An unconventional News Portal.

ಭಯೋತ್ಪಾದನೆ

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

    ...
    ಫೋಕಸ್

    ಕಣ್ಣು ಕಳೆದುಕೊಂಡ ಮಗುವಿನ ಚಿತ್ರ ವೈರಲ್; ಸಿರಿಯಾದ ಅಮಾಯಕರ ಬಲಿಗೆ ಕೊನೆ ಎಂದು?

    ಸಿರಿಯಾದ ಮಗುವಿನ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾವಿಗೀಡಾದ ತನ್ನ ತಾಯಿ ಮತ್ತುಎಡಗಣ್ಣನ್ನು ಕಳೆದುಕೊಂಡ ಮಗುವಿನ ಚಿತ್ರವು ವಿಶ್ವದಾದ್ಯಂತ ಜನರ ಗಮನವನ್ನು ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಮಗುವಿನ ಹೆಸರು ಕರೀಮ್. ಕೇವಲ ಮೂರು ತಿಂಗಳ ಈ ಮಗು ತನ್ನ ಎಡಗಣ್ಣನ್ನು ಕಳೆದುಕೊಂಡಿದೆ. ಅಷ್ಟೇ ಅಲ್ಲದೆ ಅದರ ತಲೆ ಬುರುಡೆಗೆ ಗಾಯಗಳಾಗಿವೆ. ಕಳೆದ ತಿಂಗಳು ಡಮಾಸ್ಕಸ್ ಉಪನಗರ ಪೂರ್ವ ಗೌಟಾದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ತಾಯಿ ಸಾವಿಗೀಡಾಗಿದ್ದು ಮಗು ಕಣ್ಣನ್ನು ಕಳೆದುಕೊಂಡಿದೆ…

    December 21, 2017
    ...
    ದೇಶ

    ‘ಹ್ಯಾಪಿ ಬರ್ತ್‌ಡೆ ಡಿಮೋ’: ಕಪ್ಪು ಹಣವನ್ನು ಅನಾಯಾಸವಾಗಿ ಬದಲಿಸಿಕೊಂಡ ಕುಳಗಳ ಕತೆ!

    ನವೆಂಬರ್ 8, 2016.. ನಾಳೆಗೆ ಸರಿಯಾಗಿ ಒಂದು ವರ್ಷ. ದೇಶದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ವ್ಯವಸ್ಥೆಯ ಬದಲಾವಣೆಗೆ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡ ದಿನ. ಚಲಾವಣೆಯಲ್ಲಿದ್ದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಮಾನ್ಯತೆಯನ್ನು ತತಕ್ಷಣದಿಂದಲೇ ರದ್ಧುಗೊಳಿಸಿದರು. ರಾತ್ರಿ ಎಂಟು ಗಂಟೆ ಸುಮಾರಿಗೆ ಪ್ರಧಾನಿ ಅವರ ಘೋಷಣೆ ಹೊರಬೀಳುತ್ತಿದ್ದಂತೆ ಬೆಂಗಳೂರಿನ ಬಿಲ್ಡರ್‌ ಒಬ್ಬರ ಮನೆಯಲ್ಲಿ ಸಂಚಲನ ಸೃಷ್ಟಿಯಾಯಿತು. ಆ ಹೊತ್ತಿಗೆ ಅವರ ಮನೆಯಲ್ಲಿ ಇದ್ದದ್ದು ಸುಮಾರು 15 ಕೋಟಿ ನಗದು ಹಣ ಮತ್ತು ಅದರಲ್ಲಿ ಬಹುತೇಕ..

