಂಗ್ರೆಸ್‌ ಹೊಸ ಸಾರಥಿ ರಾಹುಲ್ ಗಾಂಧಿ ಹೆಜ್ಜೆ ಗುರುತುಗಳು

  ನಿರೀಕ್ಷೆಯಂತೆ, ರಾಹುಲ್ ಗಾಂಧಿ ದೇಶದ ಪುರಾತನ ಪಕ್ಷ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಅವರಿಗೆ ಹೊಸ ಹೊಣೆಗಾರಿಕೆ ನೀಡುವುದು ಖಾತ್ರಿಯಾಗಿದೆ. 1998ರಿಂದ ಪಕ್ಷವನ್ನು ಮುನ್ನಡೆಸಿಕೊಂಡು ಬಂದವರು ಸೋನಿಯಾ ಗಾಂಧಿ. ಡಿಸೆಂಬರ್ 16ರಂದು ಬೆಳಿಗ್ಗೆ 11 ಗಂಟೆಗೆ ದೆಹಲಿಯಲ್ಲಿನ ಎಐಸಿಸಿ ಕಚೇರಿಯಲ್ಲಿ ತಮ್ಮ ಪುತ್ರನಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದ ಜತೆಗೆ ತಳುಕು ಹಾಕಿಕೊಂಡಿರುವ ರಾಜಕೀಯ ಪಕ್ಷ ಕಾಂಗ್ರೆಸ್. ಬ್ರಿಟಿಷರು ಹೋದ ನಂತರ ಸುದೀರ್ಘ ಕಾಲ ಪ್ರಪಂಚ ಅತಿ ದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಧಿಕಾರವನ್ನು […]

  December 12, 2017

Top