An unconventional News Portal.

ಪ್ರತಿಭಟನೆ
    ...
    janashri-reddy-final
    ಟಿವಿ

    ‘ಸಂಬಳ ಕೊಡಿ; ಇಲ್ಲವೇ ಪ್ರತಿಭಟನೆ ಎದುರಿಸಿ’: ಜನಾರ್ಧನ ರೆಡ್ಡಿಗೆ ‘ಜನಶ್ರೀ’ ಸಿಬ್ಬಂದಿ ಡೆಡ್‌ಲೈನ್

    ‘ಸಂಬಳ ಕೊಡಿ; ಇಲ್ಲವೇ ಪ್ರತಿಭಟನೆ ಎದುರಿಸಿ…’  ಇದು ಬೆಂಗಳೂರಿನ ಕೋರಮಂಗಲದಲ್ಲಿರುವ ‘ಜನಶ್ರೀ ನ್ಯೂಸ್‌’ ಕಚೇರಿಯಲ್ಲಿ ನಿನ್ನೆಯಿಂದ ಪ್ರತಿಭಟನೆ ಆರಂಭಿಸಿರುವ 123 ಸಿಬ್ಬಂದಿಗಳು ಹಾಗೂ ಪತ್ರಕರ್ತರು ನೀಡಿರುವ ಕೊನೆಯ ಎಚ್ಚರಿಕೆ. ಬಿಜೆಪಿ ನಾಯಕ, ಮಾಜಿ ಸಚಿವ, ಅಕ್ರಮ ಗಣಿ ಹಗರಣದ ಪ್ರಮುಖ ಆರೋಪಿ ಜನಾಧರ್ನ ರೆಡ್ಡಿ ಮಾಲೀಕತ್ವದ ಸುದ್ದಿ ವಾಹಿನಿಯಲ್ಲಿ ಸಂಬಳ ಇಲ್ಲದೆ ಸಿಬ್ಬಂದಿಗಳು ಹಾಗೂ ಪತ್ರಕರ್ತರು ಪರದಾಡುತ್ತಿರುವ ಸ್ಥಿತಿಯನ್ನು ‘ಸಮಾಚಾರ’ ನಿಮ್ಮೆದುರಿಗೆ ಇಟ್ಟಿತ್ತು. ಇದರ ಮುಂದುವರಿದ ಬೆಳವಣಿಗೆಯಲ್ಲಿ, ಗಾಂಧಿ ಜಯಂತಿಯ ದಿನ, ಅಕ್ಟೋಬರ್‌ 2ರಿಂದ ಸುದ್ದಿ ಪ್ರಸಾರವನ್ನು ಸ್ಥಗಿತಗೊಳಿಸಿ..

    October 3, 2017
    ...
    Kalanidhi Maran and Kavya Maran, Kaveri Kalanidhi
    ಟಿವಿ

    ‘ಉದಯ ನ್ಯೂಸ್’ ಮುಚ್ಚಲು ನೋಟಿಸ್: ನಷ್ಟ ತುಂಬಲು ಮಾರನ್ ಮಗಳ ‘ಪಾಕೆಟ್ ಮನಿ’ ಸಾಕು!

    ಕೋಪ, ಸಿಟ್ಟು, ಬೇಜಾರು, ಅಸಹನೆ, ಆಕ್ರೋಶ, ಖುಷಿ, ಸಂತಸ, ಸಂತೃಪ್ತಿ, ಉತ್ಸಾಹ… ಹೀಗೆ ನಾನಾ ಭಾವನೆಗಳನ್ನು ಅವುಗಳ ಅತಿರೇಕದಲ್ಲಿ ಅನುಭವಿಸುವ ಸಮುದಾಯ ಪತ್ರಕರ್ತರದ್ದು. ಇವುಗಳ ಜತೆಗೆ, ಉದ್ಯೋಗದ ಅಭದ್ರತೆಯೂ ಅವರನ್ನು ಯಾವ ಪರಿಯಲ್ಲಿ ಕಾಡಬಹುದು ಎಂಬುದಕ್ಕೆ ಕರ್ನಾಟಕದ ಸುದ್ದಿ ಮಾಧ್ಯಮದಲ್ಲಿ ಸದ್ಯ ನಡೆದಿರುವ ಈ ಬೆಳವಣಿಗೆಯೇ ಸಾಕ್ಷಿ. ಕಳೆದ ಐದು ವರ್ಷಗಳಲ್ಲಿ 3,834.95 ಕೋಟಿ ನಿವ್ವಳ ಲಾಭ ಗಳಿಸಿದ ಸನ್ ನೆಟ್ವರ್ಕ್ ತನ್ನ ಅಂಗ ಸಂಸ್ಥೆ ‘ಉದಯ ನ್ಯೂಸ್’ನ್ನು ಮುಚ್ಚಲು ತೀರ್ಮಾನಿಸಿದೆ. ನಷ್ಟದ ಕಾರಣವನ್ನು ಮುಂದಿಟ್ಟ ಸಂಸ್ಥೆಯ..