    November 7, 2017
    ...
    ರಾಜ್ಯ

    ‘ಈ ಚಿತ್ರಗಳು ಏನನ್ನು ಹೇಳುತ್ತಿವೆ?’: ಅಂದು ಅಲನ್ ಕುರ್ದಿ; ಇಂದು ರೊಹಿಂಗ್ಯಾ ಕಂದ…

    ಕಳೆದ ಮೂರು ದಿನಗಳಿಂದ ಕರ್ನಾಟಕದ ಫೇಸ್ಬುಕ್ ಬಳಕೆದಾರರ ಒಂದು ವಲಯದಲ್ಲಿ, ‘ಈ ಚಿತ್ರ ಏನನ್ನು ಹೇಳುತ್ತಿದೆ?’ ಎಂಬ ವಾಕ್ಯ ಹಾಸ್ಯಕ್ಕೆ, ಆರೋಪಕ್ಕೆ, ಪ್ರತಿಕ್ರಿಯೆಗೆ ಕಾರಣವಾಗಿದೆ. ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಎಸ್‌. ಅವರು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಗೌರಿ ಲಂಕೇಶ್ ಹತ್ಯೆಗೆ ಪ್ರತಿರೋಧ ವ್ಯಕ್ತಪಡಿಸುವ ಸಮಾವೇಶದಲ್ಲಿ ಪಾಲ್ಗೊಂಡ ತಾಯಂದಿರ ಚಿತ್ರವನ್ನು ಪೋಸ್ಟ್ ಮಾಡಿದ್ದಲ್ಲದೆ; ಮತ್ತು ಅದಕ್ಕೆ ‘ಈ ಚಿತ್ರ ಏನು ಹೇಳುತ್ತಿದೆ?’ ಎಂಬ ಟ್ಯಾಗ್‌ಲೈನ್‌ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ, ಉತ್ತರ ಕರ್ನಾಟಕ ಮೂಲಕ ಸಾಮಾಜಿಕ..

    September 16, 2017
    ...
    ದೇಶ

    ‘ಬಸ್ ಮೋದಿಜಿ ಬಸ್’: ನೋಟ್ ಬ್ಯಾನ್ ಮಾಡಿ ದೇಶವಾಸಿಗಳನ್ನು ಮೂರ್ಖರನ್ನಾಗಿ ಮಾಡಿಬಿಟ್ಟಿರಿ!

    ಸುಮಾರು 3 ಲಕ್ಷ ಕೋಟಿ ರೂಪಾಯಿಗಳು… ಇದು, ಕಳೆದ ವರ್ಷ ನವೆಂಬರ್ ಸಮಯದಲ್ಲಿ ಶೇಖರಣೆಗೊಂಡಿದೆ ಎಂದು ನಂಬಲಾದ ‘ಕಪ್ಪು ಹಣ’ದ ಭಾರಿ ಮೊತ್ತ. 8ನೇ ತಾರೀಖು ಪ್ರಧಾನಿ ಮೋದಿ ಚಲಾವಣೆಯಲ್ಲಿದ್ದ 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಸರಕಾರ ಹಿಂತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದರು. ಕಪ್ಪು ಹಣದ ವಿರುದ್ಧ ಹೋರಾಟ, ಭ್ರಷ್ಟಾಚಾರದ ವಿರುದ್ಧ ಸಮರ, ನಕಲಿ ನೋಟುಗಳ ಚಲಾವಣೆಗೆ ಕಡಿವಾಣ, ಈ ಮೂಲಕ ಭಯೋತ್ಪಾದಕರ ಆರ್ಥಿಕ ಮೂಲಕ್ಕೆ ಹೊಡೆತ ಹೀಗೆ ಸಾಲು ಸಾಲು ಆಶಯಗಳನ್ನು ಭಿತ್ತುವ ಪ್ರಯತ್ನವೂ ಇದರ ಜತೆಗೆ ತಳುಕು ಹಾಕಿಕೊಂಡಿತು…

    August 31, 2017
    ...
    ವಿದೇಶ

    ‘ಪ್ರೀತಿ ಮಾಯೆ ಹುಷಾರು’: ಐಸಿಸ್ ನಾಯಕನನ್ನು ಮದುವೆಯಾಗಿ ಓಡಿಬಂದಾಕೆ ಎಫ್‌ಬಿಐ ಏಜೆಂಟ್!

