An unconventional News Portal.

ಬರ
    ...
    Youngstres and Students protest to lift ban on Jallikattu
    ದೇಶ

    ಹಿಂಸೆಗೆ ತಿರುಗಿದ ಜಲ್ಲಿಕಟ್ಟು ಪ್ರತಿಭಟನೆ: ಮಾಧ್ಯಮಗಳು ತೋರಿಸದ ತಮಿಳುನಾಡಿನ ಇನ್ನೊಂದು ಮುಖ

    ಕಳೆದ ಒಂದು ವಾರದಿಂದ ಚೆನ್ನೈನ ಮರೀನಾ ಬೀಚ್ ಸೇರಿದಂತೆ ತಮಿಳುನಾಡಿನ ಇತರೆ ಕಡೆಗಳಲ್ಲಿ ಜಲ್ಲುಕಟ್ಟು ನಿಷೇಧ ಮೇಲಿನ ತೆರವಿಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ಹಿಂಸೆಗೆ ತಿರುಗಿದೆ. ವಿದ್ಯಾರ್ಥಿಗಳು ಮತ್ತು ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನೆ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ವರದಿಗಳ ಪ್ರಕಾರ ಮರೀನಾ ಬೀಚ್ ಪ್ರದೇಶದಲ್ಲಿ ಸುಮಾರು 15 ಸಾವಿರ ಪ್ರತಿಭಟನಾಕಾರರು ಸೇರಿದ್ದಾರೆ. ಸುಘ್ರೀವಾಜ್ಞೆ ನಂತರ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಪ್ರತಿಭಟನೆಯನ್ನು ಕೈ ಬಿಡುವಂತೆ ಮಾಡಿಕೊಂಡ ಮನವಿಗೆ ಅವರು ಸ್ಪಂದಿಸಲಿಲ್ಲ. ಈ ಸಮಯದಲ್ಲಿ..

    January 23, 2017
    ...
    farmer_ploughing
    ದೇಶ

    ರೈತರ ಆತ್ಮಹತ್ಯೆಗೆ ಬ್ಯಾಂಕುಗಳ ಕೊಡುಗೆ ಅಪಾರ: ಲೇವಾದೇವಿಗಾರರ ಮೇಲಿನ ಆರೋಪ ನಿರಾಧಾರ

    ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ, ಲೇವಾದೇವಿದಾರರಿಂದ ಪಡೆದ ಸಾಲವೇ ಜೀವಕ್ಕೆ ಕುತ್ತಾಯಿತು ಎಂಬ ಮಾತು ಕೇಳಿ ಬರುತ್ತದೆ. ಆದರೆ ಅದು ಸುಳ್ಳು ಎನ್ನುತ್ತಿದೆ ‘ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ’ (ಎನ್.ಸಿ.ಆರ್.ಬಿ) ದ ಮಾಹಿತಿ. 2015ರಲ್ಲಿ ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆಗೆ ಶರಣಾದ ರೈತರಲ್ಲಿ ಶೇಕಡಾ 80 ರಷ್ಟು ಜನ ಬ್ಯಾಂಕುಗಳು ಮತ್ತು ನೋಂದಾಯಿತ ಮೈಕ್ರೋಫೈನಾನ್ಸ್ ಗಳಿಂದ ಸಾಲ ಪಡೆದವರು ಎಂದು ಈ ದಾಖಲೆಗಳು ಹೇಳುತ್ತಿವೆ. ಇದೇ ಮೊದಲ ಬಾರಿಗೆ ಆತ್ಯಹತ್ಯೆ ಮಾಡಿಕೊಂಡ ರೈತರ ಮರು ಪಾವತಿಸಲಾಗದ ಸಾಲದ ಬಗ್ಗೆಯೂ ಎನ್.ಸಿ.ಆರ್.ಬಿ ಮಾಹಿತಿ..

    January 7, 2017
    ...
    farmer-media-drama-2
    ಟಿವಿ

    ಟೀಕೆ ಅತಿಯಾಯ್ತು; ಸಮಸ್ಯೆ ಮರೆಯಾಯ್ತು: ಬಳ್ಳಾರಿ ರೈತ ‘ಆತ್ಮಹತ್ಯೆ ಡ್ರಾಮಾ’ದ ಅಸಲಿ ಕತೆ ಇದು!