    August 26, 2017
    ...
    adivasi-1
    ರಾಜ್ಯ

    ‘ಬಡವರು ಬರುತ್ತಿದ್ದಾರೆ; ಬೆಂಬಲ ಕೊಡಿ’: ಜೂನ್ 15ರಿಂದ ರಾಜಧಾನಿಯಲ್ಲಿ ಆದಿವಾಸಿಗಳ ವಾಸ್ತವ್ಯ

    ಕೆಲವು ದಿನಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯ ಹಗಲು- ರಾತ್ರಿ ಪ್ರತಿಭಟನೆಗೆ ಸಾಕ್ಷಿಯಾದ ಸಿಲಿಕಾನ್ ಸಿಟಿಗೆ ಈ ಬಾರಿ ಆದಿವಾಸಿಗಳು, ವಸತಿರಹಿತರು ಬರುತ್ತಿದ್ದಾರೆ. ಗುರುವಾರ, ಜೂನ್ 15ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ ಮುಂಭಾಗ ಭೂಮಿ ಹಾಗೂ ವಸತಿ ಹಕ್ಕಿಗಾಗಿ ಆಗ್ರಹಿಸಿ ದೊಡ್ಡ ಮಟ್ಟದ ಪ್ರತಿಭಟನೆ ಆರಂಭವಾಗಲಿದೆ. ಸರಕಾರ ಬೇಡಿಕೆಗಳನ್ನು ಈಡೇರಿಸುವವರೆಗೂ ಸತ್ಯಾಗ್ರಹ ಜಾರಿಯಲ್ಲಿರಲಿದೆ ಎಂದು ಆಯೋಜಕರು ಈಗಾಗಲೇ ಪ್ರಕಟಿಸಿದ್ದಾರೆ. ಹೀಗಾಗಿ, ಒಂದಷ್ಟು ದಿನಗಳ ಕಾಲ ಹಗಲು ಹಾಗೂ ರಾತ್ರಿ ರಾಜಧಾನಿಯ ಬೀದಿಯಲ್ಲಿ ಸುಮಾರು 21 ಜಿಲ್ಲೆಗಳ ಭೂಮಿ ಹಾಗೂ..

    June 13, 2017
    ...
    farmers-protest-mp-final
    ಸುದ್ದಿ ಸಾರ

    ‘ಯುಪಿ ಎಫೆಕ್ಟ್’: ಸಾಲ ಮನ್ನಾ ಮಾಡಲು ಆಗ್ರಹ; ರೈತರ ಮೇಲೆ ಅರೆ ಸೇನಾಪಡೆ ಫೈರಿಂಗ್

    ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ನಡೆಸಿದ ಗೋಲಿಬಾರ್‌ಗೆ  ರೈತರು ಐವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇತರೆ ಮೂವರು ಗಾಯಗೊಂಡಿದ್ದಾರೆ. ಮಂಗಳವಾರ ರೈತರು ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತವಾಗಿರುವ ಬೆಲೆ ಹಾಗೂ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ನಡೆದ ಫೈರಿಂಗ್ ಸಮಯದಲ್ಲಿ ಇಬ್ಬರು ರೈತರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಪೊಲೀಸರಿಂದ ಗುಂಡಿನ ದಾಳಿ ನಡೆದಿಲ್ಲ ಎಂದು ರಾಜ್ಯ ಗೃಹ ಸಚಿನ ಭುಪೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ…

