An unconventional News Portal.

ಬಿಹಾರ
    ...
    kapila-hingorani-1
    ಫೋಕಸ್

    ಕರಿ ಕೋಟಿಗೆ ಕಾರುಣ್ಯ ತುಂಬಿದ ಕಪಿಲಾ ಹಿಂಗೊರಾನಿ: ದೇಶ ಕಂಡ ಅಪರೂಪದ ವಕೀಲೆಯ ಪರಿಚಯ

    ಪುಷ್ಪಾ ಕಪಿಲಾ ಹಿಂಗೊರಾನಿ… ದೇಶ ಕಂಡ ಅಪರೂಪದ ವಕೀಲೆ. ಅವರ ಭಾವಚಿತ್ರವೊಂದನ್ನು ಸುಪ್ರಿಂ ಕೋರ್ಟ್‌ನ ಗ್ರಂಥಾಲಯದಲ್ಲಿ ಮಂಗಳವಾರ ಅನಾವರಣಗೊಳಿಸಲಾಯಿತು. ಇದು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ವಕೀಲೆಯೊಬ್ಬರಿಗೆ ಸಿಕ್ಕಿರುವ ಅಪರೂಪದ ಹಾಗೂ ಅನನ್ಯ ಗೌರವ. ಇಷ್ಟಕ್ಕೂ ಹಿಂಗೊರಾನಿ ಯಾರು? ಅವರ ಹಿನ್ನೆಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (Mother of Public Interest Litigation)ಗಳ ತಾಯಿ ಎಂದೇ ಕರೆಯಲ್ಪಡುವ ಪುಷ್ಪಾ ಕಪಿಲಾ ಹಿಂಗೊರಾನಿ ನೊಂದ ಕೈದಿಗಳ ಕಣ್ಣೀರೊರೆಸಿದ ಮಹಾತಾಯಿ. ವಕೀಲೆಯಾಗಿ ಸುಮಾರು 50 ವರ್ಷಗಳ..

    December 6, 2017
    ...
    alcohol-ban-india
    ರಾಜ್ಯ

    ಚುನಾವಣೆ ಘೋಷಣೆ ಮತ್ತು ವಾಸ್ತವ: ಮದ್ಯಕ್ಕೆ ನಿಷೇಧ ಹೇರುತ್ತಾ ಸಿದ್ದರಾಮಯ್ಯ ಸರಕಾರ?

    -ಕಿರಣ್ ಕುಮಾರ್ ಎಂ. ಎಲ್.  ಸಂಪೂರ್ಣ ಮದ್ಯಪಾನ ನಿಷೇಧ… ಹೀಗೊಂದು ಕೂಗು ಮುಂದಿನ ಚುನಾವಣೆ ವೇಳೆಗೆ ಬಲವಾಗಿ ಕೇಳಿಬರುವ ಸಾಧ್ಯತೆ ಇದೆ. ಇತ್ತೀಚೆಗೆ ರಾಯಚೂರಿನಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ನೇತೃತ್ವದಲ್ಲಿ ಮದ್ಯ ನಿಷೇಧ ಜಾರಿಗಾಗಿ ಭಾರಿ ಪ್ರತಿಭಟನೆಯೂ ನಡೆದಿದೆ. ಬಿಹಾರ, ಗುಜರಾತ್ ರಾಜ್ಯಗಳಲ್ಲಿ ಜಾರಿಗೆ ಬಂದಿರುವ ಸಂಪೂರ್ಣ ಮದ್ಯ ನಿಷೇಧ ಕಾಯ್ದೆ ನಮ್ಮ ರಾಜ್ಯದಲ್ಲಿ ಏಕೆ ಸಾದ್ಯವಿಲ್ಲ? ಎನ್ನುವುದು ಅಂದು  ನೆರೆದಿದ್ದ ನಾಯಕರು ಸಿದ್ದರಾಮಯ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ. ಕಾಕತಾಳೀಯ ಎಂಬಂತೆ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ನೇತೃತ್ವದಲ್ಲಿ..

    November 21, 2017
    ...
    nithish-modi-lalu
    ದೇಶ

    ಪಾಠ ಒಂದು; ಅವಕಾಶವಾದಿ ನಾಯಕರಿಂದ ರಾಜಕೀಯ ಪರ್ಯಾಯ ನಿರೀಕ್ಷಿಸುವುದು ಮೂರ್ಖತನ!