    ಸದಾ ಕೋಮು ಘಟನೆಗಳ ಕಾರಣಕ್ಕೆ ಸುದ್ದಿಯಲ್ಲಿರುವ ಕರ್ನಾಟಕದ ಕರಾವಳಿ ಜಿಲ್ಲೆ ಮಂಗಳವಾರ ವಿಚಿತ್ರ ಕಾರಣವೊಂದಕ್ಕೆ ಸುದ್ದಿಯಲ್ಲಿತ್ತು. ಉಡುಪಿಯ ಕುಂದಾಪುರದ ಹಿಂದೂ–ಮುಸ್ಲಿಂ ಜೋಡಿಯೊಂದು ಸರಳ ವಿವಾಹವಾಗುವ ಮೂಲಕ ಜಾತಿ, ಭಾಷೆ, ಧರ್ಮ, ದೇಶ, ಸಂಸ್ಕೃತಿಗಳನ್ನು ಮೀರುವ ‘ಪ್ರೀತಿ‘ ಮತ್ತೊಮ್ಮೆ ಸುದ್ದಿ ಕೇಂದ್ರಕ್ಕೆ ಬಂದಿತ್ತು. ಎಲ್ಲಿ ಹಿಂದೂ–ಮುಸ್ಲಿಂ ಜೋಡಿ ಜತೆ ಜತೆಗೆ ಓಡಾಡುವುದು ಕಷ್ಟವಿತ್ತೋ, ಅದೇ ನೆಲದಲ್ಲಿ ಹುಟ್ಟಿದ ಅಂತರ್ಧರ್ಮೀಯ ಪ್ರೀತಿ ಮದುವೆಯ ಬಂಧನಕ್ಕೆ ಒಳಗಾಗಿ, ಜೋಡಿಗಳಿಬ್ಬರು ಸರಳ ವಿವಾಹವಾಗಿದ್ದು ಎಲ್ಲರ ಹುಬ್ಬೇರಿಸಿತ್ತು. ಇದೀಗ ಅಂಥಹದ್ದೇ ಪ್ರಕರಣವೊಂದು ತಡವಾಗಿ ಅಮೆರಿಕಾದಿಂದ ವರದಿಯಾಗಿದೆ…

    May 3, 2017
    ...
    ದೇಶ

    ‘ಮದರ್ ಆಫ್ ಆಲ್ ಬಾಂಬ್ಸ್’ ಸ್ಫೋಟ: ಅಫ್ಘಾನ್ ನೆಲದಲ್ಲಿ ಟ್ರಂಪಣ್ಣನ ಶೌರ್ಯ ಪ್ರದರ್ಶನ!

    ಭಯೋತ್ಪಾದನೆ ವಿರುದ್ಧ ದೃಢ ನಿರ್ಧಾರ ತಾಳುವುದಾಗಿ ಆರಂಭದಿಂದಲೂ ಹೇಳಿಕೊಂಡು ಬಂದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೂ ಅಫ್ಘಾನಿಸ್ತಾನದ ನೆಲದಲ್ಲಿ ‘ಶೌರ್ಯ ಪ್ರದರ್ಶನ‘ ಮಾಡಿದ್ದಾರೆ. ಅಫ್ಘಾನಿಸ್ತಾನದ ಐಸಿಲ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವೆನೆಂಟ್ –ಹಿಂದಿನ ಐಸಿಸ್) ನೆಲೆಗಳ ಮೇಲೆ ಮಾಬ್ – MOAB (mother of all bombs)ಎಂಬ ಅಡ್ಡ ಹೆಸರಿನೊಂದಿಗೆ ಕರೆಯಲ್ಪಡುವ ಅತಿ ದೊಡ್ಡ ಬಾಂಬ್ ಹಾಕಿದ್ದಾರೆ. ಆ ಮೂಲಕ ಅಮೆರಿಕಾ ಭಯೋತ್ಪಾದಕರಿಗೆ ಕಟು ಸಂದೇಶ ನೀಡಿದೆ ಎಂಬ ಸಾಲುಗಳು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವಿಜೃಂಭಿಸುತ್ತಿದೆ. ಅಫ್ಘಾನಿಸ್ತಾನದ..