    “ಬಳ್ಳಾರಿಯಲ್ಲಿ ರೈತರ ಸಮಸ್ಯೆ ಇರುವುದು ನಿಜ ಸರ್. ಅವರ ಸಂಕಷ್ಟಗಳು ಘೋರವಾಗಿವೆ. ನಾವೇನೂ ಸಮಸ್ಯೆಯೇ ಇಲ್ಲದೇ ಡ್ರಾಮಾ ಮಾಡಲು ಹೊರಟಿರಲಿಲ್ಲ. ಇದೀಗ ಮಾಧ್ಯಮದವರೆಲ್ಲಾ ಸೇರಿಕೊಂಡು ಇದನ್ನೇ ಕಾಂಟ್ರಾವರ್ಸಿ ಮಾಡುತ್ತಿದ್ದಾರೆ. ಇದರಿಂದ ರೈತರ ಸಮಸ್ಯೆಯನ್ನು ಎಲ್ಲರೂ ಮರೆಯುತ್ತಿದ್ದಾರೆ,” ಎಂದು ವಿಷಾದದ ದನಿಯಲ್ಲೇ ಮಾತು ಆರಂಭಿಸಿದರು ಬಳ್ಳಾರಿ ಮೂಲದ ರೈತ ಮುಖಂ ಪುರುಷೋತ್ತಮ್ ಗೌಡ. ಗುರುವಾರ ಬೆಳಿಗ್ಗೆ ಬಳ್ಳಾರಿಯ ಕೊರಲಗುಂದಿ ಗ್ರಾಮದಲ್ಲಿ ನಡೆದಿರುವ ರೈತರೊಬ್ಬರ ವಿಷ ಸೇವನೆ ಪ್ರಹಸನದಿಂದಾಗಿ ರೈತರ ಸಮಸ್ಯೆಗಳು ಸುದ್ದಿ ಕೇಂದ್ರಕ್ಕೆ ಬರುವ ಹಾದಿಯಲ್ಲಿಯೇ ದಿಕ್ಕು ತಪ್ಪಿವೆ. ವಿವಾದ ಮತ್ತು..

    October 13, 2016
    ...
    siddaramaiah
    ರಾಜ್ಯ

    ಸರ್ಕಾರಿ ನೌಕರರಿಗೂ ತಟ್ಟಿದ ಬರದ ಬಿಸಿ: ಆರಂಭವಾಗದ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ

    ರಾಜ್ಯ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ತೀವ್ರ ಬರಗಾಲ ಇದೆ ಎಂಬ ಕಾರಣವನ್ನು ನೀಡಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಬರಗಾಲದ ಬಿಸಿ ಸರ್ಕಾರಿ ನೌಕರರನ್ನೂ ಕಾಡುವುದು ನಿಚ್ಚಳವಾಗಿದೆ. ರಾಜ್ಯ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾರ್ಗ ಸೂಚಿ ಪ್ರಕಾರ ಮೇ ಹಾಗೂ ಜೂನ್ ತಿಂಗಳಿನಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜೂನ್ 30 ರ ನಂತರ ವರ್ಗಾವಣೆ ಮಾಡಬೇಕಿದ್ದರೆ ಮುಖ್ಯಮಂತ್ರಿಗಳ ಪೂರ್ವಾನುಮತಿ ಕಡ್ಡಾಯ. ಆದರೆ ಈ ಬಾರಿ ಸಾರ್ವತ್ರಿಕ ವರ್ಗಾವಣೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು..

    May 5, 2016
    ...
    govt-cars-karnataka-1
    ರಾಜ್ಯ

    ಸರಕಾರದ ಕಾರು ಖರೀದಿ ಖಯಾಲಿಗೆ 30 ಕೋಟಿ ತೆರಿಗೆ ಹಣ ವೆಚ್ಚ!

    ರಾಜ್ಯದಲ್ಲಿ ಉಪನ್ಯಾಸಕರಿಗೆ ಸಂಬಳ ಹಚ್ಚಿಸಲು ಹಣವಿಲ್ಲ, ಬರ ಪರಿಹಾರಕ್ಕೆ ಬೊಕ್ಕಸದಲ್ಲಿ ಕಾಸಿಲ್ಲ. ಆದರೆ, ಜನಪ್ರತಿನಿಧಿಗಳ ಶೋಕಿಗಾಗಿ ಕಾರುಗಳ ಖರೀದಿಗೆ ಮಾತ್ರ ತೆರಿಗೆ ಹಣದಲ್ಲಿ ಯಾವುದೇ ವ್ಯತ್ಯಯವಿಲ್ಲ. ಇದು ಕಳೆದ 6 ವರ್ಷಗಳ ಅಂತರದಲ್ಲಿ ರಾಜ್ಯ ಸರಕಾರ ವಾಹನಗಳ ಮೇಲೆ ಮಾಡಿರುವ ವೆಚ್ಚದ ವಿವರಗಳ ಹಿನ್ನೆಲೆಯಲ್ಲಿ ಗಮನಿಸಬೇಕಿರುವ ಅಂಶ. 2009ರಿಂದ 2015ರ ನಡುವೆ ಸರಕಾರ ಒಟ್ಟು 217 ಕಾರುಗಳನ್ನು ಖರೀದಿಸಿದೆ. ಆರ್ಥಿಕ ಇಲಾಖೆ ಅನುಮೋದನೆ ಮೇರೆಗೆ, ಆಡಳಿತ ಹಾಗೂ ಸುಧಾರಣೆ ಇಲಾಖೆ ನಡೆಸಿರುವ ಈ ವ್ಯವಹಾರದ ಮಾಹಿತಿ ಇದೀಗ ಬಹಿರಂಗವಾಗಿದೆ…

