An unconventional News Portal.

ಪೊಲೀಸರು
  ...

  ‘ಮೂರು ಕೊಲೆಗಳು; ಒಂದು ವ್ಯಸನ’: ಪೊಲೀಸರು ಮುಂದಿಡುವ ‘ಗಾಂಜಾ ಥಿಯರಿ’ಯ ಸುತ್ತಾಮುತ್ತಾ…

  ರಾಜ್ಯದ ಅಪರಾಧ ಲೋಕದಲ್ಲಿ ಪಾತಕಗಳನ್ನು ಎಸಗಲು ಪ್ರೇರಣೆ ನೀಡುತ್ತಿತ್ತು ಎನ್ನಲಾದ ‘ಮಧ್ಯ’ದ ಜಾಗವನ್ನೀಗ ‘ಗಾಂಜಾ’ ಆಕ್ರಮಿಸಿದೆಯಾ? ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು, ಅವುಗಳ ಸುತ್ತ ಹಬ್ಬುತ್ತಿರುವ ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೀಗೊಂದು ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಪೊಲೀಸರು ಮತ್ತು ಮಾಧ್ಯಮ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೋಮು ಕೊಲೆಗಳ ಹಿಂದೆ ‘ಗಾಂಜಾ ಅಮಲು’ ಕೆಲಸ ಮಾಡುತ್ತಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಅದು ಮಂಗಳೂರಿನ ದೀಪಕ್ ರಾವ್ ಕೊಲೆ ಪ್ರಕರಣವಿರಲಿ ಅಥವಾ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಕದಿರೇಶನ್ ಹತ್ಯೆ ಇರಲಿ, ಪೊಲೀಸರು ಹಂತಕರಿಗೂ, […]

  February 8, 2018
  ...

  ಬದುಕು ಅರಸಲು ಉದ್ಯೋಗ ಸಾಕಿತ್ತು; ನಿರುದ್ಯೋಗ ಕಂಬಿ ಹಿಂದೆ ತಳ್ಳಿತ್ತು…

  ಹಾವೇರಿ ಈಗ ಕರ್ನಾಟಕದ ಒಂದು ಜಿಲ್ಲೆ. ಈ ಮೊದಲು ಅದು ಧಾರವಾಡದ ಜಿಲ್ಲೆಗೆ ಸೇರಿತ್ತು. 1997ರಲ್ಲಿ ಧಾರವಾಡ ದಕ್ಷಿಣದ ಏಳು ತಾಲ್ಲೂಕುಗಳನ್ನು ಪತ್ಯೇಕಿಸಿ, ಹಾವೇರಿ ಜಿಲ್ಲೆಯನ್ನು ಸ್ಥಾಪಿಸಲಾಯಿತು. ಜಿಲ್ಲೆಯ ವಿಸ್ತೀರ್ಣ 4,823 ಚದರ ಕಿ,ಮೀ ಇದೆ. 2011ರ ಜನಗಣತಿ ಜನಗಣತಿ ಪ್ರಕಾರ, ಜಿಲ್ಲೆಯ ಒಟ್ಟು  ಜನಸಂಖ್ಯೆ 15,97,668 ಇದೆ. ಇದು 7 ವರ್ಷಗಳಲ್ಲಿ ಇನ್ನೂ ಹೆಚ್ಚಾಗಿದೆ. ಇಲ್ಲಿ ಮಳೆ ಕಡಿಮೆ. ಒಣ ಭೂಮಿಯೇ ಅಧಿಕ. ಮಳೆಯೇ ಕೃಷಿಗೆ ಆಧಾರವಿಲ್ಲಿ. ವರ್ಷಪೂರ್ತಿಯಂತೂ ಇಲ್ಲಿನ ಜನರಿಗೆ ಉದ್ಯೋಗ ಸಿಗುವುದಿಲ್ಲ. ಹಲವರು ಉದ್ಯೋಗ ಅರಸಿಕೊಂಡು ಬೇರೆ ಬೇರೆ ನಗರಗಳಿಗೆ […]

  February 5, 2018
  ...

