An unconventional News Portal.

ಬಿಜೆಪಿ

ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೇರಿ ಒಂದು ವರ್ಷ: ವಿಶ್ವದ ದೊಡ್ಡಣ್ಣನ ಸರಕಾರವೇ ಸ್ಥಗಿತ!

ಇದು ಅಮೆರಿಕಾದಲ್ಲಿ ನಡೆದ ಕುತೂಹಲಕಾರಿ ಬೆಳವಣಿಗೆ. 45ನೇ ಅಧ್ಯಕ್ಷರನ್ನಾಗಿ ಉದ್ಯಮಿ ಟ್ರಂಪ್‌ರನ್ನು ಆಯ್ಕೆ ಮಾಡಿಕೊಂಡ ಇಲ್ಲಿನ ಜನ, ವರ್ಷ ಕಳೆಯುವ ಮುನ್ನವೇ ಸರಕಾರವೇ ಸ್ಥಗಿತಗೊಂಡ ಘಟನೆಗೆ ಸಾಕ್ಷಿಯಾಗಿದ್ದಾರೆ.

  ...
  ಟಿವಿ

  ಫೇಕ್‌ ನ್ಯೂಸ್‌; ಮಾಧ್ಯಮ ಸಂಸ್ಥೆಗಳ ಮಾಲೀಕ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಪ್ರಕರಣ

  ಹಲವು ವರ್ಷಗಳಿಂದ ‘ನೇರ, ದಿಟ್ಟ, ನಿರಂತರ’ ಎಂಬ ಶೀರ್ಷಿಕೆಯಡಿ ಮಾಧ್ಯಮ ಸಂಸ್ಥೆಗಳನ್ನು ನಡೆಸಿಕೊಂಡು ಬಂದಿರುವ ಸಂಸದ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಫೇಕ್‌ ನ್ಯೂಸನ್ನು ಟ್ವೀಟ್‌ ಮಾಡಿದ್ದಕ್ಕೆ ದೂರು ದಾಖಲಾದ ಹಾಸ್ಯಾಸ್ಪದ ಪ್ರಕರಣ ಕೇರಳದಲ್ಲಿ ನಡೆದಿದೆ. ಕೇರಳ ಪೊಲೀಸ್‌ ಮಹಾ ನಿರ್ದೇಶಕ ಲೋಕನಾಥ್‌ ಬೆಹೆರಾ ಆದೇಶದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಕೇರಳ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಈ ಮೂಲಕ ಸಮೂಹ ಸುದ್ದಿ ಸಂಸ್ಥೆಗಳ ಒಡೆಯನೊಬ್ಬನ ಮೇಲೆಯೇ ನಕಲಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತಿದ ಆರೋಪ ಸದ್ದು..

  January 18, 2018
  ...
  ರಾಜ್ಯ

  ‘ಹಸಿರು ಚೆಡ್ಡಿ’: ಚುನಾವಣೆ ಬಂದಾಗೆಲ್ಲಾ ಚರ್ಚಾ ಕೇಂದ್ರಕ್ಕೆ ಬರುವ PFI ನಿಜಕ್ಕೂ ಏನು?

  ಕರಾವಳಿ ಕರ್ನಾಟಕದ ಜನರಿಗೆ ಕೋಮು ಗಲಭೆ ಎಂಬುದು ಸಾಮಾನ್ಯ ಎಂಬಂತಾಗಿರುವ ಸಮಯ ಇದು. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಕೋಮು ಸಂಘರ್ಷಗಳು ನಡೆಯುತ್ತವೆ. ಅದಕ್ಕಾಗಿಯೇ ಇದನ್ನು ‘ಹಿಂದುತ್ವದ ಪ್ರಯೋಗಶಾಲೆ’ ಎಂದು ಕರೆಯಲಾಗುತ್ತದೆ. ಅಲ್ಲಿನ ಕಾಟಿಪಳ್ಳ ಗ್ರಾಮವೀಗ ಸಾವಿನ ಸೂತಕದಲ್ಲಿದೆ. ಅದಕ್ಕೆ ಕಾರಣವಾಗಿರುವುದು ಬುಧವಾರ ನಡೆದ ಹತ್ಯೆ. ಮರಾಠಿ ಕುಟುಂಬದ ಯುವಕ ದೀಪಕ್ ರಾವ್ ದುರ್ಷರ್ಮಿಗಳಿಂದ ಹತ್ಯೆಯಾಗಿದ್ದಾನೆ. ಅದೀಗ ಕೋಮು ಸಾಮರಸ್ಯದ ನೆಲೆಯಲ್ಲಿ ರಾಜ್ಯಾದ್ಯಂತ ತರಂಗಗಳನ್ನು ಎಬ್ಬಿಸಿದೆ. ಇಲ್ಲಿ ನಡೆಯುವ ಹತ್ಯೆಗಳೂ ಕೂಡ..