    April 14, 2017
    ...
    ದೇಶ

    ವಾರ್ ಆನ್ ಟೆರರ್: ‘ಹಿಂದೂ ಭಯೋತ್ಪಾದಕ’ರ ಬಗ್ಗೆ ಎನ್‌ಐಎಗೆ ಯಾಕೆ ಈ ಪಾಟಿ ಕಕ್ಕುಲಾತಿ?

    ‘ಭಯೋತ್ಪಾದನೆ ದೇಶದ ಬಹುದೊಡ್ಡ ಸಮಸ್ಯೆ’… ಅದರಲ್ಲೂ 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಒಂದಿಲ್ಲೊಂದು ಕಾರಣಕ್ಕೆ ‘ಭಯೋತ್ಪಾದನೆ’ ಸದ್ದು ಮಾಡುತ್ತಲೇ ಇದೆ. ನೋಟು ಅಮಾನ್ಯೀಕರಣದಂತಹ ಆರ್ಥಿಕ ಹಿನ್ನೆಲೆಯ ವಿಚಾರ ಬಂದಾಗಲೂ, ಭಯೋತ್ಪಾದನೆಯನ್ನು ತೊಡೆಯಲು ನೋಟ್ ಬ್ಯಾನ್ ಮಾಡಲಾಯಿತು ಎಂಬ ಸಮರ್ಥನೆಯನ್ನು ಜನರ ಮುಂದಿಡಲಾಗಿತ್ತು. ಸದ್ಯ ಇಂಡೋ- ಬಾಂಗ್ಲಾ ಮಾತುಕತೆಯ ಸಮಯದಲ್ಲಿಯೂ ಭಯೋತ್ಪಾದನೆಯ ವಿರುದ್ಧ ಜಂಟಿ ಹೋರಾಟದ ಮಾತುಗಳು ಕೇಳಿ ಬರುತ್ತಿವೆ. ಭಯೋತ್ಪಾದನೆ ಎಂಬುದು ಪ್ರಮುಖ ವಿಚಾರ ಅಂತ ಪರಿಗಣಿಸಿದ ಮೇಲೆ, ಸ್ವಾಮಿ..

    April 10, 2017
    ...
    ವಿದೇಶ

    ಡೋನಾಲ್ಡ್ ಟ್ರಂಪ್- ನರೇಂದ್ರ ಮೋದಿ: ಇಬ್ಬರ ಭಾಷಣದಲ್ಲಿ ಅದೆಷ್ಟು ಸಾಮ್ಯತೆಗಳು!

    ಅಮೆರಿಕಾದ 45ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಡೋನಾಲ್ಡ್ ಟ್ರಂಪ್ ಭಾಷಣಕ್ಕೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಈವರೆಗಿನ ಭಾಷಣಗಳಿಗೂ ಹಲವು ಸಾಮ್ಯತೆಗಳು ಗೋಚರಿಸುತ್ತಿದೆ. ಅಮೆರಿಕಾ ಕಾಲಮಾನ ಶುಕ್ರವಾರ ಶ್ವೇತಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಟ್ರಂಪ್, ಚುನಾವಣಾ ಪ್ರಚಾರದ ಸಮಯದಲ್ಲಿ ಹೇಳಿದ್ದ ಮಾತುಗಳನ್ನೇ ಇನ್ನಷ್ಟು ಸ್ಪಷ್ಟವಾಗಿ ಜಗತ್ತಿನ ಮುಂದಿಟ್ಟರು. ಈ ಮೂಲಕ ಅವರೊಳಗಿರುವ ‘ರಾಷ್ಟ್ರೀಯ ವಾದ’ದ ಆಲೋಚನೆಯನ್ನು ಮತ್ತೊಮ್ಮೆ ಸ್ಪಷ್ಟಗೊಳಿಸಿದರು. ಅವರ 20 ನಿಮಿಷಗಳ ಪುಟ್ಟ ಭಾಷಣದಲ್ಲಿ ಪ್ರಸ್ತಾಪಿಸಿದ ಹಲವು ಅಂಶಗಳನ್ನು 2013ರಿಂದ ಈಚೆಗೆ ಪ್ರಧಾನಿ..