    ‘ಬಿಮಾರು ರಾಜ್ಯ’ ಎಂದು ಗುರುತಿಸಿಕೊಂಡಿರುವ ಬಿಹಾರದಲ್ಲಿ ನಡೆದ ನಾಟಕೀಯ ರಾಜಕೀಯ ಬದಲಾವಣೆಯಲ್ಲಿ ನಿತೀಶ್ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಸಿದ್ಧತೆ ನಡೆಸುತ್ತಿದ್ದಾರೆ. 2015ರಲ್ಲಿ ಅವರು ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಈ ಬಾರಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಗಾಧಿ ಏರುತ್ತಿದ್ದಾರೆ. ಹಾಗೆ ನೋಡಿದರೆ, ಬಿಹಾರದ ಸದ್ಯದ ರಾಜಕೀಯ ಬೆಳವಣಿಗೆಗಳು ಅನಿರೀಕ್ಷಿತವೇನಲ್ಲ. ಬಿಜೆಪಿಯ ಪ್ರಭಾವಳಿಯಿಂದ ಹೊರತಾದ, ರಾಜಕೀಯ ಪರ್ಯಾಯವನ್ನು ನಿರ್ಮಿಸುವ ನಿಟ್ಟಿನಲ್ಲಿ 2015ರಲ್ಲಿ ಬಿಹಾರ ವಿಧಾನಸಭಾ..

    July 27, 2017
    ...
    ramnath-kovind
    ದೇಶ

    ‘ದಲಿತ ಪರ- ಅಲ್ಪಸಂಖ್ಯಾತರ ವಿರೋಧಿ’: ಇದು ರಾಮನಾಥ್ ಕೋವಿಂದ್ ನಂಬಿರುವ ‘ಸಂವಿಧಾನ’!

    “ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿ ಭಾರತದ ಪಾಲಿಗೆ ಏಲಿಯನ್‌ (ಹೊರಗಿನವು)ಗಳು. ಹೀಗಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದರೂ, ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಾತಿ ನೀಡಲು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರೋಧ ವ್ಯಕ್ತಪಡಿಸುತ್ತದೆ…” ಹೀಗಂತ ಹೇಳಿಕೆಯೊಂದನ್ನು ನೀಡಿದ್ದು ಬೇರೆ ಯಾರೂ ಅಲ್ಲ; ಸದ್ಯ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ರಾಮನಾಥ್ ಕೋವಿಂದ್. 2010ರಲ್ಲಿ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ಅವರನ್ನು ಪಕ್ಷ ಆಯ್ಕೆ ಮಾಡಿತ್ತು. ಈ ಸಮಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಅವರಿಗೆ ಸರಕಾರಿ ಉದ್ಯೋಗಗಳಲ್ಲಿ..

    June 20, 2017
    ...
    Mayavati BJP
    ಸುದ್ದಿ ಸಾರ

    ಮಾಯಾವತಿ ಅವಮಾನಿಸಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕ ದಯಾಶಂಕರ್ ಬಂಧನ

    ಬಿಎಸ್ಪಿ ನಾಯಕಿ ಮಾಯಾವತಿ ‘ವೇಶ್ಯೆಗಿಂತ ಕೀಳು’ ಎಂದು ಹೇಳಿ ವಿವಾದ ಹುಟ್ಟು ಹಾಕಿದ್ದ ಉತ್ತರ ಪ್ರದೇಶ ಬಿಜೆಪಿ ಮಾಜಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ರನ್ನು ಬಂಧಿಸಲಾಗಿದೆ. ಮಾನಹಾನಿಕರ ಹೇಳಿಕೆ ಸಂಬಂಧ ಅವರ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರಂಟ್ ಜಾರಿಯಾಗಿತ್ತು. ಈ ಕುರಿತು ಹೇಳಿಕೆ ನೀಡಿರುವ ಉತ್ತರ ಪ್ರದೇಶದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಯಾದವ್, ‘ಯುಪಿ’ಯ ವಿಶೇಷ ಕಾರ್ಯ ಪಡೆ ಮತ್ತು ಬಿಹಾರ ಪೊಲೀಸರು ಜಂಟಿ ಕಾರ್ಯಚರಣೆಯಲ್ಲಿ, ಬಿಹಾರದ ಬಕ್ಸಾರಿನ ಚಿನಿ ಮಿಲ್ ಪ್ರದೇಶದಿಂದ..

    July 29, 2016
    ...
    Rain
    ಸುದ್ದಿ ಸಾರ

    ಕುಂಭದ್ರೋಣ ಮಳೆಗೆ 100 ಕ್ಕೂ ಹೆಚ್ಚು ಬಲಿ

    ಉತ್ತರ ಭಾರತ ಸುತ್ತ ಮುತ್ತ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆ 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ನೆರೆಯ ರಾಷ್ಟ್ರ ನೇಪಾಳದಲ್ಲಿ ಪ್ರವಾಹದಿಂದಾಗಿ ಹೆಚ್ಚಿನ ಸಾವು ನೋವು ಸಂಭವಿಸಿದ್ದರೆ, ಬಿಹಾರ ಮತ್ತು ಅಸ್ಸಾಂನಲ್ಲಿಯೂ ಜನ ಮಳೆಯಿಂದಾಗಿ ತತ್ತರಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಕಳೆದೊಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ಹಲವು ಪ್ರದೇಶಗಳು ಜಲಾವೃತವಾಗಿವೆ. ಬ್ರಹ್ಮಪುತ್ರ ಸೇರಿದಂತೆ ನದಿಗಳೂ ತುಂಬಿ ಹರಿಯುತ್ತಿದ್ದು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಜನ-ಜಾನುವಾರುಗಳ ಜೀವ ಹಾನಿ ಒಂದೆಡೆಯಾದರೆ, ಲೆಕ್ಕವಿಲ್ಲದಷ್ಟು ಬೆಳೆ ಹಾನಿ, ಆಸ್ತಿ ಹಾನಿ..