  ‘ಬಾವುಟ, ಕೋಮು ದ್ವೇಷ, ಗಾಂಜಾ ವ್ಯಸನ, ಕ್ರೈಂ’: ದೀಪಕ್ ಕಾಟಿಪಳ್ಳ ಹತ್ಯೆ ಪ್ರಕರಣದ ಸುದ್ದಿ ಆಚೆಗಿನ ಸತ್ಯಗಳು!

  ಬಾಬ್ರಿ ಮಸೀದಿ ದ್ವಂಸ ಪ್ರಕರಣದ ನಂತರ ಮಂಗಳೂರಿನ ಕಾಟಿಪಳ್ಳ ಗ್ರಾಮದಲ್ಲಿ ಹುಟ್ಟಿಕೊಂಡ ಧಾರ್ಮಿಕ ಸೋಗಿನ ಹತ್ಯೆಗಳ ಇತಿಹಾಸಕ್ಕೆ ಮತ್ತೊಂದು ಅಧ್ಯಾಯ ಸೇರಿಕೊಂಡಿದೆ. ಅತ್ಯಂತ ಸ್ಫುಟವಾಗಿ ಬ್ಯಾರಿ ಭಾಷೆಯನ್ನು ಮಾತನಾಡುತ್ತಿದ್ದ, ಮರಾಠಿ ಕುಟುಂಬದ ಹಿನ್ನೆಲೆಯ ದೀಪಕ್ ರಾವ್‌ ಎಂಬ ಯುವಕ ಬುಧವಾರ ಹಾಡುಹಗಲೇ ಕೊಲೆಯಾಗಿದ್ದಾನೆ. ಮುಸ್ಲಿಂ ಮಾಲೀಕತ್ವದ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದೀಪಕ್‌, ಮದ್ಯಾಹ್ನದ ಸುಮಾರಿಗೆ ಕಾಟಿಪಳ್ಳದ ಎರಡನೇ ಬ್ಲಾಕ್‌ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಕಾರಿನಲ್ಲಿ ಬಂದ ನಾಲ್ವರು ಹಂತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪಾರಿಯಾಗಿದ್ದರು. ಕರಾವಳಿ […]

  January 4, 2018
  ...

  ‘ಕ್ರೈಂ ಇನ್ ಜಪಾನ್’: ಪುಟ್ಟ ದೇಶಕ್ಕೆ ಶಾಕ್ ನೀಡಿದ ಹೊಸ ಅಪರಾಧ ಪ್ರಕರಣ!

  ಜಪಾನ್; ಇತರೆ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಹೋಲಿಸಿದಾಗ ಅತೀ ಕಡಿಮೆ ಅಪರಾಧ ಪ್ರಕರಣಗಳನ್ನು ಹೊಂದಿರುವ ದೇಶ. ಆದರೆ ಮಂಗಳವಾರ ಮಾನವೀಯತೆಯೇ ತಲೆ ತಗ್ಗಿಸುವಂತ ಘಟನೆಯೊಂದು ಉತ್ತರ ಜಪಾನಿನ ಒಸಾಕಾ ಪ್ರದೇಶದಿಂದ ವರದಿಯಾಗಿದೆ. ಸಾಮಾನ್ಯವಾಗಿ ಅಪರಾಧ ಸುದ್ದಿಗಳಿಗೆ ಆದ್ಯತೆ ನೀಡದ ಇಲ್ಲಿನ ಮಾಧ್ಯಮಗಳಲ್ಲೀಗ ಮಗಳನ್ನು 15 ವರ್ಷಗಳ ಕಾಲ ಬಂಧನದಲ್ಲಿಟ್ಟು, ಕೊಲೆ ಮಾಡಿದ ದಂಪತಿಯ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿದೆ. 33 ವರ್ಷ ಪ್ರಾಯದ ಮಗಳನ್ನು ಚಿಕ್ಕ ಕೊಠಡಿಯೊಂದರಲ್ಲಿ ಸುಮಾರು 15 ವರ್ಷಗಳಷ್ಟು ಹಿಂದೆಯೇ ಕೂಡಿ ಹಾಕಿದ ತಂದೆ ತಾಯಿಯರನ್ನು ನೆಯಾಗಾವಾದ ಪೋಲಿಸ್ […]

  December 26, 2017
  ...