    January 21, 2017
    ...
    ವಿದೇಶ

    ಐತಿಹಾಸಿಕ ಬೆಳವಣಿಗೆ: ಪ್ಯಾಲೆಸ್ತೀನ್ ‘ಭಯೋತ್ಪಾದಕ’ನನ್ನು ಕೊಂದ ಇಸ್ರೇಲ್ ಸೈನಿಕನಿಗೆ ಜೈಲು ಶಿಕ್ಷೆ

    ಆತನಿಗಿನ್ನೂ 20 ಹರೆಯ. 20 ವರ್ಷಗಳ ಜೈಲು ಶಿಕ್ಷೆಗೆ ತಯಾರಾಗಬೇಕಾಗಿದೆ. ಇದಕ್ಕೆ ಕಾರಣ ಆತ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದಿದ್ದು. ಇಷ್ಟೇ ಆಗಿದ್ದರೆ ಈ ಸುದ್ದಿ ಅಂತರಾಷ್ಟ್ರೀಯ ಸುದ್ದಿಯೇ ಆಗುತ್ತಿರಲಿಲ್ಲ. ಆದರೆ ಕೊಂದಾತ ಮತ್ಯಾರೂ ಅಲ್ಲ; ಆತನೊಬ್ಬ ಇಸ್ರೇಲ್ ಸೈನಿಕ. ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಇಸ್ರೇಲಿನ ಸೈನಿಕ ಜೈಲು ಶಿಕ್ಷೆಗೆ ಗುರಿಯಾಗುತ್ತಿರುವ ಅಪರೂಪದ ಪ್ರಕರಣ ಇದು. ಅದೂ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದ ಕಾರಣಕ್ಕೆ ಎಂಬುದು ಮತ್ತೊಂದು ವಿಶೇಷ. ಇಸ್ರೇಲ್ ರಾಜಧಾನಿ ಟೆಲ್ ಅವಿವ್..

    January 5, 2017
    ...
    ಸುದ್ದಿ ಸಾರ

    ಮಂಗಳೂರು ಟು ಮುತ್ತಿನ ನಗರಿ; ಹೈದರಾಬಾದ್ ಸ್ಪೋಟ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ಸೇರಿ ಐವರಿಗೆ ಗಲ್ಲು

    ಬಹು ಚರ್ಚಿತ ಹೈದರಾಬಾದ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ಮತ್ತು ಉಳಿದ ನಾಲ್ವರಿಗೆ ಎನ್ಐಎ ( ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಇದೊಂದು ಅಪರೂಪದ ಪ್ರಕರಣದ ಎಂದು ಪರಿಗಣಿಸಿದ ಕೋರ್ಟ್, ಯೋಜನೆ ರೂಪಿಸಿದ ಮತ್ತು ಸ್ಪೋಟ ಕಾರ್ಯರೂಪಕ್ಕೆ ತಂದ ಅಪರಾಧಿಗಳಿಗೆ ಈ ಶಿಕ್ಷೆ ಪ್ರಕಟಿಸಿದೆ. ಚೀರ್ಲಪಲ್ಲಿ ಕೇಂದ್ರೀಯ ಕಾರಾಗ್ರಹದಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಎನ್ಐಎ ಕೋರ್ಟ್ ದಿಲ್ಸುಖ್ ನಗರ ಅವಳಿ ಸ್ಪೋಟಕ್ಕೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್ 13ರಂದು ಇಂಡಿಯಾನ್ ಮುಜಾಹಿದ್ದೀನ್..

    December 20, 2016

FOOT PRINT

Top