    June 6, 2017
    ...
    Tamil Nadu Farmers
    ದೇಶ

    ಬೆತ್ತಲೆ ಪ್ರತಿಭಟನೆಗೆ ಸೊಪ್ಪು ಹಾಕದ ‘ಪ್ರಧಾನ ಸೇವಕ’; ರೈತರ ಸಮಸ್ಯೆಗೆ ಯಾಕಿಲ್ಲ ಬೆಲೆ?

    ಕರ್ನಾಟಕದಲ್ಲಿ ದಿಡ್ಡಳ್ಳಿ ಆದಿವಾಸಿಗಳ ಬೆತ್ತಲೆ ಪ್ರತಿಭಟನೆ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇದಕ್ಕೆ ಅಂದು ಪ್ರತಿಕ್ರಿಯೆ ನೀಡಿದ್ದ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ “ನಾವೇನಾದರೂ ಬೆತ್ತಲೆ ಪ್ರತಿಭಟನೆ ಮಾಡಲು ಹೇಳಿದ್ದೆವಾ?” ಎಂಬ ಬೇಜವಾಬ್ದಾರಿ ನಡವಳಿಕೆಯಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಸಂದರ್ಭ ನಡೆದ ಮಡಿಕೇರಿ ಚಲೋದಲ್ಲಿ ಮಾತನಾಡಿದ್ದ ಹೋರಾಟಗಾರ ನೂರ್ ಶ್ರೀಧರ್ “ಬೆತ್ತಲೆ ಪ್ರತಿಭಟನೆ ಅಸಹಾಯಕತೆಯ ಪರಮಾವಧಿ,” ಎಂದಿದ್ದರು. ಇದೇ ಅಸಹಾಯಕತೆಯ ಪರಮಾವಧಿಗೆ ತಮಿಳುನಾಡು ರೈತರೀಗ ಬಂದಿದ್ದಾರೆ. ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿರುವ ಪ್ರಧಾನಿಮಂತ್ರಿ ನಿವಾಸದ ಆವರಣ ಅಸಹಾಯಕ ಬೆತ್ತಲೆ ಪ್ರತಿಭಟನೆಗೆ..

    April 11, 2017
    ...
    soujanya-cbi-final
    ರಾಜ್ಯ

    ಸೌಜನ್ಯ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ತನಿಖೆಯನ್ನು ಹಳ್ಳ ಹಿಡಿಸಿತಾ ಸಿಬಿಐ?

    ಹಿಂದೊಮ್ಮೆ ಭಾರಿ ಸುದ್ದಿ ಮಾಡುವ ಮೂಲಕ ರಾಜ್ಯದ ಸುದ್ದಿಕೇಂದ್ರಕ್ಕೆ ಬಂದಿದ್ದ ಸೌಜನ್ಯ ಕೊಲೆ ಪ್ರಕರಣದಲ್ಲಿ ‘ಹೆಚ್ಚಿನ ತನಿಖೆ ನಡೆಸುವಂತೆ’ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣದ ತನಿಖೆ ನಡೆಸಿದ ತನಿಖಾ ಸಂಸ್ಥೆ- ಸಿಬಿಐ- ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹಲವು ನ್ಯೂನತೆಗಳಿವೆ ಎಂದು ಸೌಜನ್ಯ ತಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಪೀಠ ಪುರಸ್ಕರಿಸಿದೆ. ಈ ಮೂಲಕ ನಾಲ್ಕುವರೆ ವರ್ಷಗಳಿಂದ ಸುದ್ದಿಯಾಗುತ್ತ- ಮರೆಗೆ ಸರಿಯುತ್ತಾ- ಬಂದಿರುವ ಸೌಜನ್ಯ ಪ್ರಕರಣದ ಕುರಿತು ಇತ್ತೀಚಿನ ಬೆಳವಣಿಗೆಗಳ ಬೆಳಕು ಚೆಲ್ಲುವ..