  ಕಂಬಿ ಹಿಂದಿನ ಕತೆ- 4: ಮಾಟಮಂತ್ರದ ಅನುಮಾನ; ಕಾರಾಗೃಹದಲ್ಲಿ ದಲಿತ ಕುಟುಂಬದ ಬದುಕಿನ ಪಯಣ!

  ಅವರದ್ದು ಬಡ ರೈತ ಕುಟುಂಬ. ಜಾತಿ ಹಿನ್ನೆಲೆ ದಲಿತ. ಒಂದೆರಡು ಏಕರೆ ಒಣ ತುಂಡು ಭೂಮಿ ಇದೆ. ಹಾಸನ ಬಾಗದವರು. ಅವರದು ಎರಡು ಹೆಣ್ಣು ಮಕ್ಕಳು ಹಾಗೂ ಮೂರು ಜನ ಗಂಡು ಮಕ್ಕಳ ಕುಟುಂಬ. ಅವರಲ್ಲಿ ಎಲ್ಲರಿಗಿಂತ ಕೊನೆಯ ಮಗ ಮಾತ್ರ ಪಿಯುಸಿವರೆಗೆ ಕಲಿತವ. ಕೂಲಿನಾಲಿಯೇ ಪ್ರಧಾನ ಆದಾಯ. ಒಣ ಭೂಮಿಯಲ್ಲಿ ಕಷ್ಟಪಟ್ಟು ಗೇಯ್ದರೂ ಎಲ್ಲರ ಹೊಟ್ಟೆ ತುಂಬುವುದಿಲ್ಲ. ಇನ್ನು ಹಬ್ಬ, ಹರಿದಿನ, ಜಾತ್ರೆ, ಮದುವೆ, ಬಟ್ಟೆಬರೆ, ರೋಗ ರುಜಿನಗಳ ಕಡೆ ಗಮನ ಕೊಡಬೇಕೆಂದರೆ ಇಕ್ಕಟ್ಟು ಹಾಗೂ […]

  December 19, 2017
  ...

  ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ಆಗ್ರಹ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ

  ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ಸರಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ‘ಗೌರಿ ಬಳಗ’ ಮಂಗಳವಾರ ಪ್ರತಿಭಟಿಸಿ, ಬಂಧನಕ್ಕೆ ಒಳಗಾಯಿತು. ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯ ಕಡೆ ಹೊರಟಾಗ ಪೊಲೀಸರು ಬಂಧಿಸಿದರು. ‘ಮುಖ್ಯಮಂತ್ರಿ ಗಳೇ ಉತ್ತರ ಕೊಡಿ, ಹಾರಿಕೆ ಉತ್ತರ ಸಾಕು, ಹಂತಕರ ಬಂಧನ ಬೇಕು’ ಎಂಬ ಘೋಷ ವಾಕ್ಯದೊಂದಿಗೆ ನಡೆದ ಪ್ರತಿಭಟನೆಯಲ್ಲಿ ಸಾಹಿತಿ ಚಂದ್ರಶೇಖರ್ ಪಾಟೀಲ್, ಕೋಮು ಸೌಹಾರ್ದ ವೇದಿಕೆಯ ಕೆ. ಎಲ್. ಅಶೋಕ್, ಗೌರಿ ಸಹೋದರಿ ಕವಿತಾ ಲಂಕೇಶ್ ಮತ್ತಿತರರು […]

  December 5, 2017
  ...

  ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ತಾಯಿ ಶವಕ್ಕಾಗಿ 36 ಗಂಟೆಗಳಿಂದ ಕಾಯುತ್ತಿದೆ ಕಂಪ್ಲಿಯ ಬಡ ಕುಟುಂಬ

  ಕ್ಯಾನ್ಸರ್‌ ಕಾಯಿಲೆಯಿಂದ ಮೃತಪಟ್ಟ ಮಹಿಳೆಯೊಬ್ಬರ ಶವವನ್ನು ಪಡೆಯಲು ಕಂಪ್ಲಿ ಮೂಲದ ಕುಟುಂಬವೊಂದು ಸುಮಾರು 36 ಗಂಟೆಗಳಿಂದ ಪರದಾಡುತ್ತಿರುವ ಸನ್ನಿವೇಶ ಬೆಂಗಳೂರಿನ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ಈಗ ಜಾರಿಯಲ್ಲಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕ್ಯಾನ್ಸರ್‌ನಂತಹ ಕಾಯಿಲೆಗಳ ಚಿಕಿತ್ಸೆಗಾಗಿ ಸರಕಾರದ ವಿಮಾ ಯೋಜನೆ ಧನ ಸಹಾಯ ನೀಡುತ್ತದೆ. ಖಾಸಗಿ ಆಸ್ಪತ್ರೆಗಳ ಮೂಲಕ ಸರಕಾರದ ವಿಮೆ ಹಣದಲ್ಲಿ ಆರೋಗ್ಯ ಸೇವೆಯನ್ನು ಈ ಕುಟುಂಬಗಳು ಪಡೆದುಕೊಳ್ಳುತ್ತವೆ. ಆದರೆ ಅಂತಿಮ ಹಂತದಲ್ಲಿ ಆಸ್ಪತ್ರೆಗಳು ‘ವಿನಾಕಾರಣ’ ಸೃಷ್ಟಿಸುವ ಸನ್ನಿವೇಶಗಳು ಹೇಗೆ ಶವವನ್ನು ಪಡೆಯಲು ಒಂದೂವರೆ ದಿನಗಳಿಂದ […]

  July 9, 2017
  ...

  ‘ಹತ್ಯೆಯಾದ ಯುವತಿಯ ಚಾರಿತ್ರ್ಯ ಹರಣ’: ಪಾತಕ ಕಾರ್ಯಕ್ರಮಗಳ ನಿರ್ಮಾಪಕರಿಗೆ ಒಂದು ಪತ್ರ!

  ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಳಂಬೆಳಗ್ಗೆಯೇ ಯುವತಿಯೊಬ್ಬಳ ಹತ್ಯೆ ನಡೆಯಿತು. ಅದಾದ ಎರಡು ಗಂಟೆಗಳ ಅಂತರದಲ್ಲಿ ಪೊಲೀಸರು, “ಕೊಲೆಗೀಡಾದ ಶೋಭಾಗೆ ಇನ್ನೊಬ್ಬ ವ್ಯಕ್ತಿಯ ಜತೆ ಸಂಬಂಧ ಇತ್ತು. ಆಕೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ನಡೆಯಿತು,” ಎಂದು ಹೇಳಿಕೆ ನೀಡಿದರು. ರಾಜಧಾನಿ ಬೆಂಗಳೂರಿನಲ್ಲಿ ನಡೆದ ಯುವತಿಯ ಹತ್ಯೆ ಎಂಬ ಕಾರಣಕ್ಕೆ ಸುದ್ದಿ ವಾಹಿನಿಗಳಲ್ಲಿ ಆ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿತು. ಗಂಟೆ ಗಟ್ಟಲೆ ಕ್ರೈಂ ಎಪಿಸೋಡ್ ಪ್ರಸಾರವಾದವು. ಇದು ಕನ್ನಡದ ಅಷ್ಟೂ ಸುದ್ದಿವಾಹಿನಿಗಳಲ್ಲಿ ದಿನಕ್ಕೆ ಅರ್ಧ ಗಂಟೆ ಲೆಕ್ಕದಲ್ಲಿ ಪ್ರಸಾರವಾಗುವ ‘ಅಪರಾಧ […]

  April 21, 2017
  ...