    May 4, 2016
    ...
    summer-rounds-mejestic
    ರಾಜ್ಯ

    ಮಲ್ಲೇಶಪ್ಪ, ಚಾಂದನಿ ಮತ್ತು ವೀರಮಣಿ: ಬರ, ಬೇಸಿಗೆ ಹಾಗೂ ಮಧ್ಯಾಹ್ನದ ಸಮಾಚಾರ

    “ಊರಲ್ಲಿ ಸುಡು ಬಿಸಿಲು ಐತ್ರಿ. ಕೂಲಿ ಹುಡ್ಕೊಂಡು ಇಲ್ಲಿಗ್ ಬಂದ್ರ, ಇಲ್ಲೂ ಅದೇ ಪಾಡಾತು ನೋಡ್ರಿ,” ಎಂದ ಕೊಪ್ಪಳ ಮೂಲದ ಮಲ್ಲೇಶಪ್ಪ ತಲೆಗೆ ಸುತ್ತಿಕೊಂಡಿದ್ದ ಟವೆಲ್ ತೆಗೆದು ಒಮ್ಮೆ ಕೊಡವಿದರು. ಮಲ್ಲೇಶ್ವರದ 8ನೇ ತಿರುವಿನ ಬಿಸಿಲಿನಲ್ಲಿ ಅವರ ಟವೆಲ್ನಿಂದ ಸಿಡಿದ ದೂಳ ಕಣಗಳು ಆಟ ಆಡತೊಡಗಿವು. ಹದಿನೈದು ದಿನಗಳ ಹಿಂದೆ, ಮಲ್ಲೇಶಪ್ಪ ಮತ್ತವರ ಕುಟುಂಬ ಬೆಂಗಳೂರಿಗೆ ಗುಳೇ ಬಂದಿದೆ. ಇವರಿಗೆ ಗುಳೇ ಬರುವುದು ಹೊಸತಲ್ಲವಾದರೂ, ಅವರ ತಮ್ಮನ ಒಂದು ತಿಂಗಳ ಮೊಲೆಹಾಲು ಕುಡಿಯುವ ಮಗುವಿಗೆ ಇದು ಮೊದಲ..

    April 15, 2016
    ...
    twitter trend
    ರಾಜ್ಯ

    ಟ್ವಿಟರ್ ಕಟ್ಟೆ ಏರಿದ ಮಹದಾಯಿ; ಬರ: ಭಾರತದಲ್ಲಿ #DyingForADrop ಟ್ರೆಂಡಿಗ್

    ರಾಜ್ಯದ ಬರ ಪರಿಸ್ಥಿತಿ, ರಾಜಕಾರಣಿಗಳ ಹೊಣೆಗೇಡಿತನ ಹಾಗೂ ಮಹದಾಯಿ ನೀರಿನ ನಿರೀಕ್ಷೆಯಲ್ಲಿರುವ ರೈತರ ಪರ ದನಿಗಳು ಬುಧವಾರ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿವೆ. ಕಳೆದ ಹಲವು ದಿನಗಳಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬರ ಕಾಣಿಸಿಕೊಂಡಿದೆ. ಬರ ಪರಿಹಾರಕ್ಕಾಗಿ ರಾಜ್ಯ ಸರಕಾರ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ನಡೆಸಿತ್ತು. ಇಂದಿನಿಂದ ಸಿಎಂ ಸಿದ್ದರಾಮಯ್ಯ ಕೂಡ ಬರ ಜಿಲ್ಲೆಗಳ ಪ್ರವಾಸ ಆರಂಭಿಸಿದ್ದಾರೆ. ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಬರ ಪರಿಹಾರದ ವಿಚಾರದಲ್ಲಿ..

    April 13, 2016

Top