    February 8, 2017
    ...
    donald-trump_4
    ವಿದೇಶ

    ‘ಟ್ರಂಪಣ್ಣ ಹುಚ್ಚಾಟ’: ಆದೇಶ ತಿರಸ್ಕರಿಸಿದ ಅಟಾರ್ನಿ ಜನರಲ್ ಸಲ್ಲಿಗೆ ಗೇಟ್ ಪಾಸ್

    ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಳಿತದಲ್ಲಿ ಕ್ಷಣಕ್ಕೊಂದು ಬದಲಾವಣೆಗಳಾಗುತ್ತಿದ್ದು, ಕೆಲವು ಗಂಟೆಗಳ ಮುಂಚೆಯಷ್ಟೆ ದೇಶದ ಅಟಾರ್ನಿ ಜನರಲ್ ಸಲ್ಲಿ ಯೇಟ್ಸ್ ಅವರನ್ನು ಸ್ಥಾನದಿಂದ ಕಿತ್ತು ಹಾಕಲಾಗಿದೆ. ಸದ್ಯ ವಿವಾದಕ್ಕೆ ಕಾರಣವಾಗಿರುವ ಆಯ್ದ ಮುಸ್ಲಿಂ ದೇಶಗಳ ವಲಸಿಗರ ಮೇಲಿನ ನಿರ್ಬಂಧ ಆದೇಶವನ್ನು ಯೇಟ್ಸ್ ತಳ್ಳಿಹಾಕಿದ್ದರು. ಸೋಮವಾರ ಸಂಜೆ ವೇಳೆಗೆ (ಅಮೆರಿಕಾ ಕಾಲಮಾನ) ಕಾನೂನು ಇಲಾಖೆಯ ವಕೀಲರಿಗೆ ಅಧ್ಯಕ್ಷ ಟ್ರಂಪ್ ಆದೇಶವನ್ನು ಪುರಸ್ಕರಿಸದಂತೆ ಅವರು ಆದೇಶ ಹೊರಡಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಸಲ್ಲಿ ಯೇಟ್ಸ್ ಅವರನ್ನು ಅಟಾರ್ನಿ ಜನರಲ್ ಸ್ಥಾನದಿಂದ ಕಿತ್ತು ಹಾಕಿ..

    January 31, 2017
    ...
    ಅಮೆರಿಕಾದ 45ನೇ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣ ವಚನ.
    ವಿದೇಶ

    45ನೇ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣ ವಚನ: ನೂತನ ಅಧ್ಯಕ್ಷರ ‘ಗುರಿ ತಪ್ಪದ’ ಭಾ‍ಷಣ

    ಅಮೆರಿಕಾದ 45ನೇ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಹಿಂದಿನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಿಗೆ ಹೋಲಿಸಿದರೆ, ಕಡಿಮೆ ಸಂಖ್ಯೆಯಲ್ಲಿ ಸೇರಿದ್ದ ಜನರ ಸಮ್ಮುಖದಲ್ಲಿ ಜಗತ್ತಿನ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಿತು. 70 ವರ್ಷದ ಟ್ರಂಪ್ ಅವರಿಗೆ ಮುಖ್ಯನ್ಯಾಯಮೂರ್ತಿ ಜಾನ್ ಜಿ. ರಾಬರ್ಟ್ ಜ್ಯೂನಿಯರ್ ಪ್ರಮಾಣ ವಚನ ಬೋಧಿಸಿದರು. ಈ ಸಮಯದಲ್ಲಿ ಪತ್ನಿ ಮೆಲಿನಾ ಟ್ರಂಪ್ ಪಕ್ಕದಲ್ಲಿಯೇ ನಿಂತಿದ್ದರು. ಪ್ರಮಾಣ ವಚನ ಸಮಾರಂಭಕ್ಕೆ ಟ್ರಂಪ್ ತಾಯಿ 1955ರಲ್ಲಿ ನೀಡಿದ್ದ..