  ‘ಬ್ಲಾಕ್‌ಮೇಲ್’ ಬೆನ್ನಲ್ಲೇ ಅನುಮಾನ ಮೂಡಿಸಿದ ಜನಶ್ರೀ ಅಕೌಂಟೆಂಟ್ ಸಾವಿನ ಪ್ರಕರಣ

  ಜನಶ್ರೀ ಸುದ್ದಿ ವಾಹಿನಿಯ ‘ಬ್ಲಾಕ್‌ ಮೇಲ್’ ಪ್ರಕರಣ ಹೊರಬಿದ್ದ ಬೆನ್ನಲ್ಲೇ, ಅದರ ಅಕೌಂಟೆಂಟ್ ಒಬ್ಬರ ಸಾವಿನ ಸುತ್ತ ಈತ ದಟ್ಟ ಅನುಮಾನ ಹೊಗೆಯಾಡುತ್ತಿದೆ. ವಾಹಿನಿಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಅಕೌಂಟೆಂಟ್ ಆಗಿದ್ದ ಕಾರ್ತಿಕ ಲಾರೆನ್ಸ್‌ ಕಳೆದ ಗುರುವಾರ ಬ್ಯಾಪ್ಟಿಸ್ಟ್‌ ಆಸ್ಪತ್ರೆಯ ಐಸಿಯುನಲ್ಲಿ ಸಾವನ್ನಪ್ಪಿದ್ದರು. ಸದ್ಯ ಪ್ರಕರಣ ಹೆಬ್ಬಾಳ ಟ್ರಾಫಿಕ್ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ಮರಣೊತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ. ಆದರೆ ಕಾರ್ತಿಕ್ ಸಾವಿನ ಹಿನ್ನೆಲೆಯನ್ನು ಗಮನಿಸಿದರೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಡುವ ಅಂಶಗಳು ಬೆಳಕಿಗೆ ಬರುತ್ತವೆ. ಏನಿದು ಪ್ರಕರಣ?: […]

  April 17, 2017
  ...

  ಗಣಿ ಧಣಿಯ ಜನಮನದಲ್ಲಿ ‘ಬ್ಲಾಕ್ ಮೇಲ್’ ಅಬ್ಬರ: ಜನಶ್ರೀ ಸಿಇಓ ಬಂಧನದ ಸುತ್ತ…

  ಕನ್ನಡದ ಸುದ್ದಿ ವಾಹಿನಿಗಳ ಪಾಲಿಗೆ ಇದೊಂದು ಬಾಕಿ ಇತ್ತು. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಕೆಲವು ಪತ್ರಕರ್ತರ ಹಾಗೂ ವಾಹಿನಿಗಳ ‘ಬ್ಲಾಕ್‌ ಮೇಲ್‌’ ದಂಧೆಗೆ ಈ ಅಧಿಕೃತ ಮುದ್ರೆ ಬಿದ್ದಿದೆ. ಜನಶ್ರೀ ಸುದ್ದಿವಾಹಿನಿಯ ಸಿಇಓ ಲಕ್ಷ್ಮೀಪ್ರಸಾದ್ ವಾಜಪೇಯಿ ಬಂಧನವಾಗಿದೆ. ಕೋರಮಂಗಲ ಪೊಲೀಸರು ಆತ ಸೇರಿದಂತೆ ಇಬ್ಬರನ್ನು ಶುಕ್ರವಾರ ರಾತ್ರಿ ಚಾನಲ್‌ ಕಚೇರಿಯಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ದಿನದಿಂದ ದಿನಕ್ಕೆ ನೈತಿಕವಾಗಿ ಅಧಃಪತನಗೊಳ್ಳುತ್ತಿರುವ ಸುದ್ದಿ ವಾಹಿನಿಗಳ ಅಂತರಾಳದ ದರ್ಶನವಾದಂತಾಗಿದೆ. ಏನಿದು ಬೆಳವಣಿಗೆ?:  ಜನಶ್ರೀ ವಾಹಿನಿ ಅತ್ಯಂತ ಕೆಟ್ಟ […]

  April 15, 2017

Top