  January 4, 2018
  ...
  ಸುದ್ದಿ ಸಾರ

  ಕಾನೂನು ಸುವ್ಯವಸ್ಥೆ ಕಾಪಾಡಲಾಗದೇ ಗೃಹ ಸಚಿವರಿಗೆ ತಲೆ ಕೆಟ್ಟಿದೆ: ಪಾರ್ಲಿಮೆಂಟ್‌ನಿಂದ ಶೋಭಾ ಕರಂದ್ಲಾಜೆ

  ಕಳೆದ 24 ಗಂಟೆಗಳಲ್ಲಿ ದೃಶ್ಯ ಮಾಧ್ಯಮಗಳ ಪರದೆಯನ್ನು ದೀಪಕ್ ಕೊಲೆ ಪ್ರಕರಣ ಆವರಿಸಿಕೊಂಡಿದೆ. ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್, ಚುನಾವಣಾ ಹೊಸ್ತಿಲಲ್ಲಿ ನಿಂತುಕೊಂಡು ಪರಸ್ಪರ ಕೆಸರೆರಚಾಟಕ್ಕೆ ಇಳಿದಿವೆ. ಅದಕ್ಕೆ ಪಿಎಫ್‌ಐ- ಎಸ್‌ಡಿಪಿಐ ಎಂಬ ಸಂಘಟನೆ ಹಾಗೂ ರಾಜಕೀಯ ಪಕ್ಷವನ್ನು ಮಧ್ಯದಲ್ಲಿ ಎಳೆದು ತಂದಿದೆ. ದೀಪಕ್ ಹತ್ಯೆ ಸುದ್ದಿಯಾಗುತ್ತಿದ್ದ ಬೆನ್ನಿದೆ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿ ಎಂದು ಬಿಜೆಪಿ ಒತ್ತಾಯಿಸಿತು. ಜತೆಗೆ, ಕಾಂಗ್ರೆಸ್ ಸರಕಾರ ಪೋಷಣೆಯಿಂದಲೇ ಪಿಎಫ್‌ಐ ಬೆಳೆಯುತ್ತಿದೆ ಎಂದು ಆರೋಪಿಸಿದೆ. (ಪಿಎಫ್‌ಐ ಕುರಿತ ಸ್ಟೋರಿಯೊಂದು ಸದ್ಯದಲ್ಲಿ ಪ್ರಕಟಗೊಳ್ಳಲಿದೆ)..

  January 4, 2018
  ...
  ರಾಜ್ಯ

  ‘ಬಾವುಟ, ಕೋಮು ದ್ವೇಷ, ಗಾಂಜಾ ವ್ಯಸನ, ಕ್ರೈಂ’: ದೀಪಕ್ ಕಾಟಿಪಳ್ಳ ಹತ್ಯೆ ಪ್ರಕರಣದ ಸುದ್ದಿ ಆಚೆಗಿನ ಸತ್ಯಗಳು!

  ಬಾಬ್ರಿ ಮಸೀದಿ ದ್ವಂಸ ಪ್ರಕರಣದ ನಂತರ ಮಂಗಳೂರಿನ ಕಾಟಿಪಳ್ಳ ಗ್ರಾಮದಲ್ಲಿ ಹುಟ್ಟಿಕೊಂಡ ಧಾರ್ಮಿಕ ಸೋಗಿನ ಹತ್ಯೆಗಳ ಇತಿಹಾಸಕ್ಕೆ ಮತ್ತೊಂದು ಅಧ್ಯಾಯ ಸೇರಿಕೊಂಡಿದೆ. ಅತ್ಯಂತ ಸ್ಫುಟವಾಗಿ ಬ್ಯಾರಿ ಭಾಷೆಯನ್ನು ಮಾತನಾಡುತ್ತಿದ್ದ, ಮರಾಠಿ ಕುಟುಂಬದ ಹಿನ್ನೆಲೆಯ ದೀಪಕ್ ರಾವ್‌ ಎಂಬ ಯುವಕ ಬುಧವಾರ ಹಾಡುಹಗಲೇ ಕೊಲೆಯಾಗಿದ್ದಾನೆ. ಮುಸ್ಲಿಂ ಮಾಲೀಕತ್ವದ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದೀಪಕ್‌, ಮದ್ಯಾಹ್ನದ ಸುಮಾರಿಗೆ ಕಾಟಿಪಳ್ಳದ ಎರಡನೇ ಬ್ಲಾಕ್‌ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಕಾರಿನಲ್ಲಿ ಬಂದ ನಾಲ್ವರು ಹಂತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪಾರಿಯಾಗಿದ್ದರು. ಕರಾವಳಿ..