    January 21, 2017
    ...
    school-children-eating
    ರಾಜ್ಯ

    ‘ಆಹಾರ ರಾಜಕೀಯ’: ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಕ್ಕಳು ಮಾಂಸದೂಟ ಮಾಡಿದ್ದಕ್ಕೆ ವಿರೋಧ!

    ಸದ್ಯ ನಡೆಯುತ್ತಿರುವ ‘ಆಹಾರ ರಾಜಕೀಯ’ಕ್ಕೆ ಇತ್ತೀಚಿಗೆ ಬೆಂಗಳೂರಿನ ಹೊರವಲಯದಲ್ಲಿರುವ ಅಂತಾರಾಷ್ಟ್ರೀಯ ಖಾಸಗಿ ಶಾಲೆಯಲ್ಲಿ ನಡೆದ ಅಪರೂಪದ ಘಟನೆಯೊಂದು ಸೇರ್ಪಡೆಯಾಗಿದೆ. ಟ್ರಸ್ಟ್ ಒಂದರ ಅಡಿಯಲ್ಲಿ ನಡೆಸಲಾಗುತ್ತಿರುವ ಈ ಶಾಲೆಯಲ್ಲಿ ಪ್ರತಿ ಬುಧವಾರ ‘ಕಮ್ಯುನಿಟಿ ಲಂಚ್’ ಹೆಸರಿನಲ್ಲಿ ಮಕ್ಕಳೇ ಕೂಡಿ ಅಡುವೆ ಮಾಡುವ ಚಟುವಟಿಕೆಯೊಂದನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಅಗರ್ಭ ಶ್ರೀಮಂತರ ಮಕ್ಕಳೇ ಕಲಿಯುವ ಈ ಶಾಲೆಯಲ್ಲಿ ಬಡ ವರ್ಗದ ಮಕ್ಕಳಿಗೂ ಸಬ್ಸಿಡಿ ದರದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿ ಎಲ್ಲಾ ಮಕ್ಕಳು ಒಟ್ಟಿಗೆ ಅಡುಗೆ ಮಾಡಿ ಊಟ..

    January 16, 2017
    ...
    diddalli
    ರಾಜ್ಯ

    ಭೂಮಿ, ವಸತಿ ಹಕ್ಕು ವಂಚಿತರ ನಡಿಗೆ ‘ದಿಡ್ಡಳ್ಳಿ’ ಕಡೆಗೆ; ಕೊಡಗಿನಲ್ಲಿಂದು ಸಿದ್ದು ಸರಕಾರಕ್ಕೆ ಛೀಮಾರಿ

    ದಿಡ್ಡಳ್ಳಿಗೆ ನಡೆಯೋಣ… ಹೀಗಂತ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ಹೋರಾಟಗಾರರು ಮತ್ತು ಸಮಾನ ಮನಸ್ಕರು ಇವತ್ತು ಮಂಜಿನ ನಾಡು ಕೊಡಗಿನ ದಿಡ್ಡಳ್ಳಿಯ ಸೇರಿದ್ದಾರೆ. ಕಳೆದ ಡಿಸೆಂಬರ್ 7ರ ಮುಂಜಾನೆ ಇಲ್ಲಿನ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯಲ್ಲಿದ್ದ 577 ಕುಟುಂಬಗಳನ್ನು ಅರಣ್ಯ ಇಲಾಖೆ ಬೀದಿಪಾಲು ಮಾಡಿತ್ತು. ಕಳೆದ 6 ತಿಂಗಳಿನಿಂದ ಈ ಕುಟುಂಬಗಳು ಇಲ್ಲಿನ ಸರಕಾರಿ ಭೂಮಿಯಲ್ಲಿ ಕಟ್ಟಿಕೊಂಡಿದ್ದ ಮನೆಯನ್ನು ಕೆಡವಿ, ಲಾಠಿ ಬೀಸಿ ಅವರನ್ನೆಲ್ಲಾ ಅಲ್ಲಿಂದ ಓಡಿಸಲಾಗಿತ್ತು. ಇದೀಗ ಈ ವಸತಿ ವಂಚಿತರಿಗೆ ಮೂಲಭೂತ..

    December 18, 2016

Top