    July 29, 2016
    ...
    manohar-devi-bihar-1
    ಸುದ್ದಿ ಸಾರ

    ದೇವಿ ವಿರುದ್ಧ ಮದ್ಯ ನಿಷೇಧ ಕಾಯ್ದೆ ಅಸ್ತ್ರ ಬಳಕೆ: ಬಂಧನಕ್ಕೆ ಬಿಹಾರ ಸರಕಾರ ಆದೇಶ

    ಸಾರಾಯಿ ನಿಷೇಧ ಕಾನೂನು ಉಲ್ಲಂಘನೆ ಆರೋಪದ ಮೇಲೆ ನಿತೀಶ್ ಕುಮಾರ್ ಸರಕಾರ ಬಿಹಾರದ ಆಡಳಿತಾರೂಢ ಜೆಡಿಯುನ ಮನೋಹರಾ ದೇವಿಯ ವಿರುದ್ಧ ಬಂಧನಾದೇಶ ಹೊರಡಿಸಿದೆ. ಓವರ್ ಟೇಕ್ ಮಾಡಿದ್ದಕ್ಕಾಗಿ ಯುವಕನೊಬ್ಬನನ್ನು ಗುಂಡಿಕ್ಕಿ ಕೊಂದ ಮಗನನ್ನು ರಕ್ಷಣೆ ಮಾಡುತ್ತಿರುವ ಆರೋಪದ ಮೇಲೆ ಮನೋಹರ ದೇವಿಯನ್ನು ಪಕ್ಷದಿಂದ ಮಂಗಳವಾರವಷ್ಟೆ ಅಮಾನತು ಮಾಡಲಾಗಿತ್ತು. ನಂತರ ಅವರು ಬಚ್ಚಿಟ್ಟುಕೊಂಡಿದ್ದಾರೆಂದು ಹೇಳಲಾಗಿತ್ತು. ಪಾಟ್ನಾದಿಂದ ಸುಮಾರು 100 ಕಿ. ಮೀ. ದೂರದ ಗಯಾದಲ್ಲಿರುವ ದೇವಿ ಮನೆಯಲ್ಲಿ ಕಳ್ಳಭಟ್ಟಿ ಸಾರಾಯಿ ಪತ್ತೆಯಾಗಿದ್ದು, ಈ ಸಂಬಂಧ ರಾಜ್ಯ ಸರಕಾರ ಬಂಧನಕ್ಕೆ ಆದೇಶ ನೀಡಿದೆ. ಬಿಹಾರದಲ್ಲಿ ಮದ್ಯ..

    May 11, 2016
    ...
    nitish-bihar-alcohal-ban
    ದೇಶ

    ಬಿಹಾರದಾದ್ಯಂತ ಮದ್ಯ ಮಾರಾಟ ನಿಷೇಧ: ಸಿಎಂ ನಿತೀಶ್ ಕುಮಾರ್ ದಿಟ್ಟ ಹೆಜ್ಜೆ

    ಮಹತ್ವದ ಬೆಳವಣಿಗೆಯಲ್ಲಿ ಮಂಗಳವಾರ ಬಿಹಾರ ಸರಕಾರ ರಾಜ್ಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿದೆ. ಏ. 1ರಂದು ಬಿಹಾರದ ಗ್ರಾಮೀಣ ಭಾಗದಲ್ಲಿ ‘ದೇಶಿ ಉತ್ಪಾದಿತ ವಿದೇಶಿ ಮದ್ಯ’ (ಐಎಂಎಫ್ಎಲ್)ವನ್ನು ನಿಷೇಧಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ಹೊರಡಿಸಿದ್ದರು. ಇದಾಗಿ ನಾಲ್ಕು ದಿನಗಳ ನಂತರ ಇಂದು (ಮಂಗಳವಾರ) ಮಾಧ್ಯಮಗಳ ಜತೆ ಮಾನಾಡಿದ ಅವರು, “ರಾಜಧಾನಿ ಪಾಟ್ನಾ ಸೇರಿದಂತೆ ಹಲವು ನಗರಗಳಲ್ಲಿ ಮದ್ಯ ನಿಷೇಧಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯವಾಗಿ ಮಹಿಳೆಯರು ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಸೆ ತೋರಿಸಿದ್ದಾರೆ. ಹೀಗಾಗಿ, ಸಂಪುಟ ಸಭೆಯಲ್ಲಿ ರಾಜ್ಯಾದ್ಯಂತ ಮದ್ಯ..

    April 5, 2016

Top