  January 4, 2018
  ...
  ರಾಜ್ಯ

  ದೀಪಕ್ ಕಾಟಿಪಳ್ಳ ಹತ್ಯೆ ಪ್ರಕರಣ: ಸಾಮಾಜಿಕ ಪ್ರತಿಕ್ರಿಯೆ, ಮಾಧ್ಯಮ ಸ್ಪಂದನೆ ಮತ್ತು ಆ 24 ಗಂಟೆಗಳು!

  ಬುಧವಾರ ಮದ್ಯಾಹ್ನ ಸುರತ್ಕಲ್ ಸಮೀಪದ ಕಾಟೀಪಳ್ಳದಲ್ಲಿ ನಡೆದ ದೀಪಕ್ ಹತ್ಯೆ ಅಸಹ್ಯಕರ ಸಂಚಲನಕ್ಕೆ ಕಾರಣವಾಗಿದೆ. ನಾಲ್ವರು ದುಷ್ಕರ್ಮಿಗಳಿಂದ ದೀಪಕ್ ಹತ್ಯೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳು ಪ್ರತಿಕ್ರಿಯೆಗಳಿಗೆ ವೇದಿಕೆಯಾದವು . ಕೆಲವು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರೇಶ್ ಮೇಸ್ತ ಹತ್ಯೆ ಸಾವಿನ ಪ್ರಕರಣದಲ್ಲಿ, ಕೋಮು ಸಂಘರ್ಷಕ್ಕೆ ನಾಂದಿ ಹಾಡಿದ್ದು ಇದೇ ಸಾಮಾಜಿಕ ಜಾಲತಾಣಗಳು. ಈ ಬಾರಿಯೂ ಅದೇ ಭಾವನೆಗಳನ್ನು ಕೆರಳಿಸುವ, ಕೋಮು ಸಂಘರ್ಷವನ್ನು ಪ್ರಚೋದಿಸುವ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ನಡೆಯಿತು. ಜತೆಗೆ ಮುಖ್ಯವಾಹಿನಿ ಮಾಧ್ಯಮಗಳ ಕೊಡುಗೆಯೂ ಎದ್ದು ಕಾಣಿಸುತ್ತಿತ್ತು. ಬುಧವಾರ..

  January 4, 2018
  ...
  ಸುದ್ದಿ ಸಾರ

  ಬಜರಂಗದಳದ ಮಾಜಿ ಕಾರ್ಯಕರ್ತ ದೀಪಕ್ ಹತ್ಯೆ: ಕಾಟಿಪಳ್ಳದ ಸುತ್ತಮುತ್ತ ಪರಿಸ್ಥಿತಿ ಉದ್ವಿಘ್ನ

  ದಕ್ಷಿಣದ ಕನ್ನಡ ಜಿಲ್ಲೆಯ ಕಾಟಿಪಾಳ್ಳ ಬಳಿ ಹಾಡಹಗಲೇ ನಡೆದ ಮಾರಕಾಸ್ತ್ರಗಳ ದಾಳಿಗೆ ಬಜರಂಗ ದಳದ ಕಾರ್ಯಕರ್ತರೊಬ್ಬರು ಬಲಿಯಾಗಿದ್ದಾರೆ. ದೀಪಕ್ ಮೃತಪಟ್ಟ ವ್ಯಕ್ತಿ. ಕೈಕಂಬದ ನಿವಾಸಿಯಾಗಿದ್ದ ಇವರ, ಮೊಬೈಲ್ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಮೊದಲು ಬಜರಂಗದಳ ಕಾರ್ಯಕರ್ತರಾಗಿದ್ದು, ಸದ್ಯ ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. “ಮಧ್ಯಾಹ್ನ ಸುಮಾರು 1:30 ರ ವೇಳೆಗೆ ಮೋಟಾರ್ ಬೈಕಿನಲ್ಲಿ ತೆರಳುತ್ತಿದ್ದ ದೀಪಕ್‌ರನ್ನು ಕಾರಿನಲ್ಲಿ ಬಂದ ನಾಲ್ಕು ಜನ ಮುಸುಕುದಾರಿಗಳು ಅಡ್ಡಗಟ್ಟಿದ್ದಾರೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಅವರು ದೀಪಕ್ ಮೇಲೆ ದಾಳಿ ಮಾಡಿದ್ದಾರೆ. ತಪ್ಪಿಸಿಕೊಳ್ಳುವ..

  January 3, 2018
  ...
  ದೇಶ

  ‘ರೈಟ್‌ ಮ್ಯಾನ್‌ ಇನ್‌ ದಿ ರಾಂಗ್‌ ಪಾರ್ಟಿ’; ಅಟಲ್‌ ಬಿಹಾರಿ ವಾಜಪೇಯಿ ಈಗ ಹೇಗಿದ್ದಾರೆ…?

  ಮೊನ್ನೆ ಡಿಸೆಂಬರ್ 25; ಭಾರತದ ಮಾಜಿ ಪ್ರಧಾನಿ, ಶ್ರೇಷ್ಠ ವಾಘ್ಮಿ, ಕವಿ ಹೃದಯಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನ. ಅಂದು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಸಣ್ಣದಾಗಿ ಸುದ್ದಿಯಾಗಿ ಕಾಣಿಸಿಕೊಳ್ಳುವ ವಾಜಪೇಯಿ ನಿಜಕ್ಕೂ ಹೇಗಿದ್ದಾರೆ? ಅವರ ಆರೋಗ್ಯದಲ್ಲಿ ಏನಾಗಿದೆ? ಅವರ ಕುರಿತು ಬೇರೆಯವರು ಹೋಗಲಿ, ಸ್ವತಃ ಬಿಜೆಪಿಯವರೇ ಹೆಚ್ಚು ಮಾತನಾಡುತ್ತಿಲ್ಲ. ಅವರ ಹುಟ್ಟುಹಬ್ಬದಂದು ಮಾತ್ರ ನೆನಪಿಸಿಕೊಳ್ಳುವ ಮಟ್ಟಕ್ಕೆ ಕೇಸರಿ ಪಕ್ಷದ ಮತ್ಸದ್ಧಿ ರಾಜಕಾರಣಿ ಎಂದು ಬಿಂಬಿಸಲ್ಪಟ್ಟ ನೇತಾರರೊಬ್ಬರ ಸ್ಥಿತಿ ಬಂದು ಬಿಟ್ಟಿದೆ. ವಾಜಿಪೇಯಿ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಗೊತ್ತು. 2009ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ..

  January 3, 2018
  ...
  ರಾಜ್ಯ

  ಪ್ರಜಾತಂತ್ರವನ್ನ ಪಾತಾಳಕ್ಕೆ ತಳ್ಳುತ್ತಿದೆಯೇ ಚುನಾವಣಾ ಚಾಣಾಕ್ಷ ‘ಶಾ’ ತಂತ್ರಗಾರಿಕೆ?

  2018 ಹಾಗೂ 2019 ಚುನಾವಣೆಯ ಪರ್ವಕಾಲ. ಈ ವರ್ಷ ದೊಡ್ಡ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ಒಟ್ಟು 8 ರಾಜ್ಯಗಳ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಮುಂದಿನ ವರ್ಷ ಲೋಕಸಭೆ ಚುನಾವಣೆ. ಪ್ರಜಾಧಿಕಾರದ ಪಡೆಯುವ ಪ್ರಕ್ರಿಯೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಗೆಲುವು-ಸೋಲಿನ ಲೆಕ್ಕಾಚಾರದೊಂದಿಗೆ ರಾಜಕೀಯ ಪಕ್ಷಗಳು ರಟ್ಟೆಯರಳಿಸಿ ಪ್ರಚಾರದ ಕಣಕ್ಕೆ ಇಳಿದಿವೆ. ಪ್ರಮುಖ ಮೂರು ಪಕ್ಷಗಳ ಚುನಾವಣಾ ಪ್ರಚಾರದ ವೈಖರಿಗಳ ಪೈಕಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಹಾಗೂ 19 ರಾಜ್ಯಗಳ ಚುಕ್ಕಾಣಿ ಹಿಡಿದಿರುವ ಬಿಜೆಪಿ ರೂಪಿಸುತ್ತಿರುವ ಚುನಾವಣಾ ತಂತ್ರಗಾರಿಕೆ, ದೇಶದ ಚುನಾವಣಾ..

  January 3, 2018
  ...
  ವಿಚಾರ

  ‘ತ್ರಿವಳಿ ತಲಾಕ್ ವಿರುದ್ಧ ಹೋರಾಟ, ಮುಸ್ಲಿಂ ಸಮುದಾಯದ ಸುಧಾರಣೆಗೆ ನಡೆಯುತ್ತಿರುವ ಆಂದೋಲನ’: ನಸ್ರೀನ್ ಮಿಠಾಯಿ

  ನಸ್ರೀನ್ ಮಿಠಾಯಿ. ತ್ರಿವಳಿ ತಲಾಕ್ ನಿಷೇಧಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಮುಸ್ಲಿಂ ಸಮುದಾಯದ ಸುಧಾರಣೆಯ ದೃಷ್ಟಿಯಿಂದ ಅದರಲ್ಲೂ ಮುಸ್ಲಿಂ ಮಹಿಳೆಯರ ದೃಷ್ಟಿಯಿಂದ ಅತ್ಯಂತ ಮಹತ್ವವಾದದ್ದು. ಇಂತಹ ಒಂದು ತೀರ್ಪು ಇದ್ದಕ್ಕಿದ್ದಂತೆ ಆಕಾಶದಿಂದ ಉದುರಿದ್ದಲ್ಲ. ಇದರ ಹಿಂದೆ ಹಲವು ವರ್ಷಗಳ ಕಾಲ ನೊಂದ ಮಹಿಳೆಯರೇ ಮುಂದಾಳತ್ವ ವಹಿಸಿ ನಡೆಸಿದ ಹೋರಾಟವಿದೆ; ಅಪಾರ ಶ್ರಮವಿದೆ. ಪವಿತ್ರ ಖುರಾನ್ ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ತಮಗೆ ನ್ಯಾಯವನ್ನು ಕೇಳಿ ಯಶಸ್ವಿಯೂ ಆಗಿದ್ದಾರೆ. ತಾವು ಮತ್ತೆ ಮತ್ತೆ ಅನ್ಯಾಯಕ್ಕೊಳಗಾದಾಗಲೆಲ್ಲ ಮುಸ್ಲಿಂ ವೈಯಕ್ತಿಕ..

  January 2, 2018
  ...
  ರಾಜ್ಯ

  ಬುದ್ದಿಜೀವಿಗಳು ಗಂಜಿ ಗಿರಾಕಿಗಳು, ಮಾಧ್ಯಮ ಪ್ರೆಸ್ಟಿಟ್ಯೂಟ್ಸ್‌, ಸಂವಿಧಾನ- ಡೋಂಟ್‌ ಟಚ್‌!

  ಒಬ್ಬಂಟಿಯಾದ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ ಅನಂತ್ ಕುಮಾರ್ ಹೆಗಡೆ ಕೊನೆಗೂ ದೇಶದ ಕ್ಷಮೆ ಕೇಳಿದ್ದಾರೆ. ಜಾತ್ಯಾತೀತರ ರಕ್ತ ಹಾಗೂ ಸಂವಿಧಾನ ಬದಲಾವಣೆಯ ಬಗ್ಗೆ ಹೇಳಿಕೆ ನೀಡಿದ್ದ ಹೆಗಡೆ ವಿರುದ್ಧ ಸಂಸತ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲಿ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಪ್ರತಿಭಟನೆ, ದೂರು ದಾಖಲು ಪ್ರಕ್ರಿಯೆಗಳಿಗೂ ನಾಂದಿ ಹಾಡಿತ್ತು. ಇದಕ್ಕೆ ಸ್ವ ಪಕ್ಷೀಯ ರಾಜ್ಯ ನಾಯಕರಿಂದ ಬೆಂಬಲ ಸಿಗದೆ, ಅತ್ತ ಕೇಂದ್ರ ನಾಯಕರೂ ಜತೆಗೆ ನಿಲ್ಲದೆ ಹೋದ ಸ್ಥಿತಿಯಲ್ಲಿ ಹೆಗಡೆ ಸಂಸತ್‌ನಲ್ಲಿಯೇ ತಮ್ಮ ಹೇಳಿಕೆಗೆ ಗುರುವಾರ..

  December 29, 2017

FOOT PRINT

Top